ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಆಡಿದ ಮಾತಿಗೆ ಅಶ್ವಿನಿ ಬಳಿ ಕೈ ಮುಗಿದು ಕ್ಷಮೆ ಕೇಳಿದ ಗಿಲ್ಲಿ

Bigg Boss Kannada 12: ಟಾಸ್ಕ್‌ನಲ್ಲಿ ಗಿಲ್ಲಿ ಮತ್ತು ಕಾವ್ಯ ಅಶ್ವಿನಿಯವರನ್ನು ಡಿಸ್ಟರ್ಬ್ ಮಾಡಲು ಟಾಂಟ್ ಕೊಟ್ಟು ಮಾತಾಡಿದರು. 30 ನಿಮಿಷಗಳ ಕಾಲ ಎಲ್ಲವನ್ನೂ ಕೇಳಿಸಿಕೊಂಡ ಅಶ್ವಿನಿ ನಂತರ ತನ್ನ ರೂಮ್ ನಲ್ಲಿ ಹೋಗಿ ಅಳತೊಡಗಿದರು. ಜಾಹ್ನವಿಯಿಂದ, ತಮ್ಮಿಂದ ನೋವಾಗಿರುವ ವಿಷಯ ತಿಳಿದು ಗಿಲ್ಲಿ - ಕಾವ್ಯ ಇಬ್ಬರು ಹೋಗಿ ಅಶ್ವಿನಿ ಬಳಿ ಕ್ಷಮೆಯಾಚಿಸಿದ್ದಾರೆ. ಆದರೆ ರಘು ಅವರ ವಿಚಾರಕ್ಕೆ ಇದೇ ಗಿಲ್ಲಿ ಕ್ಷಮೆ ಕೇಳಬೇಡಿ ಎಂದಿದ್ದರು. ಆದರೀಗ ಗಿಲ್ಲಿ ಹೋಗಿ ಕ್ಷಮೆ ಕೇಳಿದ್ದು, ರಘು ಅವರಿಗೆ ಅಸಮಾಧಾನ ಮೂಡಿದಂತಿದೆ

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ (Bigg Boss Kannada 12) ಮನೆಯಲ್ಲಿ ಬರಬರುತ್ತಾ ಟಾಸ್ಕ್‌ ತುಂಬಾ ಕಠಿಣವಾಗುತ್ತಿದೆ. ಬಿಗ್‌ ಬಾಸ್‌ ಟಾಸ್ಕ್‌ವೊಂದನ್ನ ನೀಡಿದ್ದಾರೆ. ಮನಸ್ಸಿನಲ್ಲಿ ಸಮಯ ಎಣಿಸಿ 12 ನಿಮಿಷ ಆದ ಬಳಿಕ ಬೆಲ್ ಬಾರಿಸಬೇಕು. ಈ ವೇಳೆ ಅವರ ಲೆಕ್ಕಾಚಾರ ತಪ್ಪಿಸಲು ಮನೆಯ ಸ್ಪರ್ಧಿಗಳು ಅಡ್ಡಿ ಉಂಟು ಮಾಡಬಹುದು. ಅಭಿಷೇಕ್‌ ಕಡೆಯಿಂದ ಕಾವ್ಯ ಹಾಗೂ ಗಿಲ್ಲಿ ಸಪೋರ್ಟರ್‌ ಆಗಿದ್ದರೆ, ಅಶ್ವಿನಿ (Ashwini) ಅವರ ಪರ ಜಾಹ್ನವಿ ಹಾಗೂ ರಕ್ಷಿತಾ ಮಾತನಾಡಬೇಕಿತ್ತು. ಆದರೆ ಕೊನೆಗೆ 12 ನಿಮಿಷ ಸಮೀಪಕ್ಕೆ ಗಂಟೆ ಬಾರಿಸುವ ಸದಸ್ಯ ಕ್ಯಾಪ್ಟನ್ ಆಗಿ ಆಯ್ಕೆ ಆಗ್ತಾರೆ. ಆದರೆ ಈ ಟಾಸ್ಕ್‌ ಸಮಯದಲ್ಲಿ ಗಿಲ್ಲಿ ಹಾಗೂ ಅಶ್ವಿನಿ ನಡುವೆ ಜಗಳ ಆಗಿದೆ. ಗಿಲ್ಲಿ (Gilli) ಕೂಡ ಸ್ವಲ್ಪ ಅತಿರೇಕವಾಗಿಯೇ ಮಾತನಾಡಿದ್ದಾರೆ . ಇದಾದ ಬಳಿಕ ಅಶ್ವಿನಿ ಬಳಿ ಕೈ ಮುಗಿದು ಕ್ಷಮೆಯಾಚಿಸಿದ್ದಾರೆ ಗಿಲ್ಲಿ.

