ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻಬಿಗ್‌ ಬಾಸ್‌ʼ ಶೋನಿಂದ ಹೊರಬರುತ್ತಿದ್ದಂತೆಯೇ ಗುಡ್‌ ನ್ಯೂಸ್‌ ನೀಡಿದ ಅಭಿಷೇಕ್ ಶ್ರೀಕಾಂತ್

ಬಿಗ್ ಬಾಸ್ ಸ್ಪರ್ಧಿ ಅಭಿಷೇಕ್ ಶ್ರೀಕಾಂತ್ ಅವರು ತಮ್ಮ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ. ಮೈಸೂರು ಮೂಲದ ಪ್ರಶಾಂತ್ ಎಂ.ಎಲ್. ನಿರ್ದೇಶನದ ಫೆಬ್ರವರಿ 30 ಹೆಸರಿನ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರದಲ್ಲಿ ಅಭಿಷೇಕ್ ಮೊದಲ ಬಾರಿಗೆ ಹಾರರ್ ಮಾದರಿಯ ಕಥೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರಲ್ಲಿ ಸ್ಪರ್ಧಿಯಾಗಿದ್ದ ಅಭಿಷೇಕ್‌ ಶ್ರೀಕಾಂತ್‌ ಅವರು ಇದ್ದಷ್ಟು ದಿನಗಳ ಕಾಲ ಉತ್ತಮವಾಗಿಯೇ ಆಟ ಆಡಿದ್ದರು. ಸದ್ಯ ಶೋ ಮುಗಿದಿದ್ದು, ಫಿನಾಲೆಗೂ ಮುನ್ನ ಅಭಿಷೇಕ್‌ ಹೊರಗೆ ಬಂದಿದ್ದರು. ಇದೀಗ ಅವರು ಅಭಿಮಾನಿಗಳಿಗೆ ಒಂದು ಗುಡ್‌ ನ್ಯೂಸ್‌ ನೀಡಿದ್ದಾರೆ. ಅಭಿಷೇಕ್‌ ನಟನೆಯ ಹೊಸ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದೆ.

ಫೆಬ್ರವರಿ 30ರ ಟ್ರೇಲರ್‌ ರಿಲೀಸ್‌

ಅಭಿಷೇಕ್ ಶ್ರೀಕಾಂತ್ ನಟನೆಯ ಫೆಬ್ರವರಿ 30 ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಒಳಗೊಂಡ ಫೆಬ್ರವರಿ 30 ಸಿನಿಮಾವನ್ನು ಮೈಸೂರು ಮೂಲದ ಪ್ರಶಾಂತ್ ಎಂ.ಎಲ್. ಅವರ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಶಂಕರ ಮೂವೀಸ್ ಇಂಟರ್ ನ್ಯಾಷನಲ್ ಮೂಲಕ ಜೋಸೆಫ್ ಬೇಬಿ ಅವರು ಬಂಡವಾಳ ಹೂಡಿದ್ದಾರೆ. ಅಭಿಷೇಕ್, ಸಾಹಿತ್ಯಶೆಟ್ಟಿ, ಅಕ್ಷಯ್, ಮನೋಜ್, ಶಿವಕುಮಾರ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಪಿ.ಎಂ. ಉನ್ನಿಕೃಷ್ಣನ್ ಅವರ ಛಾಯಾಗ್ರಹಣ, ಲಿಜಿನ್ ಪಂಬೋ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

Bigg Boss Kannada 12: ಎರಡನೇ ಬಾರಿ ಅಶ್ವಿನಿ ಗೌಡಗೆ ಕಳಪೆ ಪಟ್ಟ! ಅಭಿಷೇಕ್‌ ಕ್ಯಾಪ್ಟನ್‌, ಉತ್ತಮ ಇವರೇ ನೋಡಿ

ಫೆಬ್ರವರಿ 30 ಅಂದ್ರೆ ಅನ್ ಎಕ್ಸ್ಪೆಕ್ಟೆಡ್ ಡೇಟ್!

