ಬಿಗ್ ಬಾಸ್ ಕನ್ನಡ ಸೀಸನ್ 12ರ ಮಹಾಯಾನಕ್ಕೆ ಇನ್ನೇನು ಕೆಲವೇ ಕ್ಷಣಗಳಲ್ಲಿ ತೆರೆಬೀಳಲಿದೆ. 112 ದಿನಗಳ ಭರ್ಜರಿ ಗೇಮ್ ಮುಕ್ತಾಯವಾಗಲಿದ್ದು, ಉಳಿದ ಆರು ಸ್ಪರ್ಧಿಗಳಲ್ಲಿ ಎಲಿಮಿನೇಟ್ ಆಗೋದ್ಯಾರು ಎಂಬ ಕುತೂಹಲ ವೀಕ್ಷಕರಲ್ಲಿದೆ. ಸದ್ಯ ಮನೆಯೊಳಗೆ ಧನುಷ್, ಗಿಲ್ಲಿ ನಟ, ಅಶ್ವಿನಿ ಗೌಡ, ರಘು, ಕಾವ್ಯ ಮತ್ತು ರಕ್ಷಿತಾ ಶೆಟ್ಟಿ ಫಿನಾಲೆ ಸೀಟ್‌ನಲ್ಲಿದ್ದಾರೆ. ಅವರಲ್ಲಿ ಗೆಲ್ಲೋದು ಯಾರು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಈ ಸೀಸನ್‌ನ ಮಾಜಿ ಸ್ಪರ್ಧಿಯೊಬ್ಬರು ಫಿನಾಲೆ ಕಂಟೆಸ್ಟಂಟ್‌ಗಳಲ್ಲಿ ವೋಟ್ ಮಾಡುವ ಮೂಲಕ ಗಮನಸೆಳೆದಿದ್ದಾರೆ.
ಮೂವರಿಗೆ ವೋಟ್ ಮಾಡಿದ ಮಂಜು ಭಾಷಿಣಿ
ಹೌದು, ಈ ಸೀಸನ್‌ನಲ್ಲಿ ಸ್ಪರ್ಧಿಯಾಗಿ ಕಿರುತೆರೆ ನಟಿ ಮಂಜು ಭಾಷಿಣಿ ಅವರು ಆಗಮಿಸಿದ್ದರು. 21 ದಿವಸ ಬಿಗ್ ಬಾಸ್ ಮನೆಯಲ್ಲಿದ್ದು, ಅವರು ಎಲಿಮಿನೇಟ್ ಆಗಿದ್ದರು. ಇದೀಗ ಅವರು ತಮ್ಮ ನೆಚ್ಚಿನ ಮೂವರಿಗೆ ವೋಟ್ ಮಾಡಿದ್ದಾರೆ. ಜಿಯೋ ಹಾಟ್‌ಸ್ಟಾರ್ ಆಪ್‌ನಲ್ಲಿ ಒಬ್ಬರಿಗೆ 99 ವೋಟ್ ಮಾಡುವ ಅವಕಾಶ ಇರುತ್ತದೆ. ಹಾಗಾಗಿ, ಮಂಜು ಭಾಷಿಣಿ ಅವರು ಒಬ್ಬ ಸ್ಪರ್ಧಿಗೆ ತಲಾ 33 ಎಂಬಂತೆ ಒಟ್ಟು 99 ವೋಟ್‌ಗಳನ್ನು ಮೂರು ಮಂದಿ ಹಾಕಿದ್ದಾರೆ. ಆ ಮೂರು ಮಂದಿ ಯಾರು? ಅವರಿಗೆ ವೋಟ್ ಮಾಡಲು ಕಾರಣವೇನು? ಮುಂದೆ ಓದಿ.
