ʻಬಿಗ್ ಬಾಸ್ʼ ಕನ್ನಡ ಸೀಸನ್ 12ರ ಫಿನಾಲೆಗೆ ಕೆಲವೇ ಕೆಲವು ಕ್ಷಣಗಳು ಮಾತ್ರ ಬಾಕಿ ಇವೆ. ಯಾರು ವಿನ್ನರ್ ಆಗಲಿದ್ದಾರೆ ಎಂಬ ಕುತೂಹಲದಲ್ಲಿ ವೀಕ್ಷಕರಿದ್ದಾರೆ. 11 ಸೀಸನ್‌ಗಳಿಗಿಂತ ಈ ಸೀಸನ್ ಬೇರೆಯದೇ ಲೆವೆಲ್‌ನಲ್ಲಿ ಇದೆ. ಅಷ್ಟೊಂದು ಕ್ರೇಜ್ ಈ ಸಲ ಸಿಕ್ಕಿದೆ. ಸದ್ಯ ಮನೆಯೊಳಗೆ ಟಾಪ್ 6ರಲ್ಲಿ ಇರುವ ರಘು, ಕಾವ್ಯ, ರಕ್ಷಿತಾ ಶೆಟ್ಟಿ ಬಗ್ಗೆ ಬಿಗ್ ಬಾಸ್ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ಮೂವರು ಸ್ಪರ್ಧಿಗಳ 5 ಗುಣಗಳನ್ನು ಹಂಚಿಕೊಂಡಿದ್ದಾರೆ.
ರಘುಗೆ ಬಿಗ್ ಬಾಸ್ ಹೇಳಿದ್ದೇನು?
ಮ್ಯುಟೆಂಟ್ ರಘು ಅವರಿಗೆ ಮಗುಮನಸ್ಸಿನ ಹೃದಯವಂತ ಎಂದು ಬಿಗ್ ಬಾಸ್ ಕರೆದಿದ್ದಾರೆ.
- ಕುಕಿಂಗ್‌ನಲ್ಲಿ ಮಾಸ್ಟರ್
- ಹೊರಗಷ್ಟೇ ಗಟ್ಟಿ ಮನಸ್ಸು ಮಗು ಥರ
- ಟಾಸ್ಕ್ ವಿಷ್ಯಕೆ ಬಂದರೆ ಹೀರೋ
- ಹೆಣ್ಮಕ್ಕಳ ಫೇವರೆಟ್ ಅಣ್ಣ
- ಮನೆ ಮಂದಿಗೆ ಫ್ರೀ ಜಿಮ್ ಟ್ರೇನರ್
ಕಾವ್ಯಗೆ ಬಿಗ್ ಬಾಸ್ ಹೇಳಿದ್ದೇನು?
ಕಾವ್ಯ ಅವರನ್ನು ನಗೆ ಮಲ್ಲಿಗೆ, ಪಕ್ಕದ್ಮನೆ ಹುಡುಗಿ ಎಂದು ಬಿಗ್ ಬಾಸ್ ಕರೆದಿದ್ದಾರೆ.
- ಫ್ರೆಂಡ್‌ಶಿಪ್ ಅಂದ್ರೆ ಪ್ರಾಣ
- ಎಲ್ಲರ ಮಾತನ್ನೂ ಸಿರೀಯಸ್ಸಾಗಿ ತಗೋತಾರೆ
- ಎಷ್ಟೇ ನೋವಿದರೂ ಮುಖದ ನಗು ಮಾಸೋದಿಲ್ಲ
- ರೇಗಿಸಿದ್ರೆ ಮಾತ್ರ ಸುಮ್ನಿರೋದಿಲ್ಲ
- ರೆಸ್ಪೆಕ್ಟ್ ಕೊಟ್ಟು ರೆಸ್ಪೆಕ್ಟ್ ಪಡ್ಕೊಳೋ ಪಾಲಿಸಿ
ರಕ್ಷಿತಾಗೆ ಬಿಗ್ ಬಾಸ್ ಹೇಳಿದ್ದೇನು?
ರಕ್ಷಿತಾ ಶೆಟ್ಟಿ ಅವರ ವ್ಯಕ್ತಿತ್ವವನ್ನು ನೇರ ಮಾತು, ಖಾರ ಮಾತು ಎಂದು ಬಿಗ್ ಬಾಸ್ ಬಣ್ಣಿಸಿದ್ದಾರೆ.
- ಚೋಟ್‌ಮೆಣಸಿನ ಕಾಯಿ, ಹೆವಿ ಖಾರ
- ಅಡುಗೆ ಮಾಡೋಕೆ ಎವರ್ ರೆಡಿ
- ತುಂಬಾ ಫ್ರೆಂಡ್ಲಿ, ಅಷ್ಟೇ ಪೊಸೆಸ್ಸಿವ್
- ತನ್ನವರನ್ನು ಎಂದೂ ಬಿಟ್ಕೊಡಲ್ಲ
- ಬೇಜಾರಿಗೆ ಡೋಂಟ್ ಕೇರ್, ಕಾಳಜಿಗೆ ಹಾಜರ್