ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bigg Boss Kannada 12: ರಕ್ಷಿತಾಗೆ ಟಾಸ್ಕ್ ಅರ್ಥ ಆಗಲ್ವಾ? ಬೆಂಬಲಕ್ಕೆ ಬಂದ ಗಿಲ್ಲಿ ಮೇಲೆ ರಾಶಿಕಾ ಗರಂ

Rakshitha Shetty: ಬಿಗ್​​ಬಾಸ್ ಕನ್ನಡ ಸೀಸನ್ 12 ಫಿನಾಲೆಗೆ ಕೆಲವೇ ದಿನಗಳು ಬಾಕಿ ಇದೆ. ಮನೆಯಲ್ಲಿ ಕೇವಲ ಎಂಟು ಮಂದಿ ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಬಿಗ್​​ಬಾಸ್, ಟಾಸ್ಕ್​​ಗಳ ಮೇಲೆ ಟಾಸ್ಕ್​​ಗಳನ್ನು ಕೊಡುತ್ತಿದ್ದಾರೆ. 'ಟಿಕೆಟ್ ಟು ಫಿನಾಲೆ' ಟಾಸ್ಕ್‌ಗಾಗಿ ಸ್ಪರ್ಧಿಗಳ ನಡುವೆ ತೀವ್ರ ಪೈಪೋಟಿ ನಡೆದಿದೆ. ಮೂರು ಸದಸ್ಯರವುಳ್ಳ ಎರಡು ತಂಡಗಳನ್ನು ಮೊದಲು ರಚಿಸಿಕೊಳ್ಳಬೇಕು. ಇದಕ್ಕೆ ರಕ್ಷಿತಾ ನಾನೇ ಆಡುತ್ತೇನೆ ಎಂದಿದ್ದಾರೆ. ಆದರೆ ಈ ಬಗ್ಗೆ ರಾಶಿಕಾ ತಕರಾರು ಎತ್ತಿದ್ದಾರೆ.

Bigg Boss Kannada 12:  ರಕ್ಷಿತಾಗೆ ಟಾಸ್ಕ್ ಅರ್ಥ ಆಗಲ್ವಾ?

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Jan 6, 2026 6:52 PM

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಫಿನಾಲೆಗೆ ಕೆಲವೇ ದಿನಗಳು ಬಾಕಿ ಇದೆ. ಮನೆಯಲ್ಲಿ ಕೇವಲ ಎಂಟು ಮಂದಿ ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಬಿಗ್​​ಬಾಸ್, ಟಾಸ್ಕ್​​ಗಳ ಮೇಲೆ ಟಾಸ್ಕ್​​ಗಳನ್ನು ಕೊಡುತ್ತಿದ್ದಾರೆ. 'ಟಿಕೆಟ್ ಟು ಫಿನಾಲೆ' (Ticket To Finale) ಟಾಸ್ಕ್‌ಗಾಗಿ ಸ್ಪರ್ಧಿಗಳ ನಡುವೆ ತೀವ್ರ ಪೈಪೋಟಿ ನಡೆದಿದೆ. ಫಿನಾಲೆ ಟಿಕೆಟ್ ಪಡೆಯುವ ಸುತ್ತಿನ ಟಾಸ್ಕ್‌ಗೆ ಆಯ್ಕೆ ಆಗಲು ಧೃವಂತ್ - ಗಿಲ್ಲಿಗೆ ಒಂದು ಟಾಸ್ಕ್ ನೀಡಲಾಗಿದೆ. ಇದರಲ್ಲಿ ಗೆದ್ದವರು 'ಟಿಕೆಟ್ ಟು ಫಿನಾಲೆ' ಟಾಸ್ಕ್‌ಗೆ ಆಯ್ಕೆ ಆಗಲಿದ್ದಾರೆ. ಇದರ ಬೆನ್ನಲ್ಲೇ ಬಿಗ್‌ ಬಾಸ್‌ ಒಂದು ಆದೇಶ ನೀಡಿದ್ದಾರೆ. ಮೂರು ಸದಸ್ಯರವುಳ್ಳ ಎರಡು ತಂಡಗಳನ್ನು ಮೊದಲು ರಚಿಸಿಕೊಳ್ಳಬೇಕು. ಇದಕ್ಕೆ ರಕ್ಷಿತಾ ನಾನೇ ಆಡುತ್ತೇನೆ ಎಂದಿದ್ದಾರೆ. ಆದರೆ ಈ ಬಗ್ಗೆ ರಾಶಿಕಾ (Rashika Shetty) ತಕರಾರು ಎತ್ತಿದ್ದಾರೆ.

ಮೂರು ಸದಸ್ಯರಿರುವ ಎರಡು ತಂಡಗಳನ್ನು ರಚಿಸುವಂತೆ ಬಿಗ್‌ ಬಾಸ್‌ ಆದೇಶಿಸಿದ್ದರು. ಈ ವೇಳೆ ರಾಶಿಕಾ ಅವರು ಕಿಚನ್‌ ರೂಮ್‌ನಲ್ಲಿ ರಕ್ಷಿತಾ ತುಂಬಾ ಪ್ಯಾನಿಕ್‌ ಆಗ್ತಾಳೆ. ಅರ್ಧಕರ್ಧ ಟಾಸ್ಕ್‌ ಅರ್ಥ ಆಗಲ್ಲ ಎಂದಿದ್ದಾರೆ. ಇದೇ ಕಾರಣಕ್ಕೆ ರಕ್ಷಿತಾ ಮತ್ತು ರಾಶಿಕಾ ನಡುವೆ ಜಗಳವಾಗಿದೆ. ಆಗ ರಕ್ಷಿತಾ ಪರ ನಿಂತ ಗಿಲ್ಲಿ ಮೇಲೂ ರಾಶಿಕಾ ಕೂಗಾಡಿದ್ದಾರೆ.

