ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bigg Boss Kannada 12: ಬಿಗ್‌‌ಬಾಸ್‌‌ನಿಂದ ಬರುವಾಗ ಸ್ಪಂದನಾ ಗಿಲ್ಲಿಗೆ ಒಂದು ಮಾತೂ ಹೇಳಲಿಲ್ಲ ಏಕೆ?

Spandana Somanna: ಇನ್ನೇನು ಕೆಲವೇ ದಿನಗಳಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋ ಫಿನಾಲೆ ಬರಲಿದೆ. ಈಗ 8 ಸ್ಪರ್ಧಿಗಳ ನಡುವೆ ಪೈಪೋಟಿ ನಡೆಯುತ್ತಿದೆ. ಸ್ಪಂದನಾ ಸೋಮಣ್ಣ ಅವರು ಕಳೆದ ವಾರ ಎಲಿಮಿನೇಟ್ ಆದರು. ಇದೀಗ ವಿಶ್ವವಾಣಿ ವಿಶೇಷ ಸಂದರ್ಶನದಲ್ಲಿ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ ಸ್ಪಂದನಾ.

ಬಿಗ್‌‌ಬಾಸ್‌‌ನಿಂದ ಬರುವಾಗ ಸ್ಪಂದನಾ ಗಿಲ್ಲಿಗೆ ಒಂದು ಮಾತೂ ಹೇಳಲಿಲ್ಲ ಏಕೆ?

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Jan 7, 2026 7:47 PM

ಇನ್ನೇನು ಕೆಲವೇ ದಿನಗಳಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋ ಫಿನಾಲೆ ಬರಲಿದೆ. ಈಗ 8 ಸ್ಪರ್ಧಿಗಳ ನಡುವೆ ಪೈಪೋಟಿ ನಡೆಯುತ್ತಿದೆ. ಸ್ಪಂದನಾ ಸೋಮಣ್ಣ (Spandana Somanna) ಅವರು ಕಳೆದ ವಾರ ಎಲಿಮಿನೇಟ್ ಆದರು. ಇದೀಗ ವಿಶ್ವವಾಣಿ ವಿಶೇಷ ಸಂದರ್ಶನದಲ್ಲಿ (Interview) ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ ಸ್ಪಂದನಾ.

ಬಿಗ್‌‌ಬಾಸ್‌‌ನಿಂದ ಬರುವಾಗ ಗಿಲ್ಲಿಗೆ ಒಂದು ಮಾತು ಹೇಳಿಲ್ಲ ಯಾಕೆ?

ಹತ್ತಿರ ಬಂದು ಹೋದೆ ಅಂತ ಬೇಸರ ಆಗ್ತಿದೆ. ವಿಟಿ ನೋಡಿದಾಗ ಖುಷಿ ಆಯ್ತು. ತುಂಬಾ ಸ್ವೀಟ್‌ ಆಗಿತ್ತು. ಗಿಲ್ಲಿ ನನಗೆ ಯಾವಾಗಲೂ ರೇಗಿಸುತ್ತಿದ್ದ. ನೀನೆ ನಾಮಿನೇಟ್‌ ಮಾಡಿದ್ದು ಹೊರಗೆ ಹೋಗ್ತಾ ಇದ್ದೀನಿ ಅಂತ ಹೇಳಿ ಬರುತ್ತೀನಿ. ಬಾಯ್‌ ಹೇಳಬಾರದು ಅನ್ನೊ ಅಷ್ಟು ಏನಿರಲಿಲ್ಲ.

ನಾನು ಬಿಗ್‌ ಬಾಸ್‌ ಮನೆಯನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತೀನಿ ಎಂದಿದ್ದಾರೆ. ನನಗೆ ಗಿಲ್ಲಿ ವ್ಯಕ್ತಿತ್ವ ಬಗ್ಗೆ ನೆಗೆಟಿವ್‌ ಬಗ್ಗೆ ಹೇಳೋಕೆ ಏನಿಲ್ಲ. ನಾಮಿನೇಟ್‌ ಮಾಡೋದೇ ಬೇರೆ ಎಂದಿದ್ದಾರೆ.

ಇದನ್ನೂ ಓದಿ: Bigg Boss Kannada 12: ಸ್ವಸ್ತಿಕ್ ಚಿಕಾರಾ ಜೊತೆ ಕಾವ್ಯ ಹೋಲಿಕೆ! ಟ್ರೋಲ್‌ ಆಗ್ತಿರೋದೇಕೆ ಕಾವು?

