ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ನನ್ನಲ್ಲಿ ಬುದ್ಧಿವಂತಿಕೆ ಇಲ್ಲ! ಚೈತ್ರಾ ಎದುರು ಕ್ಷಮೆ ಕೇಳಿದ ಅಶ್ವಿನಿ ಗೌಡ

Ashwini Gowda: ಚೈತ್ರಾ ಕುಂದಾಪುರ ಅವರು ಮನೆಯೊಳಗೆ ಇರುವ ಶಿಲಾಬಾಲಿಕೆಯ ಹೆಸರು ಏನು ಎಂದು ಕೇಳಿದ್ದರು. ಅದಕ್ಕೆ ಯಾರಿಂದಲೂ ಸರಿಯಾದ ಉತ್ತರ ಸಿಕ್ಕಿಲ್ಲ. ಚೈತ್ರಾ ಕುಂದಾಪುರ ಬಿಬಿ ಪ್ಯಾಲೇಸ್‌ನ ಸಿಬ್ಬಂದಿಗಳಿಗೆ ಉತ್ತರವನ್ನು ಕೇಳುತ್ತಲೇ ಇದ್ದರು. ಕಾವ್ಯಗೂ ಕೇಳಿದಾಗ, "ನೀವು ಕೇಳಿದ ಪ್ರಶ್ನೆಗೆ ನಮ್ಮ ಬಳಿ ಉತ್ತರವಿಲ್ಲ. ಇಲ್ಲಿ ಇರುವವರಿಗೆ ತಲೆಯಲ್ಲಿ ಬುದ್ದಿ ಇಲ್ಲ" ಎಂದು ಹೇಳಿದರು. ಅದನ್ನೇ ಪಾಯಿಂಟ್‌ ಔಟ್ ಮಾಡಿದ ಚೈತ್ರಾ, ಮನೆಯೊಳಗೆ ಇರುವ ಎಲ್ಲರೂ ಈ ಮಾತನ್ನು ರಿಪೀಟ್‌ ಮಾಡಬೇಕು. ಆಗಲೇ ತಿಂಡಿ ತಿನ್ನುವುದಾಗಿ ಹೇಳಿದರು.ಅಶ್ವಿನಿ ಗೌಡ ಅವರು ಮಾತ್ರ ಇದನ್ನು ಒಪ್ಪಿಕೊಳ್ಳಲಿಲ್ಲ. ಆ ಬಳಿಕ ಕ್ಷಮೆ ಕೇಳಿದ್ದೇಕೆ?

ನನ್ನಲ್ಲಿ ಬುದ್ಧಿವಂತಿಕೆ ಇಲ್ಲ! ಚೈತ್ರಾ ಎದುರು ಕ್ಷಮೆ ಕೇಳಿದ ಅಶ್ವಿನಿ ಗೌಡ

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Nov 28, 2025 11:18 AM

ಬಿಗ್‌ ಬಾಸ್‌ ಮನೆಯಲ್ಲಿ ( Bigg Boss Kannada 12) ಅಶ್ವಿನಿ ಗೌಡ (Ashwini Gowda) ಒಂದು ವಾರದಿಂದ ಸೈಲೆಂಟ್‌ ಆಗಿದ್ದಾರೆ. ಆದರೆ ಟಾಸ್ಕ್‌ ಚೆನ್ನಾಗಿ ನಿಭಾಯಿಸಿದ್ದಾರೆ. ಅಷ್ಟೇ ಅಲ್ಲ ನಿನ್ನೆ ಕ್ಯಾಪ್ಟನ್ಸಿ ಟಾಸ್ಕ್‌ನ ಉಸ್ತುವಾರಿ ಕೂಡ ನಿಭಾಯಿಸಿದ್ದಾರೆ. ಉಗ್ರಂ ಮಂಜು, ತ್ರಿವಿಕ್ರಮ್‌, ರಜತ್‌, ಮೋಕ್ಷಿತಾ ಪೈ ಮತ್ತು ಚೈತ್ರಾ ಕುಂದಾಪುರ (Chaitra Kundapura) ಬಿಗ್‌ ಬಾಸ್‌ ಮನೆಯೊಳಗೆ ಅತಿಥಿಗಳಾಗಿ ಬಂದಿದ್ದರು. ಚೈತ್ರಾ ಕುಂದಾಪುರ ಅವರು ಮನೆಯೊಳಗೆ ಇರುವ ಶಿಲಾಬಾಲಿಕೆಯ ಹೆಸರು ಏನು ಎಂದು ಕೇಳಿದ್ದರು. ಅದಕ್ಕೆ ಯಾರಿಂದಲೂ ಸರಿಯಾದ ಉತ್ತರ ಸಿಕ್ಕಿಲ್ಲ. ಇಲ್ಲಿ ಇರುವವರಿಗೆ ತಲೆಯಲ್ಲಿ ಬುದ್ದಿ ಇಲ್ಲ ಎಂದು ಹೇಳುವುದಾಗಿ ಚೈತ್ರಾ ಹೇಳಿದ್ದರು. ಮೊದಲಿಗೆ ಅಶ್ವಿನಿ ಒಪ್ಪಿರಲಿಲ್ಲ. ಆದರೆ ನಿನ್ನೆ ಚೈತ್ರಾ ಅವರ ಬಳಿ ಕ್ಷಮೆ ಕೇಳಿದ್ದಾರೆ.

ಏನಿದು ಮ್ಯಾಟರ್?

ಚೈತ್ರಾ ಕುಂದಾಪುರ ಅವರು ಮನೆಯೊಳಗೆ ಇರುವ ಶಿಲಾಬಾಲಿಕೆಯ ಹೆಸರು ಏನು ಎಂದು ಕೇಳಿದ್ದರು. ಅದಕ್ಕೆ ಯಾರಿಂದಲೂ ಸರಿಯಾದ ಉತ್ತರ ಸಿಕ್ಕಿಲ್ಲ. ಚೈತ್ರಾ ಕುಂದಾಪುರ ಬಿಬಿ ಪ್ಯಾಲೇಸ್‌ನ ಸಿಬ್ಬಂದಿಗಳಿಗೆ ಉತ್ತರವನ್ನು ಕೇಳುತ್ತಲೇ ಇದ್ದರು. ಕಾವ್ಯಗೂ ಕೇಳಿದಾಗ, "ನೀವು ಕೇಳಿದ ಪ್ರಶ್ನೆಗೆ ನಮ್ಮ ಬಳಿ ಉತ್ತರವಿಲ್ಲ. ಇಲ್ಲಿ ಇರುವವರಿಗೆ ತಲೆಯಲ್ಲಿ ಬುದ್ದಿ ಇಲ್ಲ" ಎಂದು ಹೇಳಿದರು.

ಇದನ್ನೂ ಓದಿ: Bigg Boss Kannada 12: ಎರಡನೇ ಬಾರಿಗೆ ಕ್ಯಾಪ್ಟನ್‌ ಆದ ಧನುಷ್‌! ʻಟಾಸ್ಕ್‌ ಮಾಸ್ಟರ್‌ʼ ಅಂತ ಬಿರುದು ಕೊಟ್ಟ ಫ್ಯಾನ್ಸ್‌

ಅದನ್ನೇ ಪಾಯಿಂಟ್‌ ಔಟ್ ಮಾಡಿದ ಚೈತ್ರಾ, ಮನೆಯೊಳಗೆ ಇರುವ ಎಲ್ಲರೂ ಈ ಮಾತನ್ನು ರಿಪೀಟ್‌ ಮಾಡಬೇಕು. ಆಗಲೇ ತಿಂಡಿ ತಿನ್ನುವುದಾಗಿ ಹೇಳಿದರು.ಅಶ್ವಿನಿ ಗೌಡ ಅವರು ಮಾತ್ರ ಇದನ್ನು ಒಪ್ಪಿಕೊಳ್ಳಲಿಲ್ಲ. ನಾನು ಕ್ಷಮೆ ಕೇಳುತ್ತೇನೆ ವಿನಃ ಬುದ್ದಿ ಇಲ್ಲ ಎಂದೆಲ್ಲಾ ಹೇಳುವುದಿಲ್ಲ ಎಂದು ನೇರವಾಗಿ ಹೇಳಿದ್ದರು.

ಅಶ್ವಿನಿ ಗೌಡ ವಾರ್ನಿಂಗ್‌

ಅಶ್ವಿನಿ ಮತ್ತು ಚೈತ್ರಾ ಕುಂದಾಪುರ ನಡುವೆ ಮಾತಿನ ಚಕಮಕಿ ಶುರುವಾಯಿತು. ಅಶ್ವಿನಿ ಗೌಡ, "ತಲೆಯಲ್ಲಿ ಬುದ್ದಿ ಇಲ್ಲ ಎಂದು ನೀವು ಬೇಕಾದರೆ ಕೇಳಿ, ನನ್ನ ಯಾರು ಕನ್ವಿನ್ಸ್‌ ಮಾಡೋದಕ್ಕೆ ಪ್ರಯತ್ನಪಡಬೇಡಿ" ಎಂದು ವಾರ್ನಿಂಗ್‌ ಕೊಟ್ಟರು.

