ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ʻಬಿಗ್‌ ಬಾಸ್‌ʼ ಕೊಟ್ಟ ಡೀಲ್‌ನ ಸಕ್ಸಸ್‌ಫುಲ್‌ ಆಗಿ ಮುಗಿಸಿದ ಗಿಲ್ಲಿ ನಟ; ಕ್ಯಾಪ್ಟನ್ಸಿ ರೇಸ್‌ಗೆ ಮಾತಿನ ಮಲ್ಲನ ಡೈರೆಕ್ಟ್‌ ಎಂಟ್ರಿ?

Bigg Boss 12: ʻಬಿಗ್‌ ಬಾಸ್‌ʼ ಕನ್ನಡ ಸೀಸನ್‌ 12ರಲ್ಲಿ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಅವರಿಗೆ 'ವಿಲನ್‌' ಎರಡು ಟಾಸ್ಕ್‌ಗಳನ್ನ ನೀಡಿದ್ದರು. ಆ ಎರಡೂ ಟಾಸ್ಕ್‌ಗಳನ್ನು ಯಶಸ್ವಿಯಾಗಿ ಮುಗಿಸಿದರೆ ನೇರವಾಗಿ ಕ್ಯಾಪ್ಟನ್ಸಿ ರೇಸ್‌ಗೆ ಎಂಟ್ರಿ ನೀಡುವ ಚಾನ್ಸ್‌ ಸಿಗಲಿದೆ. ಸದ್ಯ ಅದರ ಅಪ್‌ಡೇಟ್‌ ಏನು? ಮುಂದೆ ಓದಿ.

ʻಬಿಗ್‌ ಬಾಸ್‌ʼ ಕನ್ನಡ ಸೀಸನ್‌ 12ರಲ್ಲಿ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ಗಳು ಎದುರಾಗುತ್ತಲೇ ಇವೆ. ಸದ್ಯ ಬಿಗ್‌ ಬಾಸ್‌ ತಮ್ಮ ರೂಪವನ್ನು ವಿಲನ್‌ ಎಂದು ಬದಲಿಸಿಕೊಂಡಿದ್ದು, ಮನೆಯೊಳಗೆ ಹಾರರ್‌ ಎಫೆಕ್ಟ್‌ ಆಗಿದೆ. ಇದೀಗ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಅವರಿಗೆ ವಿಲನ್‌ ಒಂದು ಟಾಸ್ಕ್‌ ನೀಡಿದ್ದರು. ಅದರಲ್ಲಿ ಗೆದ್ದರೆ ನೇರವಾಗಿ ಕ್ಯಾಪ್ಟನ್ಸಿ ರೇಸ್‌ಗೆ ಎಂಟ್ರಿ ನೀಡುವುದಾಗಿ ತಿಳಿಸಿದ್ದರು. ಈಗ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಅದರಲ್ಲಿ ಗೆದ್ರಾ? ಮುಂದೆ ಓದಿ.

ಬಿಗ್‌ ಬಾಸ್‌ ಕೊಟ್ಟ ಟಾಸ್ಕ್‌ ಏನು?

"ನೀವು ಇಬ್ಬರೂ ಪ್ಲ್ಯಾನ್‌ ಮಾಡಿ, ಕಾವ್ಯ ಕಣ್ಣಲ್ಲಿ ನೀರಾಕಿಸಬೇಕು. ಮತ್ತು ಲಿವಿಂಗ್‌ ಏರಿಯಾದಲ್ಲಿ ಕಿಚ್ಚನ ಚಪ್ಪಾಳೆಯ ವಾಲ್‌ನಿಂದ ಯಾರಿಗೂ ಗೊತ್ತಾಗದಂತೆ ಮೂರು ಫೋಟೋ ಫ್ರೇಮ್‌ಗಳನ್ನ ತಂದು ಸ್ಟೋರ್‌ ರೂಮ್‌ನಲ್ಲಿ ಇಡಬೇಕು. ನಾಳೆ ಬೆಳಗ್ಗೆವರೆಗೂ ಟೈಮ್‌ ಇದೆ" ಎಂದು ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ಅವರಿಗೆ ಟಾಸ್ಕ್‌ ನೀಡಲಾಗಿತ್ತು. ಇದೀಗ ಅದನ್ನು ಗಿಲ್ಲಿ ಮುಗಿಸಿರುವಂತೆ ಕಂಡಿದೆ.

Bigg Boss Kannada 12: ಬಿಗ್‌ ಬಾಸ್‌ ಜಂಟಿ ಕ್ಯಾಪ್ಟನ್‌ ಆದ ಜೋಡಿ ಇದೇ! ಗಿಲ್ಲಿ-ಕಾವ್ಯಗೆ ಹೀನಾಯ ಸೋಲು