ರಾಶಿಕಾ ಸ್ವಾರ್ಥಿ ಎಂದು ರಕ್ಷಿತಾ ಹೇಳಿದ್ದಾರೆ. ನಿಮಗೆ ವೈಯಕ್ತಿಕವಾಗಿ ಯಾವುದೇ ಕನೆಕ್ಷನ್ ಇಲ್ಲವೆಂದಿದ್ದಾರೆ. ಇದಕ್ಕೆ ರಾಶಿಕಾ ಅವರು ಗರಂ ಆಗಿದ್ದು, ಗಿಲ್ಲಿ ನಿನ್ನ ನಡುವೆ ಏನು ಕನೆಕ್ಷನ್ ಇದೆಯೆಂದು ಪ್ರಶ್ನಿಸಿದ್ದಾರೆ. ಗಿಲ್ಲಿಗೆ ರಾಶಿಕಾ, ನಿನ್ನ ವ್ಯಕ್ತಿತ್ವ ಕೆಟ್ಟದ್ದಾಗಿದ್ದಕ್ಕೆ ಈ ಥರ ಬಂದು ಕೂತಿದ್ದೀಯಾ ಎಂದಿದ್ದಾರೆ.

ಇದನ್ನೂ ಓದಿ: Bigg Boss Kannada 12: ಗಿಲ್ಲಿಯನ್ನು ಕೊಚ್ಚೆ ಎಂದು ಕರೆದ ಅಶ್ವಿನಿ! ತಾರಕಕ್ಕೇರಿದ ಕಿತ್ತಾಟ

ಸದ್ಯ ಯಾರೆಲ್ಲಾ ಮನೆಯೊಳಗೆ ಇದ್ದಾರೆ?

ಬಿಗ್‌ ಬಾಸ್‌ ಕನ್ನಡ 12 ಶೋ 100 ದಿನ ಪೂರೈಸಿದ್ದು, ಸದ್ಯ 8 ಮಂದಿ ಸ್ಪರ್ಧಿಗಳು ಮನೆಯೊಳಗೆ ಇದ್ದಾರೆ. 19 ಸ್ಪರ್ಧಿಗಳು, ಮೂವರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು, ಇಬ್ಬರು ಅತಿಥಿಗಳು ಸೇರಿದಂತೆ ಒಟ್ಟು 24 ಮಂದಿ ಈ ಸೀಸನ್‌ನಲ್ಲಿ ಮನೆಯೊಳಗೆ ಬಂದಿದ್ದಾರೆ. ಅದರಲ್ಲೀಗ 8 ಮಂದಿ ಮಾತ್ರ ಉಳಿದುಕೊಂಡಿದ್ದು, ಬಿಗ್‌ ಬಾಸ್‌ ಮನೆಯ ಆಟದ ವೈಖರಿ ಮತ್ತಷ್ಟು ರೋಚಕವಾಗಿದೆ. ಧನುಷ್‌, ಗಿಲ್ಲಿ ನಟ, ಅಶ್ವಿನಿ ಗೌಡ, ಕಾವ್ಯ, ರಕ್ಷಿತಾ, ರಾಶಿಕಾ ಶೆಟ್ಟಿ, ರಘು ಮತ್ತು ಧ್ರುವಂತ್‌ ಅವರು ಸದ್ಯ ಮನೆಯೊಳಗೆ ಇದ್ದು, ಇವರಲ್ಲಿ ಮುಂದಿನ ವಾರ ಯಾರು ಫಿಲಾನೆ ತಲುಪುತ್ತಾರೆ ಎಂಬ ಬಗ್ಗೆ ಚರ್ಚೆ ಶುರುವಾಗಿದೆ.

ಇದನ್ನೂ ಓದಿ: Bigg Boss Kannada 12: ಮೊದಲ ಫಿನಾಲೆ ಟಿಕೆಟ್‌ ಪಡೆಯಲು ಸೋತು ಹೋದ್ರಾ ಗಿಲ್ಲಿ? `ಮಾತಿನ ಮಲ್ಲ'ನಿಗೆ ಧ್ರುವಂತ್‌ ಚಾಲೆಂಜ್‌!

ನಾಮಿನೇಟ್‌ ಆಗಿರುವವರು ಯಾರು?

ಇನ್ನು, ಈ ವಾರ ಅಚ್ಚರಿಯ ನಾಮಿನೇಷನ್‌ ನಡೆದಿದೆ. ಕ್ಯಾಪ್ಟನ್‌ ಧನುಷ್‌ ಅವರನ್ನು ಹೊರುತಪಡಿಸಿ, ಗಿಲ್ಲಿ ನಟ, ಅಶ್ವಿನಿ, ಕಾವ್ಯ, ರಕ್ಷಿತಾ, ರಾಶಿಕಾ, ರಘು ಮತ್ತು ಧ್ರುವಂತ್‌ ಸೇರಿ ಎಲ್ಲರೂ ನಾಮಿನೇಟ್‌ ಆಗಿದ್ದಾರೆ. ಹಾಗಾಗಿ, ಈ ವಾರ ಯಾರೇ ಎಲಿಮಿನೇಟ್‌ ಆದರೂ, ಬಿಗ್‌ ಬಾಸ್‌ ಆಟದಕ್ಕೆ ದೊಡ್ಡ ತಿರುವು ಸಿಗಲಿದೆ.