ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ರಜತ್‌ ಎಂಟ್ರಿ ಕೊಟ್ಟ ಮೇಲೆ ರೆಸಾರ್ಟ್‌ ಲೋಕಲ್‌ ಬಾರ್‌ ಥರ ಆಗಿದೆ; ಕಿಚ್ಚನ ಹಳೆಯ ವಿಡಿಯೋ ವೈರಲ್‌

Rajath Bigg Boss: ಸೀಸನ್‌ 11ರಲ್ಲಿಯೂ ಇದೇ ರೀತಿಯ ಟಾಸ್ಕ್‌ ನೀಡಲಾಗಿತ್ತು. ಈ ವೇಳೆ ರಜತ್‌ ರೆಸಾರ್ಟ್‌ನಲ್ಲಿ ಗೆಸ್ಟ್‌ ಆಗಿರಬೇಕಿತ್ತು. ಆದರೆ ಅವರು ಸರಿಯಾಗಿ ನಿಭಾಯಿಸಿರಲಿಲ್ಲ. ಈ ಬಗ್ಗೆ ವೀಕೆಂಡ್‌ನಲ್ಲಿ ಕಿಚ್ಚ ಪ್ರಶ್ನಿಸಿದ್ದರು. ರಜತ್‌ ಎಂಟ್ರಿ ಕೊಟ್ಟ ಮೇಲೆ ಅಂತೂ ಅದು ರೆಸಾರ್ಟ್‌ ಅಲ್ಲ ಅದು. ಯಾವುದೋ ಪಕ್ಕ ಲೋಕಲ್‌ ಬಾರ್‌ನಲ್ಲಿ ಗಿಫ್ಟ್‌ ಕೂಪನ್‌ ಗೆದ್ದು ಬರ್ತಾರಲ್ಲ ಹಾಗೆ ಇದೆ ಎಂದು ಕಿಚ್ಚ ಹೇಳಿದ್ದರು. ಈಗ ಈ ವಿಡಿಯೋ ಬಗ್ಗೆ ಸಾಕಷ್ಟು ಚರ್ಚೆ ಆಗ್ತಿದೆ.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ ಮನೆಯಲ್ಲೀಗ (Bigg Boss Kannada 12) ಸೀಸನ್‌ 11ರ ಸ್ಪರ್ಧಿಗಳು ಬಂದಿದ್ದಾರೆ. ಗಿಲ್ಲಿ ಬಗ್ಗೆಯೂ (Gilli Nata) ಪರ ವಿರೋಧ ವ್ಯಕ್ತವಾಗುತ್ತಿದೆ. ಅದರಲ್ಲೂ ಗಿಲ್ಲಿ ಹಾಗೂ ಮಂಜು, ರಜತ್‌ ನಡುವೆ ಮಾತಿನ ಚಕಮಕಿ ಆಗುತ್ತಲೇ ಇದೆ. ಇದೇ ವೇಳೆ ನೆಟ್ಟಿಗರು ವಿಡಿಯೋವೊಂದನ್ನ ವೈರಲ್‌ ಮಾಡುತ್ತಿದ್ದಾರೆ. ಈ ಹಿಂದೆ ರಜತ್‌ಗೆ ಕಿಚ್ಚ ಸುದೀಪ್‌ (Sudeep) ಕ್ಲಾಸ್‌ ತೆಗೆದುಕೊಂಡಿರೋ ವಿಡಿಯೋ ವೈರಲ್‌ ಆಗ್ತಿದೆ. ಏನದು?

ಸೀಸನ್‌ 11ರಲ್ಲಿಯೂ ಇದೇ ರೀತಿಯ ಟಾಸ್ಕ್‌ ನೀಡಲಾಗಿತ್ತು. ಈ ವೇಳೆ ರಜತ್‌ ರೆಸಾರ್ಟ್‌ನಲ್ಲಿ ಗೆಸ್ಟ್‌ ಆಗಿರಬೇಕಿತ್ತು. ಆದರೆ ಅವರು ಸರಿಯಾಗಿ ನಿಭಾಯಿಸಿರಲಿಲ್ಲ. ಈ ಬಗ್ಗೆ ವೀಕೆಂಡ್‌ನಲ್ಲಿ ಕಿಚ್ಚ ಪ್ರಶ್ನಿಸಿದ್ದರು.

ಇದನ್ನೂ ಓದಿ: Bigg Boss Kannada 12: ನಾಳೆ ಆಟ ಏನು ಅಂತ ನಾನು ತೋರಿಸ್ತೀನಿ ಎಂದು ಅಬ್ಬರಿಸಿದ ಉಗ್ರಂ ಮಂಜು! ಗಿಲ್ಲಿಗೆ ರೂಲ್ಸ್ ಮಾಡೋಕೆ ಆಗುತ್ತಾ?

ಲೋಕಲ್‌ ಬಾರ್‌ನಲ್ಲಿ ಇರೋ ಥರ ಇದ್ರಾ?

