ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಎರಡನೇ ಬಾರಿ ಅಶ್ವಿನಿ ಗೌಡಗೆ ಕಳಪೆ ಪಟ್ಟ! ಅಭಿಷೇಕ್‌ ಕ್ಯಾಪ್ಟನ್‌, ಉತ್ತಮ ಇವರೇ ನೋಡಿ

BBK 12: ಬಿಗ್‌ ಬಾಸ್‌ ಟಾಸ್ಕ್‌ವೊಂದನ್ನ ನೀಡಿದ್ದಾರೆ. ಮನಸ್ಸಿನಲ್ಲಿ ಸಮಯ ಎಣಿಸಿ 12 ನಿಮಿಷ ಆದ ಬಳಿಕ ಬೆಲ್ ಬಾರಿಸಬೇಕು. ಈ ವೇಳೆ ಅವರ ಲೆಕ್ಕಾಚಾರ ತಪ್ಪಿಸಲು ಮನೆಯ ಸ್ಪರ್ಧಿಗಳು ಅಡ್ಡಿ ಉಂಟು ಮಾಡಬಹುದು. ಅಭಿಷೇಕ್‌ ಕಡೆಯಿಂದ ಕಾವ್ಯ ಹಾಗೂ ಗಿಲ್ಲಿ ಸಪೋರ್ಟರ್‌ ಆಗಿದ್ದರೆ, ಅಶ್ವಿನಿ ಅವರ ಪರ ಜಾಹ್ನವಿ ಹಾಗೂ ರಕ್ಷಿತಾ ಮಾತನಾಡಬೇಕಿತ್ತು. ಆದರೆ ಕೊನೆಗೆ 12 ನಿಮಿಷ ಸಮೀಪಕ್ಕೆ ಗಂಟೆ ಬಾರಿಸುವ ಸದಸ್ಯ ಕ್ಯಾಪ್ಟನ್ ಆಗಿ ಆಯ್ಕೆ ಆಗ್ತಾರೆ.

ಎರಡನೇ ಬಾರಿ ಅಶ್ವಿನಿ ಗೌಡಗೆ ಕಳಪೆ  ಪಟ್ಟ! ಉತ್ತಮ ಇವರೇ ನೋಡಿ

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Nov 22, 2025 7:22 AM

ಬಿಗ್‌ ಬಾಸ್‌ ಸೀಸನ್‌ 12ರಲ್ಲಿ (Bigg Boss Kannada 12) ಕ್ಯಾಪ್ಟನ್ಸಿ ಟಾಸ್ಕ್‌ ರೋಚಕ ತಿರುವು ಪಡೆದುಕೊಂಡಿದೆ. ಈ ವಾರ ಅಭಿಷೇಕ್‌ (Abhishek) ಅವರು ಕ್ಯಾಪ್ಟನ್‌ (Captain) ಆಗಿದ್ದಾರೆ. ಈ ವಾರ ಎರಡು ತಂಡಗಳನ್ನಾಗಿ ಮಾಡಿದ್ದರು ಬಿಗ್‌ ಬಾಸ್‌. ಬ್ಲೂ ಹಾಗೂ ರೆಡ್‌ ಟೀಂ. ಗಿಲ್ಲಿ (Gilli) ಹಾಗೂ ಅಶ್ವಿನಿ ನಾಯಕರು. ಧ್ರುವಂತ್‌, ರಾಶಿಕಾ ಶೆಟ್ಟಿ, ಅಭಿಷೇಕ್‌ ಮತ್ತು ಅಶ್ವಿನಿ ಗೌಡ ಕ್ಯಾಪ್ಟನ್‌ ರೇಸ್‌ನಲ್ಲಿ ಉಳಿದರು. ಅಶ್ವಿನಿ ಹಾಗೂ ಅಭಿಷೇಕ್‌ (Abhishek) ಮಧ್ಯೆ ಭಾರಿ ಪೈಪೋಟಿ ನಡೆಯಿತು. ಅದರಲ್ಲಿ ವಿನ್‌ ಆಗಿದ್ದು ಅಭಿಷೇಕ್‌.

ಬಿಗ್‌ ಬಾಸ್‌ ಟಾಸ್ಕ್‌

ಬಿಗ್‌ ಬಾಸ್‌ ಟಾಸ್ಕ್‌ವೊಂದನ್ನ ನೀಡಿದ್ದಾರೆ. ಮನಸ್ಸಿನಲ್ಲಿ ಸಮಯ ಎಣಿಸಿ 12 ನಿಮಿಷ ಆದ ಬಳಿಕ ಬೆಲ್ ಬಾರಿಸಬೇಕು. ಈ ವೇಳೆ ಅವರ ಲೆಕ್ಕಾಚಾರ ತಪ್ಪಿಸಲು ಮನೆಯ ಸ್ಪರ್ಧಿಗಳು ಅಡ್ಡಿ ಉಂಟು ಮಾಡಬಹುದು. ಅಭಿಷೇಕ್‌ ಕಡೆಯಿಂದ ಕಾವ್ಯ ಹಾಗೂ ಗಿಲ್ಲಿ ಸಪೋರ್ಟರ್‌ ಆಗಿದ್ದರೆ, ಅಶ್ವಿನಿ ಅವರ ಪರ ಜಾಹ್ನವಿ ಹಾಗೂ ರಕ್ಷಿತಾ ಮಾತನಾಡಬೇಕಿತ್ತು. ಆದರೆ ಕೊನೆಗೆ 12 ನಿಮಿಷ ಸಮೀಪಕ್ಕೆ ಗಂಟೆ ಬಾರಿಸುವ ಸದಸ್ಯ ಕ್ಯಾಪ್ಟನ್ ಆಗಿ ಆಯ್ಕೆ ಆಗ್ತಾರೆ.

