ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ (kichcha sudeepa) ಅವರು ಮನೆಯ ಬಗ್ಗೆ ಮಾತ್ರವಲ್ಲ ಹೊರಗಡೆ ಆಗುತ್ತಿರುವ ಚರ್ಚೆಗಳ ಬಗ್ಗೆ, ಅನೇಕ ವಿಚಾರಗಳ ಬಗ್ಗೆ ಹೇಳುತ್ತಾರೆ. ಈ ಬಾರಿ ಕೂಡ ಅದೇ ಆಗಿದೆ. ಡಾಗ್ ಸತೀಶ್ (Dog Satish) ಅವರು ಬಿಗ್ ಬಾಸ್ ಮನೆಯಿಂದ ಔಟ್ ಆಗಿರೋದು ಗೊತ್ತೇ ಇದೆ. ಆದರೆ ಹೊರಗೆ ಹಲವು ಸಂದರ್ಶನಗಳಲ್ಲಿ ಬ್ಯುಸಿಯಾಗಿದ್ದಾರೆ. ಒಳಗಡೆ ಮಾತ್ರ ಅಲ್ಲ, ಹೊರಗಡೆನೂ ಫೇಮಸ್ ಆಗಿದ್ದಾರೆ ಡಾಗ್ ಸತೀಶ್. ಇತ್ತೀಚೆಗೆ ಮಾಧ್ಯಮ ಸಂದರ್ಶನಗಳಲ್ಲಿ ಒಂದು ಹೊಸ ಆರೋಪವನ್ನು ಮಾಡಿದ್ದರು.
ಡಾಗ್ ಸತೀಶ್ ಬಿಗ್ ಬಾಸ್ ಮನೆಯೊಳಗೆ ಇರುವಾಗ ಅವರು ಸ್ಪಂದನಾಗೆ ಒಂದು ದುಬಾರಿ ಶರ್ಟ್ (Costly Shirt) ಕೊಟ್ಟಿದ್ದರು. ಆ ಶರ್ಟ್ ಅನ್ನು ಸ್ಪಂದನಾ ಹಾಳು ಮಾಡಿ ಕೊಟ್ಟಿದ್ದಾರೆಂದು ಎಂದು ಆರೋಪಿಸಿದ್ದಾರೆ.ಈ ಬಗ್ಗೆ ಕಿಚ್ಚ ಸುದೀಪ್ ಅವರು yes/ No ಸಂದರ್ಭದಲ್ಲಿ ಸ್ಪರ್ಧಿಗಳಿಗೆ ಕೇಳಿದ್ದಾರೆ.
ಇದನ್ನೂ ಓದಿ: Bigg Boss Kannada 12: ನಾನು ವಿಲನ್ ಆಗೋಕೆ ಬಂದಿಲ್ಲ, ಈ ಆಟ ನನಗೆ ಅಲ್ಲ; ಕಣ್ಣೀರಿಟ್ಟ ಅಶ್ವಿನಿ ಗೌಡ
80 ಸಾವಿರ ರೂಪಾಯಿ ಬೆಲೆಯ ಶರ್ಟ್
ಬಿಗ್ ಬಾಸ್ ಮನೆಗೆ ಹೋದ ಮೇಲೆ ಡಾಗ್ ಸತೀಶ್ ಸಖತ್ ಹೆಸರು ಪಡೆದುಕೊಂಡರು. ಔಟ್ ಆದ ಬಳಿಕ ಸಂದರ್ಶನಗಳ ಮೂಲಕವೇ ಸುದ್ದಿಯಾಗುತ್ತಿದ್ದಾರೆ. ಈಗಾಗಲೇ ಬರ್ತ್‌ಡೇ ಸೆಲೆಬ್ರೇಟ್ ಕೂಡ ಮಾಡಿಕೊಂಡಿದ್ದಾರೆ
. ಹಲವು ಮಾಜಿ ಸ್ಪರ್ಧಿಗಳಿಗೆ ಕೂಡ ಆಹ್ವಾನಿಸಿ, ಪಾರ್ಟಿ ನೀಡಿದ್ದಾರೆ. ಬರ್ತ್‌ಡೇ ದಿನ ಅವರೇ ಹೇಳುವಂತೆ 80 ಸಾವಿರ ರೂಪಾಯಿ ಬೆಲೆಯ ಶರ್ಟ್ ಧರಿಸಿದ್ದಾರೆ. ಆದರೆ ಆ ಶರ್ಟ್‌ವನ್ನು ಸ್ಪಂದನಾ ಹಾಳು ಮಾಡಿದ್ದರು ಎಂದು ಆರೋಪಿಸಿದ್ದರು.
ವೈರಲ್ ವಿಡಿಯೋ
ಸುದೀಪ್ ಹೇಳಿದ್ದೇನು?
ಮಾಜಿ ಸ್ಪರ್ಧಿ ಡಾಗ್ ಸತೀಶ್ ಅವರ ದುಬಾರಿ ಶರ್ಟ್ ತೆಗೆದುಕೊಂಡು, ಸ್ಪಂದನಾ ಅವರು ಅದನ್ನು ಹಾಳು ಮಾಡಿ, ವಾಪಾಸ್ ಕೊಟ್ಟಿದ್ದಾರೆ. ಎಲ್ಲ ಚಾನೆಲ್‌ನಲ್ಲಿ ಕೂತ್ಕೊಂಡು ಇದನ್ನೇ ಹೇಳುತ್ತಿದ್ದಾರೆ ಎಂದು ಸುದೀಪ್ ಹೇಳಿದರು. ಅದಕ್ಕೆ ಕಿಚ್ಚ ಹೀಗೆ ಹೇಳುತ್ತಿದ್ದಂತೆ ಸ್ಪಂದನಾ 'ನೋ' ಬೋರ್ಡ್ ತೋರಿಸಿ, "ವೀಕೆಂಡ್ ಎಪಿಸೋಡ್‌ನಲ್ಲಿ ಅವರತ್ತು ಕೊಟ್ಟಿದ್ದರು. ಅದಾದ್ಮೇಲೆ ಆ ಶರ್ಟ್ ಅನ್ನು ಅವರು ವಾಪಸ್ ತೆಗೆದುಕೊಂಡು ಬಿಟ್ಟರು ಎಂದರು.
ಧನುಷ್ ಅವರನ್ನು ಕೇಳಿದಾಗ "ನಾನು ಅವರನ್ನು ಮಾತಾಡಿಸುತ್ತಲೇ ಇರಲಿಲ್ಲ" ಎಂದರು. ಒಟ್ಟಾರೆಯಾಗಿ ಕಿಚ್ಚ ಅವರು ಡಾಗ್ ಸತೀಶ್ ಅವರ ಶರ್ಟ್ ಬಗ್ಗೆ ಅಂತೂ ಕ್ಲಾರಿಟಿ ನೀಡಿದ್ದಾರೆ.
ಸತೀಶ್ ಅವರು ಶ್ವಾನಗಳನ್ನು ಕೋಟಿ ಕೋಟಿ ಕೊಟ್ಟು ಖರೀದಿ ಮಾಡೋದಾಗಿ ಹೇಳಿಕೊಳ್ಳುತ್ತಾರೆ. ಅವರಿಗೆ ಬೇರೆ ರಾಜ್ಯಗಳಲ್ಲಿ ಸಾಕಷ್ಟು ಬೇಡಿಕೆ ಇದೆಯಂತೆ.