ಬಿಗ್ ಬಾಸ್ ಮನೆಯಲ್ಲಿ (Bigg Boss Kannada 12) ‘ಟಿಕೆಟ್ ಟು ಟಾಪ್ 6’ ಆಟದಲ್ಲಿ ಸಖತ್ ಪೈಪೋಟಿ ನಡಯುತ್ತಿದೆ. ‘ಟಿಕೆಟ್ ಟು ಟಾಪ್ 6’ ಟಾಸ್ಕ್ ಆಡುವಾಗ ರಕ್ಷಿತಾ ಶೆಟ್ಟಿ (Rakshitha Shetty) ಔಟ್ ಆಗಿ, ರಘು ಅವರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಹಾಗಾಗಿ ಅವರಿಗೆ ಟಾಪ್ 6 ಆಟದಲ್ಲಿ ಸ್ಪರ್ಧಿಸುವ ಅರ್ಹತೆ ಇಲ್ಲದಂತಾಗಿದೆ. ಮತ್ತೊಂದು ಅಶ್ವಿನಿ ಹಾಗೂ ಧ್ರುವಂತ್ (Ashwini and Dhruvanth) ಎರಡನೇ ಸುತ್ತಿನಲ್ಲಿ ಆಟ ವಿನ್ ಆಗಿದ್ದು ಮುಂದಿನ ಹಂತಕ್ಕೆ ಆಯ್ಕೆ ಆಗಿದ್ದಾರೆ. ಇದೆಲ್ಲ ಒಂದು ಕಡೆ ಆದ್ರೆ ಧ್ರುವಂತ್ ನಿನ್ನೆ ಕ್ಯಾಮೆರ ಮುಂದೆ ಅಶ್ವಿನಿ ಬಗ್ಗೆ ಒಳ್ಳೊಳ್ಳೆ ಮಾತನಾಡಿದ್ರು. ಈಗ ಏಕಾಏಕಿ ಅಶ್ವಿನಿ ವಿರುದ್ಧವೇ ಗರಂ ಆಗಿದ್ದಾರೆ. ಆದ್ರೆ ಇದನ್ನ ಸಖತ್ ಮಜಾ ತೆಗೆದುಕೊಂಡಿದ್ದು ಮಾತಿನ ಮಲ್ಲ ಗಿಲ್ಲಿ (Gilli Nata).
ಧ್ರುವಂತ್ ಹಾಗೂ ಅಶ್ವಿನಿ ಮಧ್ಯೆ ಸಣ್ಣ ಜಗಳ
ಹೊಸ ಪ್ರೋಮೋ ವೈರಲ್ ಆಗಿದೆ. ಧ್ರುವಂತ್ ಹಾಗೂ ಅಶ್ವಿನಿ ಮಧ್ಯೆ ಸಣ್ಣ ಜಗಳ ಆಗಿದೆ. ಇದು ಮನೆಯವರ ಗಮನಕ್ಕೆ ಬಂತು. ಏನು ಮ್ಯಾಟರ್‌ಗೆ ಜಗಳ ಆಗಿದ್ದು? ನೋಡಿ ಸಖತ್ ಬೇಜಾರ್ ಆಯ್ತು ಎಂದಿದ್ದಾರೆ ಗಿಲ್ಲಿ. ಅದಕ್ಕೆ ಧ್ರುವಂತ್, ಕಣ್ಣು ಮುಂದೆ ಆಗ್ತಾ ಇರೋದು ನೋಡಿಕೊಂಡು ಸುಮ್ಮನೆ ಇರೋಕೆ ಆಗ್ತಿಲ್ಲ ಎಂದಿದ್ದಾರೆ.
ಇದನ್ನೂ ಓದಿ: Bigg Boss Kannada 12: ಬಿಗ್‌ಬಾಸ್‌ನಿಂದ ಬರುವಾಗ ಸ್ಪಂದನಾ ಗಿಲ್ಲಿಗೆ ಒಂದು ಮಾತೂ ಹೇಳಲಿಲ್ಲ ಏಕೆ?