ಮೊದಲಿಗೆ ಭವ್ಯಾ ಅವರಿಗೆ ಕಿಚ್ಚ ಅವರು ಪ್ರಶ್ನೆ ಇಟ್ಟಿದ್ದರು. ಗೆಸ್ಟ್‌ ಆಗಿ ರೆಸೋರ್ಟ್‌ನಲ್ಲಿ ಇದ್ರಾ ಅಂತ' ಕೇಳಿದ್ದಾರೆ. ಅದಕ್ಕೆ ಹೌದು ಎಂದಿದ್ದಾರೆ ಭವ್ಯಾ ಗೌಡ. `ಇಲ್ಲ ಲೋಕಲ್‌ ಬಾರ್‌ನಲ್ಲಿ ಇರೋ ಥರ ಇದ್ರಾ?' ಎಂದು ಕಿಚ್ಚ ಪ್ರಶ್ನೆ ಇಟ್ಟಿದ್ದರು. `ರಜತ್‌ ಎಂಟ್ರಿ ಕೊಟ್ಟ ಮೇಲೆ ಅಂತೂ ಅದು ರೆಸಾರ್ಟ್‌ ಅಲ್ಲ ಅದು. ಯಾವುದೋ ಪಕ್ಕ ಲೋಕಲ್‌ ಬಾರ್‌ನಲ್ಲಿ ಗಿಫ್ಟ್‌ ಕೂಪನ್‌ ಗೆದ್ದು ಬರ್ತಾರಲ್ಲ ಹಾಗೆ. ಲೋಕಲ್‌ ಬಾರ್‌ ಅಂತ ಟಾಸ್ಕ್‌ ಕೊಟ್ಟಿದ್ದರೆ, ಒಪ್ಪಿಕೊಳ್ಳೋಣ. ರೆಸಾರ್ಟ್‌ ಅಂತ ಕಳಿಸಿ, ಪಕ್ಕಾ ಲೋಕಲ್‌ ಬಾರ್‌ ಅಂತ ಕನ್ವರ್ಟ್‌ಮಾಡಿದ್ದೀರಿ' ರಜತ್‌ ಎಂದಿದ್ದರು.

ಇದೀಗ ಈ ವಿಡಿಯೋ ನೋಡಿದ ನೆಟ್ಟಿಗರು ಕೂಡ, ಈ ಸಲವೂ ರಜತ್‌ ಹಾಗೂ ಮಂಜು ಲೋಕಲ್‌ ಬಾರ್‌ ಥರಹವೇ ಕನ್ವರ್ಟ್‌ ಮಾಡಿದ್ದಾರೆ ಎಂದು ಕಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರು, ರಜತ್‌ ಇದುವರೆಗೆ ತಿದ್ದಿಕೊಂಡಿಲ್ಲ ಎಂದು ಕಮೆಂಟ್‌ ಮಾಡ್ತಿದ್ದಾರೆ. ಈ ವಾರಾಂತ್ಯವನ್ನು ಈ ಪ್ರಶ್ನೆಯೊಂದಿಗೆ ಪ್ರಾರಂಭಿಸೋಣ ಎಂದು ಕಮೆಂಟ್‌ ಮಾಡುತ್ತಿದ್ದಾರೆ.

ವೈರಲ್‌ ವಿಡಿಯೋ



ಗಿಲ್ಲಿ ಬಗ್ಗೆ ರಜತ್‌ ಹೇಳಿದ್ದೇನು?

ನಿನ್ನೆಯ ಎಪಿಸೋಡ್‌ನಲ್ಲಿ ಗಿಲ್ಲಿ ರೋಸ್ಟ್‌ ಮಾಡಿದ್ದು, ರಜತ್‌ಗೆ ಅರಗಿಸಿಕೊಳ್ಳಲು ಆಗಿಲ್ಲ. ‘ನಾವು ಇಲ್ಲಿ ಮೊದಲೇ ಬಂದು ಹೋಗಿದ್ದೇವೆ. ಇಲ್ಲಿಗೆ ಅತಿಥಿಗಳು ಬಂದಾಗ ನಾವು ಮಧ್ಯದಲ್ಲಿ ಮಾತನಾಡುತ್ತಿರಲಿಲ್ಲ. ಇವನು ಇಷ್ಟು ಕಿರಿಕಿರಿ ಎಂಬುದು ನನಗೆ ಹೊರಗೆ ಇದ್ದಾಗ ಗೊತ್ತಿರಲಿಲ್ಲ. ಇವನು ತುಂಬಾ ಕಿರಿಕಿರಿ ಮಾಡುತ್ತಿದ್ದಾನೆ. ಒಂದು ಸರಿ ಹೇಳಿದರೆ ಅರ್ಥ ಆಗಲ್ಲ ಇವನಿಗೆ. ನಮ್ಮ ತಾಯಾಣೆಗೂ ಕಿರಿಕಿರಿ ಆಗುತ್ತಿದೆ. ಮನುಷ್ಯರ ಜಾತಿಗೆ ಸೇರಿದವರು ಒಂದು ಸಲ ಹೇಳಿದರೆ ಅರ್ಥ ಮಾಡಿಕೊಳ್ಳಬೇಕು’ ಎಂದು ರಜತ್ ಅವರು ಕೂಗಾಡಿದರು.

ಇದನ್ನೂ ಓದಿ: Bigg Boss Kannada 12: ಹಿಂಸೆ ಆದರೆ ಕರಿ ಜೊತೆಗೆ ಬರ್ತೀನಿ! ಗಿಲ್ಲಿಗೆ ಸಾಥ್‌ ಕೊಟ್ಟ ಅಶ್ವಿನಿ

ಜಡ್ಜಸ್ ತಮ್ಮ ಕೆಲಸ ಮಾಡುತ್ತಿಲ್ಲ. ಅವರು ಇಲ್ಲಿ ನಮಗೆ ಬೂಸ್ಟ್ ಆಗುತ್ತಾರೆ ಎಂದುಕೊಂಡಿದ್ದೆ. ಆದರೆ ಇಲ್ಲಿ ಬಂದು ನನ್ನ ಕೈಯಲ್ಲಿ ಸಿಕ್ಕಿಕೊಂಡು ಡಿಪ್ರೆಷನ್​​ನಲ್ಲಿ ಇದ್ದಾರೆ’ ಎಂದು ಗಿಲ್ಲಿ ನಟ ಹೇಳಿದರು.

Yashaswi Devadiga

View all posts by this author