ನನಗೆ ಒಳಗಡೆ ಕುಳಿತಕೊಂಡು ಜಡ್ಜ್‌ ಮಾಡುವಾಗ, ರಾಶಿಕಾ ಕೂಡ ಚೆನ್ನಾಗಿ ಆಡ್ತಾರೆ. ಕ್ಯಾಪ್ಟನ್ಸಿ ಟಾಸ್ಕ್‌ ಹೋಗಿಲ್ಲ ಅಂದರೆ ಅವಳು ಹೊರಗಡೆ ಬರ್ತಾ ಇದ್ದರು. ಟಾಸ್ಕ್‌ ವಿಚಾರಕ್ಕೆ ನೋಡೋದಾದರೆ ನನ್ನಗಿಂತ ಅವರೇ ಬೆಟರ್‌.

ಇಲ್ಲ ಅಂದರೆ ಅವರೇ ಹೊರಗೆ ಬರ್ತಾ ಇದ್ದರು. ಪ್ರತಿ ವಾರ ಅಲ್ಲಿ ಪ್ಲ್ಯಾನ್‌ ಚೇಂಜ್‌ ಆಗ್ತಾ ಇರುತ್ತೆ. ನಾನು ಯಾವುತ್ತೂ ಲೂಸ್‌ ಟಾಕ್‌ ಮಾಡಿಲ್ಲ. ಓಪನಿಯನ್‌ ಶೇರ್‌ ಮಾಡ್ತಾ ಇದ್ದೆ. ನಾನು ಎಲ್ಲವನ್ನೂ ನೇರವಾಗಿಯೇ ಓಪಿನಿಯನ್‌ ಹೇಳ್ತಾ ಇದ್ದೆ ಎಂದಿದ್ದಾರೆ.



ರಕ್ಷಿತಾ-ಸ್ಪಂದನಾ-ಕಾವ್ಯ ಜಿದ್ದಾಜಿದ್ದಿ

ಶುರುವಾಗಿದ್ದೆ ಕ್ಯಾರೆಟ್‌ ಹಲ್ವದಿಂದ. ಕಾರಣ ಕೊಡು ಅಂದರೆ ವ್ಯಕ್ತಿತ್ವ ಬಗ್ಗೆ ಹೇಳ್ತಾ ಇದ್ದಳು ರಕ್ಷಿತಾ. ರಕ್ಷಿತಾ ತುಂಬಾ ಸ್ಮಾರ್ಟ್‌. ತುಂಬಾ ಗೇಮ್‌ ಚೆನ್ನಾಗಿ ಆಡ್ತಾ ಇದ್ದಾಳೆ. ರಘು ಮತ್ತು ಗಿಲ್ಲಿ ಬಗ್ಗೆ ಅವಳಿಗೆ ಪಾಸೆಸಿವ್‌ನೆಸ್‌ ಇದೆ ಎಂದರು.

ಇದನ್ನೂ ಓದಿ: Bigg Boss Kannada 12: ಅಶ್ವಿನಿ-ಧ್ರುವಂತ್ ಮೇಲೆ ದ್ವೇಷದ ನೀರೆರಚಾಟ! ಚುಚ್ಚು ಮಾತುಗಳನ್ನಾಡಿದ ರಾಶಿಕಾ

ಆರಂಭದಿಂದಲೂ ಸ್ಪಂದನಾ ಅದೃಷ್ಟದಿಂದಲೇ ಬಿಗ್‌ಬಾಸ್ ಸ್ಪರ್ಧೆಯಲ್ಲಿ ಉಳಿದುಕೊಂಡಿದ್ದಾರೆ ಎಂದೇ ಟ್ರೋಲ್ ಆಗುತ್ತಿತ್ತು. ಇಂಥಹ ಕಾಮೆಂಟ್‌ಗಳೂ ಬರುತ್ತಿತ್ತು. ಜೊತೆಗೆ ಬಿಗ್‌ಬಾಸ್ ಕಂಟೆಸ್ಟಂಟ್ ಜಾನ್ವಿ ಕೂಡ ಸ್ಪಂದನಾ ಕಲರ್ಸ್‌ ಕನ್ನಡ ವಾಹಿನಿ ಮನೆಮಗಳು ಅನ್ನೋ ಕಾರಣಕ್ಕೆ ಮನೆಯಲ್ಲಿ ಉಳಿಸಿಕೊಂಡಿದ್ದಾರೆ ಎಂದು ಮಾತನಾಡಿದ್ದರು. ಲಕ್‌ನಿಂದ ಉಳಿದುಕೊಂಡಿದ್ದರೆ ಬಿಗ್‌ ಬಾಸ್‌ ಮನೆಯಲ್ಲಿ ನಾಮಿನೇಟ್ ಆಗುತ್ತಿರಲಿಲ್ಲ ಎಂದಿದ್ದಾರೆ.