ಇದನ್ನೂ ಓದಿ: Bigg Boss Kannada 12: ಗಿಲ್ಲಿ ನಟ ಕ್ಷಮೆ ಕೇಳಿದ್ರೂ, ಕೇಳಿಲ್ಲ ಅಂತ ಅಭಿಷೇಕ್‌ ಹೇಳಿದ್ದೇಕೆ?

ಅಶ್ವಿನಿ ಬಳಿ ಕ್ಷಮೆ

ಟಾಸ್ಕ್‌ನಲ್ಲಿ ಗಿಲ್ಲಿ ಮತ್ತು ಕಾವ್ಯ ಅಶ್ವಿನಿಯವರನ್ನು ಡಿಸ್ಟರ್ಬ್ ಮಾಡಲು ಟಾಂಟ್ ಕೊಟ್ಟು ಮಾತಾಡಿದರು. 30 ನಿಮಿಷಗಳ ಕಾಲ ಎಲ್ಲವನ್ನೂ ಕೇಳಿಸಿಕೊಂಡ ಅಶ್ವಿನಿ ನಂತರ ತನ್ನ ರೂಮ್ ನಲ್ಲಿ ಹೋಗಿ ಅಳತೊಡಗಿದರು. ಜಾಹ್ನವಿಯಿಂದ, ತಮ್ಮಿಂದ ನೋವಾಗಿರುವ ವಿಷಯ ತಿಳಿದು ಗಿಲ್ಲಿ - ಕಾವ್ಯ ಇಬ್ಬರು ಹೋಗಿ ಅಶ್ವಿನಿ ಬಳಿ ಕ್ಷಮೆಯಾಚಿಸಿದ್ದಾರೆ.

ಏನಿದು ಟಾಸ್ಕ್‌?

ಕ್ಯಾಪ್ಟನ್ಸಿ ರೇಸ್​ನಲ್ಲಿ ಅಭಿಷೇಕ್ ಹಾಗೂ ಅಶ್ವಿನಿ ಗೌಡ ಇದ್ದರು. ಕೂತಾಗ ಮನಸ್ಸಿನಲ್ಲೇ ಲೆಕ್ಕ ಹಾಕಿ 12 ನಿಮಿಷ ಆದ ಬಳಿಕ ಗಂಟೆ ಬಾರಿಸಬೇಕು. 12 ನಿಮಿಷಕ್ಕೆ ಯಾರು ಹತ್ತಿರವಿದ್ದಾರೋ ಅವರು ವಿನ್ ಆದಂತೆ. ಗಿಲ್ಲಿ ಅವರು ಹೋಗಿ ಅಶ್ವಿನಿ ಅವರನ್ನು ಟೀಕೆ ಮಾಡಲು ಆರಂಭಿಸಿದರು. ಅಲ್ಲಿ ಆಡಿದ ಮಾತುಗಳಲ್ಲಿ ಕೆಲವು ಮಿತಿಮೀರಿತ್ತು.



ಗಿಲ್ಲಿ ಹೇಳಿದ್ದೇನು?

