Bigg Boss Kannada 12: ನಾನು ವಿಲನ್ ಆಗೋಕೆ ಬಂದಿಲ್ಲ, ಈ ಆಟ ನನಗೆ ಅಲ್ಲ; ಕಣ್ಣೀರಿಟ್ಟ ಅಶ್ವಿನಿ ಗೌಡ
Ashwini Gowda: ಶನಿವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಕಿಚ್ಚನ ಪಂಚಾಯಿತಿಯಲ್ಲಿ ಅಶ್ವಿನಿ ಗೌಡ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಅಶ್ವಿನಿ ಗೌಡ ಜೊತೆ ಜಾಹ್ನವಿಗೂ ಕ್ಲಾಸ್ ತೆಗೆದುಕೊಂಡಿದ್ದಾರೆ. ಮನೆಯ ರೂಲ್ಸ್‌ನ ಪದೇಪದೇ ಬ್ರೇಕ್ ಮಾಡಿದ್ದರಿಂದ ಈಗಾಗಲೇ ಬಿಗ್ ಬಾಸ್ ಶಿಕ್ಷೆಯನ್ನು ಕೂಡ ನೀಡಿದ್ದರು. ಅಷ್ಟೇ ಅಲ್ಲ ಅಶ್ವಿನಿ ಮಾತನಾಡಿರುವ ಆಡಿಯೋ ಕೂಡ ಪ್ಲೇ ಮಾಡಿಸಿದ್ರು. ಇದರಿಂದ ಬಹಳಷ್ಟು ಕುಗ್ಗಿ ಹೋಗಿರುವಂತಿದೆ ಅಶ್ವಿನಿ. ಅಶ್ವಿನಿ ಗೌಡ ಬಿಗ್ ಬಾಸ್ ಮನೆಯಲ್ಲಿ ಭಾವುಕವಾಗಿ ಈ ಆಟ ನನಗೆ ಅಲ್ಲ ಎಂದು ಕಣ್ಣೀರಿಟ್ಟಿದ್ದಾರೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಸೀಸನ್ 12ರಲ್ಲಿ (Bigg Boss Kannada 12) ಅಶ್ವಿನಿ ಗೌಡ (Ashwini Gowda) ಹಾಗೂ ಜಾಹ್ನವಿ ಒಂದಲ್ಲ ಒಂದು ಕಿತಾಪತಿ ಮಾಡ್ತಾರೆ ಎನ್ನೋದು ಗೊತ್ತೇ ಇರುವ ವಿಚಾರ. ಆದರೀಗ ಕಿಚ್ಚನ ಕ್ಲಾಸ್‌ಗೆ (Sudeep Class) ಕಣ್ಣೀರಿಟ್ಟಿದ್ದಾರೆ. ಶನಿವಾರದ ಸಂಚಿಕೆಯಲ್ಲಿ ಅಶ್ವಿನಿ ಅವರಿಗೆ ಕಿಚ್ಚ ಖಡಕ್ ಆಗಿ ಕ್ಲಾಸ್ ತೆಗೆದುಕೊಂಡಿದ್ದರು. ಅಷ್ಟೇ ಅಲ್ಲ ಅಶ್ವಿನಿ ಮಾತನಾಡಿರುವ ಆಡಿಯೋ (Audio Play) ಕೂಡ ಪ್ಲೇ ಮಾಡಿಸಿದ್ರು. ಇದರಿಂದ ಬಹಳಷ್ಟು ಕುಗ್ಗಿ ಹೋಗಿರುವಂತಿದೆ ಅಶ್ವಿನಿ. ಅಶ್ವಿನಿ ಗೌಡ ಬಿಗ್ ಬಾಸ್ ಮನೆಯಲ್ಲಿ ಭಾವುಕವಾಗಿ ಈ ಆಟ ನನಗೆ ಅಲ್ಲ ಎಂದು ಕಣ್ಣೀರಿಟ್ಟಿದ್ದಾರೆ.
ಎಮೋಷನ್ ಬ್ಲ್ಯಾಕ್ಮೇಲ್ ರೀತಿ ಅನಿಸಿದೆ
ಜಾಹ್ನವಿ ಬಳಿ ಅಶ್ವಿನಿ ಅವರು ತುಂಬಾ ಭಾವುಕರಾಗಿದ್ದಾರೆ. `ಇಲ್ಲಿ ಏನು ಮಾಡ್ತಾ ಇದ್ದೇವೆ ನನಗೇ ಗೊತ್ತಿಲ್ಲ. ಊಟ ಬಿಟ್ಟಿದ್ದು ಎಮೋಷನ್ ಬ್ಲ್ಯಾಕ್ಮೇಲ್ ರೀತಿ ಅನಿಸಿದೆ. ನಾನು ಆ ಕ್ಷಣಕ್ಕೆ ಏನು ಅನ್ನಿಸತ್ತೋ ಹಾಗೇ ಮಾಡುವೆ. ಉದ್ದೇಶಕಪೂರ್ವಕವಾಗಿ ನಾನು ಹಾಗಿ ಮಾಡುತ್ತಿಲ್ಲ. ಬರ್ತಾ ಬರ್ತಾ ಆಟ ಹಿಂಸೆ ಆಗುತ್ತಿದೆ. ಪ್ರತಿ ವಾರ ಸುದೀಪ್ ಅವರಿಂದ ಕ್ಲಾಸ್ ಬೇರೆ ಇರುತ್ತೆ, ಈ ಆಟ ನನಗೆ ಅಲ್ಲ ಅನಿಸುತ್ತದೆ' ಎಂದು ಭಾವುಕಾರದರು.
