ಬಿಗ್ ಬಾಸ್ 12ರ ಮನೆಯೊಳಗೆ ಈಚೆಗೆ ಅಭಿಮಾನಿಗಳೆಲ್ಲಾ ಹೋಗಿದ್ದರು. ತಮ್ಮ ನೆಚ್ಚಿನ ಸ್ಪರ್ಧಿಗಳು ಬಂದಾಗ, ಅವರ ಎದುರು ಫ್ಯಾನ್ಸ್ ಜೋರಾಗಿ ಕೂಗಿದ್ದು, ನಂತರ ಸ್ಪರ್ಧಿಗಳು ಮನೆಗೆ ಬಂದ ಅಭಿಮಾನಿಗಳ ಎದುರು ಪಂಚಿಂಗ್ ಡೈಲಾಗ್ ಹೇಳಿದ್ದು ಎಲ್ಲವನ್ನು ವೀಕ್ಷಕರು ನೋಡಿದ್ದಾರೆ. ಆದರೆ ಅಲ್ಲಿಗೆ ಬಹುತೇಕರು ಗಿಲ್ಲಿ ನಟನ ಅಭಿಮಾನಿಗಳು ಎಂಬುದು ಲೇಟೆಸ್ಟ್ ಅಗಿ ಗೊತ್ತಾಗಿರುವ ಮಾಹಿತಿ. ಮತ್ತೊಂದು ವಿಶೇಷ ಏನಪ್ಪ ಅಂದರೆ, ಗಿಲ್ಲಿ ನಟ ಹೊರಗೆ ಬಂದಾಗ, ಆರು ಮಂದಿ ಬೌನ್ಸರ್‌ಗಳನ್ನು ನೇಮಕ ಮಾಡಲಾಗಿತ್ತು ಎಂಬುದು.
ಅಭಿಮಾನಿ ಹೇಳಿದ ಸತ್ಯವಿದು
ಬಿಗ್ ಬಾಸ್ ಮನೆಯೊಳಗೆ ಹೋಗಿದ್ದ ಅಭಿಮಾನಿಯೊಬ್ಬರು ಈ ವಿಚಾರವನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. "ಮೊದಲು ಮೂರ್ನಾಲ್ಕು ಸ್ಪರ್ಧಿಗಳು ಬಂದಾಗ, ಇಬ್ಬರು ಬಾಡಿಗಾರ್ಡ್ಸ್‌ನ ನಿಲ್ಲಿಸಿದ್ದರು. ಗಿಲ್ಲಿ ನಟ ಬಂದಾಗ ಆರು ಜನ ಬಾಡಿಗಾರ್ಡ್ಸ್‌ನ ನಿಲ್ಲಿಸಿದ್ದರು. ಅಲ್ಲದೇ, ಗಿಲ್ಲಿ ಬರುವುದಕ್ಕೂ ಮುನ್ನ 45 ನಿಮಿಷ ನಮಗೆ ಹೇಗಿರಬೇಕು, ಹೇಗೆ ನಡೆದುಕೊಳ್ಳಬೇಕು ಎಂಬುದನ್ನೆಲ್ಲಾ ಹೇಳಿಕೊಟ್ಟಿದ್ದರು. ಗಿಲ್ಲಿ ಕ್ರೇಜ್ ಹೇಗಿದೆ ಎಂಬುದು ಬಿಗ್ ಬಾಸ್‌ಗೂ ಗೊತ್ತಿದೆ" ಎಂದು ಹೇಳಿದ್ದಾರೆ.
ಗಿಲ್ಲಿ ಗೆದ್ದು ಬರಬೇಕು
"ಅಶ್ವಿನಿ ಗೌಡ ಬಂದಾಗಲೇ, ಗಿಲ್ಲಿ ಗಿಲ್ಲಿ ಎಂದು ಕೂಗಿದ್ದರು. ನಂತರ ಗಿಲ್ಲಿ ಬಂದಾಗ ನೆಕ್ಸ್ಟ್ ಲೆವೆಲ್ ಕ್ರೇಜ್ ಇತ್ತು. ಗಿಲ್ಲಿ ನಟ ಎಲ್ಲರಿಗೂ ಶೇಕ್ ಹ್ಯಾಂಡ್ ಮಾಡಿದರು. ಡ್ಯಾನ್ಸ್ ಕೂಡ ಸಖತ್ ಆಗಿ ಮಾಡಿದರು. ನಿಜವಾಗಲೂ ಗಿಲ್ಲಿ ನಟ ಬಂದದ್ದನ್ನು ನೋಡಿದಾಗ, ಯಾವುದೋ ಸಿನಿಮಾ ಹೀರೋ ಬಂದಷ್ಟೇ ಖುಷಿ ಆಯ್ತು. ಆ ವ್ಯಕ್ತಿ ಅವತ್ತು ಕಾಮಿಡಿಯನ್ ಅನ್ನಿಸಲಿಲ್ಲ. ಹೀರೋ ಥರ ಇದ್ದರು. ಗಿಲ್ಲಿ ನಟ ಅವರು ಬಿಗ್ ಬಾಸ್ ಮನೆಗೆ ಹೋಗಿ, ಚಾನೆಲ್ ಮತ್ತು ಬಿಗ್ ಬಾಸ್ ಎರಡನ್ನೂ ನಂಬರ್ 1 ಮಾಡಿದ್ದಾರೆ. ಅವರು ಗೆದ್ದು ಬರಬೇಕು" ಎಂದು ಹೊಗಳಿದ್ದಾರೆ.
ಭವಿಷ್ಯ ನುಡಿದಿದ್ದ ಜಗ್ಗೇಶ್
ವರ್ಷಗಳ ಹಿಂದೆ ನಟ ಜಗ್ಗೇಶ್ ಅವರ ಬೇರೊಂದು ರಿಯಾಲಿಟಿ ಶೋನಲ್ಲಿ ಗಿಲ್ಲಿ ನಟನನ್ನು ಹೊಗಳಿದ್ದರು. "ಮುಂದಿನ ವರ್ಷ ಗಿಲ್ಲಿ ಛತ್ರಿ ಹಿಡಿಯೋಕೆ ಒಬ್ಬರನ್ನ ಇಟ್ಕೊಂಡು, ಜೊತೆಗೆ ನಾಲ್ಕು ಜನ ಬಾಡಿಗಾರ್ಡ್ ಹಾಕೊಂಡು ಓಡಾಡೋ ಸ್ಟೇಜ್‌ಗೆ ಬರ್ತಾನೆ" ಎಂದು ಹೇಳಿದ್ದರು. ಇದೀಗ ಆ ಮಾತು ನಿಜವಾಗುವ ಸಮಯ ಬಂದಿದೆ. ಈ ಬಾರಿ ಬಿಗ್ ಬಾಸ್ ವಿನ್ನರ್ ಆಗು ಸಾಧ್ಯತೆಗಳು ಗಿಲ್ಲಿ ಕಡೆಗೆ ಜಾಸ್ತಿ ಇವೆ ಎಂಬ ಮಾತುಗಳು ಕೇಳಿಬಂದಿವೆ.