ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಗೆಸ್ಟ್‌ಗಳ ಈ ನಡೆಯ ಬಗ್ಗೆ ಗಿಲ್ಲಿ ಬೇಸರ; ಧ್ರುವಂತ್‌, ಸೂರಜ್‌ ಬಳಿ ಹೇಳಿದ್ದೇನು?

Gilli Nata: ಎಲ್ಲ ಸ್ಪರ್ಧಿಗಳು ಊಟ ಮಾಡುವಾಗ ಮಾತುಕತೆ ನಡೆದಿದೆ. ಮೊದಲಿಗೆ ಗಿಲ್ಲಿ ಅವರು ತಮಾಷೆಯಾಗಿ, ನಾವು ಮುಂದಿನ ಸೀಸನ್‌ಗೆ ಕರೆದ್ರೂ ಹೋಗಲ್ಲ. ಏಕೆಂದರೆ ಅದು ಇನ್ನೊಬ್ಬರ ಸೀಸನ್‌ ಎಂದಿದ್ದಾರೆ. ಅದಕ್ಕೆ ರಜತ್‌, ಬಿಗ್‌ ಬಾಸ್‌ಗೆ ಮರ್ಯಾದೆ ಕೊಡಲ್ವಾ? ಎಂದಿದ್ದಾರೆ. ಅದಕ್ಕೆ ಗಿಲ್ಲಿ ಬಗ್ಗೆ ತ್ರಿವಿಕ್ರಮ್‌ ತಮಾಷೆಯಾಗಿಯೇ ಈ ಸೀಸನ್‌ ಬಿಟ್ಟುಕೊಡು, ತುಂಬಾ ಜನ ಕಾಯ್ತಾ ಇದ್ದಾರೆ ಎಂದಿದ್ದಾರೆ. ಗಿಲ್ಲಿ ಮೊದಲ ದಿನ ಮಾಡಿದ ಅತಿರೇಕದ ಕಾಮಿಡಿಗೆ ಮಂಜು ಹಾಗೂ ರಜತ್‌ ಕೋಪಗೊಂಡಿದ್ದರು. ನಿನ್ನೆ ಟಾಸ್ಕ್‌ ಮುಗಿದ ಮೇಲೆಯೂ ಮಂಜು ಜೊತೆ ಗಿಲ್ಲಿ ಕಿರಿಕ್‌ ಮಾಡಿಕೊಂಡಿದ್ದಾರೆ. ಇದಾದ ಬಳಿಕ ಗಿಲ್ಲಿ ಅವರು ಧ್ರುವಂತ್‌ ಹಾಗೂ ಸೂರಜ್‌ ಜೊತೆ ಬೇಸರ ವ್ಯಕ್ತಪಡಿಸಿದ್ದಾರೆ.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ ಮನೆಯಲ್ಲಿ ಸೀಸನ್‌ 11ರ (Bigg boss Kannada 12) ಕೆಲವು ಸ್ಪರ್ಧಿಗಳು ಬಂದಿರೋದು ಗೊತ್ತೇ ಇದೆ. ಗಿಲ್ಲಿಯನ್ನ (Gilli Nata) ಟಾರ್ಗೆಟ್‌ ಕೂಡ ಮಾಡಿದ್ದರು. ಗಿಲ್ಲಿ ಮೊದಲ ದಿನ ಮಾಡಿದ ಅತಿರೇಕದ ಕಾಮಿಡಿಗೆ ಮಂಜು ಹಾಗೂ ರಜತ್‌ (Rajath) ಕೋಪಗೊಂಡಿದ್ದರು. ನಿನ್ನೆ ಟಾಸ್ಕ್‌ ಮುಗಿದ ಮೇಲೆಯೂ ಮಂಜು ಜೊತೆ ಗಿಲ್ಲಿ ಕಿರಿಕ್‌ ಮಾಡಿಕೊಂಡಿದ್ದಾರೆ. ಇದಾದ ಬಳಿಕ ಗಿಲ್ಲಿ ಅವರು ಧ್ರುವಂತ್‌ (Dhruvanth) ಹಾಗೂ ಸೂರಜ್‌ (Sooraj) ಜೊತೆ ಬೇಸರ ವ್ಯಕ್ತಪಡಿಸಿದ್ದಾರೆ.

