Bigg Boss Kannada 12: ಬಿಗ್ ಬಾಸ್ ಜಂಟಿ ಕ್ಯಾಪ್ಟನ್ ಆದ ಜೋಡಿ ಇದೇ! ಗಿಲ್ಲಿ-ಕಾವ್ಯಗೆ ಹೀನಾಯ ಸೋಲು
Gilli Nata: ಬಿಗ್ ಬಾಸ್ ಮನೆಯಲ್ಲಿ ಇದೇ ಮೊದಲ ಬಾರಿಗೆ ಜೋಡಿ ಕ್ಯಾಪ್ಟನ್ಸಿ ಟಾಸ್ಕ್ ಬಿಗ್ ಬಾಸ್ ನೀಡಿದ್ದರು. ಗಿಲ್ಲಿ- ಕಾವ್ಯ, ಮಾಳು- ರಕ್ಷಿತಾ, ರಘು- ಅಶ್ವಿನಿ, ಸೂರಜ್- ರಾಶಿಕಾ, ಅಭಿ-ಸ್ಪಂದನಾ ಹಾಗೂ ರಜತ್-ಚೈತ್ರಾ ಹೀಗೆ ಜೋಡಿಗಳಾಗಿ ಆಡಿದ್ದಾರೆ. ಧ್ರುವಂತ್ ಅವರು ಉಸ್ತುವಾರಿ ನಿಭಾಯಿಸಿದ್ದರು. ಮೊದಲ ಸುತ್ತಿನಲ್ಲಿ ರಜತ್ ಚೈತ್ರಾ ಹೊರಗುಳಿದರು, ಬಳಿಕ ರಾಶಿಕಾ-ಸೂರಜ್. ಆ ನಂತದರಲ್ಲಿ ಗಿಲ್ಲಿ-ಕಾವ್ಯ ಹೀನಾಯವಾಗಿ ಸೋತು ಹೊರಗೆ ಉಳಿದರು.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಮನೆಯಲ್ಲಿ (Bigg Boss Kannada 12) ಇದೇ ಮೊದಲ ಬಾರಿಗೆ ಜೋಡಿ ಕ್ಯಾಪ್ಟನ್ಸಿ ಟಾಸ್ಕ್ ಬಿಗ್ ಬಾಸ್ ನೀಡಿದ್ದರು. ಗಿಲ್ಲಿ- ಕಾವ್ಯ, ಮಾಳು- ರಕ್ಷಿತಾ, ರಘು- ಅಶ್ವಿನಿ, ಸೂರಜ್- ರಾಶಿಕಾ, ಅಭಿ-ಸ್ಪಂದನಾ ಹಾಗೂ ರಜತ್-ಚೈತ್ರಾ ಹೀಗೆ ಜೋಡಿಗಳಾಗಿ ಆಡಿದ್ದಾರೆ. ಧ್ರುವಂತ್ (Dhruvanth) ಅವರು ಉಸ್ತುವಾರಿ ನಿಭಾಯಿಸಿದ್ದರು. ಮೊದಲ ಸುತ್ತಿನಲ್ಲಿ ರಜತ್ ಚೈತ್ರಾ ಹೊರಗುಳಿದರು, ಬಳಿಕ ರಾಶಿಕಾ-ಸೂರಜ್. ಆ ನಂತದರಲ್ಲಿ ಗಿಲ್ಲಿ-ಕಾವ್ಯ (Kavya -Gilli) ಹೀನಾಯವಾಗಿ ಸೋತು ಹೊರಗೆ ಉಳಿದಿದ್ದಾರೆ. ಅಂತಿಮವಾಗಿ ಚೈತ್ರಾ-ಅಭಿಷೇಕ್ (Chaithra Abhishek) ಜೋಡಿ ಕ್ಯಾಪ್ಟನ್ ಆಗಿ ಹೊರಹೊಮ್ಮಿದರು.
ಕ್ಯಾಪ್ಟನ್ಸಿ ರೇಸ್‌ನಿಂದ ಗಿಲ್ಲಿ ಜೋಡಿ ಹೊರಗೆ!
ಮೊದಲ ಟಾಸ್ಕ್‌ನಲ್ಲಿ ಅತಿ ಕಡಿಮೆ ಬಾಲ್‌ಗಳನ್ನ ಕಲೆಕ್ಟ್ ಮಾಡಿ ಕ್ಯಾಪ್ಟನ್ಸಿ ರೇಸ್‌ನಿಂದ ಗಿಲ್ಲಿ ಹಾಗೂ ಕಾವ್ಯ ಹೊರಬಿದ್ದರು. ಸ್ಪಂದನಾಗೆ ಕಾಲು ಪೆಟ್ಟಾಗಿದ್ದರಿಂದ ಚೈತ್ರಾ ಅವರು ಅವರ ಪರ ಆಟ ಆಡಿದರು.