ರಘು ಅವರು ನಿಮ್ಮನ್ನ ಅಶ್ವಿನಿ ಅಲ್ಲದೇ ಆಶು ಅಂತ ಕರೆಯಬೇಕಿತ್ತಾ? ಅಶ್ವಿನಿ ಮೇಡಮ್‌, ನಿಮ್ಮ ಹೆಸರಿನ ಮುಂದೆ A ಮುಂಚೆ ಇದ್ದಿದ್ರೆ, A ಅಶ್ವಿನಿ ಅಂತ ಕರೆಯುತ್ತಾ ಇದ್ವಿ. ಗೇಟ್‌ ಹತ್ರ ಬಂದು ಮನೆಗೆ ಹೋಗ್ತೀನಿ ಹೋಗ್ತೀನಿ ಅಂದ್ರೆ ಹೋಗಿ. ನಾವೇನು ಬೇಡ ಅಂತ ನಿಮ್ಮನ್ನ ಹಿಡಿದುಕೊಂಡು ಕೂತಿದ್ದೀವಾ? ಎಂದು ಗಿಲ್ಲಿ ನೇರವಾಗಿ ಅಶ್ವಿನಿಗೆ ಹೇಳಿದ್ದಾರೆ. ನಿನ್ನ ಅಂಥವರನ್ನ ಎಷ್ಟು ಜನ ನೋಡಿಲ್ಲ ಎಂದು ಅಶ್ವಿನಿ ಎದುರು ವಾದಿಸಿದ್ದಾರೆ. ಅದಕ್ಕೆ ಗಿಲ್ಲಿ ಖಡಕ್‌ ಆಗಿಯೇ, ಕಾಲು ಮೇಲು ಕಾಲು ಹಾಕಿಕೊಂಡು, ನನ್ನಂಥವರ ನೋಡಿರಬಹುದು, ಆದರೆ ನನ್ನ ನೋಡಿಲ್ಲ' ಎಂದು ಆವಾಜ್‌ ಹಾಕಿದ್ದಾರೆ.

ಇದಾದ ಬಳಿಕ ಅಶ್ವಿನಿ ಗೌಡ ಅವರು ರೂಂನಲ್ಲಿ ಮಲಗಿ ಅತ್ತಿದ್ದಾರೆ. ಇದು ಗಿಲ್ಲಿಗೆ ಬೇಸರ ತರಿಸಿದೆ. ಟಾಸ್ಕ್​ನಲ್ಲಿ ನನ್ನಿಂದ ಮನಸ್ಸಿಗೆ ನೋವಾದರೆ ಕ್ಷಮಿಸಿ. ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ. ಗೇಮ್, ಅದನ್ನು ಗೇಮ್ ಆಗಿ ತೆಗೆದುಕೊಳ್ಳಿ ಎಂದು ಅಶ್ವಿನಿ ಬಳಿ ಹೋಗಿ ಕ್ಷಮೆ ಕೇಳಿದ್ದಾರೆ.

ಇದನ್ನೂ ಓದಿ: Bigg Boss Kannada 12: ಎರಡನೇ ಬಾರಿ ಅಶ್ವಿನಿ ಗೌಡಗೆ ಕಳಪೆ ಪಟ್ಟ! ಅಭಿಷೇಕ್‌ ಕ್ಯಾಪ್ಟನ್‌, ಉತ್ತಮ ಇವರೇ ನೋಡಿ

ಆದರೆ ರಘು ಅವರ ವಿಚಾರಕ್ಕೆ ಇದೇ ಗಿಲ್ಲಿ ಕ್ಷಮೆ ಕೇಳಬೇಡಿ ಎಂದಿದ್ದರು. ಆದರೀಗ ಗಿಲ್ಲಿ ಹೋಗಿ ಕ್ಷಮೆ ಕೇಳಿದ್ದು, ರಘು ಅವರಿಗೆ ಅಸಮಾಧಾನ ಮೂಡಿದಂತಿದೆ.

Yashaswi Devadiga

View all posts by this author