ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಧ್ರುವಂತ್‌ರ ಆ ಒಂದು ಮಾತಿಗೆ ಕಾವ್ಯ ಕೆಂಡ! ಆವಾಜ್ ಹಾಕಿದ ಗಿಲ್ಲಿ

ಈ ವಾರ ಧ್ರುವಂತ್‌ (Dhruvanth) ಹಾಗೂ ರಿಷಾ (Risha) ಅವರು ಗಿಲ್ಲಿ ಅವರ ಹೆಸರನ್ನು ಹೇಳಿ ಕಳಪೆ ನೀಡಿದರು. ರಿಷಾ ಕೂಡ ಯಾವಾಗಲೂ ಗಿಲ್ಲಿ ಅವರಿಗೆ ಕಾವು ಕಾವು ಅಂತ ಇರ್ತಾರೆ. ಅವರ ಹೆಸರು ಇಲ್ಲದೇ ಇವರಿಗೆ ಆಗೋದೆ ಇಲ್ವಾ ಅಂತ ಹೇಳಿದ್ದಾರೆ. ನಿನ್ನೆ ಕೂಡ ಅವರ ಸ್ನೇಹ ಟಾಸ್ಕ್‌ ಮೂಲಕ ಪ್ರೂವ್‌ ಆಗಿದೆ. ಆದರೀಗ ಇಡೀ ಮನೆ ಈ ಜೋಡಿ ಕಂಡು ಅಸೂಹೆ ಪಡುವಂತಾಗಿದೆ. ಹೌದು ಧ್ರುವಂತ್‌ (Dhruvant) ಅವರು ಸದ್ಯ ಗಿಲ್ಲಿ (Gilli) ಮೇಲೆ ಟಾರ್ಗೆಟ್‌ ಮಾಡುವಂತಿದೆ. ಅಷ್ಟೇ ಅಲ್ಲ ಕಳಪೆ ಕೊಡುವಾಗ ಗಿಲ್ಲಿ ಹೆಸರು ಹೇಳಿದ್ದಾರೆ.

bigg boss kannada

ಬಿಗ್‌ ಬಾಸ್‌ (Bigg Boss Kannada 12) ಮನೆಯಲ್ಲಿ ಸಖತ್‌ ಹೈಲೈಟ್‌ ಆಗಿರೋ ಜೋಡಿ ಅಂದರೆ ಅದುವೇ ಕಾವ್ಯ (Kavya) ಮತ್ತು ಗಿಲ್ಲಿ (Gilli). ನಿನ್ನೆ ಕೂಡ ಅವರ ಸ್ನೇಹ ಟಾಸ್ಕ್‌ ಮೂಲಕ ಪ್ರೂವ್‌ ಆಗಿದೆ. ಆದರೀಗ ಇಡೀ ಮನೆ ಈ ಜೋಡಿ ಕಂಡು ಅಸೂಹೆ ಪಡುವಂತಾಗಿದೆ. ಹೌದು ಧ್ರುವಂತ್‌ (Dhruvant) ಅವರು ಸದ್ಯ ಗಿಲ್ಲಿ ಮೇಲೆ ಟಾರ್ಗೆಟ್‌ ಮಾಡುವಂತಿದೆ. ಅಷ್ಟೇ ಅಲ್ಲ ಕಳಪೆ ಕೊಡುವಾಗ ಗಿಲ್ಲಿ ಹೆಸರು ಹೇಳಿದ್ದಾರೆ.

ಈ ವಾರ ಧ್ರುವಂತ್‌ ಹಾಗೂ ರಿಷಾ ಅವರು ಗಿಲ್ಲಿ ಅವರ ಹೆಸರನ್ನು ಹೇಳಿ ಕಳಪೆ ನೀಡಿದರು. ರಿಷಾ ಕೂಡ ಯಾವಾಗಲೂ ಗಿಲ್ಲಿ ಅವರಿಗೆ ಕಾವು ಕಾವು ಅಂತ ಇರ್ತಾರೆ. ಅವರ ಹೆಸರು ಇಲ್ಲದೇ ಇವರಿಗೆ ಆಗೋದೆ ಇಲ್ವಾ ಅಂತ ಹೇಳಿದ್ದಾರೆ.

