ಹೊಸ ವರ್ಷದ ವಿಶೇಷವಾಗಿ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಒಂದು ಟಾಸ್ಕ್ ನೀಡಲಾಗಿತ್ತು. ಸ್ಥಳದಲ್ಲೇ ಒಂದು ಹಾಡು ಬರೆದು, ಅದನ್ನು ಹಾಡಬೇಕಿತ್ತು. ಆನ್ ಸ್ಪಾಟ್ ಅಲ್ಲಿ ಡೈಲಾಗ್ ಹೇಳುವುದು, ಹಾಡು ಬರೆಯುವುದು ಗಿಲ್ಲಿ ನಟ ಅವರಿಗೆ ನೀರು ಕುಡಿದಷ್ಟೇ ಸುಲಭ ಅನ್ನೋದು ನಮಗೆಲ್ಲಾ ಗೊತ್ತಿದೆ. ಇದೀಗ ಬಿಗ್ ಬಾಸ್ ನೀಡಿದ ಈ ಹಾಡು ಬರೆಯುವ ಚಾಲೆಂಜ್ ಅನ್ನು ಗಿಲ್ಲಿ ನಟ ಸಖತ್ ಆಗಿಯೇ ಪೂರೈಸಿದ್ದಾರೆ.
Rap ಸಾಂಗ್ ಬರೆದು ಹಾಡಿದ ಗಿಲ್ಲಿ
ಮನೆಯೊಳಗೆ ಇರುವ ಸದಸ್ಯರ ಬಗ್ಗೆಯೇ ಒಂದು Rap ಸಾಂಗ್ ಬರೆದು, ಅದನ್ನು ಹಾಡಿರುವ ಗಿಲ್ಲಿ ನಟ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಸ್ಪರ್ಧಿಗಳು ಕೂಡ ಗಿಲ್ಲಿ ನಟ ಬರೆದ ಹಾಡನ್ನು ಕೇಳಿ ಎಂಜಾಯ್ ಮಾಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಹಾಡು ಸಖತ್ ವೈರಲ್ ಆಗುತ್ತಿದೆ. ಹಾಡಿನಲ್ಲಿ ಏನಿದೆ? ಮುಂದೆ ಓದಿ.
ಅಲ್ಲಿ ಇಲ್ಲಿ ಎಲ್ಲೂ
ನಮ್ ಸೀಸನ್ ಟ್ವೆಲ್ವು
ಈ ಸೀಸನ್ನೇ ಥ್ರಿಲ್ಲು
ಗೆದ್ದೈತೆ ಎಲ್ರ ದಿಲ್ಲು
ನಮ್ ಬಿಗ್ ಬಾಸ್ ಬೇಸ್ ವಾಯ್ಸ್
ಕೇಳ್ತಿದ್ರೆ ಫುಲ್ ಖುಷ್
ಇರೋದು ಸ್ವಲ್ಪ ಕಂಟೆಸ್ಟಂಟ್
ಫೈನಲ್‌ಗೆ ಹೋಗುವ ಎಕ್ಸೈಟ್‌ಮೆಂಟ್
ಇಲ್ಲೆ ಇದ್ರೆ ಆನಂದ
ಮನೆಗೆ ಹೋದರೆ ಗೋವಿಂದ
ನಾವು ಉಳಿದಿರೋದೇ ಜನರಿಂದ
The Devil Movie: `ಡೆವಿಲ್' ಸಿನಿಮಾದಲ್ಲಿ ಗಿಲ್ಲಿ ನಟನ ಪರ್ಫಾರ್ಮೆನ್ಸ್ ಹೇಗಿದೆ? ನಟ ಚಂದು ಗೌಡ ಮನದಾಳದ ಮಾತು!
