ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಬರ್ತ್‌ಡೇ ಪಾರ್ಟಿಗೆ ಗಿಲ್ಲಿನ ಮಾತ್ರ ಸೇರಿಸಲ್ಲ! ಹೀಗ್ಯಾಕೆ ಅಂದ್ರು ಡಾಗ್‌ ಸತೀಶ್‌?

BBK 12: ಬಿಗ್ ಬಾಸ್‌ನಿಂದ ಆಚೆ ಬಂದಮೇಲೆ ಪ್ರಪೋಸಲ್‌ಗಳು ಜಾಸ್ತಿ ಬರುತ್ತಿವೆ ಎಂದು ಸತೀಶ್‌ ಹೇಳಿಕೊಂಡಿದ್ದಾರೆ. ಜೊತೆಗೆ ತಮ್ಮ ಬರ್ತ್‌ಡೇ ಪಾರ್ಟಿ ಕುರಿತು ಹೇಳಿದ್ದಾರೆ. ಈ ವೇಳೆ ಬರ್ತ್ ಡೇ ಪಾರ್ಟಿಗೆ ಗಿಲ್ಲಿ (Gilli) ಅವರನ್ನ ಮಾತ್ರ ಸೇರಿಸಲ್ಲ ಎಂದು ಹೇಳಿದ್ದಾರೆ.ಒಂದು ವೇಳೆ ಹೊರಗೆ ಬಂದರೆ ಕಾಕ್ರೋಚ್‌, ಸ್ಪಂದನಾ ಅವರನ್ನ ಪಾರ್ಟಿಗೆ ಕರೆಯಬೇಕು ಅಂತಿದೆ. ಗಿಲ್ಲಿ ಅವರಂತೂ ನಾನು ಸೇರಿಸೋದೆ ಇಲ್ಲ. ನನ್ನ ಒಂದೇ ಏಟಿಗೆ ಗಿಲ್ಲಿ ಬಿದ್ದು ಹೋಗ್ತಾನೆ ಎಂದರು.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ ಮನೆಯಿಂದ ಎಲಿಮಿನೇಟ್‌ (Eliminate) ಆಗಿರುವ ಡಾಗ್‌ ಸತೀಶ್‌ (Dog Satish) ಅವರು ವಿಶ್ವವಾಣಿ ಟಿವಿ ಜೊತೆಗೆ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಬಿಗ್ ಬಾಸ್‌ನಿಂದ ಆಚೆ ಬಂದಮೇಲೆ ಪ್ರಪೋಸಲ್‌ಗಳು ಜಾಸ್ತಿ ಬರುತ್ತಿವೆ ಎಂದೂ ಹೇಳಿಕೊಂಡಿದ್ದಾರೆ. ಜೊತೆಗೆ ತಮ್ಮ ಬರ್ತ್‌ಡೇ ಪಾರ್ಟಿ (Birthday Party) ಕುರಿತು ಹೇಳಿದ್ದಾರೆ. ಈ ವೇಳೆ ಬರ್ತ್ ಡೇ ಪಾರ್ಟಿಗೆ ಗಿಲ್ಲಿ (Gilli) ಅವರನ್ನ ಮಾತ್ರ ಸೇರಿಸಲ್ಲ ಎಂದು ಹೇಳಿದ್ದಾರೆ.

ಚೀಪ್‌ ಆಗಿ ನೋಡ್ತಾ ಇದ್ದರು

`ಆರ್‌ಜಿ ಅಮಿತ್‌ ಹಾಗೂ ಕರಿ ಬಸಪ್ಪ ಅವರು ಕಾಲ್‌ ಮಾಡಿದ್ದರು. ಮನೆಯೊಳಗೆ ನಿಮ್ಮನ್ನು ತುಂಬಾ ಚೀಪ್‌ ಆಗಿ ನೋಡ್ತಾ ಇದ್ದರು. ಆದರೆ ನೀವು ಮನೆಯಲ್ಲಿ ಒಂದೂ ಸುಳ್ಳನ್ನ ಹೇಳಿಲ್ಲ. ನಾನು ಕೂಡ ನಿಮ್ಮ ಬಗ್ಗೆ ಹೊರಗಡೆ ಬಂದು ತಿಳಿದುಕೊಂಡೆ ಎಂದರು. ಇವತ್ತು ನಾನು ಕರಿ ಬಸಪ್ಪ ಅವರನ್ನು ಪಾರ್ಟಿಗೂ ಕರೆದೆ. ಆದರೆ ನನ್ನ ಚೀಪ್‌ ಆಗಿ ನೋಡಿದವರನ್ನ ನಾನು ನೋಡೋದು ಇಲ್ಲ. ಆದರೆ ಅವರ ಪಾರ್ಟನರ್‌ ಮಾತ್ರ ಕರೆದುಕೊಂಡು ಬರಬೇಡಿ ಎಂದೆʼ ಎಂದು ಹೇಳಿದ್ದಾರೆ.

