ʻಬಿಗ್ ಬಾಸ್ʼ ಮನೆಯಲ್ಲಿ ಗಿಲ್ಲಿ ನಟ ತನ್ನದೇ ಹವಾ ಮೆಂಟೇನ್ ಮಾಡಿರುವುದು ಗೊತ್ತೇ ಇದೆ. ಒಂದಷ್ಟು ಮಂದಿ ಅಶ್ವಿನಿ ಗೌಡ ಜೊತೆ ಟೀಮ್ ಮಾಡಿಕೊಂಡು, ಅವರೆದುರು ತಗ್ಗಿಬಗ್ಗಿ ನಡೆಯುತ್ತಿದ್ದರೆ, ಗಿಲ್ಲಿ ನಟ ಮಾತ್ರ ಏಟಿಗೆ ಎದುರೇಟು ಅಂತ ಹವಾ ಎಂದು ತೋರಿಸುತ್ತಿದ್ದಾರೆ. ಈ ನಡುವೆ ತಮ್ಮ ಒಂದು ನಿರ್ಧಾರದಿಂದ ಎಲ್ಲರ ಬಾಯಿ ಮುಚ್ಚಿಸಿದ್ದಾರೆ. ಅಷ್ಟಕ್ಕೂ ಇಂಥದ್ದೊಂದು ದಾಳವನ್ನು ಗಿಲ್ಲಿ ಉರುಳಿಸುತ್ತಾರೆ ಎಂದು ಯಾರೆಂದರೇ ಯಾರೂ ಊಹಿಸಿರಲಿಲ್ಲ!
ಗಿಲ್ಲಿ ನಟ ನಡೆ ಏನಾಗಿತ್ತು?
ಗಿಲ್ಲಿ ನಟ ನಾಯಕತ್ವದ ಬ್ಲ್ಯೂ ಟೀಮ್ ಮತ್ತು ಅಶ್ವಿನಿ ಗೌಡ ನಾಯಕತ್ವದ ರೆಡ್ ಟೀಮ್ ಮೂರು ಟಾಸ್ಕ್‌ಗಳನ್ನ ಆಡಿದ್ದರು. ಅದರಲ್ಲಿ ಎರಡರಲ್ಲಿ ಅಶ್ವಿನಿ ಗೌಡ ಗೆದ್ದು ತಮ್ಮ ತಂಡದ ಅಭಿ ಮತ್ತು ಧ್ರುವಂತ್ ಅವರನ್ನು ಕ್ಯಾಪ್ಟನ್ಸಿ ರೇಸ್‌ಗೆ ಆಯ್ಕೆ ಮಾಡಿದ್ದರು. ಗಿಲ್ಲಿ ನಟ ಟೀಮ್ ಕೊನೇ ಟಾಸ್ಕ್ ಅನ್ನು ಗೆದ್ದರು. ಆಗ ಬಿಗ್ ಬಾಸ್ ನೀಡಿದ ಒಂದು ಅಧಿಕಾರದಿಂದ ಒಬ್ಬರನ್ನು ಕ್ಯಾಪ್ಟನ್ಸಿ ರೇಸ್‌ಗೆ ಆಯ್ಕೆ ಮಾಡುವ ಅಧಿಕಾರವನ್ನು ಗಿಲ್ಲಿ ಪಡೆದುಕೊಂಡರು.
BBK 12: ಬಿಗ್ ಬಾಸ್ ಮನೆಯಲ್ಲಿ ಕಾವ್ಯಾ ವಿಚಾರವಾಗಿ ಗಿಲ್ಲಿ-ರಿಷಾ ನಡುವೆ ಜಗಳ
ರಾಶಿಕಾಗೆ ಚಾನ್ಸ್ ನೀಡಿದ ಗಿಲ್ಲಿ
ಗಿಲ್ಲಿ ತಂಡದಲ್ಲಿ ಸೂರಜ್, ರಕ್ಷಿತಾ, ರಾಶಿಕಾ ಮುಂತಾದವರು ಇದ್ದರು. ಆದರೆ ಗಿಲ್ಲಿ ನಟನ ಆಯ್ಕೆ ರಾಶಿಕಾ ಶೆಟ್ಟಿ ಆಗಿದ್ದರು. ಇದು ನಿಜಕ್ಕೂ ಸ್ಪರ್ಧಿಗಳಿಗೆ ಶಾಕ್ ನೀಡಿತು. ಯಾಕೆಂದರೆ, ರಾಶಿಕಾರನ್ನು ಆಯ್ಕೆ ಮಾಡುವ ಮುನ್ನ ಧನುಷ್ ಸೇರಿದಂತೆ, ಒಂದಷ್ಟು ಮಂದಿ ರಾಶಿಕಾ ಶೆಟ್ಟಿಯನ್ನು ಗಿಲ್ಲಿ ಆಯ್ಕೆ ಮಾಡಲು ಸಾಧ್ಯವೇ ಇಲ್ಲ ಎಂದಿದ್ದರು. ಅದರಲ್ಲೂ ಧನುಷ್, "ಕ್ಯಾಪ್ಟನ್ಸಿ ರೇಸ್‌ಗೆ ರಾಶಿಕಾನ ಗಿಲ್ಲಿ ಆಯ್ಕೆ ಮಾಡ್ತಾನಾ? ಕಾವ್ಯ ಏನಾದ್ರೂ ಟೀಮ್ ಅಲ್ಲಿದ್ದು, ಈ ಟಾಸ್ಕ್ ಅನ್ನು ಆಡಿ, ಗೆದ್ದಿದ್ರೆ, ಪಕ್ಕಾ ಕಾವ್ಯಗೆ ಗಿಲ್ಲಿ ಚಾನ್ಸ್ ಕೊಡ್ತಿದ್ದ" ಎಂದು ಹೇಳಿದ್ದರು.
