ಬಿಗ್ ಬಾಸ್ (Bigg Boss Kannada 12) ಮನೆಯಲ್ಲೀಗ ಸೀಸನ್ 11ರ ಸ್ಪರ್ಧಿಗಳು ಗೆಸ್ಟ್ (Guest) ಆಗಿ ಬಂದಿದ್ದಾರೆ. ಬಂದಾಗಿನಿಂದ ಗಿಲ್ಲಿ ಹಾಗೂ ಗೆಸ್ಟ್‌ಗಳ ಮಧ್ಯೆ ವಾಗ್ವಾದ ತಾರಕ್ಕೇರಿದೆ. ವೀಕ್ಷಕರು ಗಿಲ್ಲಿಯ ವರ್ತನೆಗೂ ಹಾಗೂ ಅತಿಥಿಗಳ ನಡವಳಿಕೆಗೂ ಛೀಮಾರಿ ಹಾಕುತ್ತಿದ್ದಾರೆ. ರಜತ್, ಮಂಜು ಹಾಗೂ ಚೈತ್ರಾ ಎಷ್ಟೇ ಕೂಗಾಡಿದ್ರು ಗಿಲ್ಲಿ (Gilli Nata) ಮಾತ್ರ ತಲೆ ಕೆಡಿಸಿಕೊಳ್ತಿಲ್ಲ.ಇನ್ನು ಮಾಜಿ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ ಅತಿಥಿಗಳಾಗಿ ಹೋಗಿರುವುದು ಯಾಕೆ? ಅಂತ ವೀಕ್ಷಕರು ಪ್ರಶ್ನೆ ಇಡುತ್ತಿದ್ದಾರೆ. ಆದರೆ ನಿನ್ನೆಯ ಟಾಸ್ಕ್ ಆಡುವ ವೇಳೆ ಚೈತ್ರಾ (Chaithra) ಅವರು ತಾವು ಬಂದಿರುವ ಕಾರಣ ಬಗೆ ಬಾಯ್ತಪ್ಪಿ ಹೇಳಿರುವಂತಿದೆ.
'ಬಿಗ್ ಬಾಸ್' ಮನೆಗೆ ಬಂದ ಅತಿಥಿಗಳ ಮೇಲೆಯೇ ರಾಂಗ್ ಆದ ರಾಜಮಾತೆ!
ಚೈತ್ರಾ ಕುಂದಾಪುರ ಅವರು ಮನೆಯೊಳಗೆ ಇರುವ ಶಿಲಾಬಾಲಿಕೆಯ ಹೆಸರು ಏನು ಎಂದು ಕೇಳಿದ್ದಾರೆ. ಅದಕ್ಕೆ ಯಾರಿಂದಲೂ ಸರಿಯಾದ ಉತ್ತರ ಸಿಕ್ಕಿಲ್ಲ. ಆದರೂ ಚೈತ್ರಾ ಕುಂದಾಪುರ ಬಿಬಿ ಪ್ಯಾಲೇಸ್‌ನ ಸಿಬ್ಬಂದಿಗಳಿಗೆ ಉತ್ತರವನ್ನು ಕೇಳುತ್ತಲೇ ಇದ್ದರು.
ಈ ಮಧ್ಯೆ ಕಾವ್ಯಗೂ ಕೇಳಿದಾಗ, "ನೀವು ಕೇಳಿದ ಪ್ರಶ್ನೆಗೆ ನಮ್ಮ ಬಳಿ ಉತ್ತರವಿಲ್ಲ. ಇಲ್ಲಿ ಇರುವವರಿಗೆ ತಲೆಯಲ್ಲಿ ಬುದ್ದಿ ಇಲ್ಲ" ಎಂದು ಹೇಳಿದರು. ಅದನ್ನೇ ಪಾಯಿಂಟ್ ಔಟ್ ಮಾಡಿದ ಚೈತ್ರಾ, ಮನೆಯೊಳಗೆ ಇರುವ ಎಲ್ಲರೂ ಈ ಮಾತನ್ನು ರಿಪೀಟ್ ಮಾಡಬೇಕು.
ವೈರಲ್ ವಿಡಿಯೋ
ಆಗಲೇ ತಿಂಡಿ ತಿನ್ನುವುದಾಗಿ ಹೇಳಿದರು.ನಂತರ ಕಾವ್ಯ ಅವರು ಮನೆಯ ಸಿಬ್ಬಂದಿಗಳಿಗೆ ಈ ಮಾತನ್ನು ಹೇಳಿದಾಗ, ಅಭಿಷೇಕ್, ಸೂರಜ್, ಗಿಲ್ಲಿ ನಟ ಎಲ್ಲರೂ ಬಂದು ಚೈತ್ರಾ ಅವರ ಬಳಿ ಬಂದು, "ನೀವು ಕೇಳಿದ ಪ್ರಶ್ನೆಗೆ ನಮ್ಮ ಬಳಿ ಉತ್ತರವಿಲ್ಲ.
