ಬಿಗ್ ಬಾಸ್ ಸೀಸನ್ 12ರಲ್ಲಿ (Bigg Boss Kannada 12) ಸೀಸನ್ 11ರ ಅತಿಥಿಗಳು ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಸೀಸನ್ 12ರ ಸದಸ್ಯರು ಅತಿಥಿಗಳ ಸತ್ಕಾರ ಮಾಡಬೇಕು ಅನ್ನೋದು ಟಾಸ್ಕ್. ಅದರಲ್ಲೂ ಉಗ್ರಂ ಮಂಜು ಅನ್ನೇ ಹೆಚ್ಚು ಟಾರ್ಗೆಟ್ ಮಾಡಿದ್ದಾರೆ. ರೋಸ್ಟ್ ಮಾಡಿದ್ದು ನೋಡಿ ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಎಂಜಾಯ್ ಮಾಡಿದರು. ಆದರೆ ಅತಿಥಿಗಳಿಗೆ ಸಿಕ್ಕಾಪಟ್ಟೆ ಕಿರಿಕಿರಿ ಆಯಿತು. ರೂಲ್ಸ್ ಬುಕ್‌ನಲ್ಲಿ ಸಭ್ಯತೆ ಮೀರದಂತೆ ರೋಸ್ಟ್ ಮಾಡಬೇಕು ಎಂದು ನಿಯಮದಲ್ಲಿ ಇತ್ತು. ಆದರೆ ಗಿಲ್ಲಿ ಅದನ್ನು ಮೀರಿದ್ದರು. ಆಗ ಬಿಗ್ ಬಾಸ್ ಮಧ್ಯಸ್ಥಿಕೆ ವಹಿಸಿ ನಿಯಮವನ್ನು ನೆನಪಿಸಿದ್ದಾರೆ. ಗಿಲ್ಲಿ ಮತ್ತು ಕ್ಯಾಪ್ಟನ್ ಅಭಿಷೇಕ್ ಅವರು ಕ್ಷಮೆ ಕೇಳಿದರು.
ಇದನ್ನೂ ಓದಿ: Bigg Boss Kannada 12: ಸೈಲೆಂಟ್ ಆಗಿರೋ ಅಶ್ವಿನಿ ಗೌಡರನ್ನ ಮತ್ತೆ ಕೆಣುಕಿದ ಗಿಲ್ಲಿ! ಏನಿದು ಅಶ್ವಿನಿ 2.0?
ಗಿಲ್ಲಿ ಹೇಳಿದ್ದೇನು?
ಈ ವಾರ ತುಂಬಾ ಇಂಟ್ರಸ್ಟಿಂಗ್ ಆಗಿರುತ್ತೆ ಅಂತ ಅಂದುಕೊಂಡಿದ್ದೆ, ಆದರೆ ಇಷ್ಟು ಇರಿಟೇಟಿಂಗ್ ಆಗಿರುತ್ತೆ ಅಂತ ಗೊತ್ತಿರಲಿಲ್ಲ. ಇವರು ಮಾಡಿದ ಸೆಟ್ ಅಪ್, ಬಿಲ್ಡ್‌ಪ್ ನೋಡಿ ವಾವ್ ಅನ್ನೋತರ ಯಾರಾದರೂ ಬರ್ತಾರಾ ಅಂದುಕೊಂಡಿದ್ದೆ ಇವರು ಬಂದ ಮೇಲೆ …..ವಾಹ್..ಥೋ ಅನ್ನೋ ಥರ ಆಯ್ತು. ಇವರ ಬಂದ ಮೇಲೆ ಬಿಲ್ಡಪ್ ಕೊಟ್ಟಿದ್ದು ಹೇಗೆ ಗೊತ್ತಾ? ಗ್ರೇ ಏರಿಯಾ ಮಂಜು ಅಂತಿದ್ದರು, ಇವನು ಮಲೇರಿಯಾ ಮಂಜು ಎಂದಿದ್ದಾರೆ.
ಹೆಡ್ ಮಾಸ್ಟರ್ ತ್ರಿವಿಕ್ರಮ್
ಟಾಸ್ಕ್ ಮಾಸ್ಟರ್ ಅಂತ ತ್ರಿವಿಕ್ರಮ್ ಬಂದ್ರು ಆದರೆ ಹೆಡ್ ಮಾಸ್ಟರ್ ಥರ ಬಂದು ಕೂತಿದ್ದಾರೆ. ಇನ್ನು ರಜತ್ ಅವರು, ದೂರದಿಂದ ನೋಡಿದರೆ ಖಳನಾಯಕ ಥರ ಕಾಣ್ತಾರೆ. ಹೇಳಬೇಕು ಅನ್ನಿಸಿತು ಹೇಳ್ದೆ, ಚೈತ್ರಾ, ಹೇಳೋಕೆ ಉಸ್ತುವಾರಿ, ಆದರೆ ಸುಸ್ತುವಾರ ಥರ ಕೂತಿದ್ದಾರೆ. ಇನ್ನು ಈ ಮನೆಯಲ್ಲಿ ಒಳ್ಳೆ ಊಟ ಸಿಗತ್ತೆ , ನಾವೇ ಬರಗೆಟ್ಟಿರೋರು ಅಂದುಕೊಂಡಿದ್ದೆ. ಆದರೆ…ಮುಂದಕ್ಕೆ ಹೇಳಲ್ಲ ಬಿಡಿ.