ಒಲ್ಲದ ಮನಸ್ಸಿನಿಂದಲೇ ಅಳಿಸಿದ ಗಿಲ್ಲಿ

ಹೌದು, ಬಿಗ್‌ ಬಾಸ್‌ ಹೇಳಿದಾಗಲೇ ಗಿಲ್ಲಿಗೆ ಇದು ಇಷ್ಟವಿರಲಿಲ್ಲ. ಆದರೂ ಕಟ್ಟುಬಿದ್ದು ಒಲ್ಲದ ಮನಸ್ಸಿನಿಂದಲೇ ಅದನ್ನು ಒಪ್ಪಿಕೊಳ್ಳಬೇಕಾಯಿತು. ಬಳಿಕ ಕಾವ್ಯಗೆ ಚುಚ್ಚುಮಾತುಗಳಿಂದ ನೋವನ್ನು ಉಂಟು ಮಾಡುವುದಕ್ಕೆ ಪ್ರಯತ್ನಿಸಿದ್ದಾರೆ ಗಿಲ್ಲಿ ನಟ. "ಬೆನ್ನಿಗೆ ಚೂರಿ ಹಾಕಿಬಿಟ್ರಲ್ರೀ, ನಾನು ಜಂಟಿಯಾಗಿ ಹೋಗಬಾರದಿತ್ತು. ಅಲ್ಲೇ ನಾನು ತಪ್ಪು ಮಾಡಿದ್ದು.. ನಿಜವಾಗಿಯೂ ಸ್ಪಂದನಾ ಅಲ್ಲ ಲಕ್ಕಿ.. ನೀವು ಲಕ್ಕಿ.. ನಾನು ಈಗಲೂ ಹೇಳ್ತೀನಿ.. ನೀವು ಫ್ರೀ ಪ್ರಾಡಕ್ಟ್" ಎಂದು ಮುಖಕ್ಕೆ ಹೊಡೆದಂತೆ ಕಾವ್ಯಗೆ ಗಿಲ್ಲಿ ನಟ ಹೇಳಿದ್ದಾರೆ.

Bigg Boss Kannada 12: ಗಿಲ್ಲಿ-ಕಾವ್ಯಾ ಜೋಡಿಗೆ ಟಾಸ್ಕ್‌ನಿಂದ ಗೇಟ್‌ಪಾಸ್‌? ಅಶ್ವಿನಿ, ರಘು ನಿರ್ಧಾರ ಎನು?

ಈ ಮಾತನ್ನು ಕೇಳಿದ ಕಾವ್ಯ ದುಃಖ ತಡೆಯಲಾರದೆ, ಕಣ್ಣೀರು ಹಾಕಿದ್ದಾರೆ. "ಗಿಲ್ಲಿ ಹೇಳಿದಷ್ಟನ್ನೂ ನನ್ನಿಂದ ತೆಗೆದುಕೊಳ್ಳಲು ಆಗಲಿಲ್ಲ" ಎಂದು ಕಾವ್ಯ ಅತ್ತಿದ್ದಾರೆ. ಈ ಕುರಿತ ಪ್ರೋಮೋವನ್ನ ಕಲರ್ಸ್‌ ಕನ್ನಡ ರಿಲೀಸ್‌ ಮಾಡಿದೆ. ಅಲ್ಲಿಗೆ ಕಾವ್ಯಗೆ ಅಳಿಸಬೇಕು ಎಂದು ನೀಡಿದ್ದ ಟಾಸ್ಕ್‌ ಪೂರ್ಣಗೊಂಡಿದೆ.

ಗಿಲ್ಲಿ ನಟ ಹೊಸ ಪ್ರೋಮೋ



ಫೋಟೋ ಫ್ರೇಮ್‌ ಕೂಡ ಮಾಯ

ಬಿಗ್‌ ಬಾಸ್‌ ಹೇಳಿದ್ದ ಮತ್ತೊಂದು ಟಾಸ್ಕ್‌ ಎಂದರೆ, ಕಿಚ್ಚನ ಚಪ್ಪಾಳೆಯ ವಾಲ್‌ನಿಂದ ಮೂರು ಫೋಟೋ ಫ್ರೇಮ್‌ಗಳನ್ನು ಅನ್ನು ಮುಚ್ಚಿಡುವುದು. ಅದನ್ನು ಕೂಡ ಗಿಲ್ಲಿ ಸದ್ದಿಲ್ಲದೇ ಮಾಡಿದ್ದಾರೆ. ಈಗ ಮನೆಯೊಳಗೆ ಇರುವ ಸದಸ್ಯರು ಅದರ ಹುಡುಕಾಟ ಆರಂಭಿಸಿದ್ದಾರೆ. ಅಲ್ಲಿಗೆ ಅದು ಕೂಡ ಮುಕ್ತಾಯವಾದಂತೆ ಆಗಿದೆ. ಈ ಎರಡೂ ಟಾಸ್ಕ್‌ಗಳನ್ನು ಮುಗಿಸಿರುವ ಗಿಲ್ಲಿ ಮತ್ತು ಅಶ್ವಿನಿ ಗೌಡ ಅವರು ಕ್ಯಾಪ್ಟನ್‌ ರೇಸ್‌ಗೆ ಎಂಟ್ರಿ ಕೊಡ್ತಾರಾ? ಇಷ್ಟು ದಿನ ಬೇರೆಯವರು ಕ್ಯಾಪ್ಟನ್‌ ಆದಾಗ "ನಾನು ವೈಸ್‌ ಕ್ಯಾಪ್ಟನ್"‌ ಎಂದು ಬೀಗುತ್ತಿದ್ದ ಗಿಲ್ಲಿ, ಈ ಸಲನಾದರೂ ಕ್ಯಾಪ್ಟನ್‌ ಆಗುತ್ತಾರಾ ಎಂಬುದನ್ನು ಕಾದುನೋಡಬೇಕು.