ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bigg Boss Kannada 12: ಅಶ್ವಿನಿ ತಮ್ಮ ಶ್ರಮದಿಂದ ಮುಂದೆ ಬಂದ್ರು ಎಂದ ನಾರಾಯಣ ಗೌಡ; ಗಿಲ್ಲಿ ಪರ ಪ್ರವೀಣ್‌ ಶೆಟ್ಟಿ ಹೇಳಿದ್ದೇನು ಗೊತ್ತಾ?

Ashwini Gowda: ಬಿಗ್‌ ಬಾಸ್‌ ಗ್ರ್ಯಾಂಡ್‌ ಫಿನಾಲೆ ನಾಳೆ ಅದ್ಧೂರಿಯಾಗಿ ನಡೆಯಲಿದೆ. ವಿನ್ನರ್‌ ಯಾರು ಅಂತ ನಾಳೆ ಅನೌನ್ಸ್‌ ಆಗುತ್ತೆ. ಆದರೀಗ ವಿವಿಧ ಸಂಘಟನೆಯ ಪ್ರಮುಖರು ತಮ್ಮ ಇಷ್ಟದ ಸ್ಪರ್ಧಿಗಳಿಗೆ ಸಪೋರ್ಟ್‌ ಮಾಡ್ತಾ ಇದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರು ಅಶ್ವಿನಿ ಗೌಡ ಪರ ಬ್ಯಾಟ್‌ ಬೀಸಿದ್ರೆ, ಪ್ರವೀಣ್‌ ಶೆಟ್ಟಿ ಅವರು ಗಿಲ್ಲಿ ನಟನ ಪರ ಮಾತಾಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನ ಇದೀಗ ವೈರಲ್‌ ಆಗ್ತಿದೆ.

ಅಶ್ವಿನಿ ಪರ ನಾರಾಯಣ ಗೌಡ! ಗಿಲ್ಲಿ ಬಗ್ಗೆ ಪ್ರವೀಣ್‌ ಶೆಟ್ಟಿ ಹೇಳಿದ್ದೇನು?

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Jan 17, 2026 8:33 PM

ಬಿಗ್‌ ಬಾಸ್‌ ಗ್ರ್ಯಾಂಡ್‌ ಫಿನಾಲೆ (Bigg Boss Kannada Grand Finale) ನಾಳೆ ಅದ್ಧೂರಿಯಾಗಿ ನಡೆಯಲಿದೆ. ವಿನ್ನರ್‌ (Winner) ಯಾರು ಅಂತ ನಾಳೆ ಅನೌನ್ಸ್‌ ಆಗುತ್ತೆ. ಆದರೀಗ ವಿವಿಧ ಸಂಘಟನೆಯ ಪ್ರಮುಖರು ತಮ್ಮ ಇಷ್ಟದ ಸ್ಪರ್ಧಿಗಳಿಗೆ ಸಪೋರ್ಟ್‌ ಮಾಡ್ತಾ ಇದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ (T A Narayan Gowda) ಅವರು ಅಶ್ವಿನಿ ಗೌಡ (Aswini Gowda) ಪರ ಬ್ಯಾಟ್‌ ಬೀಸಿದ್ರೆ, ಪ್ರವೀಣ್‌ ಶೆಟ್ಟಿ (Praveen Shetty) ಅವರು ಗಿಲ್ಲಿ ನಟನ ಪರ ಮಾತಾಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನ ಇದೀಗ ವೈರಲ್‌ ಆಗ್ತಿದೆ.

ಗಟ್ಟಿಯಾಗಿ ನಿಂತಿದ್ದಾಳೆ

ನಾರಾಯಣ ಗೌಡ ಅವರು ಮಾತನಾಡಿ, ಅಶ್ವಿನಿ ಅವರು ಶ್ರಮದಿಂದ ,ಕೊಟ್ಟಂತಹ ಟಾಸ್ಕ್‌ನಿಂದ ಬಿಗ್‌ ಬಾಸ್‌ನಲ್ಲಿ ಅನುಭವಿಸಿದ ಅನೇಕ ವಿಚಾರಗಳಿಂದ ಸಹಿಸಿಕೊಂಡು, ಒಳ್ಳೆ ಆಟ ಆಡಿ, ಮಾತನಾಡಿ, ಕೆಲವರ ಹತ್ರ ಏನೆಲ್ಲ ಅನ್ನಿಸಿಕೊಳ್ಳಬೇಕು ಅನ್ನಿಸಿಕೊಂಡು ಗಟ್ಟಿಯಾಗಿ ನಿಂತಿದ್ದಾಳೆ.

