ʻದಿ ಡೆವಿಲ್ʼ ಚಿತ್ರದಲ್ಲಿ ನಟಿಸಿದ್ದರ ಬಗ್ಗೆ ಖುಷಿಯಾಗಿರುವ ಗಿಲ್ಲಿ ನಟ; ʻಬಿಗ್ ಬಾಸ್ʼ ಮನೆಯ ಸ್ಪರ್ಧಿಗಳ ಜೊತೆ ಸಂತಸ ಹಂಚಿಕೊಂಡಿದ್ದ ʻಮಾತಿನ ಮಲ್ಲʼ
Gilli Nata in The Devil: ಬಿಗ್ ಬಾಸ್ ಮನೆಯ ಪ್ರಬಲ ಸ್ಪರ್ಧಿ ಗಿಲ್ಲಿ ನಟ, ದರ್ಶನ್ ಅಭಿನಯದ 'ದಿ ಡೆವಿಲ್' ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಬಿಡುಗಡೆಯ ಬಗ್ಗೆ ಅವರು ಮನೆಯೊಳಗೆ ದಿನ ಎಣಿಸುತ್ತಿದ್ದರು ಎಂದು ಸ್ಪಂದನಾ ತಿಳಿಸಿದ್ದಾರೆ. ಅಲ್ಲದೆ, ತಮ್ಮ ಪಾತ್ರ ಚಿಕ್ಕದಾದರೂ ಇಂಟರ್ವಲ್‌ನಲ್ಲಿ ದೊಡ್ಡ ಟ್ವಿಸ್ಟ್ ನೀಡಲಿದೆ ಎಂದು ಗಿಲ್ಲಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು ಎಂದು ಸ್ಪಂದನಾ ತಿಳಿಸಿದ್ದಾರೆ.
-
ಬಿಗ್ ಬಾಸ್ ಮನೆಯಿಂದ ಹೊರಬಂದ ಬಹುತೇಕ ಸ್ಪರ್ಧಿಗಳು ಈ ಬಾರಿ ಗೆಲ್ಲೋದು ಗಿಲ್ಲಿ ನಟ ಅಂತ ಹೇಳುತ್ತಿದ್ದಾರೆ. ಅಷ್ಟರಮಟ್ಟಿಗೆ ಗಿಲ್ಲಿ ಬಿಗ್ ಬಾಸ್ ಮನೆಯೊಳಗೆ ಹವಾ ಮೆಂಟೇನ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಹೊರಗಡೆ ಕೂಡ ಗಿಲ್ಲಿ ನಟಗೆ ತುಂಬಾ ದೊಡ್ಡ ಬೆಂಬಲ ಇದೆ. ಇನ್ನು, ಗಿಲ್ಲಿ ನಟ ಬಿಗ್ ಬಾಸ್ ಮನೆಯೊಳಗೆ ಇರುವಾಗಲೇ ಅವರ ದಿ ಡೆವಿಲ್ ಸಿನಿಮಾ ರಿಲೀಸ್ ಆಗಿತ್ತು. ಇದೀಗ ಆ ಬಗ್ಗೆ ಒಂದು ಅಪ್ಡೇಟ್ ಸಿಕ್ಕಿದೆ.
ಎಲ್ಲರ ಬಳಿಯೂ ಹೇಳಿದ್ದ ಗಿಲ್ಲಿ
ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ದಿ ಡೆವಿಲ್ ಸಿಇಮಾದಲ್ಲಿ ನಟಿಸಿರುವ ಬಗ್ಗೆ ಬಿಗ್ ಬಾಸ್ ಮನೆಯೊಳಗೆ ಇರುವ ಸ್ಪರ್ಧಿಗಳಿಗೆ ಗಿಲ್ಲಿ ನಟ ಹೇಳಿಕೊಂಡಿದ್ದರು ಎಂಬ ಮಾಹಿತಿ ಸಿಕ್ಕಿದೆ. ಭಾನುವಾರವಷ್ಟೇ ಮನೆಯಿಂದ ಹೊರಗೆ ಬಂದಿರುವ ಸ್ಪಂದನಾ ಅವರು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದು, ಈ ವಿಚಾರದ ಬಗ್ಗೆ ಹೇಳಿಕೊಂಡಿದ್ದಾರೆ. "ದಿ ಡೆವಿಲ್ ಸಿನಿಮಾದ ಬಗ್ಗೆ ಗಿಲ್ಲಿ ಹೇಳ್ತಿದ್ದ. ದಿನಗಳನ್ನು ಲೆಕ್ಕ ಹಾಕಿ, ಡೆವಿಲ್ ಸಿನಿಮಾದ ರಿಲೀಸ್ ಆಗಿರಬಹುದು ಎಂದು ನಮ್ಮ ಜೊತೆ ಮಾತನಾಡುತ್ತಿದ್ದ" ಎಂದು ಸ್ಪಂದನಾ ಹೇಳಿದ್ದಾರೆ.
