ಬಿಗ್ ಬಾಸ್ Pre ಫಿನಾಲೆ (Bigg Boss Pre Finale) ಇಂದು ಅದ್ಧೂರಿಯಾಗಿ ನಡೆದಿದೆ. ಸುದೀಪ್ ಅವರು ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ಮಾಡಿದರು. ಸ್ಪರ್ಧಿಗಳಿಗೆ ಕೆಲವು ಚಟುವಟಿಕೆ ಮಾಡಿಸಿದರು. ಆದರೆ ಇದೇ ವೇಳೆ ಚಪ್ಪಾಳೆ (kicchana chappale) ಬಗ್ಗೆಯೂ ಮಾತನಾಡಿದರು. ಧ್ರುವಂತ್ ಹಾಗು ಅಶ್ವಿನಿ ಅವರಿಗೆ ನೀಡಿದ ಚಪ್ಪಾಳೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗಳು ಆಗಿತ್ತು. ಸುದೀಪ್ ಅವರನ್ನೇ ಕೆಲವರು ಟೀಕಿಸಿದ್ದರು. ಜನವರಿ 17ರ ಪ್ರೀ-ಫಿನಾಲೆಯಲ್ಲಿ ಈ ಬಗ್ಗೆ ಅವರು ಮಾತನಾಡಿದರು.
ಯಾರು ಅರ್ಹರೋ ಅವರನ್ನು ಹುರಿದುಂಬಿಸಬೇಕು
ಕಿಚ್ಚನ ಚಪ್ಪಾಳೆ ನನ್ನ ಅನಿಸಿಕೆ. ಬಿಗ್ ಬಾಸ್ ಒಬ್ಬ ವ್ಯಕ್ತಿ ಇಂದ ಅಲ್ಲ, ಒಬ್ಬ ಸುದೀಪ್ ಇಂದ ಅಲ್ಲ. ಬಿಗ್ ಬಾಸ್ ಎಲ್ಲರ ಕೊಡುಗೆ. ನಮಗೆಲ್ಲ ಯಾರು ಅರ್ಹರೋ ಅವರನ್ನು ಹುರಿದುಂಬಿಸಬೇಕು ಅಂತ ಶಿಕ್ಷಕರು ಹೇಳಿ ಕೊಟ್ಟಿದ್ದರು. ಗೆಲ್ಲುವವರು ಯಾರೇ ಇರಬಹುದು. ಎಲ್ಲರ ಕಾಂಟ್ರಿಬ್ಯೂಷನ್ ಇದೆ ಎಂದಾಗ ನ್ಯಾಯವಾಗಿ ಚಪ್ಪಾಳೆ ಕೊಟ್ಟಿದ್ದೇನೆ.
ಇದನ್ನೂ ಓದಿ: Bigg Boss Kannada 12: ನಾನು ಶಿವಣ್ಣ ಅವರ ಕಾಲು ಧೂಳಿಗೂ ಸಮ ಇಲ್ಲ ಎಂದ ಗಿಲ್ಲಿ ನಟ!
ನಿಮ್ಮ ಜೀವನ ಮೇಲೆ ಗಮನ ಹರಿಸಿ
ಕಿಚ್ಚನ ಚಪ್ಪಾಳೆಯಲ್ಲಿ ತಲೆಕೆಡಿಸಿಕೊಳ್ಳೋಬೇಡಿ. ನಿಮ್ಮ ಜೀವನ ಮೇಲೆ ಗಮನ ಹರಿಸಿ. ಕಿಚ್ಚ ಚಪ್ಪಾಳೆ ಮೇಲೆ ಅಲ್ಲ’ ಎಂದರು ಸುದೀಪ್. ಕೊನೆಯಲ್ಲಿ ನಮ್ಮದು ಉದ್ಧಾರ ಮಾಡೋ ಚಪ್ಪಾಳೆ, ಹೊರಗೆ ತಟ್ಟುತ್ತಾ ಇರೋದು ಹಾಳು ಮಾಡೋ ಚಪ್ಪಾಳೆ ಎಂದರು.
ವೋಟಿಂಗ್ ಲೈನ್ ಕ್ಲೋಸ್
ಈ ಬಾರಿ ಬಿಗ್ಬಾಸ್ ಕನ್ನಡ 12 ಈ ವಿಷಯದಲ್ಲಿ ದಾಖಲೆಯನ್ನೇ ಬರೆದಿದೆ. ವೋಟಿಂಗ್ ಲೈನ್ ಕ್ಲೋಸ್ ಆಗಲು ಇನ್ನೂ 12 ಗಂಟೆ ಇರುವಾಗಲೇ ಕೇವಲ ಒಬ್ಬ ಸ್ಪರ್ಧಿಗೆ 37 ಕೋಟಿಗೂ ಹೆಚ್ಚು ಮತಗಳು ಬಂದಿವೆ.
ಕಳೆದ ಸೀಸನ್ ಅಂದರೆ 11ನೇ ಸೀಸನ್ನಲ್ಲಿ ವಿನ್ನರ್ ಆದವರರಿಗೆ 5 ಕೋಟಿ ಮತಗಳು ಬಂದಿದ್ದವು, ಆದರೆ ಈ ಬಾರಿ ಗೆಲ್ಲಲಿರುವ ಸ್ಪರ್ಧಿಗೆ ಅದರ ಆರು ಪಟ್ಟು ಹೆಚ್ಚು ಮತಗಳು ಈಗಾಗಲೇ ಬಂದು ಬಿಟ್ಟಿದೆ. 11ನೇ ಸೀಸನ್ನ 6ನೇ ಸ್ಪರ್ಧಿಗೆ 64 ಲಕ್ಷ ಮತಗಳು ಬಂದಿದ್ದವು. ಆದರೆ ಈ ಸೀಸನ್ನಲ್ಲಿ ವೋಟಿಂಗ್ ಲೈನ್ ಕ್ಲೋಸ್ ಆಗಲು ಇನ್ನೂ ಹಲವು ಗಂಟೆಗಳು ಬಾಕಿ ಇರುವಾಗಲೇ 94 ಲಕ್ಷ ಮತಗಳು ಬಂದಿವೆ.
ಮೊದಲ ಸ್ಪರ್ಧಿಗೂ ಎರಡನೇ ಸ್ಪರ್ಧಿಗೂ ಮತಗಳ ಅಂತರ ಬಹಳ ಕಡಿಮೆ ಇದೆ ಎಂದಿದ್ದಾರೆ. ಆ ಮೂಲಕ ಸ್ಪರ್ಧೆ ಇನ್ನೂ ಕಠಿಣವಾಗಿದೆ ಎಂದಿದ್ದಾರೆ.