ಬಿಗ್ ಬಾಸ್ ಮನೆಗೆ ಗಿಲಿ ನಟ ಮತ್ತು ಕಾವ್ಯ ಶೈವ ಜಂಟಿಯಾಗಿ ಎಂಟ್ರಿ ನೀಡಿದ್ದರು. ಅಂದಿನಿಂದ ಗಿಲ್ಲಿ ಮತ್ತು ಕಾವ್ಯ ಜೊತೆಯಾದರು. ಮನೆಯೊಳಗೆ ಇಬ್ಬರ ನಡುವೆ ಒಂದು ಬಾಂಡಿಂಗ್ ಕ್ರಿಯೆಟ್ ಆಗಿತ್ತು. ಅದೇ ಒಮ್ಮೊಮ್ಮೆ ಸಮಸ್ಯೆಯನ್ನು ಕೂಡ ತಂದೊಡ್ಡಿದ ಉದಾಹರಣೆಗಳು ಕೂಡ ಇವೆ. ಕಾವ್ಯಗೆ ಗಿಲ್ಲಿ ಸಿಕ್ಕಾಪಟ್ಟೆ ರೇಗಿಸುತ್ತಾರೆ. ಅದು ಕಾವ್ಯಗೆ ಇಷ್ಟವಾಗುತ್ತಿರಲಿಲ್ಲ. ಹಾಗಾಗಿ, ಕಾವ್ಯ ಕಡೆಯಿಂದ ವಾರ್ನಿಂಗ್ ಕೂಡ ಬಂದಿದೆ. ಆದರೂ ಗಿಲ್ಲಿ ಮಾತ್ರ ಕಂಟ್ರೋಲ್‌ಗೆ ಸಿಗದಂತೆ ರೇಗಿಸುತ್ತಾರೆ!
ರಕ್ಷಿತಾಗೆ ತಂಗಿ ಪಟ್ಟ!
ಈಚೆಗಷ್ಟೇ ನನ್ನನ್ನು ರೇಗಿಸಬೇಡ ಎಂದು ಕಾವ್ಯ ಎಚ್ಚರಿಕೆಯನ್ನು ಗಿಲ್ಲಿಗೆ ಕೊಟ್ಟಿದ್ದರು. ಆದರೆ ಅದು ಗಿಲ್ಲಿಗೆ ತಾಕಿದಂತೆ ಕಾಣುತ್ತಿಲ್ಲ. ಸುದೀಪ್ ಮುಂದೆಯೇ ಮತ್ತೊಮ್ಮೆ ಕಾವ್ಯಗೆ ಮಾವನ ಮಗಳು ಅಂತ ಕರೆದಿದ್ದಾರೆ. ಪ್ರೀ-ಫಿನಾಲೆ ಸಂಚಿಕೆಯಲ್ಲಿ ಇದು ನಡೆದಿದೆ. "ಈ ಮನೆಯಲ್ಲಿ ಅಪ್ಪ ಅಮ್ಮ ಯಾರು" ಎಂದು ಸುದೀಪ್ ಕೇಳಿದ್ದಾರೆ. ಅದಕ್ಕೆ ಉತ್ತರಿಸಿರುವ ಗಿಲ್ಲಿ ನಟ, "ರಘು ಅಣ್ಣ ಅಪ್ಪ. ಅಮ್ಮ ಎಂದರೆ ಅದು ಅಶ್ವಿನಿ ಮೇಡಂ. ಅಣ್ಣ ಅಂದರೆ ನಮ್ಮ ಧನು ಅಣ್ಣ. ತಂಗಿ ರಕ್ಷಿತಾ" ಎಂದು ಹೇಳಿದ್ದಾರೆ.
Chowkidar Movie : ಗಿಲ್ಲಿ ನಟ ನಟಿಸಿರೋ ಮತ್ತೊಂದು ಸಿನಿಮಾ ರಿಲೀಸ್ ಡೇಟ್ ಅನೌನ್ಸ್! ಪಾತ್ರ ಏನು?