ಸಾಮಾನ್ಯವಾಗಿ ಫೆಬ್ರವರಿ ತಿಂಗಳಲ್ಲಿ 28 ದಿನಗಳು ಇರುತ್ತವೆ. ನಾಲ್ಕು ವರ್ಷಕ್ಕೊಮ್ಮೆ 29 ದಿನಗಳು ಬರುತ್ತವೆ. ಆದರೆ ʻಫೆಬ್ರವರಿ 30ʼ ಎಂದು ಟೈಟಲ್‌ ಇಟ್ಟಿರುವುದು ಕುತೂಹಲ ಮೂಡಿಸಿದೆ. "ನಾನು ಐಟಿ ಉದ್ಯೋಗಿ. ಸಣ್ಣ ಪುಟ್ಟ ಶಾರ್ಟ್ ಮೂವಿ ಮಾಡ್ತಾ ಇದ್ದೆ. ಈ ಸಿನಿಮಾವನ್ನ ಚಿಕ್ಕದಾಗಿ ಮಾಡೋಣ ಎಂದು ಶುರು ಮಾಡಿದೆವು. ಆದ್ರೆ ಬರೀತಾ ಬರೀತಾ ಸಿನಿಮಾ ಚೆನ್ನಾಗಿ ಬಂದಿದೆ. ನಿರ್ಮಾಪಕರಿಗೆ ಕಥೆ ಇಷ್ಟವಾಗಿ ಸಿನಿಮಾ ಮಾಡೋಣ ಎಂದರು. ಇದೊಂದು ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾ. ಫೆಬ್ರವರಿ 30 ಅಂದ್ರೆ ಅನ್ ಎಕ್ಸ್ಪೆಕ್ಟೆಡ್ ಡೇಟ್. ಸಿನಿಮಾ ಚೆನ್ನಾಗಿ ಬಂದಿದೆ. ತೆರೆಮೇಲೆ ನೋಡುವ ಪ್ರೇಕ್ಷಕರಿಗೆ ಖಂಡಿತ ಇಷ್ಟವಾಗುತ್ತದೆ" ಎಂದು ನಿರ್ದೇಶಕ ಎಂ. ಎಲ್. ಪ್ರಶಾಂತ್ ಹೇಳಿದ್ದಾರೆ.

Bigg Boss Kannada 12: ಗಿಲ್ಲಿ ನಟ ಕ್ಷಮೆ ಕೇಳಿದ್ರೂ, ಕೇಳಿಲ್ಲ ಅಂತ ಅಭಿಷೇಕ್‌ ಹೇಳಿದ್ದೇಕೆ?

"ಫೆಬ್ರವರಿ 30 ನನ್ನ ಮೊದಲ ಹಾರರ್‌ ಸಿನಿಮಾ. ಈ ಮಾದರಿಯ ಸಿನಿಮಾವನ್ನು ಇಲ್ಲಿವರೆಗೂ ನಾನು ಮಾಡಿರಲಿಲ್ಲ. ಪ್ರಶಾಂತ್ ಅವರು ಕಥೆ ಹೇಳಿದಾಗ ಯೂನಿಕ್ ಅನ್ನಿಸ್ತು. ಆಡಿಷನ್ ನಡೆಸುವಾಗ ಪ್ರಶಾಂತ್ ಅವರಿಗೂ ಗೊಂದಲವಿತ್ತು. ಆದ್ರೆ ನನಗೆ ಈ ಅವಕಾಶ ಬಂತು. ನಿರ್ಮಾಪಕ ಜೋಸೆಫ್ ಬೇರೆ ರಾಜ್ಯದಿಂದ ಬಂದು ನಮ್ಮನ್ನ ನಂಬಿ ಇನ್ವೆಸ್ಟ್ ಮಾಡಿದ್ದಕ್ಕೆ ಥ್ಯಾಂಕ್ಯೂ. ಈ ಸಿನಿಮಾದಿಂದ ಸಾಕಷ್ಟು ಕಲಿತಿದ್ದೀನಿ" ಅಂತಾರೆ ನಟ ನಟ ಅಭಿಷೇಕ್ ಶ್ರೀಕಾಂತ್. ಅತೀ ಶೀಘ್ರದಲ್ಲೇ ಈ ಸಿನಿಮಾ ತೆರೆಗೆ ಬರಲಿದೆ.