ಇದನ್ನೂ ಓದಿ: Bigg Boss Kannada 12: ಮಾತೆ, ರಾಜಮಾತೆ ಇವತ್ತು ನೀ ಸತ್ತೆ! ಗಿಲ್ಲಿ ಮಿಮಿಕ್ರಿಗೆ ಅಶ್ವಿನಿ ಸೈಲೆಂಟ್

ಗಿಲ್ಲಿ ಮಿಮಿಕ್ರಿಗೆ ಅಶ್ವಿನಿ ಸೈಲೆಂಟ್

`ಏನು ನೀವು ನಾಟಕ ಆಡ್ತಾ ಇದ್ದೀರಾ. ರಘು ಅವರು ನಿಮಗಿಂತ ಮೂರು ವರ್ಷಕ್ಕೆ ದೊಡ್ಡವರು. ಅಶ್ವಿನಿ ಎಷ್ಟು ಚೆನ್ನಾಗಿ ಇದೆ ಹೆಸರು. ಅಶ್ವಿನಿ ಬಾ, ಹೋಗು ಅಂದರೆ ತಪ್ಪು. ಆದರೆ ಹೋಗಿ ಬನ್ನಿ ಅಂದರು ಅವರು. ಅದರಲ್ಲೇನಿದೆ ತಪ್ಪು? ನಾನು ಏನಾದರೂ ನಿಮಗಿಂತ ದೊಡ್ಡವನಾಗಿದ್ರೆ ಅಶ್ವಿನಿ ಅಂತಾನೇ ಕರೆಯುತ್ತಿದ್ದೆ. ಏನ್ರಿ ಇವಾಗ? ನನ್ನ ಕಣ್ಣನ್ನೇ ನೋಡಿ, ನಿಮ್ಮ ಜೊತೆನೇ ಮಾತಾಡ್ತಾ ಇರೋದು. ಮಾತೆ, ರಾಜಮಾತೆ ಇವತ್ತು ನೀ ಸತ್ತೆ ಎಂದು' ಗಿಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: Bigg Boss Kannada 12: ಅಶ್ವಿನಿ ಬಗ್ಗೆಯೇ ನೆಗೆಟಿವ್‌ ಕಮೆಂಟ್‌; ಧ್ರುವಂತ್ ಡಬಲ್‌ ಗೇಮ್‌!

`ರಘು ಅವರು ನಿಮ್ಮನ್ನ ಅಶ್ವಿನಿ ಅಲ್ಲದೇ ಆಶು ಅಂತ ಕರೆಯಬೇಕಿತ್ತಾ? ಅಶ್ವಿನಿ ಮೇಡಮ್‌, ನಿಮ್ಮ ಹೆಸರಿನ ಮುಂದೆ A ಮುಂಚೆ ಇದ್ದಿದ್ರೆ, A ಅಶ್ವಿನಿ ಅಂತ ಕರೆಯುತ್ತಾ ಇದ್ವಿ. ಗೇಟ್‌ ಹತ್ರ ಬಂದು ಮನೆಗೆ ಹೋಗ್ತೀನಿ ಹೋಗ್ತೀನಿ ಅಂದ್ರೆ ಹೋಗಿ. ನಾವೇನು ಬೇಡ ಅಂತ ನಿಮ್ಮನ್ನ ಹಿಡಿದುಕೊಂಡು ಕೂತಿದ್ದೀವಾ? ಎಂದು ಗಿಲ್ಲಿ ನೇರವಾಗಿ ಅಶ್ವಿನಿಗೆ ಹೇಳಿದ್ದಾರೆ. ನಿನ್ನ ಅಂಥವರನ್ನ ಎಷ್ಟು ಜನ ನೋಡಿಲ್ಲ ಎಂದು ಅಶ್ವಿನಿ ಎದುರು ವಾದಿಸಿದ್ದಾರೆ. ಅದಕ್ಕೆ ಗಿಲ್ಲಿ ಖಡಕ್‌ ಆಗಿಯೇ, ಕಾಲು ಮೇಲು ಕಾಲು ಹಾಕಿಕೊಂಡು, ನನ್ನಂಥವರ ನೋಡಿರಬಹುದು, ಆದರೆ ನನ್ನ ನೋಡಿಲ್ಲ' ಎಂದು ಆವಾಜ್‌ ಹಾಕಿದ್ದಾರೆ.

ಸೂರಜ್‌ ಉತ್ತಮ, ಅಶ್ವಿನಿ ಕಳಪೆ!

ಬಹುತೇಕ ಮನೆಯವರೆಲ್ಲರೂ ಸೂರಜ್‌ ಅವರನ್ನೇ ಉತ್ತಮ ಎಂದು ಆಯ್ಕೆ ಮಾಡಿದ್ದಾರೆ. ಸತತ ಎರಡನೇ ಬಾರಿ ಅಶ್ವಿನಿ ಕಳಪೆಯಾದರು. ಕ್ಯಾಪ್ಟನ್ಸಿ ಟಾಸ್ಕ್‌ ಬಿಟ್ಟು ಕೊಟ್ಟಿದ್ದಕ್ಕಾಗಿ, ಮನೆಯಲ್ಲಿ ಕಿರುಚಾಟದ ವಿಚಾರಕ್ಕೆ, ಕಳಪೆ ಕೊಟ್ಟರು ಸದಸ್ಯರು.