Sri Gandhada Gudi Serial: ʻಬಿಗ್ ಬಾಸ್ʼನಿಂದ ಎಲಿಮಿನೇಟ್ ಆಗಿದ್ದ ಮಂಜು ಭಾಷಿಣಿ ಈಗ ಕಿರುತೆರೆಗೆ ಎಂಟ್ರಿ
ಧನು, ಗಿಲ್ಲಿ ರಕ್ಷಿತಾಗೆ ವೋಟ್
ಈ ಸೀಸನ್‌ನ ಫೈನಲಿಸ್ಟ್‌ಗಳಾಗಿರುವ ಗಿಲ್ಲಿ ನಟ, ಧನುಷ್ ಮತ್ತು ರಕ್ಷಿತಾಗೆ ಮಂಜು ಭಾಷಿಣಿ ಅವರು ತಲಾ 33 ವೋಟ್‌ಗಳನ್ನು ಹಾಕಿದ್ದಾರೆ. "ನನ್ನ ಅಮೂಲ್ಯವಾದ 99 ಮತಗಳು ಈ ಮೂವರಿಗೆ ಸಮವಾಗಿ… ಇದ್ದ ಮೂರು ವಾರಗಳಲ್ಲಿ ನನಗೆ ಅತ್ಯಂತ ಪ್ರೀತಿ ಪಾತ್ರರಾಗಿದ್ದವರಲ್ಲಿ ಈ ಮೂವರು ಈಗ ಬಿಗ್ ಬಾಸ್ 12 ರ ಫೈನಲ್ ಸ್ಪರ್ಧಿಗಳು… ಇವರಲ್ಲಿ ಯಾರೇ ಗೆದ್ದರೂ ಸಂತೋಷ…" ಎಂದು ಹೇಳಿದ್ದಾರೆ ಮಂಜು ಭಾಷಿಣಿ.
ಮಂಜು ಭಾಷಿಣಿ ಇನ್‌ಸ್ಟಾಗ್ರಾಮ್ ಪೋಸ್ಟ್
ನೀಡಿದ ಕಾರಣವೇನು?
"ಗಿಲ್ಲಿ ಬದುಕಿನ ಸೂಕ್ಷ್ಮತೆಯ ಬಲ್ಲ.. ಮಾತಿನಮಲ್ಲ… ಧನುಷ್, ಸರಳ... ವಿನಮ್ರ… ಧೀರ-ಶೂರ.. ಜೊತೆಗೊಂದಿಷ್ಟು ಸಂಸ್ಕಾರ.. ರಕ್ಷಿತಾ, ಪುಟ್ಟ ಪಟಾಕಿ ಪ್ಯಾಕೇಜ್.. ಸೈಲೆಂಟ್ & ವಯಲೆಂಟ್ ಟಗರು ಪುಟ್ಟಿ.. ಮೂವರಿಗೂ ಶುಭವಾಗಲಿ…" ಎಂದು ಮಂಜು ಭಾಷಿಣಿ ಪೋಸ್ಟ್ ಹಾಕಿಕೊಂಡಿದ್ದಾರೆ.
ನಿನ್ನೆ (ಜನವರಿ 17) ಪ್ರೀ - ಫಿನಾಲೆ ಸಂಚಿಕೆ ಪ್ರಸಾರವಾಯಿತು. ಈ ಸಂಚಿಕೆಯಲ್ಲಿ ಶುಕ್ರವಾರ (ಜನವರಿ 16) ಮಧ್ಯರಾತ್ರಿ 12 ಗಂಟೆವರೆಗೂ ದಾಖಲಾದ ವೋಟಿಂಗ್ ನಂಬರ್ಸ್ ಬಗ್ಗೆ ಮಾಹಿತಿ ನೀಡಲಾಗಿದೆ. ಕಳೆದ ವರ್ಷ ವಿನ್ನರ್‌ಗೆ 5+ ಕೋಟಿ ವೋಟ್ಸ್ ಸಿಕ್ಕಿತ್ತು. ಆದರೆ ಈ ವರ್ಷ ಮೊದಲ ಸ್ಥಾನಕ್ಕೆ 37+ ಕೋಟಿ ಮತಗಳು ಆಗಲೇ ಬಂದಿವೆ. ಭಾನುವಾರ ಬೆಳಗ್ಗೆ 10 ಗಂಟೆವರೆಗೂ ವೋಟಿಂಗ್ ಲೈನ್ಸ್ ಓಪನ್ ಇರಲಿದೆ. ಹಾಗಾಗಿ, ವೋಟಿಂಗ್ ಪ್ರಮಾಣ ಇನ್ನೂ ಹೆಚ್ಚಾಗಲಿದೆ.