ನಮ್ಮ ತಲೆಯಲ್ಲಿ ಬುದ್ದಿ ಇಲ್ಲ
ನಮ್ಮ ತಲೆಯಲ್ಲಿ ಬುದ್ದಿ ಇಲ್ಲ" ಎಂದು ಹೇಳುತ್ತಾ ಹೋದರು. ಆದರೆ ಅಶ್ವಿನಿ ಗೌಡ ಅವರು ಮಾತ್ರ ಇದನ್ನು ಒಪ್ಪಿಕೊಳ್ಳಲಿಲ್ಲ. ನಾನು ಕ್ಷಮೆ ಕೇಳುತ್ತೇನೆ ವಿನಃ ಬುದ್ದಿ ಇಲ್ಲ ಎಂದೆಲ್ಲಾ ಹೇಳುವುದಿಲ್ಲ ಎಂದು ನೇರವಾಗಿ ಹೇಳಿದರು.ನಂತರ ಚೈತ್ರಾ ಕುಂದಾಪುರ ಅವರ ಬಳಿ ಹೋದ ಅಶ್ವಿನಿ, "ನೀವು ಕೇಳಿದ ಪ್ರಶ್ನೆಗೆ ನಮ್ಮ ಬಳಿ ಉತ್ತರ ಇಲ್ಲ. ಕ್ಷಮೆ ಇರಲಿ" ಎಂದರು. ಆದರೆ ಚೈತ್ರಾ ಕುಂದಾಪುರ ಮಾತ್ರ, "ನಮ್ಮ ತಲೆಯಲ್ಲಿ ಬುದ್ದಿ ಇಲ್ಲ" ಎಂದು ಹೇಳಿ ಅಂತ ಪಟ್ಟು ಹಿಡಿದರು. ಆದರೆ ಅಶ್ವಿನಿ ಗೌಡ ಅವರು ಒಪ್ಪಲಿಲ್ಲ. ಬಳಿಕ ಅಶ್ವಿನಿ ಮತ್ತು ಚೈತ್ರಾ ಕುಂದಾಪುರ ನಡುವೆ ಮಾತಿನ ಚಕಮಕಿ ಶುರುವಾಯಿತು.
ಒಗ್ಗಟ್ಟು ಇಲ್ಲ ಎನ್ನುವುದು ಗೊತ್ತಾಯ್ತಲ್ಲ
ತ್ರಿವಿಕ್ರಮ್ ಜೊತೆ ಚೈತ್ರಾ ಮಾತನಾಡುತ್ತಾ "ಇವತ್ತು ಆಡಿದ ಆಟದಿಂದ ಇವರಲ್ಲಿ ಒಗ್ಗಟ್ಟು ಇಲ್ಲ ಎನ್ನುವುದು ಗೊತ್ತಾಯ್ತಲ್ಲ. ನಾವು ಅದಕ್ಕೆ ಬಂದಿರೋದು ತಾನೇ, ನಾವು ಬಂದಿರುವುದು ಇವರ ಒಗ್ಗಟ್ಟು ಪರೀಕ್ಷಿಸೋಕೆ ಅಲ್ವಾ? ಯಾರ ಒಗ್ಗಟ್ಟು ಎಷ್ಟಿದೆ ಎಂದು ನೋಡೋಕೆ" ಎಂದು ಚೈತ್ರಾ ಹೇಳಿರುವುದು ವೈರಲ್ ಆಗ್ತಿದೆ.
ಇದನ್ನು ನೋಡಿದ ವೀಕ್ಷಕರು ಮಾಜಿ ಸ್ಪರ್ಧಿಗಳಿಗೆ ಇದೇ ಟಾಸ್ಕ್ ಕೊಟ್ಟಿದ್ದಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಅತಿಥಿಗಳು ಗರಂ ಆಗಿದ್ದರಿಂದ ಮನೆ ಮಂದಿ ಗಿಲ್ಲಿ ವಿರುದ್ಧ ತಿರುಗಿಬಿದ್ದಿದ್ದರು. ಹಾಗಾಗಿ ಗಿಲ್ಲಿ ಕೊಂಚ ಸೈಲೆಂಟ್ ಆಗಿದ್ದಾರೆ.