BBK 12: ಎರಡೇ ದಿನಕ್ಕೆ ಹೊತ್ತಿ ಉರಿದ ಬಿಗ್ ಬಾಸ್ ಮನೆ: ಗಿಲ್ಲಿ-ಅಶ್ವಿನಿ ನಡುವೆ ಮಾತಿನ ಚಕಮಕಿ
ಅಲ್ಲದೇ, ಈ ಹಿಂದೆ ಕ್ಯಾಪ್ಟನ್ಸಿ ಕಂಟೆಂಡರ್ ವಿಚಾರದಲ್ಲಿ ಗಿಲ್ಲಿ ಹಾಗೂ ರಾಶಿಕಾ ಶೆಟ್ಟಿಗೂ ಜಗಳವಾಗಿತ್ತು. ಅಂದು ರಾಶಿಕಾಗೆ ಕ್ಯಾಪ್ಟನ್ಸಿ ಕಂಟೆಂಡರ್ ಆಗುವ ಅವಕಾಶ ಮಿಸ್ ಆಗಿತ್ತು. ಹಾಗಾಗಿ, ರಾಶಿಕಾರನ್ನು ಗಿಲ್ಲಿ ಆಯ್ಕೆ ಮಾಡುವುದಿಲ್ಲ ಎನ್ನಲಾಗಿತ್ತು. ರಾಶಿಕಾಗೂ ತಮ್ಮನ್ನು ಆಯ್ಕೆ ಮಾಡುತ್ತಾರೆ ಎಂಬ ನಿರೀಕ್ಷೆ ಇರಲಿಲ್ಲ. ಆದರೆ ಗಿಲ್ಲಿಯ ಅಚ್ಚರಿಯ ನಿರ್ಧಾರ ತೆಗೆದುಕೊಂಡರು. ತಮ್ಮ ತಂಡಕ್ಕಾಗಿ ಆಡಿದ ರಾಶಿಕಾ ಶೆಟ್ಟಿಯನ್ನು ಕ್ಯಾಪ್ಟನ್ಸಿ ರೇಸ್‌ಗೆ ಆಯ್ಕೆ ಮಾಡಿ ಎಲ್ಲರ ಮನಸ್ಸು ಗೆದ್ದಿದ್ದಾರೆ ಗಿಲ್ಲಿ.
"ರಾಶಿಕಾ ಶೆಟ್ಟಿ ಅವರನ್ನ ಕ್ಯಾಪ್ಟನ್ಸಿ ರೇಸ್‌ಗೆ ಆಯ್ಕೆ ಮಾಡುತ್ತಿದ್ದೇನೆ. ರಾಶಿಕಾ ಎಲ್ಲಾ ಟಾಸ್ಕ್‌ಗಳಲ್ಲೂ ಉತ್ತಮವಾಗಿ ಶ್ರಮ ಹಾಕಿ ಆಡಿದರು. ಅಲ್ಲದೆ, ಈ ಹಿಂದೆ ನಾನೇ ತಪ್ಪು ತಿಳಿದುಕೊಂಡು, ಅವರನ್ನು ಕ್ಯಾಪ್ಟನ್ಸಿ ರೇಸ್‌ಗೆ ಹೋಗದಂತೆ ಮಾಡಿದ್ದೆ. ಅವತ್ತು ನಾನು ಅವಕಾಶ ನೀಡಿದ್ದರೆ ರಾಶಿಕಾ ಖಂಡಿತಾ ಕ್ಯಾಪ್ಟನ್ ಆಗುತ್ತಿದ್ದರು. ಹಾಗಾಗಿ, ಒಂದು ತಪ್ಪಿತಸ್ಥ ಭಾವನೆ ನನ್ನನ್ನು ಕಾಡುತ್ತಿದೆ. ಅದಕ್ಕೋಸ್ಕರ ರಾಶಿಕಾಗೆ ಕ್ಯಾಪ್ಟನ್ಸಿ ಓಟಕ್ಕೆ ಹೋಗಬೇಕು" ಎಂದು ಗಿಲ್ಲಿ ಹೇಳಿದ್ದಾರೆ. ಈ ಮಾತು ಕೇಳಿದ ರಾಶಿಕಾ ನಿಜಕ್ಕೂ ಅಚ್ಚರಿ ಪಟ್ಟರು!
ಹೀಗೆ ತಮ್ಮ ನಿರ್ಧಾರದಿಂದ ಎಲ್ಲರ ಅಚ್ಚರಿ ನೀಡಿದ ಗಿಲ್ಲಿ ನಟ, ಕೆಲವರ ಬಾಯಿ ಮುಚ್ಚಿಸಿದ್ದಾರೆ. ಅವರು ಅಂದುಕೊಂಡಿದ್ದನ್ನ ಸುಳ್ಳು ಮಾಡಿ, ಆಡಿಯೆನ್ಸ್ ಪ್ರೀತಿಗೂ ಪಾತ್ರವಾಗಿದ್ದಾರೆ.