ಬಿಗ್ ಬಾಸ್ ಮನೆಯಲ್ಲಿ (Bigg Boss Kannada 12) ಹೈಲೈಟ್ ಆಗಿರೋ ಜೋಡಿ ಅಂದರೆ ಅದುವೇ ಕಾವ್ಯ ಮತ್ತು ಗಿಲ್ಲಿ (Kavya and Gilli). ಆದರೆ ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ಅವರು ಕಾವ್ಯ-ಗಿಲ್ಲಿ, ರಾಶಿಕಾ-ಸೂರಜ್‌ಗೆ ಕೆಲವೊಂದು ಬುದ್ಧಿ ಮಾತು ಹೇಳಿದ್ದರು. ಅಲ್ಲಿಂದ ಕಾವ್ಯ ಫುಲ್ ಚೇಂಜ್ ಆಗಿದ್ದಾರೆ. ಅಷ್ಟೇ ಅಲ್ಲ ನಿನ್ನೆ ಕೂಡ ಗಿಲ್ಲಿ ಅವರನ್ನೇ ನಾಮಿನೇಟ್ (Nominate) ಮಾಡಿದ್ದಾರೆ ಕಾವ್ಯ.
ದೊಡ್ಡ ಟ್ವಿಸ್ಟ್
ಇದೆಲ್ಲದರ ಜೊತೆಗೆ ವಿಲನ್ ದೊಡ್ಡ ಟ್ವಿಸ್ಟ್ ಕೊಟ್ಟಿದೆ. ವಿಲನ್ ಕೊಟ್ಟ ಸೀಕ್ರೆಟ್ ಟಾಸ್ಕ್ನಿಂದ ಕಾವ್ಯಾನ ಅಳಿಬೇಕಿತ್ತು. ಇದರ ಪ್ರಕಾರ ಇಬ್ಬರೇ ಅಡುಗೆ ಮಾಡಬೇಕು. ಹಾಗೆ ಮಾಡಿದರೆ ಮನೆಯವರಿಗೆ ಲಕ್ಷುರಿ ಐಟಂ ಸಿಗುತ್ತದೆ. ಹಾಗೇ ಕಾವ್ಯಾನ ಅಶ್ವಿನಿ ಹಾಗೂ ಗಿಲ್ಲಿ ಸೇರಿಕೊಂಡು ಅಳಿಸಬೇಕು. ಇಷ್ಟೇ ಅಲ್ಲ, ಕಿಚ್ಚನ ಚಪ್ಪಾಳೆ ಬೋರ್ಡ್ನಲ್ಲಿರುವ ಮೂರು ಬೋರ್ಡ್ಗಳನ್ನು ತಂದು ಸ್ಟೋ ರೂಂನಲ್ಲಿ ಇಡಬೇಕು. ಅಂತೂ ಗಿಲ್ಲಿ ಕಾವ್ಯ ಅವರನ್ನು ಅಳಿಸಿದ್ದಾರೆ.
ಇದನ್ನೂ ಓದಿ: Bigg Boss Kannada 12: ಗಿಲ್ಲಿಯನ್ನೇ ನಾಮಿನೇಟ್ ಮಾಡಿದ ಕಾವು! ರಜತ್-ಧ್ರುವಂತ್ ಮಧ್ಯೆ ಮಾರಾಮಾರಿ
ಕಣ್ಣೀರಿಟ್ಟ ಕಾವ್ಯ
ಬೆನ್ನಿಗೆ ಚೂರಿ ಹಾಕ್ಬಿಟ್ರಲ್ರಿ, ರೇಗಿಸ್ಬಿಟ್ರಂತೆ, ನಾಮಿನೇಶನ್ ಮಾಡಿಬಿಟ್ರಂತೆ. ನೀನು ಈ ಮನೆಯಲ್ಲಿ ಏನು ಮಾಡ್ತಾ ಇಲ್ಲ. ಫಸ್ಟ್ ತಪ್ಪು ಮಾಡಿದ್ದೆ ನಿನ್ನ ಜೊತೆ ಜಂಟಿ ಆಗಿದ್ದು. ನಿಜವಾಗಲೂ ಸ್ಪಂದನಾ ಲಕ್ಕಿ. ನೀವು ಅನಲಕ್ಕಿ ಎಂದು ಹೇಳಿದ್ದಾರೆ. ಇಷ್ಟೆಲ್ಲ ಮನಸ್ಸಲ್ಲಿ ಇರೋದು ಇತ್ತು ಅಂದರೆ ಹೇಳಬೇಕಿತ್ತು ಎಂದಿದ್ದಾರೆ. ನಾನು ನಿನ್ನ ಥರ ಅಲ್ಲ. ಈಗಲೂ ಹೇಳ್ತೀನಿ. ನೀನು ಪ್ರೀ ಪ್ರಾಡಕ್ಟ್. ಫ್ರೀ ಫ್ರೀ ಅಂದಿದ್ದಾರೆ. ಗಿಲ್ಲಿ ಹೀಗೆ ಹೇಳುತ್ತಿದ್ದಂತೆ ಕಾವ್ಯ ಕಣ್ಣೀರಿಟ್ಟಿದ್ದಾರೆ. ಅಂತೂ ಗಿಲ್ಲಿ ಈ ಟಾಸ್ಕ್ ನಿಭಾಯಿಸಿದ್ದಾರೆ.
