ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಛೇ... ಹೊಸ ವರ್ಷದಲ್ಲೂ ಅದೇ ಹಳೇ ಜಗಳ; ಧ್ರುವಂತ್‌ಗೆ ಬರೀ ಉಗುರಲ್ಲೇ ಹೊಡೆದು ಸಾಯಿಸಿಬಿಡ್ತಾರಂತೆ ಗಿಲ್ಲಿ ನಟ!

Bigg Boss Kannada 12: ಹೊಸ ವರ್ಷದ ಸಂಭ್ರಮಕ್ಕಾಗಿ ಬಿಗ್ ಬಾಸ್ ನೀಡಿದ 'ಹಾಡು ಬರೆಯುವ' ಟಾಸ್ಕ್ ಜಗಳಕ್ಕೆ ನಾಂದಿ ಹಾಡಿದೆ. ಗಿಲ್ಲಿ ನಟ ಅವರು ಧ್ರುವಂತ್ ಅವರ ಡೈನಿಂಗ್ ಹಾಲ್ ಕ್ಲೀನಿಂಗ್ ಕೆಲಸವನ್ನು ಲೇವಡಿ ಮಾಡಿ ಹಾಡು ಬರೆದಿದ್ದಕ್ಕೆ ಧ್ರುವಂತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತಿಗೆ ಮಾತು ಬೆಳೆದು, ಗಿಲ್ಲಿ ನಟ "ಉಗುರಲ್ಲೇ ಹೊಡೆದು ಸಾಯಿಸಿಬಿಡ್ತಿನಿ" ಎಂದು ಹೇಳುವ ಹಂತಕ್ಕೆ ಜಗಳ ತಲುಪಿದೆ.

'ಉಗುರಲ್ಲೇ ಹೊಡೆದು ಸಾಯಿಸಿಬಿಡ್ತಿನಿ'; ಧ್ರುವಂತ್‌ಗೆ ಗಿಲ್ಲಿ ನಟ ವಾರ್ನಿಂಗ್

-

Avinash GR
Avinash GR Jan 1, 2026 6:32 PM

ಸದ್ಯ ಇಡೀ ಜಗತ್ತು ಹೊಸ ವರ್ಷದ ಸಂಭ್ರಮದಲ್ಲಿದೆ. ಬಿಗ್‌ ಬಾಸ್‌ ಮನೆಯಲ್ಲೂ ಹೊಸ ವರ್ಷದ ಕಲರವ ಜೋರಾಗಿದೆ. ಸದ್ಯ ಬಿಗ್‌ ಬಾಸ್‌ ಮನೆಯೊಳಗೆ ಇರುವ ಸ್ಪರ್ಧಿಗಳಿಗೂ ಹೊಸ ವರ್ಷವನ್ನು ವೆಲ್‌ಕಮ್‌ ಮಾಡುವ ಅವಕಾಶವನ್ನು ನೀಡಲಾಗಿದೆ. ಎಲ್ಲರಿಗೂ ಒಂದೊಂದು ಟಾಸ್ಕ್‌ ನೀಡುವ ಮೂಲಕ ನ್ಯೂ ಇಯರ್‌ ಸೆಲೆಬ್ರೇಷನ್‌ ಅನ್ನು ಜೋರಾಗಿಸಿದ್ದಾರೆ ಬಿಗ್‌ ಬಾಸ್‌.

ಹಾಡು ಬರೆಯಲು ಹೇಳಿದ ಬಿಗ್‌ ಬಾಸ್‌

"ಹೊಸ ವರ್ಷದ ಸಂಭ್ರಮವನ್ನು ಆಚರಿಸುವ ಸಲುವಾಗಿ ಇಲ್ಲಿನ ಸದಸ್ಯರು ಇಲ್ಲಿನ ಆಗುಹೋಗುಗಳ ಬಗ್ಗೆ ಒಂದು ಸಾಂಗ್‌ ಅನ್ನು ರಚಿಸಬೇಕು" ಎಂದು ಬಿಗ್‌ ಬಾಸ್‌ ಕಡೆಯಿಂದ ಸಂದೇಶ ಬಂದಿದೆ. ಬಿಗ್‌ ಬಾಸ್‌ ಹೇಳಿದ್ದೇ ತಡ, ಎಲ್ಲರೂ ಹಾಡು ಬರೆಯಲು ತಲೆ ಕೆಡಿಸಿಕೊಂಡರು. ಇಂತಹ ವಿಚಾರಗಳಲ್ಲಿ ಗಿಲ್ಲಿ ನಟ ಹಿಂದೆ ಬೀಳುತ್ತಾರಾ? ರಘು ಪಕ್ಕಾ ಕುಳಿತು ಹಾಡು ಬರೆಯೋಕೆ ಆರಂಭಿಸಿದರು. ಆದರೆ ಅಲ್ಲಿಯೇ ಶುರುವಾಯ್ತು ನೋಡಿ ಗಲಾಟೆ!

