ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sri Gandhada Gudi Serial: ʻಬಿಗ್‌ ಬಾಸ್‌ʼನಿಂದ ಎಲಿಮಿನೇಟ್‌ ಆಗಿದ್ದ ಮಂಜು ಭಾಷಿಣಿ ಈಗ ಕಿರುತೆರೆಗೆ ಎಂಟ್ರಿ

Manju Bhashini In Sri Gandhada Gudi Serial: ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ಮನೆಯಿಂದ ಹೊರಬಂದ ಬಳಿಕ, ಕಲರ್ಸ್‌ ಕನ್ನಡದ ಜನಪ್ರಿಯ ಧಾರಾವಾಹಿ 'ಶ್ರೀ ಗಂಧದ ಗುಡಿ'ಗೆ ಮಂಜು ಭಾಷಿಣಿ ಕಾಲಿಟ್ಟಿದ್ದಾರೆ. ಇವರು ಯಾವ ಪಾತ್ರ ಮಾಡಲಿದ್ದಾರೆ ಎಂಬುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಕಿರುತೆರೆ ವೀಕ್ಷಕರಿಗೆ ಗುಡ್‌ ನ್ಯೂಸ್‌ ನೀಡಿದ ʻಬಿಗ್‌ ಬಾಸ್‌ʼ ಮಂಜು ಭಾಷಿಣಿ

-

Avinash GR
Avinash GR Nov 23, 2025 6:55 PM

ಕಲರ್ಸ್‌ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ʻಶ್ರೀ ಗಂಧದ ಗುಡಿʼಯಲ್ಲಿ ಹೊಸ ಟ್ವಿಸ್ಟ್‌ ಸಿಕ್ಕಿದೆ. ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರಲ್ಲಿ ಮೂರನೇ ವಾರದಲ್ಲಿ ಎಲಿಮಿನೇಟ್‌ ಆಗಿರುವ ನಟಿ ಮಂಜು ಭಾಷಿಣಿ ಅವರು ಇದೀಗ ʻಶ್ರೀ ಗಂಧದ ಗುಡಿʼ ಸೀರಿಯಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಉತ್ತಮ ಕಥಾಹಂದರ, ಆಕರ್ಷಕ ತಾರಾಗಣದಿಂದ ಫೇಮಸ್‌ ಆಗಿರುವ ಈ ಸೀರಿಯಲ್‌ಗೆ ಮಂಜು ಭಾಷಿಣಿ ಏಕೆ ಎಂಟ್ರಿ ನೀಡಿದ್ದಾರೆ? ಯಾವ ಪಾತ್ರ ಮಾಡುತ್ತಿದ್ಧಾರೆ? ಮುಂದೆ ಓದಿ.

ʻಶ್ರೀ ಗಂಧದ ಗುಡಿʼ ಧಾರಾವಾಹಿಯಲ್ಲಿ ಏನು ಪಾತ್ರ?

ಕಲರ್ಸ್‌ ಕನ್ನಡದ ‘ಶ್ರೀ ಗಂಧದ ಗುಡಿ’ ಧಾರಾವಾಹಿಯ ಕಥೆಯಲ್ಲಿ ಸದ್ಯ ಮದುವೆ, ಅದರ ಸುತ್ತಲಿನ ಸಂಘರ್ಷಗಳು ನಡೆಯುತ್ತಿವೆ. ಕುಟುಂಬಗಳ ನಡುವಿನ ಬಾಂಧವ್ಯದ ಎಳೆ ಇಲ್ಲಿ ಮುಖ್ಯವಾಗಿವೆ. ದಿನದಿನಕ್ಕೆ ಹಲವು ಟ್ವಿಸ್ಟ್‌ಗಳನ್ನು ಪಡೆದುಕೊಳ್ಳುತ್ತಿರುವ ಈ ಸೀರಿಯಲ್‌ ಇದೀಗ ಮಂಜು ಭಾಷಿಣಿ ಅವರ ಎಂಟ್ರಿಯಿಂದಾಗಿ ಇನ್ನಷ್ಟು ರೋಚಕತೆ ಹೆಚ್ಚಿಸಿಕೊಂಡಿದೆ. ಕಥೆಯಲ್ಲಿ ಹೊಸ ವಿಷಯ ಹೇಳುವುದಕ್ಕೆ ಬರಲಿದ್ದಾರೆಯೇ? ಹರಿಕಥೆಯೊಂದರ ಕಥೆಗಳನ್ನೇ ಹಂಚಿಕೊಳ್ಳಲಿದ್ದಾರಾ? ಎಲ್ಲದಕ್ಕೂ ʻಶ್ರೀ ಗಂಧದ ಗುಡಿʼ ಸೀರಿಯಲ್‌ನ ಹೊಸ ಸಂಚಿಕೆಗಳಲ್ಲಿ ಉತ್ತರ ಸಿಗಲಿದೆ.