ವೈರಲ್ ವಿಡಿಯೋ
ನಮ್ಮ ಟೈಂ ಅಲ್ಲಿ ಚಾನೆಲ್ ನಂಬರ್ 1
ಬಂದಾಗಿನಿಂದ ಉಗ್ರಂ ಮಂಜು ಅವರು ಕ್ಯಾಪ್ಟನ್ ರೂಮ್ ಹಿಡಿದುಕೊಂಡಿದ್ದಾರೆ. ಕ್ಯಾಪ್ಟನ್ ರೂಮ್ ಸಿಕ್ಕಿಲ್ವಾ? ಅಂದಿದ್ದಾರೆ. ಕ್ಯಾಪ್ಟನ್ಸಿ ಸರಿಯಾಗಿ ಯೂಸ್ ಮಾಡಕ್ಕೆ ಗೊತ್ತಿಲ್ಲ ಅಂತ ಬಿಟ್ಟುಕೊಟ್ಟಿಲ್ವಾ? ಹೇಳಬೇಕು ಅನ್ನಿಸಿತು ಹೇಳಿದೆ. ಗೆಸ್ಟ್ ನೋಡೋಕು ಭಯ ಬೀಳ್ತಾರೆ, ಮಾತಾಡೋಕು ಭಯ ಬೀಳ್ತಾರೆ. ನಿಮ್ಮ ಟೈಂ ಅಲ್ಲಿ ಸೀಸನ್ ನಂಬರ್ 1 ಇತ್ತು. ನಮ್ಮ ಟೈಂ ಅಲ್ಲಿ ಚಾನೆಲ್ ನಂಬರ್ 1 ಇದೆ.
ನಾವು ಸೀನಿಯರ್, ಪಂಟರು ಅಂತ ಅಡ್ಡ ಬರಬೇಡಿ. ಏಜು, ಸೈಜ್ ನೋಡೋದಿಲ್ಲ, ಸೀಜ್ ಮಾಡ್ತೀವಿ ಹುಷಾರ್ ಸರ್ ಎಂದಿದ್ದಾರೆ ಗಿಲ್ಲಿ. 5 ಜನ ನೆಂಟರು ಬಂದರು. ತಿಂದರು ತಿಂದರೂ , ತಿಂದ ಮೇಲೆ ದವಲತ್ತು. ತಿನ್ನೋರಿಗೆ ಅವರಿಗೆ ಅಷ್ಟು ಇರಬೇಕಾದರೆ, ತಂದು ಹಾಕೋರು ನಮಗೆ ಎಷ್ಟು ಇರಬೇಡ? ಎಂದು ಹೇಳಿದ್ದಾರೆ.
ಇದನ್ನೂ ಓದಿ: Bigg Boss Kannada 12: ಅಶ್ವಿನಿ ಸೈಲೆಂಟ್ ಇರೋದೇ ಗಿಲ್ಲಿಗೆ ಸಮಸ್ಯೆ ಅಂತೆ! ಧನುಷ್ ಹೇಳಿಕೆಗೆ ಫ್ಯಾನ್ಸ್ ಕೆಂಡ
ಇಷ್ಟೆಲ್ಲ ಆದ ಬಳಿಕ ರಜತ್‌ಗೂ ಹಾಗೂ ಗಿಲ್ಲಿಗೂ ವಾದ ನಡೆದಿದೆ. ನಾವು ಇಲ್ಲಿ ಮೊದಲೇ ಬಂದು ಹೋಗಿದ್ದೇವೆ. ಇಲ್ಲಿಗೆ ಅತಿಥಿಗಳು ಬಂದಾಗ ನಾವು ಮಧ್ಯದಲ್ಲಿ ಮಾತನಾಡುತ್ತಿರಲಿಲ್ಲ. ಇವನು ಇಷ್ಟು ಕಿರಿಕಿರಿ ಎಂಬುದು ನನಗೆ ಹೊರಗೆ ಇದ್ದಾಗ ಗೊತ್ತಿರಲಿಲ್ಲ ಇವನು ಇಷ್ಟು ಕಿರಿಕಿರಿ ಎಂಬುದು ನನಗೆ ಹೊರಗೆ ಇದ್ದಾಗ ಗೊತ್ತಿರಲಿಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ.