Bigg Boss Kannada 12: ನನ್ನನ್ನು ಹೊರಗೆ ಕಳುಹಿಸಿ ಎಂದು ಬಿಗ್ ಬಾಸ್‌ಗೆ ಮನವಿ ಮಾಡಿದ ಧ್ರುವಂತ್
Dhruvanth: ಸುದೀಪ್ ಒಂದು ಟಾಸ್ಕ್ ಕೊಟ್ಟಿದ್ದರು. ಇದರಲ್ಲಿ ಆಯಾ ಪ್ರಾಣಿಗಳ ಗುಣಗಳನ್ನ ಅರ್ಥ ಮಾಡಿಕೊಂಡು ಮನೆಯ ಸದಸ್ಯರಲ್ಲಿ ಯಾರಿಗೆ ಆ ಗುಣ ಹೋಲುತ್ತದೆಯೋ ಆ ಬೋರ್ಡ್ ಅನ್ನ ಆ ಸ್ಪರ್ಧಿಗಳಿಗೆ ಕೊಡಬೇಕಾಗುತ್ತದೆ. ಈ ವೇಳೆ ಬಹುತೇಕ ಎಲ್ಲ ಸ್ಪರ್ಧಿಗಳು ಧ್ರುವಂತ್ ಅವರನ್ನೇ ಟಾರ್ಗೆಟ್ ಮಾಡಿದರು. ಇದು ಧ್ರುವಂತ್ ಅವರಿಗೆ ಬೇಸರ ತರಿಸಿದೆ. ಈ ವೇಳೆ ಮನೆಯಿಂದ ಆಚೆ ಹೋಗುವೆ ಎಂದು ಸುದೀಪ್ ಮುಂದೆ ಹೇಳಿದ್ದಾರೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಮನೆಯಲ್ಲಿ (Bigg Boss Kannada 12) ಧ್ರುವಂತ್ (Dhruvanth) ನೇರವಾಗಿಯೇ ಓಪನಿಯನ್ ಹೇಳುತ್ತಾರೆ. ಆದರೆ ಇತ್ತೀಚೆಗೆ ಸ್ಫರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸುದೀಪ್ (Sudeep) ಒಂದು ಟಾಸ್ಕ್ ಕೊಟ್ಟಿದ್ದರು. ಇದರಲ್ಲಿ ಆಯಾ ಪ್ರಾಣಿಗಳ ಗುಣಗಳನ್ನ ಅರ್ಥ ಮಾಡಿಕೊಂಡು ಮನೆಯ ಸದಸ್ಯರಲ್ಲಿ ಯಾರಿಗೆ ಆ ಗುಣ ಹೋಲುತ್ತದೆಯೋ ಆ ಬೋರ್ಡ್ ಅನ್ನ ಆ ಸ್ಪರ್ಧಿಗಳಿಗೆ ಕೊಡಬೇಕಾಗುತ್ತದೆ. ಈ ವೇಳೆ ಬಹುತೇಕ ಎಲ್ಲ ಸ್ಪರ್ಧಿಗಳು ಧ್ರುವಂತ್ (Dhruvanth) ಅವರನ್ನೇ ಟಾರ್ಗೆಟ್ ಮಾಡಿದರು. ಇದು ಧ್ರುವಂತ್ ಅವರಿಗೆ ಬೇಸರ ತರಿಸಿದೆ. ಈ ವೇಳೆ ಮನೆಯಿಂದ ಆಚೆ ಹೋಗುವೆ ಎಂದು ಸುದೀಪ್ (Sudeep) ಮುಂದೆ ಹೇಳಿದ್ದಾರೆ.
ಮನೆಗೆ ಕಳುಹಿಸಿ ಎಂದ ಧ್ರುವಂತ್!
