ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bigg Boss Kannada 12: ಗಿಲ್ಲಿಯನ್ನ ಸೋಲಿಸಿದ ಧ್ರುವಂತ್‌! ʻಟಾಸ್ಕ್ ಆಡೋಕೆ ಬರಲ್ಲ' ಅಂತ ಹೀಯಾಳಿಸಿದ ರಾಶಿಕಾ

Rashika Shetty: ಬಿಗ್‌ ಬಾಸ್‌ ಫಿನಾಲೆ ಸಮೀಪಿಸುತ್ತಿದೆ. ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ‘ಟಿಕೆಟ್ ಟು ಫಿನಾಲೆ’ ಟಾಸ್ಕ್ ನಡೆಯುತ್ತಿದೆ. ಗೆಲ್ಲುವವರು ಫಿನಾಲೆಯ ಟಿಕೆಟ್ ಓಟಕ್ಕೆ ಆಯ್ಕೆ ಆಗುತ್ತಾರೆ. ಧನುಷ್‌ ಕ್ಯಾಪ್ಟನ್‌ ಆದ ಕಾರಣ ಈಗಾಗಲೇ ಓಟಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಹೀಗಾಗಿ ಧನುಷ್‌ ಅವರಿಗೆ ಬಿಗ್‌ ಬಾಸ್‌ ಒಂದು ಟ್ವಿಸ್ಟ್‌ ಕೊಟ್ಟಿದ್ದರು. ಒಬ್ಬರನ್ನು ಟಾಸ್ಕ್​​ನಿಂದ ಹೊರಗಿಡಲು ಯಾರನ್ನು ಆಯ್ಕೆ ಮಾಡ್ತೀರಿ? ಎಂದು. ಆಗ ಧ್ರುವಂತ್‌ ಎಂದರು. ಆ ಬಳಿಕ ಧ್ರುವಂತ್‌ಗೂ ಬಿಗ್‌ ಬಾಸ್‌ ಟ್ವಿಸ್ಟ್‌ ಕೊಟ್ಟರು.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ ಫಿನಾಲೆ ಸಮೀಪಿಸುತ್ತಿದೆ. ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ‘ಟಿಕೆಟ್ ಟು ಫಿನಾಲೆ’ (Ticket to Finale) ಟಾಸ್ಕ್ ನಡೆಯುತ್ತಿದೆ. ಗೆಲ್ಲುವವರು ಫಿನಾಲೆಯ ಟಿಕೆಟ್ ಓಟಕ್ಕೆ ಆಯ್ಕೆ ಆಗುತ್ತಾರೆ. ಧನುಷ್‌ ಕ್ಯಾಪ್ಟನ್‌ (Dhanush Captain) ಆದ ಕಾರಣ ಈಗಾಗಲೇ ಓಟಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಹೀಗಾಗಿ ಧನುಷ್‌ ಅವರಿಗೆ ಬಿಗ್‌ ಬಾಸ್‌ ಒಂದು ಟ್ವಿಸ್ಟ್‌ (Bigg Boss Twist) ಕೊಟ್ಟಿದ್ದರು. ಒಬ್ಬರನ್ನು ಟಾಸ್ಕ್​​ನಿಂದ ಹೊರಗಿಡಲು ಯಾರನ್ನು ಆಯ್ಕೆ ಮಾಡ್ತೀರಿ? ಎಂದು. ಆಗ ಧ್ರುವಂತ್‌ ಎಂದರು. ಆ ಬಳಿಕ ಧ್ರುವಂತ್‌ಗೂ ಬಿಗ್‌ ಬಾಸ್‌ ಟ್ವಿಸ್ಟ್‌ ಕೊಟ್ಟರು. ಧ್ರುವಂತ್ ಅವರು ತಮ್ಮನ್ನು ತಾವು ಸಮರ್ಥರು ಎಂದು ಸಾಬೀತು ಮಾಡಿಕೊಳ್ಳಲು ಒಂದು ಅವಕಾಶ ನೀಡಲಾಯಿತು. ಗಿಲ್ಲಿಯನ್ನು ಆಯ್ಕೆ ಮಾಡಿಕೊಂಡು ಅವರನ್ನು ಸೋಲಿಸಿದರು. ಗಿಲ್ಲಿ ನಟ ಅವರು ಟಿಕೆಟ್ ಟು ಟಾಪ್ 6 (Ticket To TOP 6) ಆಟದಿಂದ ಔಟ್ ಆದರು.

ಟಿಕೆಟ್ ಟು ಟಾಪ್ 6 ಆಟದಿಂದ ಹೊರಗೆ

ಆರಂಭದಲ್ಲಿಯೇ ಬಿಗ್‌ ಬಾಸ್‌ ಧನುಷ್‌ ಅವರಿಗೆ ಒಂದು ಟ್ವಿಸ್ಟ್‌ ಕೊಟ್ಟರು. ಮನೆಯ ಕ್ಯಾಪ್ಟನ್ ಧನುಷ್ ಅವರು ಒಬ್ಬರನ್ನು ಟಿಕೆಟ್ ಟು ಟಾಪ್ 6 ಆಟದಿಂದ ಹೊರಗೆ ಇಡಬೇಕು ಎಂದು ಸೂಚಿಸಲಾಯಿತು. ಆಗ ಧನುಷ್ ಅವರು ಧ್ರುವಂತ್ ಹೆಸರನ್ನು ಹೇಳಿದರು. ಆದರೆ ಧ್ರುವಂತ್ ಅವರು ತಮ್ಮನ್ನು ತಾವು ಸಮರ್ಥರು ಎಂದು ಸಾಬೀತು ಮಾಡಿಕೊಳ್ಳಲು ಒಂದು ಅವಕಾಶ ನೀಡಲಾಯಿತು.



