ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bigg Boss Kannada 12: 24 ತಲೆ ಇದ್ದಿದ್ದನ್ನು ಈಗ ಕೇವಲ ಆರು ತಲೆಗೆ ತಂದಿದ್ದೀನಿ; ಒನ್ ಮ್ಯಾನ್ ಆರ್ಮಿ ಎಂದು ಅಬ್ಬರಿಸಿದ ಧ್ರುವಂತ್‌!

Dhruvanth: ಬಿಗ್‌ ಬಾಸ್‌ ಫಿನಾಲೆ ಸಮೀಪದಲ್ಲಿದೆ. ಬಿಗ್​​ಬಾಸ್ ಮನೆಗೆ ಪ್ರೇಕ್ಷಕರು ಬಂದಿದ್ದಾರೆ. ಪ್ರೇಕ್ಷಕರ ಮುಂದೆ ಸ್ಪರ್ಧಿಗಳು ತಮ್ಮ ಜರ್ನಿಯ ಬಗ್ಗೆ ಹೇಳಬೇಕಿದೆ. ಧ್ರುವಂತ್ , ತಾವು ಇಡೀ ಸೀಸನ್ ಒನ್ ಮ್ಯಾನ್ ಆರ್ಮಿ ರೀತಿಯಲ್ಲಿ ಆಟ ಆಡಿರುವುದಾಗಿ ಹೇಳಿದ್ದಾರೆ. ಕೊನೆಯ ಕಿಚ್ಚನ ಪಂಚಾಯಿತಿಯಲ್ಲಿ ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ಇಡೀ ಸೀಸನ್​ನ ಆಟವನ್ನು ಪರಿಗಣಿಸಿ ಧ್ರುವಂತ್ ಅವರಿಗೆ ಸೀಸನ್‌ನ ಕಿಚ್ಚನ ಚಪ್ಪಾಳೆ ನೀಡಿದ್ದರು. ಇದೀಗ ಧ್ರುವಂತ್‌ ತಮ್ಮ ಫ್ಯಾನ್ಸ್‌ ಮುಂದೆ ಅಬ್ಬರಿಸಿದ್ದಾರೆ.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ ಫಿನಾಲೆ (Bigg Boss Kannada 12) ಸಮೀಪದಲ್ಲಿದೆ. ಬಿಗ್​​ಬಾಸ್ ಮನೆಗೆ ಪ್ರೇಕ್ಷಕರು ಬಂದಿದ್ದಾರೆ. ಪ್ರೇಕ್ಷಕರ ಮುಂದೆ ಸ್ಪರ್ಧಿಗಳು ತಮ್ಮ ಜರ್ನಿಯ ಬಗ್ಗೆ ಹೇಳಬೇಕಿದೆ. ಧ್ರುವಂತ್ (Dhruvanth), ತಾವು ಇಡೀ ಸೀಸನ್ ಒನ್ ಮ್ಯಾನ್ ಆರ್ಮಿ ರೀತಿಯಲ್ಲಿ ಆಟ ಆಡಿರುವುದಾಗಿ ಹೇಳಿದ್ದಾರೆ. ಕೊನೆಯ ಕಿಚ್ಚನ ಪಂಚಾಯಿತಿಯಲ್ಲಿ ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ (kichcha sudeep) ಇಡೀ ಸೀಸನ್​ನ ಆಟವನ್ನು ಪರಿಗಣಿಸಿ ಧ್ರುವಂತ್ ಅವರಿಗೆ ಸೀಸನ್‌ನ ಕಿಚ್ಚನ ಚಪ್ಪಾಳೆ (kicchana chappale) ನೀಡಿದ್ದರು. ಇದೀಗ ಧ್ರುವಂತ್‌ ತಮ್ಮ ಫ್ಯಾನ್ಸ್‌ ಮುಂದೆ ಅಬ್ಬರಿಸಿದ್ದಾರೆ.

ನನ್ನ ಮುಂದೆ ಇದ್ದದ್ದು 24 ತಲೆಗಳು, ಇವತ್ತು 6 ತಲೆಗೆ ತಂದು ನಿಲ್ಲಿಸಿದ್ದೀನಿ

ಧ್ರುವಂತ್‌ ಮಾತನಾಡಿ, ನೀವೆ ನನ್ನ ಮೇಲೆ ನಂಬಿಕೆ ಇಟ್ಟು ಕಳಿಸಿದ್ದೀರಿ. ಒನ್‌ ಮ್ಯಾನ್‌ ಆರ್ಮಿ ಆಗಿ ಆಟ ಆಡುತ್ತಿರುವೆ. ಟಾಸ್ಕ್‌ನಲ್ಲಿ ಆಟ ಆಡಬಾರದು ಅಂತ ನನ್ನನ್ನು ಹೊರಗಡೆ ಇಟ್ಟು ನನ್ನನ್ನು ಬ್ಲಾಕ್‌ ಮಾಡ್ತಾರೆ. ಡಿಬಾರ್‌ ಮಾಡ್ತಾರೆ, ಜಗಳ ಮಾಡಿ, ಟಾಸ್ಕ್‌ನನ್ನು ಕಿತ್ತುಕೊಂಡ ಆಟ ಆಡಿ, ಪ್ರೂವ್‌ ಮಾಡಿದ್ದೀನಿ. ನನ್ನ ಮುಂದೆ ಇದ್ದದ್ದು 24 ತಲೆಗಳು, ಇವತ್ತು 6 ತಲೆಗೆ ತಂದು ನಿಲ್ಲಿಸಿದ್ದೀನಿ. ನನಗೆ ಕಾಂಪಿಟೇಟರ್‌ ಇರಬಾರದು ಹಾಗೇ ನಾನು ಮೊದಲ ದಿನದಂದ ಆಡಿಕೊಂಡು ಬಂದಿದ್ದೀನಿ. ಜೈ ಮಹಾಕಾಳ್‌ ಎಂದಿದ್ದಾರೆ.