ಇದನ್ನೂ ಓದಿ: Bigg Boss Kannada 12: ಅಶ್ವಿನಿ ಬಳಸಿದ ಕೆಟ್ಟ ಪದಗಳ ಆಡಿಯೋ ಪ್ಲೇ ಮಾಡಿಸಿದ ಕಿಚ್ಚ!
ವಿಲನ್ ಅಂತೂ ಆಗೋಕೆ ಇಷ್ಟ ಇಲ್ಲ
ಊಟ ಮಾಡುವ ಸಂದರ್ಭದಲ್ಲಿಯೂ ಮಾತನಾಡಿ, `ನನಗೆ ಹೀರೋ ಪಟ್ಟ ಬೇಕಿಲ್ಲ. ಆದರೆ ವಿಲನ್ ಅಂತೂ ಆಗೋಕೆ ಇಷ್ಟ ಇಲ್ಲ. ಆಟ ಆಡುವ ಭರದಲ್ಲಿ, ಗೆಲ್ಲುವ ಭರದಲ್ಲಿ ತಪ್ಪಾಗಿದೆ ಅನಿಸುತ್ತದೆ. ನಮ್ಮ ನಡುವಳಿಕೆ ಈ ರೀತಿ ಪ್ರೊಜೆಕ್ಟ್ ಆಗ್ತಿದೆ' ಎಂದು ಕಣ್ಣೀರಿಟ್ಟರು.
ಜಾಹ್ನವಿ ಕೂಡ ಈ ಬಗ್ಗೆ ಮಾತನಾಡಿ, `ಕೋಪವನ್ನ ಕಂಟ್ರೋಲ್ ಮಾಡಿಕೊಳ್ಳಲು ಪ್ರಯತ್ನಿಸಿ. ಎಮೋಷನಲ್ ಆಗಿ ಆಡಬಾರದು. ಪ್ರ್ಯಾಕ್ಟಿಕಲ್ ಆಗಿ ಯೋಚನೆ ಮಾಡಬೇಕು' ಎಂದು ಅಶ್ವಿನಿ ಅವರಿಗೆ ಸಮಾಧಾನ ಮಾಡಿದ್ದಾರೆ.
ಕಿಚ್ಚನ ಕ್ಲಾಸ್
ಶನಿವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಕಿಚ್ಚನ ಪಂಚಾಯಿತಿಯಲ್ಲಿ ಅಶ್ವಿನಿ ಗೌಡ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಅಶ್ವಿನಿ ಗೌಡ ಜೊತೆ ಜಾಹ್ನವಿಗೂ ಕ್ಲಾಸ್ ತೆಗೆದುಕೊಂಡಿದ್ದಾರೆ. ಮನೆಯ ರೂಲ್ಸ್‌ನ ಪದೇಪದೇ ಬ್ರೇಕ್ ಮಾಡಿದ್ದರಿಂದ ಈಗಾಗಲೇ ಬಿಗ್ ಬಾಸ್ ಶಿಕ್ಷೆಯನ್ನು ಕೂಡ ನೀಡಿದ್ದರು. "ಬಿಗ್ ಬಾಸ್ ಮನೆಯ ರೂಲ್ಸ್ ಬ್ರೇಕ್ ಮಾಡೋದು ನಿಮಗೆ ಅಷ್ಟೊಂದು ಸರಳ ಆಗೋಯ್ತಾ" ಎಂದು ಚಾಟಿ ಬೀಸಿದ್ದರು.
ಪಿಸುದನಿಯಲ್ಲಿ ಮಾತನಾಡುವಂತಿಲ್ಲ ಎಂಬುದು ಗೊತ್ತಿಲ್ವಾ ಜಾಹ್ನವಿ? ರೂಲ್ಸ್ ಬ್ರೇಕ್ ಮಾಡಿದ್ದನ್ನ ಪ್ರಶ್ನೆ ಮಾಡಿದ್ರೆ ಕ್ಯಾಮೆರಾ ಮುಂದೆ ಬಂದು ಏನಾದರೂ ಸಬೂಬು ಕೊಡ್ತೀರಿ. ಆದರೆ ಅದು ನಿಜವಲ್ಲ. ನಾವು ಜಾಸ್ತಿ ಡಿಟೇಲ್‌ಗೆ ಹೋಗಲ್ಲ. ಪಿಸುದನಿಯಲ್ಲಿ ಮಾತನಾಡಬಾರದು ಎಂದು ಬಿಗ್ ಬಾಸ ವಾರ್ನಿಂಗ್ ಮಾಡಿರಲಿಲ್ಲವ? ಜೊತೆಗೆ ಜಗಳವಾದರೆ ಅದನ್ನು ಸಮಾಧಾನ ಮಾಡೋಕೆ ಟ್ರೈ ಮಾಡಿ. ಆದರೆ ನೀವು ಅಶ್ವಿನಿ ಬಳಿ ಅದನ್ನು ಮಾಡಲಿಲ್ಲ" ಎಂದು ಕಿಚ್ಚ ಗರಂ ಆಗಿದ್ದರು.