ಬಿಗ್ ಬಾಸ್ (Bigg Boss Kannada 12) ಮನೆಯಲ್ಲಿ ಧ್ರುವಂತ್ (Dhruvanth) ಅವರ ಮಾತುಗಳು ಜೋರಾಗಿವೆ. ಗಿಲ್ಲಿ (Gilli) ಹಾಗೂ ರಕ್ಷಿತಾ (Rakshita) ಅವರಿಗೆ ಟಾರ್ಗೆಟ್ ಮಾಡುತ್ತಲೇ ಬರುತ್ತಿದ್ದಾರೆ. ಮೆಣಸನ್ನು (Chilli) ನೀಡಿ ರಕ್ಷಿತಾ ಹಾಗೂ ಗಿಲ್ಲಿ ಬಗ್ಗೆ ಅಣುಕಿಸಿ ಮಾತನಾಡಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ರಕ್ಷಿತಾ ಬಗ್ಗೆ ಧ್ರುವಂತ್ ಆರೋಪ ಮಾಡಿದ್ದರು. `ಅಡುಗೆ ಮಾಡ್ತಿನಿ ಅಂತ ಮುಂದೆ ಬರ್ತಾಳೆ. ಪಾತ್ರೆ ತೊಳೀತಾಳೆ, ಆದರೆ ಅದು ಸರಿ ಆಗಿರಲ್ಲ. ಅವಳು ತುಳುವನ್ನು ಸಹ ಸರಿಯಾಗಿ ಮಾತನಾಡೋದಿಲ್ಲ. ಕನ್ನಡನೂ ಸರಿಯಾಗಿ ಮಾತನಾಡೋದಿಲ್ಲ' ಎಂದು ಆರೋಪಿಸಿದ್ದರು.
ಧ್ರುವಂತ್‍ಗೆ ಗೊತ್ತಿರೋ ವಿಷ್ಯ ನಿಮಗೂ ಗೊತ್ತುಂಟಾ ಗಾಯ್ಸ್?
ಇದೀಗ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದಾರೆ. ಈ ವೇಳೆ ಧ್ರುವಂತ್ ಅವರು ಗಿಲ್ಲಿ ಹಾಗೂ ರಕ್ಷಿತಾ ಬಗ್ಗೆ ಹೇಳಿದ್ದು ಹೀಗೆ.
ಇದನ್ನೂ ಓದಿ: Bigg Boss Kannada 12: ವಿಶೇಷ ಅಧಿಕಾರ ಬಳಸಿದ ಸುಧಿ, ಕಣ್ಣೀರಿಡುತ್ತಲೇ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಚಂದ್ರಪ್ರಭ
ಗಿಲ್ಲಿ ಅವರು ಬನಿಯನ್ ಹಾಕ್ಕೊಂಡು ತಾನು ಬಡವನಾಗಿ, ಮುಖವಾಡ ಹಾಕಿಕೊಂಡು, ನನ್ನತ್ರ 100 ಕುರಿ ಇದೆ ಅಂತಾರೆ. ಇರೋರು ಹಾಗೇ ಅನ್ನಲ್ಲ. ನೀವು ಸಿರಿವಂತರು ಸರ್. ಇನ್ನು ಬಟ್ಟೆ ವಾಶ್ ಮಾಡದೇ, ಹಾಕದೇ ಕೆರಕ್ಕೊಂಡು ಪೋಟ್ರೇ ಮಾಡ್ತೀರಾ ಎಂದಿದ್ದಾರೆ.
ನಾಟಕೀಯ ಫೇಕ್ ಮುಖವಾಡ
ರಕ್ಷಿತಾ ವಿರುದ್ಧ ಧ್ರುವಂತ್ ಮಾತನಾಡಿ, ನಾನು ಕೂಡ ಮಂಗಳೂರಿನವನು. ಎಂತ ಗೊತ್ತುಂಟ ಗಾಯ್ಸ್ ಅನ್ನೋದೆಲ್ಲ ನಾಟಕ. ಶನಿವಾರ ಮಾತ್ರ ಅವರಿಗೆ ಕನ್ನಡ ಬರಲ್ಲ. ಅದೇನಾದ್ರೂ ಜಗಳಕ್ಕೆ ನಿಂತರೆ ಯಾವುದೇ ಭಾಷೆಯ ಸಮಸ್ಯೆ ಇರಲ್ಲ. ಇದೇ ರಕ್ಷಿತಾ ಅವರ ನಾಟಕೀಯ ಫೇಕ್ ಮುಖವಾಡ ಎಂದಿದ್ದಾರೆ. ಇನ್ನು ಧ್ರುವಂತ್ ಅವರ ಈ ನಡೆಗೆ ಧೃವಂತ್ ಗೆ ಬುದ್ದಿ ಬರಲ್ಲ. ಸುದೀಪ್ ಸರ್ ಹೇಳಿದ್ದು ಅರ್ಥ ಆಗಲ್ಲ ಎಂದು ಕಮೆಂಟ್ ಮಾಡಿದ್ದಾರೆ ನೆಟ್ಟಿಗರು.
