Bigg Boss Kannada 12: ರಕ್ಷಿತಾರ ಈ ಮೂರು ಬೇಡಿಕೆಗಳ ಬಗ್ಗೆ ವೀಕ್ಷಕರು ಫಿದಾ! ಗಿಲ್ಲಿ ಕೇಳಿದ್ದೇನು?
Gilli Nata: ಬಿಗ್ ಬಾಸ್ ಫಿನಾಲೆ ಸಮೀಪಿಸುತ್ತಿರುವ ಕಾರಣ ಕೆಲವು ಚಟುವಟಿಕೆಗಳನ್ನು ಸ್ಪರ್ಧಿಗಳಿಗೆ ನೀಡುತ್ತಿದ್ದಾರೆ ಬಿಗ್ ಬಾಸ್. ನಿನ್ನೆ ಬಿಗ್ ಬಾಸ್ ಸ್ಪರ್ಧಿಗಳು ಹೇಳುವ ಮೂರು ಬೇಡಿಕೆಗಳ ಪೈಕಿ ಒಂದನ್ನು ಈಡೇರಿಸೋದಾಗಿ ಹೇಳಿದ್ದರು. ಅದರಲ್ಲಿ ರಕ್ಷಿತಾ ಅವರ ಬೇಡಿಕೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ರಘು, ಅಶ್ವಿನಿ ಗೌಡ, ಧ್ರುವಂತ್, ರಕ್ಷಿತಾ ಮತ್ತು ಗಿಲ್ಲಿ ನಟ ಅವರ ಆಸೆಗಳನ್ನು ತೋರಿಸಲಾಗಿತ್ತು.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಫಿನಾಲೆ (Bigg Boss Kannada Finale) ಸಮೀಪಿಸುತ್ತಿರುವ ಕಾರಣ ಕೆಲವು ಚಟುವಟಿಕೆಗಳನ್ನು ಸ್ಪರ್ಧಿಗಳಿಗೆ ನೀಡುತ್ತಿದ್ದಾರೆ ಬಿಗ್ ಬಾಸ್. ನಿನ್ನೆ ಬಿಗ್ ಬಾಸ್ ಸ್ಪರ್ಧಿಗಳು ಹೇಳುವ ಮೂರು(Three Choices) ಬೇಡಿಕೆಗಳ ಪೈಕಿ ಒಂದನ್ನು ಈಡೇರಿಸೋದಾಗಿ ಹೇಳಿದ್ದರು. ಅದರಲ್ಲಿ ರಕ್ಷಿತಾ ಅವರ ಬೇಡಿಕೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ರಘು, ಅಶ್ವಿನಿ ಗೌಡ, ಧ್ರುವಂತ್, ರಕ್ಷಿತಾ ಮತ್ತು ಗಿಲ್ಲಿ ನಟ (Gilli Nata) ಅವರ ಆಸೆಗಳನ್ನು ತೋರಿಸಲಾಗಿತ್ತು.
ರಕ್ಷಿತಾ ಇಟ್ಟ ಮೂರು ಬೇಡಿಕೆ ಇದು
ನಾವು ಕರಾವಳಿ ಅವರು. ಮುದ್ರಕ್ಕಿಳಿಯುವ ಮೀನುಗಾರರು ಎದುರಿಸುವ ಸವಾಲುಗಳ ಬಗ್ಗೆ ಎಲ್ಲರ ಮುಂದೆ ಮಾತನಾಡಲು ಅವಕಾಶ ನೀಡಬೇಕು. ಈ ಮೂಲಕ ಮೀನುಗಾರರಿಗೆ ವೇದಿಕೆ ಕಲ್ಪಿಸಿ ಎಂದು ಬೇಡಿಕೆ ಇಟ್ಟರು.
ಎರಡನೇಯದು ಬಿಗ್‌ಬಾಸ್ ಮನೆಗೆ ಹುಲಿ ನೃತ್ಯದ ಕಲಾವಿದರು ಬರಬೇಕು ಮತ್ತು ಅವರೊಂದಿಗೆ ನಾನು ಡ್ಯಾನ್ಸ್ ಮಾಡಬೇಕು ಎಂದರು. ಮೂರನೇಯದು ಬಿಗ್‌ಬಾಸ್ ಮನೆಯಲ್ಲಿ ಕನ್ನಡ ನಾಟಕ ನೋಡಬೇಕೆಂದು ಹೇಳಿಕೊಂಡಿದ್ದಾರೆ. ಇನ್ನು ರಕ್ಷಿತಾ ಅವರ ಪ್ರಬುದ್ಧತೆಯ ಬಗ್ಗೆ ವೀಕ್ಷಕರು ಕೊಂಡಾಡಿದ್ದಾರೆ.
ಗಿಲ್ಲಿ ಬೇಡಿಕೆ ಏನು?