ಬಹುತೇಕ ಎಲ್ಲ ಸ್ಪರ್ಧಿಗಳು ಧ್ರುವಂತ್ ಅವರ ಹೆಸರು ಹೇಳಿದ ಬಳಿಕ ಧ್ರುವಂತ್ ಬೋರ್ಡನ್ನ ಕುತ್ತಿಗೆಯಿಂದ ತೆಗೆಯುತ್ತಾರೆ. ಇದನ್ನ ಗಮನಿಸಿದ ಸುದೀಪ್ ಒಂದು ಮಾತು ಹೇಳುತ್ತಾರೆ. ಆ ಬೋರ್ಡ್ ಅನ್ನ ನೀವು ಕೊರಳಿಗೆ ಹಾಕಿಕೊಳ್ಬೇಕು ಅಂತ ಹೇಳ್ತಾರೆ.
ಇದನ್ನೂ ಓದಿ: Bigg Boss Kannada 12: ರಜತ್ ಮಾಸ್ ಆಗಿ ಬಂದ್ರು, ಆದ್ರೆ ಈಗ ಠುಸ್ ಎಂದ ಗಿಲ್ಲಿ! ಇನ್ನೇನಿದ್ರು ಆಟ ಒಂದೇ ಎಂದ ಮಾತಿನ ಮಲ್ಲ
ಸುದೀಪ್ ಹೇಳಿರೋ ಮಾತುಗಳನ್ನ ಕೇಳದ ಧ್ರುವಂತ್ ಹೇಳ್ತಾರೆ. ಸರ್, ನಾನು ಈ ಬೋರ್ಡ್‌ಗಳನ್ನ ಹಾಕಿಕೊಳ್ಳುವುದಿಲ್ಲ. ಆದರೆ, ಇದನ್ನ ಹಾಕಿಕೊಳ್ಳುವ ಬದಲು ಶೋನಿಂದಲೇ ಹೊರಗೆ ಹೋಗೋಕೆ ಇಷ್ಟಪಡ್ತೀನಿ ಅಂತಲೇ ಹೇಳ್ತಾರೆ. ‘ಒಳಕ್ಕೆ ಹೋಗೋದು ಮಾತ್ರ ನಿಮ್ಮ ನಿರ್ಧಾರ. ಆ ಬಳಿಕ ಏನೇ ಆದರೂ ಜನ ನಿರ್ಧರಿಸಬೇಕು. ನಿಮ್ಮ ಅಗ್ರಿಮೆಂಟ್ನಲ್ಲಿ ಏನಿದೆ ಎಂಬುದು ನಿಮಗೆ ಗೊತ್ತಿದೆ ಅಲ್ಲವೆ’ ಎಂದು ಸುದೀಪ್ ಹೇಳಿದರು.
ಸೇಫ್ ಗೇಮ್ ಆಡೋಕೆ ನನಗೆ ಇಷ್ಟ ಇಲ್ಲ
ಆದರೆ ಶೋ ಬಳಿಕ ಧ್ರುವಂತ್ ಅವರು ಮತ್ತದೇ ರಾಗ ಶುರು ಮಾಡಿದ್ದರು. ನನ್ನ ಕ್ಯಾರೆಕ್ಟರ್ ಜೊತೆ ಕಾಂಪ್ರಮೈಸ್ ಆಗಬೇಕಾದ ದಿನ ಬಂದಾಗ ನಾನು ಬದುಕಿರೋದಿಲ್ಲ. ಇಲ್ಲಿ ಇರುವುದಕ್ಕೆ ಅಥವಾ ಪೇಮೆಂಟ್ ಸಿಗುತ್ತದೆ ಎಂಬ ಕಾರಣಕ್ಕೆ ಸೇಫ್ ಗೇಮ್ ಆಡೋಕೆ ನನಗೆ ಇಷ್ಟ ಇಲ್ಲ. ನನಗೆ ಒಳ್ಳೆಯವನ ರೀತಿ ಇರಲು ಆಗೋದಿಲ್ಲ. ನಿಮ್ಮ ಜೊತೆ ರಿಕ್ವೆಸ್ಟ್ ಮಾಡಿಕೊಳ್ಳುತ್ತಿದ್ದೇನೆ. ಇಲ್ಲಿಂದ ನನ್ನನ್ನು ಕಳುಹಿಸಿ ಎಂದು ಮನವಿ ಮಾಡಿದ್ದಾರೆ. ಇನ್ನು ಬಿಗ್ ಬಾಸ್ ಯಾವ ರೀತಿ ಆಕ್ಷನ್ ತೆಗೆದುಕೊಳ್ಳುತ್ತಾರೆ ಎಂಬುದೇ ವೀಕ್ಷಕರಲ್ಲಿ ಇರುವ ಕುತೂಹಲ.