Bigg Boss Kannada 12: ಉಸ್ತುವಾರಿಯಲ್ಲಿ ಧ್ರುವಂತ್‌ ಭಾರೀ ಮೋಸ? ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರ ಬಿದ್ರಾ ಗಿಲ್ಲಿ ನಟ?

ಧ್ರುವಂತ್‌ & ಗಿಲ್ಲಿ ನಟ ನಡುವೆ ಜೋರು ಜಗಳ

ನಾವು ದಿನ ಕುಡಿಯೋದು ಹಾಲು

ಧ್ರುವಂತ್‌ ಹೋಗಿ ಕ್ಲೀನು ಮಾಡಿ ಡೈನಿಂಗು ಹಾಲು

- ಎಂದು ಹಾಡನ್ನು ಗಿಲ್ಲಿ ನಟ ಬರೆದುಕೊಂಡು ಹೇಳಲು ಪ್ರಾಕ್ಟೀಸ್‌ ಮಾಡುತ್ತಿದ್ದರು. ಅದನ್ನು ಕೇಳಿಸಿಕೊಂಡ ಧ್ರುವಂತ್‌ ಕೆಂಡಾಮಂಡಲರಾದರು.

ಧ್ರುವಂತ್:‌ ನನ್ನ ಹೆಸರು ಬಂದ್ರೆ ಮಾತ್ರ..??!!!

ಗಿಲ್ಲಿ ನಟ: ಎಲ್ಲರ ಹೆಸರನ್ನು ಬರೀತಿನಿ.

ಧ್ರುವಂತ್:‌ ನೀನು ಹಿಂಗೆಲ್ಲಾ ಆಡಿದ್ರೆ ನಾನು ಹರಿದು ಹಾಕಿಬಿಡ್ತಿನಿ.

ಗಿಲ್ಲಿ ನಟ: ಹರಿದು ಹಾಕು.

BBK 12: ʻಮಾರ್ಕ್‌ʼ ನೋಡಲು ಬಂದ ಸುದೀಪ್‌ ಎದುರು ಗಿಲ್ಲಿ ನಟನಿಗೆ ಜೈಕಾರ; ಕಿಚ್ಚನಿಗೆ ಮಾತಿನ ಮಲ್ಲನ ಫ್ಯಾನ್ಸ್‌ ಬೇಡಿಕೆ ಏನು?

ಧ್ರುವಂತ್:‌ ಇವನ ಅಸಹ್ಯವನ್ನು ಅವನತ್ರನೇ ಇಟ್ಕೋಳೋಕೆ ಹೇಳಿ.

ಗಿಲ್ಲಿ ನಟ: ಅಸಹ್ಯ ಪಹಸ್ಯ ಬೇಡ ಅಣ್ಣಾ.. ಹೋಯ್ತಾ ಇರು.

ಧ್ರುವಂತ್:‌ ಹೋಯ್ತಾ ಇರು ಅಂತ ಹೇಳೋಕೆ ನಾನು ನಿನ್ನ ಮನೆಗೆ ಬಂದಿಲ್ಲ ಕಣಲೇ.

ಗಿಲ್ಲಿ ನಟ: ಟ್ರಿಗರ್‌ ಮಾಡಬೇಡ ಹೋಗು.

ಧ್ರುವಂತ್:‌ ಏನ್‌ ಮಾಡ್ತಿಯಾ ನೀನು?

ಗಿಲ್ಲಿ ನಟ: ಉಗುರಲ್ಲೇ ಹೊಡೆದು ಸಾಯಿಸಿಬಿಡ್ತಿನಿ

ಧ್ರುವಂತ್:‌ ಹೊಡಿ...

ಧ್ರುವಂತ್ & ಗಿಲ್ಲಿ ನಟ ಜಗಳ



- ಹೀಗೆ ಸಣ್ಣ ವಿಚಾರಕ್ಕಾಗಿ ದೊಡ್ಡ ಜಗಳವನ್ನೇ ಧ್ರುವಂತ್‌ ಮತ್ತು ಗಿಲ್ಲಿ ನಟ ಮಾಡಿಕೊಂಡಿದ್ದಾರೆ. ಇದರ ಪೂರ್ಣ ಮಾಹಿತಿ ಇಂದಿನ (ಜ.1) ಸಂಚಿಕೆಯಲ್ಲಿ ಗೊತ್ತಾಗಲಿದೆ.