Bigg Boss Kannada 12: ನಾಳೆ ಆಟ ಏನು ಅಂತ ನಾನು ತೋರಿಸ್ತೀನಿ ಎಂದು ಅಬ್ಬರಿಸಿದ ಉಗ್ರಂ ಮಂಜು! ಗಿಲ್ಲಿಗೆ ರೂಲ್ಸ್ ಮಾಡೋಕೆ ಆಗುತ್ತಾ?
Gilli Nata: ಗಿಲ್ಲಿ ವರ್ತನೆ, ಅವರು ಮಾಡವ ಸತ್ಕಾರ ಅತಿಥಿಗಳಿಗೆ ಇಷ್ಟ ಆಗ್ತಿಲ್ಲ. ಬಂದಾಗಿನಿಂದ ಉಗ್ರಂ ಮಂಜು ಹಾಗೂ ರಜತ್ , ಗಿಲ್ಲಿ ನಡುವೆ ಮನಸ್ತಾಪ ಆಗುತ್ತಲೇ ಇದೆ. ಈಗ ಇನ್ನೂ ಒಂದು ಹಂತಕ್ಕೆ ಮೀರಿದೆ. ಸೀಸನ್ 11 ಸ್ಪರ್ಧಿಗಳು ಗಿಲ್ಲಿ ನಟನ ವಿರುದ್ಧ ತಿರುಗಿ ಬಿದ್ದಿದ್ದಾರೆ. ಗಿಲ್ಲಿಗಾಗಿಯೇ ಹೊಸ ರೂಲ್ಸ್ ಮಾಡಿದ್ದಾರೆ ಉಗ್ರಂ ಮಂಜು. ಪ್ರೋಮೋ ಈಗ ಔಟ್ ಆಗಿದೆ. ಉಗ್ರಂ ಮಂಜು ಅವರ ಮನೆಯವರಿಗೆ, ಗಿಲ್ಲಿ ಕೈಯಿಂದಾನೆ ಊಟ ಬಡಿಸಿಕೊಂಡು ತಿನ್ನಬೇಕು. ಅಥವಾ ಎಲ್ಲರಿಗು ಆದಮೇಲೆ ಅವನು ಊಟ ಮಾಡಬೇಕು ಎಂದು ನಿಯಮ ಮಾಡಿದ್ದಾರೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಸೀಸನ್ 12ರಲ್ಲಿ (Bigg Boss Kannada 12) ಅತಿಥಿ ಸತ್ಕಾರ ಮಾಡೋ ಟಾಸ್ಕ್ ನೀಡಿದ್ದಾರೆ. ಆದರೆ ಗಿಲ್ಲಿ (Gilli Nata) ವರ್ತನೆ, ಅವರು ಮಾಡವ ಸತ್ಕಾರ ಅತಿಥಿಗಳಿಗೆ ಇಷ್ಟ ಆಗ್ತಿಲ್ಲ. ಬಂದಾಗಿನಿಂದ ಉಗ್ರಂ ಮಂಜು ಹಾಗೂ ರಜತ್ (Rajath), ಗಿಲ್ಲಿ ನಡುವೆ ಮನಸ್ತಾಪ ಆಗುತ್ತಲೇ ಇದೆ. ಈಗ ಇನ್ನೂ ಒಂದು ಹಂತಕ್ಕೆ ಮೀರಿದೆ. ಸೀಸನ್ 11 ಸ್ಪರ್ಧಿಗಳು ಗಿಲ್ಲಿ ನಟನ ವಿರುದ್ಧ ತಿರುಗಿ ಬಿದ್ದಿದ್ದಾರೆ. ಗಿಲ್ಲಿಗಾಗಿಯೇ ಹೊಸ ರೂಲ್ಸ್ (New Rules) ಮಾಡಿದ್ದಾರೆ ಉಗ್ರಂ ಮಂಜು. ಪ್ರೋಮೋ ಈಗ ಔಟ್ ಆಗಿದೆ.
ಇದನ್ನೂ ಓದಿ: Bigg Boss Kannada 12: ಗಿಲ್ಲಿಗೆ ಬೇಕಾಬಿಟ್ಟಿ ಕೆಲಸ ಕೊಟ್ಟ ಉಗ್ರಂ ಮಂಜು ! ಫ್ಯಾನ್ಸ್ ಕೆಂಡ
ಗಿಲ್ಲಿಗೆ ರೂಲ್ಸ್ ಮಾಡೋಕೆ ಆಗುತ್ತಾ?
ಪ್ರೋಮೋದಲ್ಲಿ ತೋರಿಸಿರುವಂತೆ, ಉಗ್ರಂ ಮಂಜು ಅವರ ಮನೆಯವರಿಗೆ, ಗಿಲ್ಲಿ ಕೈಯಿಂದಾನೆ ಊಟ ಬಡಿಸಿಕೊಂಡು ತಿನ್ನಬೇಕು. ಅಥವಾ ಎಲ್ಲರಿಗು ಆದಮೇಲೆ ಅವನು ಊಟ ಮಾಡಬೇಕು ಎಂದು ಸೀಸನ್ 11 ಸ್ಪರ್ಧಿಗಳು ನಿಯಮ ಮಾಡಿದ್ದಾರೆ. ಆದರೆ ಗಿಲ್ಲಿ ಮಾತ್ರ ಇದನ್ನು ಫಾಲೋ ಮಾಡಿಲ್ಲ. ಆದರೆ ಗಿಲ್ಲಿ ಇದನ್ನ ಒಪ್ಪಲೆ ಇಲ್ಲ ರಘು ಅವರ ಮುಂದೆ ಇದೆಂಥ ರೂಲ್ಸ್? ಅಂತ ಬ್ರೇಕ್ ಮಾಡಿದ್ದಾರೆ.