BBK 12: ಬಿಗ್ ಬಾಸ್​ನಲ್ಲಿ ಸಿಕ್ಕ ಸಂಭಾವನೆ ಎಷ್ಟು?, ರಿವೀಲ್ ಮಾಡಿದ ಮಂಜು ಭಾಷಿಣಿ

ಕಿರುತೆರೆಗೆ ಮರಳಿದ ನಟಿ ಮಂಜು ಭಾಷಿಣಿ

ಮಂಜು ಭಾಷಿಣಿ ಅವರು ಕಳೆದ 20 ವರ್ಷಗಳಿಂದ ಕಿರುತೆರೆಯಲ್ಲಿ ಸಕ್ರಿಯವಾಗಿದ್ದಾರೆ. ಸಿಲ್ಲಿ ಲಲ್ಲಿ ಇವರ ನಟನೆಯ ಫೇಮಸ್‌ ಸೀರಿಯಲ್‌ ಆಗಿತ್ತು. ಅದರಲ್ಲಿ ಅವರು ಸಮಾಜ ಸೇವಕಿ ಲಲಿತಾಂಬ ಎಂಬ ಪಾತ್ರ ಮಾಡಿದ್ದರು. ಸದ್ಯ ಎಲ್ಲದರಿಂದ ಬ್ರೇಕ್‌ ಪಡೆದುಕೊಂಡಿದ್ದ ಮಂಜು ಭಾಷಿಣಿ ಅವರು ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ಸ್ಪರ್ಧಿಯಾಗಿದ್ದರು. ಆದರೆ ಅಲ್ಲಿ ಬರೀ ಮೂರು ವಾರಗಳಷ್ಟೇ ಇದ್ದ ಅವರು ಎಲಿಮಿನೇಟ್ ಆಗಿದ್ದರು. ಬಿಗ್‌ ಬಾಸ್‌ ಮನೆಯಿಂದ ಎಲಿಮಿನೇಟ್‌ ಆದಮೇಲೆ ಇದೇ ಮೊದಲ ಬಾರಿಗೆ ಶ್ರೀ ಗಂಧದ ಗುಡಿ ಮೂಲಕ ಕಿರುತೆರೆಗೆ ಮರಳಿದ್ದಾರೆ ಮಂಜು ಭಾಷಿಣಿ.

BBK 12: ಬಿಗ್ ಬಾಸ್​ನಲ್ಲಿ ಶಾಕಿಂಗ್ ಎಲಿಮಿನೇಷನ್: ಮಂಜು ಭಾಷಿಣಿ-ಅಶ್ವಿನಿ ಔಟ್

ಭೂಮಿ ಗೀತ, ಅಮ್ಮಾವ್ರ ಗಂಡ, ಗಂಡ ಹೆಂಡ್ತಿ ಮುಂತಾದ ಸಿನಿಮಾಗಳಲ್ಲೂ ನಟಿಸಿರುವ ಮಂಜು ಭಾಷಿಣಿ, ಈಚೆಗೆ ಜೀ ಕನ್ನಡದ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಬಡ್ಡಿ ಬಂಗಾರಮ್ಮ ಎಂಬ ಖಳನಾಯಕಿ ಪಾತ್ರದಲ್ಲಿಯೂ ಅವರು ಮಿಂಚಿದ್ದರು. ಈಗ ಶ್ರೀ ಗಂಧದ ಗುಡಿಯಲ್ಲಿ ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕು.