ಈ ವಾರ ಬಿಗ್ ಬಾಸ್‌ನಲ್ಲಿ ಸೀಸನ್ 11ರ (Bigg Boss Kannada 11) ಸ್ಪರ್ಧಿಗಳ ಆಟ ಜೋರಾಗಿತ್ತು. ಬಂದಾಗಿನಿಂದ ಗಿಲ್ಲಿ ಬಗ್ಗೆ ಉಗ್ರಂ ಮಂಜು (Ugram Manju) ಜೊತೆಗೆ ರಜತ್ ಹೆಚ್ಚು ಗರಂ ಆಗಿದ್ದರು. ಎಷ್ಟನೇ ಮದುವೆ ಅಂತ ಗಿಲ್ಲಿ ಅವರು ಮಂಜು ಅವರಿಗೆ ಕೇಳಿದ್ದೇ, ಮಂಜು ಅವರಿಗೆ ಟ್ರಿಗರ್ ಆಗಿತ್ತು. ಅಷ್ಟೇ ಅಲ್ಲ ಮನೆಯಲ್ಲಿ ಗಿಲ್ಲಿ (Gilli Nata) ಮೇಲೆ ಟಾರ್ಗೆಟ್ ಮಾಡಲು ಶುರು ಮಾಡಿದರು. ಆದರೆ ಮೊನ್ನೆಯಿಂದ ಗಿಲ್ಲಿ ಮನೆಯಲ್ಲಿ ಸೈಲೆಂಟ್ ಆಗಿದ್ದಾರೆ. ಮಂಜು ಅವರು ಮೋಕ್ಷಿತಾ ಬಳಿ ಗಿಲ್ಲಿ ಬಗ್ಗೆ ಗುಣಗಾನ ಮಾಡಿದ್ದಾರೆ. ಅಚ್ಚರಿ ಅಂದರೆ ಗಿಲ್ಲಿ ನಟನಿಗೆ ಉಗ್ರಂ ಮಂಜು `ವಿಜಯ ತಿಲಕ' ಇಟ್ಟಿದ್ದಾರೆ.
ಅಚ್ಚರಿಯ ಘಟನೆ
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ಬಗ್ಗೆ ಆಗಾಗ ಜಾಹ್ನವಿ ಹಾಗೂ ಅಶ್ವಿನಿ ಗೌಡ ಬಿಗ್ ಬಾಸ್ ಕನ್ನಡ ಸೀಸನ್ 12 ಸ್ವಯಂ ಘೋಷಿತ ವಿನ್ನರ್ ಗಿಲ್ಲಿ ಅಂತ ಹೇಳುತ್ತಲೇ ಇರ್ತಾರೆ. ಆದ್ರೆ ಯಾವಾಗ ಸೀಸನ್11ರ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟರೋ ಅಲ್ಲಿಂದ ಗಿಲ್ಲಿ ಮೇಲೆ ಟಾರ್ಗೆಟ್ ಜಾಸ್ತಿ ಆಗುತ್ತಲೇ ಹೋಯ್ತು.
ಇದನ್ನೂ ಓದಿ: Bigg Boss Kannada 12: ನನಗೆ ಪುನರ್ ಜನ್ಮ ಕೊಟ್ಟಿದ್ದೇ ಬಿಗ್ ಬಾಸ್! ಕಣ್ಣೀರಿಟ್ಟ ಚೈತ್ರಾ ಕುಂದಾಪುರ
ಹೆಚ್ಚಾಗಿ ಮಂಜು ಹಾಗೂ ಗಿಲ್ಲಿ ನಡುವೆ ಮನಸ್ತಾಪ ಆಯಿತು. ಗಿಲ್ಲಿ ಮೇಲೆ ಹಲವು ಬಾರಿ ಕೋಪ ತೀರಿಸಿಕೊಂಡಿದ್ದಾರೆ ಉಗ್ರಂ ಮಂಜು. ಗಿಲ್ಲಿ ನಟನ ಬಾಯಿಗೆ ಆಲೂಗೆಡ್ಡೆ ತಿರುಕಿದರು. ಗಿಲ್ಲಿ ನಟ ಕೆಲವು ಕೆಲಸಗಳನ್ನ ಮಾಡಲೇಬೇಕು ಎಂದು ಉಗ್ರಂ ಮಂಜು ಪಟ್ಟು ಹಿಡಿದರು. ಇದರ ಬೆನ್ನಲ್ಲೇ ನಿನ್ನೆ ಅಚ್ಚರಿಯ ಘಟನೆವೊಂದು ಸಂಭವಿಸಿದೆ.