ಕಲರ್ಸ್ ಕನ್ನಡ ಪ್ರೋಮೋ
ಅದಕ್ಕೆ ಉಗ್ರಂ ಮಂಜು ಕೆಂಡ ಆಗಿದ್ದಾರೆ. ʻನಾನು ಹೇಳಿದ್ದೇನು ಅಭಿ ? ಅಂತ ಕ್ಯಾಪ್ಟನ್‌ಗೆ ತರಾಟೆ ತೆಗೆದುಕೊಂಡಿದ್ದಾರೆ. ಗಿಲ್ಲಿ ಬೋಂಡಾ ತಿಂದುಕೊಂಡು ಆರಾಮ್ ಇದ್ದಾನೆ. ನೀವು ಹಸಿವು ಅಂದುಕೊಂಡು ಆರಾಮ್ ಇದ್ದೀರಾ. ನೀವುಷ್ಟು ಜನ ಅವನಿಗೆ ಹೇಳೋಕೆ ಆಗಾಲ್ಲ. ನಿಮಗೆ ನಾಚಿಕೆ ಆಗಲ್ವಾ? ನಾಳೆ ನಾನೇ ಬೇರೆ ಆಟ ತೋರಸ್ತೀನಿʼ ಅಂದಿದ್ದಾರೆ ಉಗ್ರಂ ಮಂಜು.
ಗಿಲ್ಲಿ ನಟ ಕೂಡ ಊಟದ ವಿಷಯದಲ್ಲಿ ನಿಯಮ ಮಾಡಬಾರದು. ಇದೆಲ್ಲ ಮಾಡಬಾರದು. ಅವರು ಸೇವೆಯಲ್ಲಿ ಏನಾದರೂ ಮಾಡಬಹುದು. ಊಟ ಹಾಕಿ ನನಗೆ, ತಲೆ ಕೆಡಿಸ್ಕೋಬೇಡಿ ಎಂದು ಉಳಿದ ಸ್ಪರ್ಧಿಗಳಿಗೆ ಹೇಳಿದ್ದಾರೆ.
ಗಿಲ್ಲಿನ ಟಾರ್ಗೆಟ್ ಮಾಡ್ತಿದ್ದೀರಾ ಉಗ್ರಂ ಮಂಜು?
ಗಿಲ್ಲಿ ಪ್ರತಿ ಮಾತಿಗೂ ಉಗ್ರಂ ಮಂಜು ರಿಯಾಕ್ಟ್ ಮಾಡ್ತಾ ಇದ್ದರು. ಬೇಕು ಅಂತ ಟೇಬಲ್ ಮೇಲೆ ನೀರು ಚೆಲ್ಲೋದು, ಟೇಬಲ್ ನಲ್ಲಿ ನೀರು ಚೆಲ್ಲಿ, ಕಾಫಿ ಚೆಲ್ಲಿ, ಕಸ ಮಾಡಿ, ಗಿಲ್ಲಿ ಬಳಿ ಕ್ಲೀನ್ ಮಾಡಿಸೋದು. ಗಿಲ್ಲಿ ಪಾತ್ರದಲ್ಲಿ ವೈಟರ್ ಆಗಿದ್ದರು. ಆದರೆ ಗಿಲ್ಲಿಯೇ ಕ್ಲಿನರ್ ಆಗಿ ಕ್ಲಿನ್ ಮಾಡುವಂತೆ ಹೇಳಿದ್ದಾರೆ ಮಂಜು.
ಇದನ್ನೂ ಓದಿ: Bigg Boss Kannada 12: ಅಶ್ವಿನಿ ಸೈಲೆಂಟ್ ಇರೋದೇ ಗಿಲ್ಲಿಗೆ ಸಮಸ್ಯೆ ಅಂತೆ! ಧನುಷ್ ಹೇಳಿಕೆಗೆ ಫ್ಯಾನ್ಸ್ ಕೆಂಡ
ಅಷ್ಟೇ ಅಲ್ಲ ಗಿಲ್ಲಿ ವಿಚಾರಕ್ಕೆ ಉಗ್ರಂ ಮಂಜು ಅವರು ಚೇರ್ ಎತ್ತಿ ಬಿಸಾಡಿ, ಅಭಿ ವಿರುದ್ಧವೇ ಕೂಗಾಡಿದ್ದಾರೆ. ಮ್ಯಾನೇಜರ್ ಅಂತ ಪ್ರೀತಿ, ವಿಶ್ವಾಸ ಇದೆ. ನೀರು ಕೊಡು ಅಂದರೆ ಕುಡಿದು ಕೊಡ್ತಾನೆ ಎಂದು ಅಬ್ಬರಿಸಿದ್ದಾರೆ. ಬಂದಾಗಿನಿಂದ ಗಿಲ್ಲಿ ಹಾಗೂ ಉಗ್ರಂ ಮಂಜು ನಡುವೆ ಜಗಳ ಆಗುತ್ತಲೇ ಇದೆ. ನಿನ್ನೆ ಕೆಲಸ ಕೊಡುವ ಮೂಲಕ ಉಗ್ರಂ ಮಂಜು ಗಿಲ್ಲಿ ಮೇಲಿನ ಸಿಟ್ಟನ್ನು ತೀರಿಸಿಕೊಂಡಂತಿದೆ. ಉಗ್ರಂ ಮಂಜು ನಡೆಗೆ ಫ್ಯಾನ್ಸ್ (Fans) ಕೆಂಡ ಆಗಿದ್ದಾರೆ.