ಮುಂದಿನ ಸೀಸನ್‌ಗೆ ಕರೆದ್ರೂ ಹೋಗಲ್ಲ

ಎಲ್ಲ ಸ್ಪರ್ಧಿಗಳು ಊಟ ಮಾಡುವಾಗ ಮಾತುಕತೆ ನಡೆದಿದೆ. ಮೊದಲಿಗೆ ಗಿಲ್ಲಿ ಅವರು ತಮಾಷೆಯಾಗಿ, ನಾವು ಮುಂದಿನ ಸೀಸನ್‌ಗೆ ಕರೆದ್ರೂ ಹೋಗಲ್ಲ. ಏಕೆಂದರೆ ಅದು ಇನ್ನೊಬ್ಬರ ಸೀಸನ್‌ ಎಂದಿದ್ದಾರೆ. ಅದಕ್ಕೆ ರಜತ್‌, ಬಿಗ್‌ ಬಾಸ್‌ಗೆ ಮರ್ಯಾದೆ ಕೊಡಲ್ವಾ? ಎಂದಿದ್ದಾರೆ. ಅದಕ್ಕೆ ಗಿಲ್ಲಿ ಬಗ್ಗೆ ತ್ರಿವಿಕ್ರಮ್‌ ತಮಾಷೆಯಾಗಿಯೇ ಈ ಸೀಸನ್‌ ಬಿಟ್ಟುಕೊಡು, ತುಂಬಾ ಜನ ಕಾಯ್ತಾ ಇದ್ದಾರೆ ಎಂದಿದ್ದಾರೆ. ಬಳಿಕ ಮತ್ತೆ ಊಟದ ವಿಚಾರವಾಗಿ ಮಾತುಕತೆ ಶುರುವಾದಾಗ, ಮಂಜು ಅವರಿಗೆ ಸಿಟ್ಟು ತರಿಸಿದೆ ಗಿಲ್ಲಿ ಮಾತು. ಬಿಟ್ಟಿ ಊಟಕ್ಕೆ ಬಂದಿದ್ದೀವಾ? ಪದೇ ಪದೇ ಗಿಲ್ಲಿ ಹೇಳುವ ಈ ಮಾತಿಗೆ ಕೂಗಾಡಿದ್ದಾರೆ.

ಮಂಜು ಅವರು ಊಟ ಮಾಡುತ್ತಿರುವ ತಟ್ಟೆ ನನ್ನದು ಎನ್ನುತ್ತಾರೆ. ಬಿಗ್ ಬಾಸ್ ಮನೆಯಲ್ಲಿ ಪ್ರತಿ ತಟ್ಟೆಯಲ್ಲಿ ಸ್ವರ್ಧಿಗಳ ಹೆಸರು ಬರೆಯಲಾಗಿದೆ. ಈ ಹಾಸ್ಯ ಸನ್ನಿವೇಶವನ್ನು ಸೀರಿಯಸ್ ಆಗಿ ಪರಿವರ್ತಿಸಿದ ಮಂಜು ನಾವು ಬೇರೆಯವರ ತಟ್ಟೆ ಅನ್ನ ಕಸಿಯೋಕೆ ಬಂದಿದ್ದಾ..? ಮುಂತಾದ ಮಾತುಗಳನ್ನು ಹೇಳಿ ಗಿಲ್ಲಿಗೆ ಎಲ್ಲರ ಮುಂದೆ ಬಯ್ಯ ತೊಡಗುತ್ತಾರೆ.. ತಕ್ಷಣ ಗಿಲ್ಲಿ ಕ್ಷಮೆ ಕೇಳಿದರೂ ಮಂಜು ಮತ್ತೆ ಮತ್ತೆ ಬಯ್ಯುತ್ತಿರುತ್ತಾರೆ. ಗಿಲ್ಲಿಗೂ ಬೇಸರವಾಗಿ ಅಲ್ಲಿಂದ ಹೊರಗೆ ಹೋಗುತ್ತಾರೆ

ಇದನ್ನೂ ಓದಿ: Bigg Boss Kannada 12: ನನ್ನಲ್ಲಿ ಬುದ್ಧಿವಂತಿಕೆ ಇಲ್ಲ! ಚೈತ್ರಾ ಎದುರು ಕ್ಷಮೆ ಕೇಳಿದ ಅಶ್ವಿನಿ ಗೌಡ



