Bigg Boss Kannada 12: ರಾಶಿಕಾ ಬಗ್ಗೆ ಮಾತನಾಡಿ ತಾಯಿ ಭಾವುಕ! ಅತ್ತ ಧನುಷ್‌ಗೆ ಬಿಗ್ ಟ್ವಿಸ್ಟ್ ಕೊಟ್ಟ ಬಿಗ್ ಬಾಸ್
Rashika Shetty: ಬಿಗ್ ಬಾಸ್ ಸೀಸನ್ 12ರಲ್ಲಿ ಈ ವಾರ ಫ್ಯಾಮಿಲಿ ವೀಕ್ ಶುರುವಾಗಿದೆ. ಇದೀಗ ಪ್ರೋಮೋ ಔಟ್ ಆಗಿದೆ. ಧನುಷ್ , ರಾಶಿಕಾ ಹಾಗೂ ಸೂರಜ್ ಅವರ ಫ್ಯಾಮಿಲಿ ಮನೆಗೆ ಎಂಟ್ರಿ ಕೊಟ್ಟಿದೆ. ರಾಶಿಕಾ ಶೆಟ್ಟಿ ಅವರು ಮನೆಯವರು ಬರುತ್ತಾರೆ ಎಂದು ಕಾಯುತ್ತಲಿದ್ದರು. ಇದನ್ನು ಅವರು ಬಾಯಿ ಬಿಟ್ಟು ಕೂಡ ಹೇಳಿದ್ದರು. ಈಗ ತಾಯಿ, ತಮ್ಮ ಬಂದಿದ್ದಾರೆ. ಧನುಷ್ ಅವರಿಗೂ ಬಿಗ್ ಬಾಸ್ ಒಂದು ಟ್ವಿಸ್ಟ್ ಕೊಟ್ಟಿದ್ದಾರೆ. ಧನುಷ್ ಈಗ ಭಾವುಕರಾಗಿದ್ದಾರೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಸೀಸನ್ 12ರಲ್ಲಿ (Bigg Boss Kannada 12) ಈ ವಾರ ಫ್ಯಾಮಿಲಿ ವೀಕ್ ಶುರುವಾಗಿದೆ. ಇದೀಗ ಪ್ರೋಮೋ ಔಟ್ ಆಗಿದೆ. ಧನುಷ್ , ರಾಶಿಕಾ (Dhanush Rashika) ಹಾಗೂ ಸೂರಜ್ ಅವರ ಫ್ಯಾಮಿಲಿ ಮನೆಗೆ ಎಂಟ್ರಿ ಕೊಟ್ಟಿದೆ. ರಾಶಿಕಾ ಶೆಟ್ಟಿ (Rashika Shetty) ಅವರು ಮನೆಯವರು ಬರುತ್ತಾರೆ ಎಂದು ಕಾಯುತ್ತಲಿದ್ದರು. ಇದನ್ನು ಅವರು ಬಾಯಿ ಬಿಟ್ಟು ಕೂಡ ಹೇಳಿದ್ದರು. ಈಗ ತಾಯಿ, ತಮ್ಮ ಬಂದಿದ್ದಾರೆ. ಧನುಷ್ ಅವರಿಗೂ ಬಿಗ್ ಬಾಸ್ ಒಂದು ಟ್ವಿಸ್ಟ್ (Bigg boss Kannada Twist) ಕೊಟ್ಟಿದ್ದಾರೆ. ಧನುಷ್ (Dhanush) ಈಗ ಭಾವುಕರಾಗಿದ್ದಾರೆ.