ಇದನ್ನೂ ಓದಿ: Bigg Boss Kannada 12: ರಕ್ಷಿತಾಗೆ ಟಾಸ್ಕ್ ಅರ್ಥ ಆಗಲ್ವಾ? ಬೆಂಬಲಕ್ಕೆ ಬಂದ ಗಿಲ್ಲಿ ಮೇಲೆ ರಾಶಿಕಾ ಗರಂ

ಧ್ರುವಂತ್ ಅವರು ಗಿಲ್ಲಿಯನ್ನು ಎದುರಾಳಿಯಾಗಿ ಆಯ್ಕೆ ಮಾಡಿಕೊಂಡರು. ಇಬ್ಬರ ನಡುವೆ ಟಾಸ್ಕ್ ನಡೆಯಿತು. ಸೋತ ಗಿಲ್ಲಿ ನಟ ಅವರು ಟಿಕೆಟ್ ಟು ಟಾಪ್ 6 ಆಟದಿಂದ ಔಟ್ ಆದರು.

ಗಿಲ್ಲಿಯನ್ನ ಹಿಯಾಳಿಸಿದ ರಾಶಿಕಾ

ಇನ್ನು ಗಿಲ್ಲಿ ಕೂಡ ಟಾಸ್ಕ್‌ವನ್ನು ಸಖತ್‌ ಆಗಿ ನಿಭಾಯಿಸಿದ್ದರು. ಧ್ರುವಂತ್‌ ಹಾಗೂ ಗಿಲ್ಲಿಗೂ ಮೊದಲಿಂದಲೂ ಅಷ್ಟಕಷ್ಟೆ. ಹೀಗಾಗಿ ಧ್ರುವಂತ್‌ ಗೆದ್ದ ಬಳಿಕ ಸಖತ್‌ ಖುಷ್‌ ಆದರು. ಧ್ರುವಂತ್ ಅವರು ಅಶ್ವಿನಿ ಗೌಡ ಜೊತೆ ಕ್ಲೋಸ್ ಆಗಿರುವ ಕಾರಣಕ್ಕೆ ಅವರನ್ನು ಗಿಲ್ಲಿ ನಟ ಟಾರ್ಗೆಟ್ ಮಾಡಿದ್ದರು.

ಗಿಲ್ಲಿ ಬಗ್ಗೆ ರಾಶಿಕಾ ಕೂಡ ಆಡಿಕೊಂಡಿದ್ದಾರೆ. ಟಾಸ್ಕ್ ಸೋತು ತುಂಬಾ ಸಮಯ ಆಗಿತ್ತು. ಈ ವೇಳೆ ರಕ್ಷಿತಾ ಹಾಗೂ ರಾಶಿಕಾ ಮಧ್ಯೆ ಜಗಳ ನಡೆಯುತ್ತಿತ್ತು. ರಘು ಜೊತೆ ಆಡುವ ಪ್ರಯತ್ನದಲ್ಲಿ ರಾಶಿಕಾ, ರಕ್ಷಿತಾ ಇದ್ದರು. ಆದರೆ ರಕ್ಷಿತಾ ಜೊತೆ ಆಡಲು ರಾಶಿಕಾಗೆ ಇಷ್ಟ ಇರಲಿಲ್ಲ. ರಕ್ಷಿತಾ ಜೊತೆ ಜಗಳ ಆಡುವಾಗ ಗಿಲ್ಲಿ ಅವರು ರಕ್ಷಿತಾ ಪರ ನಿಂತಿದ್ದರು. ರಾಶಿಕಾ ಈ ವೇಳೆ ಗಿಲ್ಲಿಗೆ ಕೌಂಟರ್‌ ಕೊಟ್ಟರು.

ಇದನ್ನೂ ಓದಿ: Bigg Boss Kannada 12: ʻಮುಖವಾಡ ಬೇಗ ಬದಲಾಗತ್ತೆʼ; ಅಶ್ವಿನಿಗೆ ರಕ್ಷಿತಾ ಭರ್ಜರಿ ಕೌಂಟರ್‌!

ಟಾಸ್ಕ್ ಆಡೋಕೆ ಬರಲ್ಲ ನಿಂಗೆ. ನಿನ್ನ ವ್ಯಕ್ತಿತ್ವ ಕೆಟ್ಟದ್ದಾಗಿದ್ದಕ್ಕೆ ಈ ಥರ ಬಂದು ಕೂತಿದ್ದೀಯಾ ಎಂದಿದ್ದಾರೆ. ಗಿಲ್ಲಿ ಕೂಡ ಟಾಸ್ಕ್‌ನಲ್ಲಿ ಗೆದ್ದು ತೋರಿಸು ಎಂದು ರಾಶಿಕಾಗೆ ನೇರವಾಗಿ ಹೇಳಿದ್ದಾರೆ.

Yashaswi Devadiga

View all posts by this author