ಗಿಲ್ಲಿ ಸರದಿ ಬಂದಾಗ, ಮೊದಲನೇಯದು ಬಿಗ್ ಬಾಸ್ ಟಿವಿಯಲ್ಲಿ ಸಿನಿಮಾ ನೋಡಬೇಕು ಎಂದು, ಎರಡನೇಯದು ಬಿಗ್ ಬಾಸ್ ಮನೆಯಲ್ಲಿರೋ ಆನೆ ಮೇಲೆ ಕುಳಿತುಕೊಳ್ಳಬೇಕು , ಹಾಗೇ ನಳ್ಳಿ ಮೂಳೆ ತಿನ್ನಬೇಕು ಅಂತ ಬೇಡಿಕೆ ಇಟ್ಟರು. ರಘು ಕೂಡ ಸ್ವಿಮ್ಮಿಂಗ್ ಪೂಲ್‌ನಲ್ಲಿ ಮಗನ ಜೊತೆ ಆಟ ಆಡಬೇಕು, ಸಿನಿಮಾ ನೋಡಬೇಕು ಹಾಗೇ ನಾನೇ ಮನಯವರಿಗೆ ಅಡುಗೆ ಮಾಡಿ ಕೊಡಬೇಕು. ಅದನ್ನ ನನ್ ಯುಟ್ಯೂಬ್ ಚಾನೆಲ್‌ಗೆ ಹಾಕಿಕೊಳ್ಳಬೇಕು ಎಂದಿದ್ದಾರೆ. ಈ ನಾಲ್ವರ ಪೈಕಿ ರಕ್ಷಿತಾ ಹೇಳಿದ ಮೂರು ಬೇಡಿಕೆಗಳಿಗೆ ಕರುನಾಡಿನ ಜನತೆ ಫಿದಾ ಆಗಿದ್ದಾರೆ.
Personally nanage ista agiddu wish andre gilli du..!!
— ಹೌದು ಸ್ವಾಮಿ (@howduswami8) January 12, 2026
ನಲ್ಲಿ ಮೂಳೆ 🦴ಕುಟ್ಟಿ ಕುಟ್ಟಿ ತಿಂದು, ಮಲ್ಕೋ ಬೇಕು but ನಾಯಿ ಬೊಗಳೋ sound ಬರಬಾರ್ದು..🤣#BBK12 #GilliNata pic.twitter.com/tJtX17fmSR
ಇದೀಗ ಅಭಿಮಾನಿಗಳೇ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಸ್ಪರ್ಧಿಗಳು ತಮ್ಮ ಮೆಚ್ಚಿನ ಫ್ಯಾನ್ಸ್ (Vote Fans) ಮುಂದೆ ವೋಟ್‌ಗೆ ಮನವಿ ಮಾಡಿದ್ದಾರೆ. ಅದರಲ್ಲೂ ತಮ್ಮ ಗತ್ತು, ತಾಕತ್ತು ಬಗ್ಗೆ ವ್ಯಕ್ತಪಡಿಸಿದ್ದಾರೆ.ಹೊಸ ಪ್ರೋಮೋ ಔಟ್ ಆಗಿದೆ. ಅಭಿಮಾನಿಗಳ ಕೈಯಲ್ಲೇ ಸೋಲು ಗೆಲುವಿನ ನಿರ್ಧಾರ ಇದೆ ಎಂದು ಬಿಗ್ ಬಾಸ್ ಹೇಳಿದ್ದಾರೆ.
ಇದನ್ನೂ ಓದಿ: Bigg Boss Kannada 12: ನನ್ನ ವ್ಯಕ್ತಿತ್ವದ ಮೇಲೆ ಪ್ರಶ್ನೆ ಬಂದಾಗ ಯಾರನ್ನೂ ಬಿಟ್ಟಿಲ್ಲ! ಅಭಿಮಾನಿಗಳ ಮುಂದೆ ಧ್ರುವಂತ್ ಅಬ್ಬರ
ಕಾವ್ಯ ಅವರು ಫ್ಯಾನ್ಸ್ ಬಂದಾಗ, ಖುಷಿ ಆಗ್ತಿದೆ ಎಂದು ಹೇಳಿದ್ದಾರೆ. ನನ್ನ ವ್ಯಕ್ತಿತ್ವದ ಮೇಲೆ ಪ್ರಶ್ನೆ ಬಂದಾಗ, ಯಾರೇ ಆಗಿರಲಿ ಅಷ್ಟೂ ಜನರನ್ನು ನಾನು ಮಟ್ಟ ಹಾಕಿದ್ದೀನಿ ಎಂದಿದ್ದಾರೆ ಧ್ರುವಂತ್, ಇನ್ನು ಧನುಷ್ ಅವರು, ಇಷ್ಟು ಕಷ್ಟ ಪಟ್ಟಿದ್ದೀನಿ, ಅಷ್ಟು ಕಷ್ಟ ಪಟ್ಟಿದ್ದೀನಿ ಅಂತ ಹೇಳಲ್ಲ. ಒಬ್ಬರು ಬೆಳಿಬೇಕು ಅಂದರೆ ಅವರು ಅವರೇ ಕಷ್ಟ ಪಡಬೇಕು. ನಿಮಗೆಲ್ಲರಿಗೂ ನಾನು ಫ್ಯಾನ್ ಆದೆ, ನೀವೆಲ್ಲ ನನಗೆ ಸ್ಟಾರ್ ಆದ್ರಿ ಎಂದಿದ್ದಾರೆ.