ಇದನ್ನೂ ಓದಿ: Bigg Boss Kannada 12: 24 ತಲೆ ಇದ್ದಿದ್ದನ್ನು ಈಗ ಕೇವಲ ಆರು ತಲೆಗೆ ತಂದಿದ್ದೀನಿ; ಒನ್ ಮ್ಯಾನ್ ಆರ್ಮಿ ಎಂದು ಅಬ್ಬರಿಸಿದ ಧ್ರುವಂತ್‌!

ಸೀಸನ್‌ನ ಚಪ್ಪಾಳೆ

ಕೊನೆಯ ಕಿಚ್ಚನ ಪಂಚಾಯಿತಿಯಲ್ಲಿ ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ಇಡೀ ಸೀಸನ್​ನ ಆಟವನ್ನು ಪರಿಗಣಿಸಿ ಧ್ರುವಂತ್ ಅವರಿಗೆ ಸೀಸನ್‌ನ ಕಿಚ್ಚನ ಚಪ್ಪಾಳೆ ನೀಡಿದ್ದರು. ಆದರೆ, ಸುದೀಪ್ ಅವರ ಈ ನಿರ್ಧಾರಕ್ಕೆ ವೀಕ್ಷಕರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು.ಈ ಸೀಸನ್‌ನಲ್ಲಿ ಉತ್ತಮವಾಗಿ ಆಡಿದ್ದೀರಿ ಮತ್ತು ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿದ್ದೀರಿ.



ಅದಕ್ಕಾಗಿ ನಾನು ಮೊದಲ ಬಾರಿಗೆ ಸೀಸನ್‌ನ ಚಪ್ಪಾಳೆ ನೀಡುತ್ತಿದ್ದೇನೆ ಎಂದು ಸುದೀಪ್ ಹೇಳಿದ್ದರು. ಗಿಲ್ಲಿಗೆ ಚಪ್ಪಾಳೆ ಸಿಗುತ್ತಿದ್ದಂತೆ, ಗಿಲ್ಲಿ ಬಳಿ ಮಾತನಾಡಿದ್ದ ರಘು, ‘ಧ್ರುವಂತ್ ಈ ಬಾರಿ ವಿನ್ ಆದರೂ ಆಗಬಹುದು’ ಎಂದಿದ್ದರು. ಇನ್ನು, ಅಶ್ವಿನಿ ಕೂಡ ಒಳ್ಳೆಯ ಸ್ಪರ್ಧೆಯನ್ನೇ ನೀಡುತ್ತಿದ್ದು, ಅವರಿಗೂ ವಿಜಯಲಕ್ಷ್ಮೀ ಒಲಿಯಬಹುದು ಎಂಬುದು ಕೆಲವರ ಅಭಿಪ್ರಾಯ.

ಇದನ್ನೂ ಓದಿ: Bigg Boss Kannada 12: ರಕ್ಷಿತಾರ ಈ ಮೂರು ಬೇಡಿಕೆಗಳ ಬಗ್ಗೆ ವೀಕ್ಷಕರು ಫಿದಾ! ಗಿಲ್ಲಿ ಕೇಳಿದ್ದೇನು?

ಇದು ಫಿನಾಲೆ ವಾರ ಆಗಿರುವುದರಿಂದ ಎರಡು ಸಲ ವೋಟಿಂಗ್‌ ಲೈನ್ಸ್‌ ತೆರೆದುಕೊಳ್ಳಲಿದೆ. ಮೊದಲು ಮಿಡ್‌ ವೀಕ್‌ ಎಲಿಮಿನೇಷನ್‌ಗೆಂದು ಒಂದು ವೋಟಿಂಗ್‌ ಇರಲಿದೆ. ಅದು ಮಂಗಳವಾರ ಸಂಜೆವರೆಗೂ ನಡೆಯಲಿದೆ. ಮಿಡ್‌ ವೀಕ್‌ ಎಲಿಮಿನೇಷನ್‌ ಆದಮೇಲೆ ಉಳಿಯುವ ಆರು ಮಂದಿ ಫಿನಾಲೆಗೆ ಎಂಟ್ರಿ ಆಗಲಿದ್ದು, ಆನಂತರ ವಿನ್ನರ್‌ ಯಾರಾಗಬೇಕೆಂದು ವೋಟಿಂಗ್‌ ನಡೆಯಲಿದೆ. ಭಾನುವಾರ (ಜ.18) ರಾತ್ರಿ ವಿನ್ನರ್‌ ಯಾರು ಎಂಬುದು ಗೊತ್ತಾಗಲಿದೆ.

Yashaswi Devadiga

View all posts by this author