The Devil Movie: `ಡೆವಿಲ್' ಸಿನಿಮಾದಲ್ಲಿ ಗಿಲ್ಲಿ ನಟನ ಪರ್ಫಾರ್ಮೆನ್ಸ್ ಹೇಗಿದೆ? ನಟ ಚಂದು ಗೌಡ ಮನದಾಳದ ಮಾತು!
"ಡೆವಿಲ್ ಸಿನಿಮಾದಲ್ಲಿ ನನ್ನದು ಚಿಕ್ಕ ಪಾತ್ರ. ಆದರೆ ಇಂಟರ್‌ವಲ್‌ನಲ್ಲಿ ಟ್ವಿಸ್ಟ್ ಇದೆ ಎಂದೆಲ್ಲಾ ನಮ್ಮ ಬಳಿ ಹಂಚಿಕೊಂಡಿದ್ದ. ಒಟ್ನಲ್ಲಿ ಅವನು ಖುಷಿಯಾಗಿದ್ದ. ಒಮ್ಮೆ ಮನೆಯೊಳಗೆ ಬಂದ ಅತಿಥಿ ಯಾರೋ ಒಬ್ಬರು ಈ ಗಿಲ್ಲಿಗೆ ʻನಿಮ್ಮ ಡೆವಿಲ್ ಸಿನಿಮಾ ನೋಡಿದ್ವಿʼ ಅಂತ ಹೇಳಿದ್ದರು. ಆಗ ಅದನ್ನು ನಮಗೆಲ್ಲಾ ಹೇಳಿದ್ದ ಗಿಲ್ಲಿ, ʻನಾನು ಹೇಳಿರಲಿಲ್ಲವಾʼ ಅಂತ ನಮಗೆ ಹೇಳುತ್ತಿದ್ದ. ಅವನು ತುಂಬಾ ಹೆಮ್ಮೆ ಪಡ್ತಿದ್ದ" ಎಂದು ಸ್ಪಂದನಾ ಹೇಳಿದ್ದಾರೆ.
Chowkidar Movie : ಗಿಲ್ಲಿ ನಟ ನಟಿಸಿರೋ ಮತ್ತೊಂದು ಸಿನಿಮಾ ರಿಲೀಸ್ ಡೇಟ್ ಅನೌನ್ಸ್! ಪಾತ್ರ ಏನು?
ಮಾಳುಗೆ ಕೌಂಟರ್ ಕೊಟ್ಟ ಸ್ಪಂದನಾ
ಇನ್ನು, ಬಿಗ್ ಬಾಸ್‌ನಿಂದ ಎಲಿಮಿನೇಟ್ ಆಗಿದ್ದ ಮಾಳು ನಿಪನಾಳ್ ಅಸಮಾಧಾನ ವ್ಯಕ್ತಪಡಿಸಿದ್ದರು. ಆ ಬಗ್ಗೆ ಮಾತಾಡಿರುವ ಸ್ಪಂದನಾ, "ಮಾಳು ಅಣ್ಣ ಈ ಥರ ಹೇಳಿದ್ದಾರೆ ಎಂಬುದೇ ನನಗೆ ಅಚ್ಚರಿ. ಅವರು ನಾಮಿನೇಟ್ ಆದಾಗೆಲ್ಲಾ, ಅಪ್ಪಿ ನಾಳೆ ನಾನೇ ಹೋಗೋದು ಅನ್ಸತ್ತೆ. ನನ್ನ ಹೆಸರೇ ಬರುತ್ತೆ ಅಂತಿದ್ರು. ನನ್ನ ಬಟ್ಟೆಗಳು ಬಂದಿಲ್ಲ, ನಾನೇ ಹೋಗೋದು ಅನ್ಸತ್ತೆ ಎಂದು ಹೇಳುತ್ತಿದ್ದರು. ಆದರೆ ಹೊರಗಡೆ ಬಂದಮೇಲೆ ಈ ಥರ ಅವರು ಹೇಗೆ ಹೇಳಿದ್ರು ಎಂಬುದು ನನಗೆ ಗೊತ್ತಿಲ್ಲ. ಆದರೆ ಅವರು ಕೂಡ ಉತ್ತಮ ಆಟಗಾರ, ಸ್ಟ್ರಾಂಗ್ ಕಂಟೆಸ್ಟಂಟ್. ಅವರಿಗೆ ಉತ್ತಮವಾದ ಫ್ಯಾನ್ಸ್ ಬೆಂಬಲ ಇತ್ತು" ಎಂದು ಹೇಳಿದ್ದಾರೆ.