ಇದನ್ನೂ ಓದಿ: Bigg Boss Kannada : ಧ್ರುವಂತ್‌ ನಡವಳಿಕೆಗೆ ಛೀಮಾರಿ! ರಕ್ಷಿತಾ ಬೆನ್ನಿಗೆ ಚೂರಿ ಹಾಕಿದ್ರಾ? ವೀಕ್ಷಕರು ಗರಂ

ಕಾವ್ಯ ಕೆಂಡ

ಧ್ರುವಂತ್‌ ಕೂಡ ಕಾರಣ ನೀಡಿ, ʻಗಿಲ್ಲಿ ಅವರು, ಅವರಬಿಟ್ಟರೆ, ಅವರ ಕಾವ್ಯ ಅಂತ ಹೇಳಿಕೊಂಡೇ ಇರ್ತಾರೆ. ಅವರಿಬ್ಬರನ್ನ ಬಿಟ್ಟರೆ ಎಲ್ಲರನ್ನೂ ತಮಾಷೆಯಾಗಿಯೇ ನೋಡುತ್ತಾರೆʼ ಎಂದರು. ಈ ಒಂದು ಮಾತು ಕಾವ್ಯ ಅವರನ್ನ ಕೆರಳಿಸಿದೆ. ʻಅವರ ಕಾವ್ಯ ಅಂತ ಹೇಳುವ ಅವಶ್ಯಕತೆ ಇಲ್ಲʼ ಎಂದಿದ್ದಾರೆ. ʻಅನಿಸಿಕೆ ಅಂದಾಕ್ಷಣ ಬೇರೊಬ್ಬರ ಕ್ಯಾರಕ್ಟರ್‌ ಬಗ್ಗೆಏನೂ ಬೇಕಾದರೂ ಹೇಳಬಹುದು ಅಂದುಕೊಂಡಿದ್ದೀರಾ; ಎಂದು ಅಬ್ಬರಿಸಿದ್ದಾರೆ.

ಗಿಲ್ಲಿ ನಟ, ಕಾವ್ಯಾ ಕಾಲೆಳೆಯುತ್ತಿರುತ್ತಾರೆ. ಆದರೆ ಇತರೆ ಕೆಲ ಸ್ಪರ್ಧಿಗಳಿಗೆ ಇವರ ಗೆಳೆತನದ ಬಗ್ಗೆ ಅಸೂಯೆ ಮೂಡಿದಂತಿದೆ. ಗಿಲ್ಲಿ ಸಹ ತನ್ನ ಎಂದಿನ ತಮಾಷೆ ಪ್ರವೃತ್ತಿ ಬಿಟ್ಟು ಧ್ರುವಂತ್​​ ಮೇಲೆ ಕೂಗಾಡಿದ್ದಾರೆ.

ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ, ರಿಷಾ ಗೌಡ, ಧ್ರುವಂತ್‌, ಕಾಕ್ರೋಚ್‌ ಸುಧಿ ಒಂದು ಗುಂಪಾಗಿದ್ದಾರೆ. ಇಲ್ಲಿ ರಾಶಿಕಾ ವಿಷಯ ಬಂದರೆ ಅಲ್ಲಿ ಸೂರಜ್‌ ಎಂಟ್ರಿ ಆಗುವುದು. ಜಾಹ್ನವಿ ಕೂಡ ಅಶ್ವಿನಿ ಪರವಾಗಿಯೇ ಇದ್ದಾರೆ. ಧ್ರುವಂತ್‌ನನ್ನು ಅರ್ಥ ಮಾಡಿಕೊಳ್ಳೋದು ಕಷ್ಟ, ನಮ್ಮ ತಲೆ ಹಾಳಾಗತ್ತೆ ಎನ್ನುವ ಅರ್ಥದಲ್ಲಿ ಗಿಲ್ಲಿ ನಟ ಅವರು ಸೂರಜ್‌ಗೆ ಹೇಳಿದ್ದರು.



ಗಿಲ್ಲಿ ಮೇಲೆ ಸಿಡಿದೆದ್ದು ಕೂಗಾಡಿದ ಧ್ರುವಂತ್‌!