ಒಗಟು ಬಿಡಿಸಿ, ತಮ್ಮ ಜೋಡಿಯನ್ನ ಸೇವ್ ಮಾಡುವುದರಲ್ಲಿ ಚೈತ್ರಾ ಕುಂದಾಪುರ ವಿನ್ ಆದರು, ಕೊನೆಯ ಸುತ್ತಿನಲ್ಲಿ ಚೈತ್ರಾ ಅವರು ಅತ್ಯಂತ ಚುರುಕಾಗಿ ಆಟ ಆಡಿದರು. ಚೈತ್ರಾ ತಂತ್ರಗಾರಿಕೆಯಿಂದ ಮತ್ತು ವೇಗವಾಗಿ ಟಾಸ್ಕ್ ಪೂರ್ಣಗೊಳಿಸಿ ಅಭಿಷೇಕ್-ಸ್ಪಂದನಾ ಜೋಡಿಯನ್ನ ಗೆಲ್ಲಿಸಿದರು.
ಹೀನಾಯವಾಗಿ ಸೋತ ಗಿಲ್ಲಿ-ಕಾವ್ಯ ಜೋಡಿ
ಮೂರನೇ ಸುತ್ತನಲ್ಲಿ ಬಿಗ್ ಬಾಸ್ ಒಂದು ಬಾಲ್ ಟಾಸ್ಕ್‌ನ್ನು ನೀಡಿದ್ದರು. ನೀರಿನಲ್ಲಿ ವಿವಿಧ ಆಕಾರದ ಬಾಲ್ಗಳು ಇರುತ್ತವೆ. ದೊಡ್ಡ ಬಾಲಿಗೆ ಪಾಯಿಂಟ್ ಕಡಿಮೆ. ಚಿಕ್ಕ ಬಾಲಿಗೆ ಪಾಯಿಂಟ್ ಹೆಚ್ಚು.
BiggBoss Please Eliminate them in this weekend 🙏🏻🙏🏻🙏🏻
— ವಾಮನ (@ABDevil7999) December 4, 2025
Don’t test our patience 😪😪
Eat 5 ⭐️
And become Captain 👎🏻
Deserved Duo -Ashwini n Raghu#BBK12 pic.twitter.com/5tiwKbomE0
ಗಿಲ್ಲಿ ಅವರು ದೊಡ್ಡ ಬಾಲ್ನ ಮೊದಲು ಹಿಡಿಯೋಣ ಎಂದು ಹೇಳಿದರು. ಆದರೆ, ಹೆಚ್ಚು ಪಾಯಿಂಟ್ಸ್ ಬರುತ್ತದೆ ಎಂಬ ಕಾರಣಕ್ಕೆ ಕಾವ್ಯಾ ಸಣ್ಣ ಬಾಲ್ಗಳ ಮೇಲೆ ಮೊದಲು ಎಫರ್ಟ್ ಹಾಕಿದ್ದಾರೆ. ಎಷ್ಟೇ ಪ್ರಯತ್ನಿಸಿದರೂ ಸಣ್ಣ ಬಾಲ್ ತರಲು ಸಾಧ್ಯವಾಗಲೇ ಇಲ್ಲ. ಹೀನಾಯವಾಗಿ ಟಾಸ್ಕ್ ಸೋತ ಬಳಿಕ ಗಿಲ್ಲಿಗೆ ಬೇಸರ ಆಯಿತು. ಅಷ್ಟೇ ಅಲ್ಲ ಕಾವ್ಯ ಬಗ್ಗೆ ನೆಗೆಟಿವ್ ಆಗಿಯೂ ಮಾತನಾಡಿದ್ದಾರೆ. ನಿನ್ನ ಜೊತೆ ಸೇರಲೇಬಾರದಿತ್ತು ಎಂದು ಗಿಲ್ಲಿ ಅವರು ಕಾವ್ಯ ಬಗ್ಗೆ ಅಸಮಾಧಾನ ಹೊರ ಹಾಕಿದರು.
ಬೇಸರಗೊಂಡ ಅಶ್ವಿನಿ ಗೌಡ
ಕ್ಯಾಪ್ಟನ್ಸಿ ಟಾಸ್ಕ್‌ಗೆ ಅಶ್ವಿನಿ ಅವರು ತುಂಬಾ ಎಫರ್ಟ್ ಹಾಕಿದ್ದರು. ಸೋತ ಬಳಿಕ ಅಶ್ವಿನಿ ಅವರು ಕಣ್ಣೀರಿಟ್ಟರು. ಅಷ್ಟೇ ಅಲ್ಲ ರಘು ಅವರು ತುಂಬಾ ಪ್ಯಾನಿಕ್ ಮಾಡಿಬಿಟ್ಟರು ಅಂತ ಅಸಮಾಧನ ಕೂಡ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಅಭಿಷೇಕ್ ಎರಡನೇ ಬಾರಿ ಕ್ಯಾಪ್ಟನ್ ಆಗಿದ್ದಾರೆ. ಸ್ಪಂದನಾ ಸೋಮಣ್ಣ ಈ ಸೀಸನ್‌ನ ಮೊದಲ ಮಹಿಳಾ ಕ್ಯಾಪ್ಟನ್ ಆಗಿದ್ದಾರೆ.