ಈ ಹಿಂದೆ ಧ್ರುವಂತ್ ಹೇಳಿದ್ದೇನು?
ಮಂಗಳೂರು ಕಡೆ ರಕ್ಷಿತಾ ತರಹ ಯಾರೂ ಮಾತನಾಡೋಲ್ಲ. ನಾನು ಮೊದಲಿನಿಂದಲೂ ಅವಳ ವಿಡಿಯೋಗಳನ್ನು ನೋಡಿದ್ದೇನೆ. ಅವಳಿಗೆ ಕ್ಲೀನ್ ಆಗಿ ಮಾತಾಡೋಕೆ ಬರತ್ತೆ. ನಾವೆಲ್ಲರೂ ಯಾವ ರೀತಿ ಸಹಜವಾಗಿ ಇದ್ದೀವೋ, ಅದೇ ರೀತಿ ಅವಳಿಗೂ ಇರೋದಕ್ಕೆ ಬರುತ್ತದೆ. ನಮ್ಮ ಮಂಗಳೂರಿನಲ್ಲಿ ಈ ತರಹ ಯಾರೂ ಇರಲ್ಲ. ಚಿತ್ರವಿಚಿತ್ರವಾಗಿ ವರ್ತಿಸುತ್ತಾಳೆ. ಕ್ಯಾಮೆರಾ ಮುಂದೆ ಸುಮ್ ಸುಮ್ನೆ ಮಾತನಾಡ್ತಾಳೆ. ಕ್ಯಾಮೆರಾ ಮುಂದೆ ಸುಮ್ನೆ ಅಳ್ತಾಳೆ ಎಂದು ಅಶ್ವಿನಿ, ಸುಧಿ ಮುಂದೆ ಹೇಳಿಕೊಂಡಿದ್ದರು.
ಗಿಲ್ಲಿಗೆ ಕಳಪೆ ಕೊಟ್ಟಿದ್ದ ಧ್ರುವಂತ್
ಈ ಹಿಂದೆ ಧ್ರುವಂತ್ ಅವರು ಕಳಪೆ ಮ್ಯಾಚ್ ಆಗೋದು ಗಿಲ್ಲಿ ಎಂದಿದ್ದರು.
ಗಿಲ್ಲಿ ನಟ ಹಾಗೂ ಧ್ರುವಂತ್ ಮಧ್ಯೆ ಮಾತಿನ ಚಕಮಕಿ ಸಹ ನಡೆಯಿತು.
ಮನೆಗೆ ಬಂದಾಗಿನಿಂದ ಹಿಡಿದು ಇಲ್ಲಿಯವರೆಗೂ ಅವರ ಬಗ್ಗೆ, ಅವರ ಕಾವ್ಯ ಬಗ್ಗೆ ಬಿಟ್ಟರೆ, ಬೇರೆ ಎಲ್ಲರನ್ನೂ ತಮಾಷೆ ಮಾಡಿಕೊಂಡಿದ್ದಾರೆ. ಅವರಿಗೆ ನೋವಾಗುತ್ತಿದ್ಯಾ, ಇರಿಟೇಟ್ ಆಗ್ತಿದ್ಯಾ ಅಂತ ಯೋಚಿಸಲ್ಲ. ಎಲ್ಲರಿಗೂ ಸೆಲ್ಫ್ ರೆಸ್ಪೆಕ್ಟ್ ಇರುತ್ತೆ. ನಾವು ಕೂಲ್ ಆಗಿ ತೆಗೆದುಕೊಳ್ತೀವಿ ಅಂತ ಸತತವಾಗಿ ಡ್ಯಾಮೇಜ್ ಮಾಡಿಕೊಂಡು ಬಂದಿದ್ದಾರೆ ಎಂದು ಧ್ರುವಂತ್ ಕಾರಣ ಕೊಟ್ಟಿದ್ದರು.