ಗಿಲ್ಲಿ ನಟನ ಹಣೆಗೆ ಕುಂಕುಮ ಇಟ್ಟ ಮಂಜು
ಗಿಲ್ಲಿ ನಟನ ಹಣೆಗೆ ಉಗ್ರಂ ಮಂಜು ಕುಂಕುಮ ಇಟ್ಟಿದ್ದಾರೆ. ಈ ಬಗ್ಗೆ ಮೋಕ್ಷಿತಾ ಪೈ ಬಳಿ ಉಗ್ರಂ ಮಂಜು ಮಾತನಾಡಿ ’ಗಿಲ್ಲಿನ ಕರೆದೆ, ದೊಡ್ಡ ಕುಂಕುಮ ಇಟ್ಟೆ. ಅವನು ಹೇಳಿದ ಯಾರೂ ಇಟ್ಟಿಲ್ಲ ಸರ್. ಇದು ವಿಜಯದ ತಿಲಕ ಅಂದ. ಆ ತಾಯಿ ಚಾಮುಂಡೇಶ್ವರಿ ದಯೆಯಿಂದ ನೀನೇ ಗೆಲ್ಲಲಿ, ನಿನಗೆ ಒಳ್ಳೇದು ಮಾಡಲಿ ಬಿಡು ಅಂದೆ ಎಂದು ಹೇಳಿದ್ದಾರೆ. ಟಾಸ್ಕ್ ವೇಳೆ ಗಿಲ್ಲಿ ನಟ ಹಾಗೂ ಉಗ್ರಂ ಮಂಜು ನಡುವೆ ಎಷ್ಟೇ ಮನಸ್ತಾಪ ಆಗಿದ್ದರೂ ಗಿಲ್ಲಿ ಬಗ್ಗೆ ಹೇಳಿರೋ ಈ ಮಾತು ಗಿಲ್ಲಿ ಫ್ಯಾನ್ಸ್ ಮನ ಮುಟ್ಟಿದೆ.
ವೈರಲ್ ವಿಡಿಯೋ
ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ಎಲ್ಲಿ ಅವಮಾನ ಅಲ್ಲೇ ಸನ್ಮಾನ . ಮಂಜು ಬಾಯಿಯಲ್ಲಿ ಗಿಲ್ಲಿ ಗೆಲ್ಲಬೇಕು. ತಾಯಿ ಚಾಮುಂಡೇಶ್ವರಿ ಆಶೀರ್ವಾದ ಗಿಲ್ಲಿ ಗೆಲ್ಲಲಿ, ಮುಗ್ಧ ಹೃದಯವಂತ ಗಿಲ್ಲಿ ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ. ವಿಡಿಯೋ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟನ ಗಡ್ಡವನ್ನ ಸ್ವತಃ ಉಗ್ರಂ ಮಂಜು ಟ್ರಿಮ್ ಮಾಡಿದ್ದರು. ಈ ಹಿಂದೆ ಕಾವ್ಯ ಮಾತು ಕೇಳಿ ಕೆಂಪೇಗೌಡ ಸ್ಟೈಲ್ನಲ್ಲಿ ಮೀಸೆ ಬಿಟ್ಟು ಗಡ್ಡ ತೆಗೆದಿದ್ರು. ಮಜವಾಗಿ ಕಂಡಿದ್ದರು ಗಿಲ್ಲಿ.
ಗೆಸ್ಟ್‌ಗಳು ಮನೆಯೊಳಗೆ ಕಾಲಿಟ್ಟ ದಿನದಿಂದಲೂ ಅವರಿಗೆ ಸರಿಸಮಾನಾಗಿ ನಿಂತವರು ಗಿಲ್ಲಿ ನಟ. ರಜತ್ ಮತ್ತು ಮಂಜುಗೆ ಆಗಾಗ ಕೌಂಟರ್ ಕೊಡುತ್ತಾ ಆಟದ ಮಜಾವನ್ನು ಗಿಲ್ಲಿ ನಟ ಜಾಸ್ತಿ ಮಾಡಿದ್ದರು. ಸಹಜವಾಗಿಯೇ ಇದು ಮಂಜು ಮತ್ತು ರಜತ್‌ಗೆ ಕಿರಿ ಕಿರಿ ಉಂಟು ಮಾಡಿತ್ತು. ಗಿಲ್ಲಿಯನ್ನು ಕಟ್ಟಿಹಾಕಬೇಕು ಎಂದು ನಾನಾ ರೀತಿಯಲ್ಲಿ ಟಾರ್ಗೆಟ್ ಮಾಡುತ್ತಿದ್ದರು.