Will Dhruvanth Leave🥺 #BBK12 pic.twitter.com/jP2WFDSJzp
— Venkat ⚡️ (@WealthArigato) November 30, 2025
ಕುಚಿಕುಗಳ ಮಧ್ಯೆಯೇ ಮಾರಾಮಾರಿ
ಸದ್ಯ ಮನೆಯಲ್ಲಿ ಕುಚಿಕುಗಳ ಮಧ್ಯೆಯೇ ಮಾರಾಮಾರಿಯಾಗಿದೆ. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಜಗಳ ತಾರಕಕ್ಕೇರಿದೆ. ವಂಶದ ಕುಡಿಯೇ ಗಿಲ್ಲಿ ವಿರುದ್ಧ ತಿರುಗಿ ಬಿದ್ದಿದೆ. ರಘು ಕೂಡ ಗಿಲ್ಲಿ ವಿರುದ್ಧವೇ ಕೂಗಾಡಿದ್ದಾರೆ. ಗಿಲ್ಲಿ ಕೂಡ ಈಗ ಅಬ್ಬರಿಸಿದ್ದಾರೆ. ಸದಸ್ಯರಿಗೆ 1ರಿಂದ 11 ರ್ಯಾಕಿಂಗ್ ನೀಡಬೇಕಿತ್ತು. ಧನುಷ್ ಅವರು ಎರಡನೇ ಸ್ಥಾನವನ್ನು ಗಿಲ್ಲಿಗೆ ನೀಡಿದರು. `ನಿನ್ನ ವಿಷಯಕ್ಕೆ ಬಂದಾಗ ನೀನು ಸ್ಟ್ಯಾಂಡ್ ತೆಗೆದುಕೊಳ್ತೀಯಾ ಅಂತ ಅನ್ನಿಸಿತು' ಅಂತ ಗಿಲ್ಲಿಗೆ ಹೇಳಿದ್ದಾರೆ. ಧನುಷ್ ಕೊಟ್ಟ ನಂಬರ್‌ಗೆ ಹಾಗೂ ಮಾತಿಗೆ ರಕ್ಷಿತಾ ರಘು ಕೆಂಡ ಆದರು.
ಇದನ್ನೂ ಓದಿ: Bigg Boss Kannada 12: ಕುಚಿಕುಗಳ ಮಧ್ಯೆ ಮಾರಾಮಾರಿ! ಗಿಲ್ಲಿಯನ್ನೇ ಟಾರ್ಗೆಟ್ ಮಾಡಿದ ರಕ್ಷಿತಾ
`ಮನೆ ಕೆಲಸ ಆಗಲಿ ಏನೂ ನಿಭಾಯಿಸಲ್ಲ' ಅಂತ ಗಿಲ್ಲಿ ಬಗ್ಗೆ ರಕ್ಷಿತಾ ಕಾರಣ ಕೊಟ್ಟರು. `ಮನೆಯಲ್ಲಿ ಶುದ್ಧ ಸೋಮಾರಿ ಅವನೇ . ಆದರೆ ಎರಡನೇ ಸ್ಥಾನದಲ್ಲಿ ಇದ್ದಾರೆ' ಅವರು ಅಂತ ರಘು ಕಾರಣ ಕೊಟ್ಟರು. ಇದನ್ನು ಕೇಳಿ ಗಿಲ್ಲಿ ಕೆಂಡ ಆಗಿದ್ದಾರೆ.