ಬೇಸಿಗೆ ರಜೆಗ ಬರುವ ಮಾವನ ಮಗಳು
ನಂತರ ಕಾವ್ಯ ಕಡೆ ನೋಡಿ, "ಈ ಬೇಸಿಗೆ ರಜೆಗೆ ಮಾವನ ಮಗಳು ಊರಿಂದ ಬಂದಿರ್ತಲ್ಲ ಸಾರ್.. ಆ ಥರ ಕಾವ್ಯ.." ಎಂದು ಗಿಲ್ಲಿ ನಟ ಹೇಳಿದ್ದಾರೆ. ಗಿಲ್ಲಿ ಹೇಳಿದ ಮಾತಿಗೆ ಸುದೀಪ್‌ಗೆ ನಗು ತಡೆಯಲಾಗಲಿಲ್ಲ. ಅಂದಹಾಗೆ, ಕಳೆದ ವಾರವಷ್ಟೇ ಸುದೀಪ್ ಎದುರೇ, "ನನ್ನನ್ನು ರೇಗಿಸಬೇಡ, ಅದು ನನಗೆ ಇಷ್ಟವಾಗಲ್ಲ. ಈಗಲಾದರೂ ರೇಗಿಸೋದು ನಿಲ್ಲಿಸು.. ಇಲ್ಲಾಂದ್ರೆ ಹೊರಗೆ ಹೋಗ್ತಿದ್ದಂತೆ ಬ್ಲಾಕ್ ಮಾಡೋದಂತೂ ಪಕ್ಕಾ" ಎಂದು ಕಾವ್ಯ ಹೇಳಿದ್ದರು. ಆದರೂ ಮತ್ತೆ ಕಾವ್ಯಗೆ ಮಾವನ ಮಗಳು ಎಂಬರ್ಥದಲ್ಲಿ ಹೇಳಿ ಗಿಲ್ಲಿ ನಟ ರೇಗಿಸಿದ್ದಾರೆ.
ಕಾವ್ಯಗೆ ರೇಗಿಸಿದ ಗಿಲ್ಲಿ ನಟ
ಹೀಗೆ ಪದೇ ಪದೇ ರೇಗಿಸುವುದಕ್ಕೆ ಕಾವ್ಯಗೆ ನಿಜಕ್ಕೂ ಬೇಸರವಾಗಿತ್ತು. ಆರಂಭದಲ್ಲಿ ಗಿಲ್ಲಿ ಕಾಮಿಡಿ ನನಗೆ ಏನೂ ಹರ್ಟ್ ಮಾಡುವುದಿಲ್ಲ ಎನ್ನುತ್ತಿದ್ದ ಕಾವ್ಯ, ಬಳಿಕ ಅದರಿಂದ ಕಿರಿಕಿರಿ ಮಾಡಿಕೊಳ್ಳುತ್ತಿದ್ದರು. ಯಾವ ಮಟ್ಟಕ್ಕೆಂದರೇ, ಕಾವ್ಯ ಅವರನ್ನು ಕಂಡಾಗೆಲ್ಲಾ,‘ಕಾವು.. ಕಾವು..’ ಅಂತ ಅವರ ಹಿಂದೆಯೇ ಗಿಲ್ಲಿ ನಟ ಓಡಾಡುತ್ತಿರುತ್ತಾರೆ. ಇದನ್ನು ಗಮನಿಸಿರುವ ಕಾವ್ಯ, "ನನ್ನ ಮದುವೆಗೆ ಏನಾದರೂ ತೊಂದರೆ ಆದರೆ, ಅದಕ್ಕೆ ಗಿಲ್ಲಿ ಕಾರಣ" ಎಂದಿದ್ದರು. ಆದರೆ ಗಿಲ್ಲಿ ಮಾತ್ರ ಪ್ರೀ-ಫಿನಾಲೆ ವೇದಿಕೆ ಮೇಲೂ ಕಾಲೆಳೆಯುವುದನ್ನು ನಿಲ್ಲಿಸಿಲ್ಲ.