ಆದರೆ, ಕಾವ್ಯ ಹಾಗೂ ಇನ್ನಿತರರು ಅಶ್ವಿನಿಯನ್ನು ಕನ್ವಿನ್ಸ್‌ ಮಾಡಲು ಮುಂದಾಗುತ್ತಲೇ ಇದ್ದರು. ಈ ಮೊದಲು ಬಂದ ಅತಿಥಿಗಳನ್ನು ಗಿಲ್ಲಿ ನಟ ಸಿಕ್ಕಾಪಟ್ಟೆ ಕಾಡಿದ್ದರು. ಆ ಬಳಿಕ ಅಶ್ವಿನಿ ಗೌಡ ಅವರು ಹಠ ಹಿಡಿದು ಕುಂತರು. "ನನಗೆ ಬುದ್ದಿ ಇಲ್ವಾ? ನಾನ್ಯಾಕೆ ಕೇಳಬೇಕು? ನಾನಿಲ್ಲಿ ವೆಯ್ಟರ್‌.. ಹಾಗಾದರೆ ನನಗೆ ಬೆಲೆ ಇಲ್ಲವೇ? ನನಗೆ ಈ ಥರ ಹೇಳುವುದಕ್ಕೆ ಇಷ್ಟವಿಲ್ಲ" ಎಂದು ಅಶ್ವಿನಿ ಪ್ರಶ್ನೆ ಮಾಡಿದರು.

ಯಾವಾಗ ಅಶ್ವಿನಿ ರಾಂಗ್‌ ಆಗಿದ್ದರೆ ಎಂಬುದು ಚೈತ್ರಾ ಕುಂದಾಪುರಗೆ ಇನ್ನಷ್ಟು ಕಿರಿ ಕಿರಿ ಆಯಿತು. ಅಲ್ಲದೆ, ಅತಿಥಿಗಳೆಲ್ಲಾ ಅಶ್ವಿನಿ ಮೇಲೆ ತಿರುಗಿಬಿದ್ದರು.ಅತಿಥಿಗಳೆಲ್ಲಾ ಸೇರಿ ಅಶ್ವಿನಿ ಗೌಡ ಅವರು "ತಲೆಯಲ್ಲಿ ಬುದ್ದಿ ಇಲ್ಲ" ಎಂದು ಹೇಳಬೇಕು ಪಟ್ಟು ಹಿಡಿದರು. ಇದರ ಮಧ್ಯೆ ಅತಿಥಿಗಳ ಬಳಿ ಕ್ಷಮೆ ಕೇಳಿಸುವುದಾಗಿ ಕಮಿಟ್‌ ಆಗಿದ್ದ ಕಾವ್ಯ ಮೇಲೂ ಅಶ್ವಿನಿ ಗೌಡ ಅವರು ರಾಂಗ್‌ ಆದರು. ಅಂತಿಮವಾಗಿ ಚೈತ್ರಾ ಎದುರು ನಿಂತು ಅಶ್ವಿನಿ ಗೌಡ ಅವರು ಕ್ಷಮೆ ಕೇಳಿದರು.

ಇದನ್ನೂ ಓದಿ: Bigg Boss Kannada 12: ಯಾವುದೇ ವ್ಯಕ್ತಿಗೆ, ಪ್ರಾಣಿಗೆ ಸಂಬಂಧಿಸಿದ್ದಲ್ಲ ಅಂತ ಗಿಲ್ಲಿ ಹೇಗೆ ಡೈಲಾಗ್‌ ಹೇಳಿದ್ರು ಗೊತ್ತಾ? ಎಂಜಾಯ್ ಮಾಡಿದ್ರು ಗೆಸ್ಟ್‌ಗಳು

‘ಅಧ್ಯಕ್ಷನೋ, ಸೈನಿಕನೋ ಕಾಯಕವೇ ಧ್ಯೇಯ. ಚೈತ್ರಾ ಅವರು ಕೇಳಿದ ಪ್ರಶ್ನೆಗೆ ನನ್ನಲ್ಲಿ ಉತ್ತರ ಇರಲಿಲ್ಲ. ಆ ಪ್ರಶ್ನೆಗೆ ನನ್ನಲ್ಲಿ ಬುದ್ಧಿವಂತಿಕೆ ಇಲ್ಲ. ಹಾಗಾಗಿ ನಾನು ಇಂದು ನನ್ನ ಬಿಬಿ ಪ್ಯಾಲೇಸ್​ನ ಎಲ್ಲ ಸಿಬ್ಬಂದಿಯ ಪರವಾಗಿ ಚೈತ್ರಾ ಅವರಲ್ಲಿ ಕ್ಷಮೆ ಕೇಳುತ್ತೇನೆ’ ಎಂದು ಅಶ್ವಿನಿ ಗೌಡ ಅವರು ಹೇಳಿದರು.