ಇದಕ್ಕೆ ಕುಮ್ಮಕ್ಕು ಕೊಟ್ಟ ಗಿಲ್ಲಿ, ಹೌದಣ್ಣ ಎಂದಿದ್ದಾರೆ. ರಘು ಕೂಡ ಗಿಲ್ಲಿ ಮತ್ತು ಧನುಷ್ ಜೊತೆ, ಅಶ್ವಿನಿ ಒಬ್ಬರೇ ಇದ್ದಾಗ, ಇವರೇ ಸಪೋರ್ಟ್ ಮಾಡಿದ್ದು ಎಂದಿದ್ದಾರೆ. ಇನ್ನು ಸಹವಾಸ ಬೇಡ ಅಂತ ಸೈಲೆಂಟ್ ಆಗ್ತೀರಾ ಅಂತ ಗಿಲ್ಲಿ ಮತ್ತಷ್ಟು ಧ್ರುವಂತ್‌ಗೆ ಕೇಳಿದ್ದಾರೆ. ಅದಕ್ಕೆ ಧ್ರುವಂತ್, ಆಗಿರೋದು, ಆಗುತ್ತ ಇರೋದು ಎಲ್ಲದೂ ಒಳ್ಳೆಯದಕ್ಕೆ ಎಂದಿದ್ದಾರೆ ಧ್ರುವಂತ್. ಅಶ್ವಿನಿ ಹಾಗೂ ಧ್ರುವಂತ್ ಜಗಳ ಮನೆಮಂದಿ ಸಖತ್ ಹಬ್ಬ ಮಾಡಿದ್ದಾರೆ.
ವೈರಲ್ ಪ್ರೋಮೋ
ಇನ್ನು ನಿನ್ನೆಯಷ್ಟೇ ಧ್ರುವಂತ್ ಅವರು ಕ್ಯಾಮೆರಾ ಮುಂದೆ , ನಾನು ಅಶ್ವಿನಿ ಅವರನ್ನು ತಾಯಿಯ ಸ್ಥಾನದಲ್ಲಿ ನೋಡುತ್ತಾ ಇದ್ದೇನೆ. ಅವರಿಗೆ ಒಬ್ಬರ ಸಪೋರ್ಟ್ ಬೇಕಿದೆ. ಆದರೆ ನಾನು ವೈಯಕ್ತಿಕವಾಗಿಯೇ ಆಡ್ತಾ ಇದ್ದೇನೆ. ಯಾವುದೇ ಗ್ರೂಪ್‌ಗೂ ಸೇರಿಲ್ಲ ಅಂತ ಕ್ಲಾರಿಟಿ ಬೇರೆ ಕೊಟ್ಟಿದ್ದರು. ಅಷ್ಟೇ ಅಲ್ಲ ಮನೆಯಲ್ಲಿ ಈಗ ಅಶ್ವಿನಿ ಹಾಗೂ ಧ್ರುವಂತ್ ಪ್ರತ್ಯೇಕವಾಗಿ ಅಡುಗೆ ಬೇರೆ ಮಾಡಿಕೊಳ್ಳುತ್ತಿದ್ದಾರೆ. ಆದರೀಗ ಏಕಾಏಕಿ ಇವರಿಬ್ಬರ ಮಧ್ಯೆ ಮನಸ್ತಾಪ ಶುರುವಾಗಿದೆ.
ಇದನ್ನೂ ಓದಿ: Bigg Boss Kannada 12: ಬಿಗ್ ಬಾಸ್ ಫಿನಾಲೆ ಯಾವಾಗ? ಫಿನಾಲೆಗೆ ಎಂಟ್ರಿ ಕೊಡೋದು ಎಷ್ಟು ಸ್ಪರ್ಧಿಗಳು?
ಟಾಸ್ಕ್ ವೇಳೆ ರಾಶಿಕಾ ಶೆಟ್ಟಿ, ಮ್ಯೂಟೆಂಟ್ ರಘು ಮತ್ತು ರಕ್ಷಿತಾ ಶೆಟ್ಟಿ ಅವರು ಒಂದು ತಂಡವಾಗಿ ಆಟ ಆಡಿದರು. ಆದರೆ ಅವರ ತಂಡಕ್ಕೆ ಹಿನ್ನಡೆ ಆಯಿತು. ಮೊದಲ ಸುತ್ತಿನಲ್ಲಿ ಕಾವ್ಯ ಆಯ್ಕೆ ಆದರು, ಎರಡನೇ ಸುತ್ತಿನಲ್ಲಿ ಧ್ರುವಂತ್, ಅಶ್ವಿನಿ ಆಯ್ಕೆ ಆದರು.