ಗಿಲ್ಲಿ ಬೇಸರ

ಗಿಲ್ಲಿ ಕೂಡ ಅಲ್ಲಿಂದ ಅರ್ಧದಲ್ಲಿಯೇ ಊಟ ಬಿಟ್ಟು ಬೇಸರದಲ್ಲಿ ಹೋಗಿ ಕುಳಿತ್ತಿದ್ದಾರೆ. ಧ್ರುವಂತ್‌ ಗಿಲ್ಲಿಯನ್ನ ಸಮಾಧಾನ ಮಾಡಿದರು. ಧ್ರುವಂತ್‌ ಮಾತನಾಡಿ, ಕೆಲವು ಹುಡುಗರಲ್ಲಿ ಗಟ್ಸ್‌ ಅನ್ನೋದು ಇರುತ್ತೆ. ಅದು ನಿನಗೆ ಇದೆ. ತಮಾಷೆ ಅಲ್ಲ ಮುಖದ ಮುಂದೆ ಹೇಳ್ತೀಯಾ ಎಂದಿದ್ದಾರೆ. ಧನುಷ್‌, ಸೂರಜ್‌ ಹಾಗೂ ಧ್ರುವಂತ್‌ ಮುಂದೆ ಗಿಲ್ಲಿ ಹೇಳಿದ್ದು ಒಂದೇ ಮಾತು.

ವೈರಲ್‌ ವಿಡಿಯೋ



ʻನಾನು ಮೂರು ದಿನಗಳಿಂದ ಕಂಟ್ರೋಲ್‌ ಅಲ್ಲೇ ಇದ್ದೆ. ಮೊದಲ ದಿನ ತಪ್ಪಾಯ್ತು ಅದಿಕ್ಕೆ ನಾನು ಸುಮ್ಮನಾದೆ. ಕೆಲವರು ಕೇಳಿದ್ದೂ ಇದೆ. ಗಿಲ್ಲಿ ಹೇಗಿದ್ರಿ ಹೇಗಾದ್ರಿ ಅಂತ ಕಮೆಂಟ್‌ ಮಾಡಿದ್ದೂ ಇದೆ. ಅವರು ಏನೇ ಕಾಮಿಡಿ ಮಾಡಿದ್ರೂ ನಾವು ತೆಗೋಬೇಕು, ನಾವು ಸಣ್ಣದಾಗಿ ಏನೇ ಅಂದ್ರೂನೂ ಅವರು ತೆಗೆದುಕೊಳಲ್ಲʼ ಎಂದು ಬೇಸರ ಹೊರ ಹಾಕಿದ್ದಾರೆ.

ಇದನ್ನೂ ಓದಿ: Bigg Boss Kannada 12: ಗಿಲ್ಲಿ ಜೊತೆಗಿನ ಫ್ರೆಂಡ್‌ಶಿಪ್‌ಗೆ ಫುಲ್‌ಸ್ಟಾಪ್‌ ಇಡ್ತಾರಾ ಕಾವ್ಯ? ಪರ್ಫಾಮೆನ್ಸ್ ಮುಖ್ಯ ಅಂದಿದ್ದೇಕೆ ಕಾವು?

ಕ್ಯಾಪ್ಟನ್‌ ಧನುಷ್‌ ಅವರು ಹೇಳಿದ ಮಾತಿಗೆ ಮಂಜು ಅವರ ಬಳಿ ಕ್ಷಮೆ ಕೂಡ ಕೇಳಿದ್ದಾರೆ ಗಿಲ್ಲಿ. ಒಟ್ಟಿನಲ್ಲಿ ಗಿಲ್ಲಿ ಫ್ಯಾನ್ಸ್‌ ಈಗ ಬೇಸರ ಹೊರ ಹಾಕುತ್ತಿದ್ದಾರೆ. ಇನ್ನು ಸೂರಜ್‌ ನಡೆಗೂ ಫ್ಯಾನ್ಸ್‌ ಮೆಚ್ಚುಗೆ ವ್ಯಕ್ತಪಿಡಿಸಿದ್ದಾರೆ. ಸರಿಯಾದ ಸ್ಪರ್ಧಿಗಳನ್ನು ಬೆಂಬಲಿಸಿದ್ದಕ್ಕೆ ನನಗೆ ಪ್ರಾಮಾಣಿಕವಾಗಿ ಸಂತೋಷವಾಗಿದೆ ಸೂರಜ್‌ಗೆ ಸ್ಪಷ್ಟತೆ ಮತ್ತು ಪ್ರಜ್ಞೆ ಇದೆ ಎಂದು ಕಮೆಂಟ್‌ ಮಾಡಿದ್ದಾರೆ.

Yashaswi Devadiga

View all posts by this author