ನಿನ್ನೆಯ ಎಪಿಸೋಡ್‌ನಲ್ಲಿ ಕೂಡ ಧ್ರುವಂತ್‌ ಅವರ ವರ್ತನೆ ನಗ್ಗೆ ವೀಕ್ಷಕರು ಕೆಂಡವಾಗಿದ್ದಾರೆ, ಇದೀಗ ಗಿಲ್ಲಿಯನ್ನ (Gilli) ನೇರವಾಗಿ ಟಾರ್ಗೆಟ್‌ ಮಾಡಿದ್ದಾರೆ ಧ್ರುವಂತ್‌. ಅಷ್ಟೇ ಅಲ್ಲ ಅಶ್ವಿನಿ ಅವರು ಸಾಥ್‌ ಕೊಟ್ಟಿದ್ದಾರೆ.

ಇನ್ನು ಧ್ರುವಂತ್‌ ಅವರು ಬೇಕು ಎಂದೇ ಗಿಲ್ಲಿ ಅವರಿಗೆ ನಿಮ್ಮ ಬಗ್ಗೆ ಒಂದೂ ಒಳ್ಳೆ ಮಾತಿಲ್ಲ ಎಂದಿದ್ದಾರೆ. ಅದಿಕ್ಕೆ ಗಿಲ್ಲಿ ಕೂಡ ನಿಮ್ಮ ಬಗ್ಗೆ ಭಾರೀ ಒಳ್ಳೆ ಮಾತಿದೆಯಾ ಎಂದು ತಿರುಗೇಟು ಕೊಟ್ಟಿದ್ದಾರೆ. ಅಲ್ಲಿಂದ ಗರಂ ಆದ ಧ್ರುವಂತ್‌ ಕಿರುಚಾಡಲು ಶುರು ಮಾಡಿದರು. ಬೇರೆ ಅವರ ಕಾಲೆಳೆಯುವ ಮೊದಲು ನಿನ್ನ ಬಗ್ಗೆ ತೋರಿಸು ಎಂದಾಗ ಗಿಲ್ಲಿ, ಅದಕ್ಕೆ ನನಗೆ ಕಿಚ್ಚನ ಚಪ್ಪಾಳೆ ಬಂದಿದೆ ಎಂದಿದ್ದಾರೆ. ಇನ್ನು ಧ್ರುವಂತ್‌ ಕಿರುಚಾಟಕ್ಕೆ ಅಶ್ವಿನಿ ಅವರೇ ಪಕ್ಕದಲ್ಲಿ ನಿಂತು ಸಾಥ್‌ ಕೊಟ್ಟಿದ್ದಾರೆ.

ಇದನ್ನೂ ಓದಿ: Bigg Boss Kannada 12: ಗಿಲ್ಲಿ ಮೇಲೆ ಸಿಡಿದೆದ್ದು ಕೂಗಾಡಿದ ಧ್ರುವಂತ್‌! ಸಾಥ್‌ ಕೊಟ್ಟ ಅಶ್ವಿನಿ ಗೌಡ

ಇನ್ನು ನಿನ್ನೆಯ ಸಂಚಿಕೆಯಲ್ಲಿ ಅಶ್ವಿನಿ ತಂಡ ಗ್ರೂಪಿಸಮ್‌ ಎಂಬ ಹಣೆಪಟ್ಟಿ ಕೂಡ ನೀಡಿತು. ಬಹುತೇಕರು ರಕ್ಷಿತಾ ಅವರಿಗೆ ಲೆಟರ್‌ ವಿಚಾರವಾಗಿ ಸಮಾಧಾನ ಮಾಡಿದರೆ, ಧ್ರುವಂತ್‌ ಅವರು ದೂರ ನಿಂತು ನೋಡುತ್ತಲೇ ಇದ್ದರು. ಅಣ್ಣ ಅಣ್ಣ ಎಂದು ಕರೆಯುತ್ತಿದ್ದ ಧ್ರುವಂತ್ ರಕ್ಷಿತಾ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದ ಅವರ ವರ್ತನೆ ಕಂಡೇ ವೀಕ್ಷಕರು ಗರಂ ಆಗಿದ್ದಾರೆ.

Yashaswi Devadiga

View all posts by this author