ವಾರಕ್ಕೊಂದು ನಾಮಿನೇಷನ್
ನೆನೆಸಿಕೊಂಡ್ರೆ ಫುಲ್ಲು ಟೆನ್ಷನ್
ಲಕ್ಷುರಿ ಬಜೆಟ್
ಸಿಗದಿದ್ರೆ ಎಡವಟ್ಟು
ಟಾಸ್ಕ್ ಗೆದ್ದೋನು ಕ್ಯಾಪ್ಟನ್
ಮನೆ ಎಲ್ಲಾ ಮೆಂಟೇನ್
ಯಾರಾಯ್ತಾನೇ ಕೊನೆಯವನು
ಇಲ್ಲೆ ಇದ್ರೆ ಆನಂದ
ಮನೆಗೆ ಹೋದರೆ ಗೋವಿಂದ
BBK 12: ಛೇ... ಹೊಸ ವರ್ಷದಲ್ಲೂ ಅದೇ ಹಳೇ ಜಗಳ; ಧ್ರುವಂತ್‌ಗೆ ಬರೀ ಉಗುರಲ್ಲೇ ಹೊಡೆದು ಸಾಯಿಸಿಬಿಡ್ತಾರಂತೆ ಗಿಲ್ಲಿ ನಟ!
ವೀಕೆಂಡ್ ಅಂದರೆ ಸುದೀಪಣ್ಣ
ಅವರಂದರೆ ಅಭಿಮಾನ
ಕಿಚ್ಚನ ಚಪ್ಪಾಳೆ ಸನ್ಮಾನ
ಅದೇ ನಮಗೆ ಬಹುಮಾನ
ಸುದೀಪಣ್ಣ ಕೈ ಎತ್ತೋರು ವಿನ್ನರ್
ಇಲ್ಲದಿದ್ರೆ ರನ್ನರ್
ಇಲ್ಲೆ ಇದ್ರೆ ಆನಂದ
ಮನೆಗೆ ಹೋದರೆ ಗೋವಿಂದ
ನಾವು ಉಳಿದಿರೋದೇ ಜನರಿಂದ
ನಮ್ಮ ರಘು ಅಣ್ಣ ಆಗವ್ರೇ ಸ್ವಲ್ಪ ಸಣ್ಣ
ಆದರೆ ಮಾತಿನಲ್ಲಿ ಇಲ್ಲ ಬಣ್ಣ
ರವಿ ಅಂದ್ರೆ ಸೂರ್ಯ
ಈ ಮನೆಗೆ ಚೆಂದ ಕಾವ್ಯ
ಟಾಸ್ಕ್ ಅಂದ್ರೆ ಧನುಷ್
ಮಗುವಂತ ಮನಸ್ಸು
ರಕ್ಷಿತಾ ಕಮ್ಮಿ ಸೈಜ್
ಮಾಕ್ಸಿಮಮ್ ವಾಯ್ಸ್
ಇಲ್ಲೆ ಇದ್ರೆ ಆನಂದ
ಮನೆಗೆ ಹೋದರೆ ಗೋವಿಂದ
ಸ್ಪಂದನಾ ಸಿಲ್ಕ್ ಸ್ಯಾರಿ ಸ್ವೀಟಿ
ಮಿಲ್ಕ್ ಕಲರ್ ಬ್ಯೂಟಿ
ರಾಶಿಕಾ ಹೈಟು
ನೋಡೋಕೆ ತುಂಬಾ ಹಾಟ್
ಧ್ರುವಂತ್ ಅಂದ್ರೆ ಭಕ್ತಿ
ಅದೇ ಅವರಿಗೆ ಶಕ್ತಿ
ಗಿಲ್ಲಿ ಬರೆದ ಹಾಡು
ಅಶ್ವಿನಿ ಸ್ಲೋ ವಾಕಿಂಗ್
ಸೂಪರ್ ಅವರ ಕುಕಿಂಗ್
ಕೊನೆದಾಗಿ ಎಲ್ರೂ ಕೇಳಿ ಇಲ್ಲಿ
ಇವ್ರ ಮಾತಂದ್ರೆ ಬೆಳ್ಳಿ
ಒನ್ & ಓನ್ಲೀ ಗಿಲ್ಲಿ
ಇಲ್ಲೆ ಇದ್ರೆ ಆನಂದ
ಮನೆಗೆ ಹೋದರೆ ಗೋವಿಂದ
ನಾವು ಉಳಿದಿರೋದೇ ಜನರಿಂದ