ರಾಶಿಕಾ ತಾಯಿ ಭಾವುಕ
ಮೊದಲಿಗೆ ರಾಶಿಕಾ ಅವರ ತಾಯಿ ಮಾತನಾಡಿ, ಅವಳಿಗೆ ಅಪ್ಪ ಅಮ್ಮ ಅಂದರೆ ಪ್ರೀತಿ. ತಂದೆ ತಾಯಿ ಮಕ್ಕಳನ್ನು ಪ್ರೀತಿಯಿಂದ ನೋಡ್ತಾರೆ. ಆದರೆ ಮಕ್ಕಳು ತಂದೆ ತಾಯಿ ಪ್ರೀತಿಯಿಂದ ನೋಡಿಕೊಳ್ಳೋದು ತುಂಬಾ ವಿರಳ. ಶೂಟಿಂಗ್ ಇರಲಿ ಏನೇ ಇರಲಿ, ಎಲ್ಲೇ ಇದ್ದರೂ ಕಾಲ್ ಮಾಡ್ತಾಳೆ. ನಾನು ಹಲೋ ಅಂದರೆ ಸಾಕು ಆ ಧ್ವನಿಯಲ್ಲೇ ಕಂಡು ಹಿಡಿಯುತ್ತಾಳೆ. ರಾಶಿಕಾ ನಮ್ಮ ಮೂವರು ಜನಕ್ಕೂ ಅಪ್ಪ ಅಪ್ಪ ಆಗಿದ್ದಾಳೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Bigg Boss Kannada 12: ಬಿಗ್‌ಬಾಸ್ ಮನೆಯಿಂದ ಹೊರಬಂದ ಚೈತ್ರಾ, ರಜತ್
ಇನ್ನು ಧನುಷ್ ಅವರಿಗೂ ಬಿಗ್ ಬಾಸ್ ಒಂದು ಟ್ವಿಸ್ಟ್ ಕೊಟ್ಟಿದ್ದಾರೆ. ಈ ಮನೆಯಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿ ನಿಮ್ಮ ಜೀವನದ ಪ್ರಮುಖ ವ್ಯಕ್ತಿಗಳು ಇದ್ದಾರೆ. ಒಂದು ಪತ್ನಿ ಹಾಗೂ ತಾಯಿ. ಇದೀಗ ಇವರಿಬ್ಬರಲ್ಲಿ ಒಬ್ಬರು ಆಯ್ಕೆ ಮಾಡಬೇಕು ಎಂದಿದ್ದಾರೆ ಬಿಗ್ ಬಾಸ್. ಈ ವೇಳೆ ಧನುಷ್ ಅವರು ಕಣ್ಣೀರಿಟ್ಟಿದ್ದಾರೆ.
ಸುದೀಪ್ ಗೈರು
ಇಂದು ಈ ವಾರ ಸುದೀಪ್ ಅವರು ಹೋಸ್ಟ್ ಮಾಡುತ್ತಿಲ್ಲ. ಗೊತ್ತಿರುವಂತೆ ಮಾರ್ಕ್ ಸಿನಿಮಾ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ನಟ ʻಕಿಚ್ಚʼ ಸುದೀಪ್ ಅವರ ʻಮಾರ್ಕ್ʼ ಸಿನಿಮಾವು ಇದೇ ಡಿಸೆಂಬರ್ 25ರಂದು ತೆರೆಗೆ ಬರುತ್ತಿದೆ. ಈ ಚಿತ್ರವನ್ನು ಗ್ರ್ಯಾಂಡ್ ಆಗಿ ಬಹುಭಾಷೆಯಲ್ಲಿ ತೆರೆಗೆ ತರುವುದಕ್ಕೆ ಸಿದ್ಧತೆಗಳು ಆರಂಭವಾಗಿವೆ. ಈ ನಡುವೆ ಹುಬ್ಬಳ್ಳಿಯಲ್ಲಿ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಅನ್ನು ಚಿತ್ರತಂಡ ಈಗಾಗಲೇ ಮಾಡಿದೆ.
ಇದರ ಮಧ್ಯೆಯೂ ಅವರು ಕಳೆದ ವಾರ ಬಿಗ್ ಬಾಸ್ ನಿರೂಪಣೆ ಮಾಡಿದ್ದರು. ಕಳೆದ ವಾರ ‘ಮಾರ್ಕ್ ಪ್ರೀ ರಿಲೀಸ್ ಈವೆಂಟ್ನಲ್ಲಿ ಭಾಗಿ ಆಗಬೇಕಿರುವ ಕಾರಣ ಶುಕ್ರವಾರವೇ ಬಿಗ್ ಬಾಸ್ ಎಪಿಸೋಡ್ ಚಿತ್ರೀಕರಣ ನಡೆದಿತ್ತು.
ಇದನ್ನೂ ಓದಿ: Bigg Boss Kannada 12: ಈ ವೀಕೆಂಡ್ನಲ್ಲಿ ಕಿಚ್ಚ ಸುದೀಪ್ ನಿರೂಪಣೆ ಇರಲ್ಲ; ಕಾರಣ ಇದು
ನನ್ನ ಸಿನಿಮಾ ರಿಲೀಸ್ ಇರುವುದರಿಂದ, ನಾನು ಪ್ರಮೋಷನ್ ಅಲ್ಲಿ ಬ್ಯುಸಿ ಇರ್ತೀನಿ. ಬಿಗ್ ಬಾಸ್ ಹೇಗೆ ಮುಖ್ಯವೋ ನಾನು ಮಾಡಿದ ಸಿನಿಮಾ ಕೂಡ ಮುಖ್ಯ. ನನ್ನ ತಂಡಕ್ಕೆ ನನ್ನ ಅಗತ್ಯವಿದೆ. ಹೀಗಾಗಿ ಡಿಸೆಂಬರ್ 27-28 ನಾನು ಬಿಗ್ ಬಾಸ್ ನಡೆಸಿಕೊಡುತ್ತಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.