ಇದನ್ನೂ ಓದಿ: Bigg Boss Kannada 12: ನಾನು ಶಿವಣ್ಣ ಅವರ ಕಾಲು ಧೂಳಿಗೂ ಸಮ ಇಲ್ಲ ಎಂದ ಗಿಲ್ಲಿ ನಟ!

ಕೋರ್ಟ್‌ ಮೆಟ್ಟಿಲೇರಿದ್ದಾರೆ

ಬಿಗ್‌ ಬಾಸ್‌ ಫೈನಲ್‌ಗೆ ಬರೋದು ಅಷ್ಟು ಸುಲಭವಲ್ಲ. ಕಳೆದ 20 ವರ್ಷಗಳಿಂದ ಕನ್ನಡ ನಾಡು, ನುಡಿ, ನೆಲ, ಜಲ, ಸಂಸ್ಕೃತಿ ಬಡವರ ನೋವು, ದುಃಖ ದುಮ್ಮಾನಗಳಿಗೆ ಗಟ್ಟಿಯಾಗಿ ನಿಂತಿದ್ದಾರೆ. ಅನೇಕ ಸಂದರ್ಭದಲ್ಲಿ ಕೇಸ್‌ ಹಾಕಿಸಿಕೊಂಡು, ಕೋರ್ಟ್‌ ಮೆಟ್ಟಿಲೇರಿದ್ದಾರೆ ನಾರಾಯಣಗೌಡ ಎಂದಿದ್ದಾರೆ.

ನಗಿಸುವ ಚಕ್ರವರ್ತಿ

ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಮಾತನಾಡಿ, ಬಿಗ್‌ ಬಾಸ್‌ನಲ್ಲಿ ಗಿಲ್ಲಿ ಎಲ್ಲರನ್ನೂ ನಗಿಸುವಂತಹ ಹುಡುಗ. ಊಟ ಇಲ್ಲದೇ ಬಂದಿದ್ದಾನೆ. ಯಾರನ್ನ ಬೇಕಾದ್ರೂ ನಗಿಸ್ತಾನೆ. ದ್ವೇಷ ಮಾಡುವಂತದ್ದು, ವಿರೋಧ ಮಾಡುವಂತದ್ದು ಗಿಲ್ಲಿಗೆ ಗೊತ್ತಿಲ್ಲ ಅನಿಸುತ್ತೆ. ಬಡವರ ಮನೆ ಹುಡುಗ, ಗಿಲ್ಲಿ ಗೆಲ್ಲಬೇಕು. ನಗುವಿನ ಚಕ್ರವರ್ತಿ, ನಗಿಸುವ ಚಕ್ರವರ್ತಿ ಗಿಲ್ಲಿ ಗೆಲ್ಲಬೇಕು ಅನ್ನೋದು ಕನ್ನಡಿಗರ ಆಶಯ. ಅದ್ರಲ್ಲಿ ನನ್ನ ಆಶಯ ಸಹ ಇದಾಗಿದೆ. ಶಿವಣ್ಣ ಸಹ ಗಿಲ್ಲಿ ಗೆಲ್ಲಬೇಕು ಅಂದಿದ್ದಾರೆ.

ಬಿಗ್‌ಬಾಸ್‌ ಫೈನಲ್‌ ಹಂತಕ್ಕೆ ಬಂದಿದೆ. ಇದರ ನಡುವೆ ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಗಳಿಗೆ ಅವರ ಮೂರು ವಿಶ್‌ಗಳನ್ನು ಬಿಗ್‌ಬಾಸ್‌ ಕೇಳಿದ್ದರು. ಈ ವೇಳೆ ಕನ್ನಡ ಪರ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿರುವ ಅಶ್ವಿನಿ ಗೌಡ, ಕರವೇ ಅಧ್ಯಕ್ಷ ನಾರಾಯಣ ಗೌಡ ಅವರು ಬಿಗ್‌ಬಾಸ್‌ ಮನೆಗೆ ಬರಬೇಕು. ಅವರ ಕಾಲಿಗೆ ಬಿದ್ದು ಅಶೀರ್ವಾದ ಪಡೆಯಬೇಕು ಎಂದಿದ್ದರು. ಅಶ್ವಿನಿ ಗೌಡ ಹೀಗೆ ಹೇಳಿದ ಮರುದಿನವೇ ನಾರಾಯಣ ಗೌಡ ಅವರು ಕಿಚ್ಚ ಸುದೀಪ್‌ ಅವರನ್ನು ಭೇಟಿಯಾಗಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು.