ಇದನ್ನೂ ಓದಿ: Bigg Boss Kannada 12: ಕಾವ್ಯ ಆದ ಗಿಲ್ಲಿ, ಗಿಲ್ಲಿ ಆದ ಕಾವ್ಯ ! ಬಿಗ್​​ಬಾಸ್ ಮನೆಯಲ್ಲಿ ನಗುವಿನ ಹಬ್ಬ

ಚಂದ್ರಪ್ರಭ ಹಾಗೂ ಗಿಲ್ಲಿನೂ ಚೀಪ್‌

ʻನನ್ನ ಬಗ್ಗೆ RJ ಅಮಿತ್‌ ಅವರು ತುಂಬಾ ಕೆಟ್ಟದ್ದಾಗಿ ಮಾತನಾಡಿದ್ದಾರೆ. ಆಮೇಲೆ RJ ಅಮಿತ್‌ ಅವರು ತಪ್ಪಾಯ್ತು ಅಂತ ನನ್ನ ಬಗ್ಗೆ ತಿಳಿದುಕೊಂಡ ಮೇಲೆ ಮೆಸೆಜ್‌ ಹಾಕಿದ್ದರು. ಬಳಿಕ ನಾನು ಮಲ್ಲಮ್ಮ ಅವರಿಗೂ ಪಾರ್ಟಿಗೆ ಕರೆದಿದ್ದೀನಿ. ಕೇಕ್‌ 6 ವರೆ ಲಕ್ಷ ರೂ. ತಂದು ಕಟ್‌ ಮಾಡ್ತಾ ಇದ್ದೀನಿ. 350 ಜನಕ್ಕೆ ಪಾರ್ಟಿ ಕರೆದಿದ್ದೇನೆ. ಚಂದ್ರಪ್ರಭ ಹಾಗೂ ಗಿಲ್ಲಿನೂ ನನ್ನ ಬಗ್ಗೆ ಚೀಪ್‌ ಆಗಿಯೇ ಮಾತನಾಡಿದ್ದಾರೆʼ ಎಂದರು.

ಒಂದು ವೇಳೆ ಹೊರಗೆ ಬಂದರೆ ಕಾಕ್ರೋಚ್‌, ಸ್ಪಂದನಾ ಅವರನ್ನ ಪಾರ್ಟಿಗೆ ಕರೆಯಬೇಕು ಅಂತಿದೆ. ಗಿಲ್ಲಿ ಅವರಂತೂ ನಾನು ಸೇರಿಸೋದೆ ಇಲ್ಲ. ನನ್ನ ಒಂದೇ ಏಟಿಗೆ ಗಿಲ್ಲಿ ಬಿದ್ದು ಹೋಗ್ತಾನೆ. ಬರ್ತ್ ಡೇ ಪಾರ್ಟಿಗೆ ಅವನನ್ನ ಸೇರಿಸಲ್ಲ. ಗಿಲ್ಲಿ ಅಂತವರ ಫ್ರೆಂಡ್‌ಶಿಪ್‌ ನಂಗೆ ಬೇಡ. ಚಂದ್ರಪ್ರಭ ಅವರಿಗೆ ನಾನು ಬಟ್ಟೆ ಎಲ್ಲವನ್ನೂ ಕೊಟ್ಟಿದೆ. ನನಗೆ ತುಂಬಾ ನಂಬವರು ಬೇಕು. ಹಿಂದೊಂದು ಮುಂದೊಂದು ಮಾತನಾಡುವರು ನನಗೆ ಇಷ್ಟ ಆಗಲ್ಲʼ ಎಂದರು.



ಈ ವೇಳೆ ತಮಗೆ ಬಿಗ್ ಬಾಸ್‌ನಿಂದ ಆಚೆ ಬಂದಮೇಲೆ ಪ್ರಪೋಸಲ್‌ಗಳು ಜಾಸ್ತಿ ಬರುತ್ತಿವೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Bigg Boss Kannada 12: ಬಿಗ್ ಬಾಸ್ ಗಿಲ್ಲಿ ನಟನ ವಿರುದ್ಧ ದೂರು ದಾಖಲು; ಕಾರಣವೇನು?

ಪ್ರಪೋಸ್‌ ಮಾಡಿದವರ ಹೆಸರು ಹೇಳುವುದಿಲ್ಲ

"ನನಗೆ ಪರೋಕ್ಷವಾಗಿ ಪ್ರಪೋಸ್‌ ಮಾಡಿದ್ದಾರೆ. ನೀವು ಆಫೀಸರ್‌ ಥರ ಕಾಣಿಸ್ತೀರಿ, ತುಂಬಾ ಪ್ರಾಮಾಣಿಕರಿದ್ದೀರಿ, ಎಲ್ಲರೂ ರೆಡಿಯಾಗಿ ಬಂದ್ರೆ ಒಂಥರಾ ಕಾಣಿಸ್ತಾರೆ. ನೀವು ಬಂದರೆ ಬೇರೆ ಥರನೇ ಕಾಣಿಸ್ತೀರಿ. ನೀವಂದ್ರೆ ನನಗೆ ಇಷ್ಟ ಎಂದು ಇಬ್ಬಿದ್ರು ಹೇಳಿದ್ದಾರೆ. ಆದರೆ. ನನಗೆ ಆ ರೀತಿ ಹೇಳಿದವರ ಹೆಸರನ್ನು ನಾನು ಹೇಳುವುದಕ್ಕೆ ಆಗೋದಿಲ್ಲ" ಎಂದು ಡಾಗ್‌ ಸತೀಶ್‌ ಹೇಳಿದ್ದಾರೆ.

Yashaswi Devadiga

View all posts by this author