ಕಲರ್ಸ್ ಪ್ರೋಮೋ
ಕಾವ್ಯ ಗಿಲ್ಲಿ ಮಧ್ಯೆ ಬಿರುಕು ಮೂಡಿದ್ದು ಅಂತೂ ಫಿಕ್ಸ್ ಆದಂತಿದೆ. ಇದಕ್ಕೂ ಮುಂಚೆ ಕಾವ್ಯ ಅವರು ಗಿಲ್ಲಿಯ ಬಗ್ಗೆ ರಘು ಬಳಿ ನೆಗೆಟಿವ್ ಆಗಿ ಚರ್ಚೆಯನ್ನೂ ಮಾಡಿದ್ದರು. ಅಷ್ಟೇ ಅಲ್ಲ ಹಾವು ಏಣಿ ಆಟದ ಸಮಯದಲ್ಲೂ ಗಿಲ್ಲಿ ತನಗೆ ಹಾವು ಎಂದು ಕಾವ್ಯ ಹೇಳಿದ್ದರು.
ಗಿಲ್ಲಿ ಬಗ್ಗೆ ಕಾವ್ಯ, ರೇಗಿಸೋ ವಿಚಾರಕ್ಕೆ ಸಾಕಷ್ಟು ಬಾರಿ ಅಸಮಾಧಾನ ಹೊರ ಹಾಕಿದ್ದಾರೆ. ಇತ್ತೀಚೆಗೆ ಕಾವ್ಯ ಅವರ ನಡೆಗೆ ನೆಟಿಗರು ಕೂಡ ಕಮೆಂಟ್ ಮಾಡ್ತಿದ್ದಾರೆ. ಈ ವಾರವಂತೂ ಟಾಸ್ಕ್ ನೋಡಿದರೆ, ಇವರಿಬ್ಬರ ಗೆಳೆತನ ಮತ್ತಷ್ಟು ಹಳಸುವ ಸಾಧ್ಯತೆ ಇದೆ.
ನಾಮಿನೇಷನ್ ನಿರ್ಧಾರ ಮನೆಯಲ್ಲಿ ಕೋಲಾಹಲ
ನಾಮಿನೇಶನ್ ವೇಳೆಯೂ ಕಾವ್ಯ ನಾಮಿನೇಷನ್ ನಿರ್ಧಾರ ಮನೆಯಲ್ಲಿ ಕೋಲಾಹಲ ಸೃಷ್ಟಿಸಿದೆ. ರಜತ್ ಬಂದಾಗಿನಿಂದ ಗಿಲ್ಲಿ ಜೊತೆಗಿದ್ದಾರೆ. ಇಬ್ಬರನ್ನೂ ಕಾವ್ಯ ನಾಮಿನೇಟ್ ಮಾಡಿದ್ದಾರೆ. ತಮ್ಮಿಬ್ಬರ ವಿಚಾರವಾಗಿ ಮನೆಯವರು ವರ್ತಿಸುತ್ತಿರುವ ರೀತಿಗೆ ರಜತ್ ಕೆಂಡಾಮಂಡಲರಾಗಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಧ್ರುವಂತ್ ಜೊತೆ ಜಗಳ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Bigg Boss Kannada 12: ಗಿಲ್ಲಿಯನ್ನೇ ನಾಮಿನೇಟ್ ಮಾಡಿದ ಕಾವು! ರಜತ್-ಧ್ರುವಂತ್ ಮಧ್ಯೆ ಮಾರಾಮಾರಿ
ಮನೆ ಈಗ ಬಿಗ್ ಬಾಸ್ ಬದಲಿಗೆ ‘ವಿಲನ್’ ಹಿಡಿತದಲ್ಲಿದೆ. ವಿಲನ್ ಮನೆಯಲ್ಲಿನ ರೂಲ್ಸ್‌ಗಳನ್ನೇ ಬದಲಾಯಿಸಿದ್ದಾರೆ. ನಾಮಿನೇಷನ್ ಪ್ರಕ್ರಿಯೆ ಕೂಡ ಇಟ್ಟಿದ್ದಾರೆ. ಅದರಂತೆ ಕಾವ್ಯ ತನ್ನ ಸರದಿಯಲ್ಲಿ ಗಿಲ್ಲಿ ಮತ್ತು ರಜತ್ ಇಬ್ಬರನ್ನು ನಾಮಿನೇಟ್ ಮಾಡಿದ್ದಾರೆ.