ಬಿಗ್ ಬಾಸ್ ಸೀಸನ್ 12ರ (Bigg Boss Kannada 12) ಫ್ಯಾಮಿಲಿ ವೀಕ್ ಮುಕ್ತಾಯವಾಗಿದೆ. ಇನ್ನೇನಿದರೂ ಸೀಸನ್ ಅಂತ್ಯ ಹಾಡಲು ಕೆಲವೇ ದಿನಗಳು ಇವೆ. ಎಲಿಮಿನೇಶನ್ ಬಿಸಿ ಸ್ಪರ್ಧಿಗಳಿಗೆ ತಟ್ಟಿದೆ. ಈ ವಾರ ಮನೆಯಿಂದ ಒಬ್ಬರಲ್ಲ ಬದಲಿಗೆ ಇಬ್ಬರು ಹೊರಗೆ ಹೋಗಲಿದ್ದಾರೆ. ಬಿಗ್ಬಾಸ್ ಮನೆಗೆ ಈ ವಾರ ಕೆಲವು ಸೆಲೆಬ್ರಿಟಿಗಳು ಬಂದಿದ್ದಾರೆ, ನಿರ್ದೇಶಕ ಪ್ರೇಮ್ (Director Prem) ಸೇರಿದಂತೆ ಇನ್ನೂ ಕೆಲವರು ಬಿಗ್ಬಾಸ್ ಮನೆಗೆ ಬಂದಿದ್ದಾರೆ. ಆದರೆ ಎಲ್ಲದರ ಅಂತ್ಯದಲ್ಲಿ ಡಬಲ್ ಎಲಿಮಿನೇಷನ್ (Double Elimination) ಎಂಬುದು ಮನೆ ಮಂದಿಗೆ ಶಾಕ್ ನೀಡಿದೆ.
ಮನೆಯಿಂದ ಆಚೆ ಹೋಗೋದು ಯಾರು?
ಈ ವಾರ ಸುದೀಪ್ ಅವರು ವಾರಂತ್ಯವನ್ನು ನಡೆಸಿಕೊಡುತ್ತಿಲ್ಲ. ಹೀಗಾಗಿ ಮನೆಗೆ ಪ್ರೇಮ್ ಹಾಗೂ ಸುಷ್ಮಾ ಅವರು ಅತಿಥಿಗಳಾಗಿ ಬಂದಿದ್ದಾರೆ. ನಿರ್ದೇಶಕ ಪ್ರೇಮ್ ತಮ್ಮ 'ಕೆಡಿ: ದಿ ಡೆವಿಲ್' ಚಿತ್ರತಂಡ ಮತ್ತು ಭಾಗ್ಯಲಕ್ಷ್ಮೀ ಸೀರಿಯಲ್ ತಂಡ ಆಗಮಿಸಿದೆ. ಡಬಲ್ ಎಲಿಮಿನೇಟ್ ಅಂತ ವಿಷಯ ತಿಳಿಯುತ್ತಲೇ ಸ್ಪರ್ಧಿಗಳು ಆಘಾತಗೊಂಡಿದ್ದಾರೆ.
ಇದನ್ನೂ ಓದಿ: Bigg Boss Kannada 12: ರಜತ್ ಪ್ರಕಾರ ಬಿಗ್ ಬಾಸ್ನಲ್ಲಿ ಅಶ್ವಿನಿ ಗೌಡ ಹೇಗೆ? ಗಿಲ್ಲಿ ಹೊಗಳಿದ `ಬುಜ್ಜಿ'!
ಈ ವಾರ ಕಾವ್ಯಾ ಅವರನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಸದಸ್ಯರು ನಾಮಿನೇಟ್ ಆಗಿದ್ದಾರೆ.ನಿರ್ದೇಶಕ ಪ್ರೇಮ್ ಆಗಮಿಸುತ್ತಿದ್ದಂತೆ ಈ ವಾರಿ ನಾನೇ ಮನೆಯ ಕ್ಯಾಪ್ಟನ್ ಎಂದು ಗಿಲ್ಲಿ ನಟ ಹೇಳಿಕೊಳ್ಳುತ್ತಾರೆ. ಗಿಲ್ಲಿ ನಟ ನಾನೇ ಕ್ಯಾಪ್ಟನ್ ಅಂತ ಹೇಳ್ತಿದ್ದಂತೆ ಪ್ರೇಮ್, ಹಾಗಾದ್ರೆ ನಾನು ಮನೆಯೊಳಗೆ ಬರಲ್ಲ ಎಂದು ತಮಾಷೆ ಮಾಡುತ್ತಾರೆ. ಸ್ಪಂದನಾ ಸೋಮಣ್ಣ, ಧ್ರುವಂತ್, ಸೂರಜ್ ಮತ್ತು ರಾಶಿಕಾ ನಿಂತಿದ್ದಾರೆ. ಈ ನಾಲ್ವರಲ್ಲಿ ಮನೆಯಿಂದ ಹೊರ ಹೋಗುವ ಸ್ಪರ್ಧಿ ಯಾರು ಎಂಬ ಕುತೂಹಲ ಮನೆ ಮಾಡಿದೆ.
ಕಲರ್ಸ್ ಕನ್ನಡ ಪ್ರೋಮೋ
ಬಿಗ್ ಬಾಸ್ ಮನೆಯಲ್ಲಿ ಫ್ಯಾಮಿಲಿ ವೀಕ್
ಈ ವಾರ ಬಿಗ್ ಬಾಸ್ ಮನೆಯಲ್ಲಿ ಫ್ಯಾಮಿಲಿ ವೀಕ್ ಆಗಿತ್ತು. ಮನೆಯ ಎಲ್ಲ ಸದಸ್ಯರ ತಂದೆ ತಾಯಿ ಮನೆಗೆ ಬಂದು ಹೋಗಿದ್ದಾರೆ. ʻಫ್ಯಾಮಿಲಿ ವೀಕ್ʼನಲ್ಲಿ ಗಿಲ್ಲಿ ನಟನಿಗೆ ಸ್ಪರ್ಧಿಗಳ ಕುಟುಂಬ ಸದಸ್ಯರಿಂದ ಹೆಚ್ಚಿನ ಬೆಂಬಲ ದೊರೆಯಿತು. ಈ ವಿಶೇಷ ವಾರದಲ್ಲಿ ಕುಟುಂಬ ಸದಸ್ಯರಿಗೆ ಕ್ಯಾಪ್ಟನ್ಸಿ ರೇಸ್‌ಗೆ ಸ್ಪರ್ಧಿಗಳನ್ನ ಆಯ್ಕೆ ಮಾಡುವ ಅಧಿಕಾರವನ್ನ ನೀಡಲಾಗಿತ್ತು. ಈ ವಾರ ಸ್ಪರ್ಧಿಗಳ ಕುಟುಂಬ ಸದಸ್ಯರಿಂದ ಅತ್ಯಧಿಕ ವೋಟ್‌ಗಳನ್ನ ಪಡೆದು ಗಿಲ್ಲಿ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾದರು.
ಕ್ಯಾಪ್ಟನ್ ರೂಂಗೆ ಅತ್ಯಂರ ಗಾಂಭೀರ್ಯದಿಂದ ಎಂಟ್ರಿ ಕೊಡುತ್ತಲೇ ಮೈಕ್ ಧರಿಸಿ ಎಂದು ಹೇಳಿದ್ದಾರೆ ಬಿಗ್ ಬಾಸ್ . ಸ್ಪಂದನಾ ಸೋಮಣ್ಣ ಅವರ ತಂದೆ-ತಾಯಿ, ರಘು ಅವರ ಪತ್ನಿ-ಮಗ, ಧನುಷ್ ಅವರ ತಾಯಿ, ಅಶ್ವಿನಿ ಗೌಡ ಅವರ ತಾಯಿ, ಧ್ರುವಂತ್ ಅವರ ಸಹೋದರ ಸೇರಿದಂತೆ ಹಲವರು ಗಿಲ್ಲಿಯನ್ನ ಬೆಂಬಲಿಸಿದರು.
ಇದನ್ನೂ ಓದಿ: Bigg Boss Kannada 12: ಈ ವೀಕೆಂಡ್‌ಗೆ ಕಿಚ್ಚ ಸುದೀಪ್ ಬದಲಿಗೆ ಯಾರು ಬರ್ತಾ ಇದ್ದಾರೆ ಗೊತ್ತಾ?
ವೈಸ್ ಕ್ಯಾಪ್ಟನ್ ಎಂದು ಹೇಳಿಕೊಳ್ಳುತ್ತಿದ್ದ ಗಿಲ್ಲಿ, ಕಡೆಗೂ ಈ ಸೀಸನ್‌ನಲ್ಲಿ ಕ್ಯಾಪ್ಟನ್ ಆಗಿದ್ದಾರೆ. ಟಾಸ್ಕ್‌ನಲ್ಲಿ ಅಶ್ವಿನಿ ಗೌಡ ವಿರುದ್ಧ ಗೆದ್ದು, ಬಿಗ್ ಬಾಸ್ ಕನ್ನಡ 12 ನೇ ಸೀಸನ್‌ನ 13ನೇ ವಾರದ ಕ್ಯಾಪ್ಟನ್ ಆಗಿ ಗಿಲ್ಲಿ ನಟ ಆಯ್ಕೆಯಾಗಿದ್ದಾರೆ.