37+ ಕೋಟಿ ವೋಟುಗಳು ಯಾರಿಗೆ?

ಈಗಾಗಲೇ ಕಲರ್ಸ್‌ ವಾಹಿನಿ ಪ್ರೋಮೋ ಶೇರ್‌ ಮಾಡಿಕೊಂಡಿದೆ. ಪ್ರೋಮೋದಲ್ಲಿ ಸುದೀಪ್‌ ಅವರು, ಕಳೆದ ವರ್ಷ ವಿನ್ನರ್‌ಗೆ 5 ಕೋಟಿ ರೂ ಚಿಲ್ಲರೆ ವೋಟ್‌ ಬಂದಿತ್ತು. ಈ ಕ್ರೇಜ್‌ ಕ್ರಿಯೇಟ್‌ ಆಗಿ ಈ ಸೀಸನ್‌ನಲ್ಲಿ ಎಷ್ಟು ವೋಟ್‌ ಬಂದಿರಬಹುದು? ಅಂತ ಸ್ಪರ್ಧಿಗಳಿಗೆ ಸುದೀಪ್‌ ಪ್ರಶ್ನೆ ಇಟ್ಟರು. ಆಗ ರಘು ಅವರು 12 ರಿಂದ 13 ಕೋಟಿ ವೋಟ್‌ ಬಂದಿರಬಹುದು ಎಂದರು.

ಗಿಲ್ಲಿ ಇದ್ದವರು 8 ರಿಂದ 10 ಕೋಟಿ ವೋಟ್‌ ಬಂದಿರಬಹುದು ಎಂದರು. ಮೊದಲನೇ ಸ್ಥಾನ 12 ಗಂಟೆ ತನಕ ಬಂದದ್ದು 37+ ಕೋಟಿ ವೋಟುಗಳು. ಎರಡನೇ ಸ್ಥಾನ ಬಹಳ ಅಂತರದ ಕಮ್ಮಿ ಇದೆ ಎಂದರು ಕಿಚ್ಚ. ಪ್ರೋಮೋ ಔಟ್‌ ಆದ ಕೂಡಲೇ ಕಮೆಂಟ್‌ನಲ್ಲಿ ಗಿಲ್ಲಿನೇ ವಿನ್ನರ್‌ ಅಂತ ಕಮೆಂಟ್‌ ಮಾಡ್ತಿದ್ದಾರೆ ವೀಕ್ಷಕರು.

ಇದನ್ನೂ ಓದಿ: Bigg Boss Kannada 12: ಈ ಸೀಸನ್‌ ವಿನ್ನರ್‌ಗೆ ಬಂದಿದೆ ಬರೋಬ್ಬರಿ 37 ಕೋಟಿಗೂ ಅಧಿಕ ವೋಟುಗಳು! ಯಾರದು?

ಬಿಗ್‌ ಬಾಸ್‌ ಮನೆಯಲ್ಲಿ ಧನುಷ್‌, ಅಶ್ವಿನಿ ಗೌಡ, ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ರಘು ಮತ್ತು ಕಾವ್ಯ ಉಳಿದುಕೊಂಡಿದ್ದಾರೆ. ಇವರೆಲ್ಲರೂ ಫೈನಲಿಸ್ಟ್ ಆಗಿದ್ದು, ಇವರಲ್ಲಿ ಯಾರಿಗೆ ಜಾಸ್ತಿ ವೋಟ್‌ ಬರಲಿದೆಯೋ, ಅವರೇ ಈ ಸೀಸನ್‌ನ ವಿನ್ನರ್.‌