ಬಿಗ್ ಬಾಸ್ ಮನೆಗೆ ‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದ ಉಗ್ರಂ ಮಂಜು (Ugram Manju), ರಜತ್, ತ್ರಿವಿಕ್ರಮ್, ಮೋಕ್ಷಿತಾ ಪೈ ಹಾಗೂ ಚೈತ್ರಾ ಕುಂದಾಪುರ (Chaithra Kundapura) ಬಂದಿದ್ದಾರೆ. ಕಳೆದ ಮೂರು ದಿನಗಳಿಂದ ಸ್ಪರ್ಧಿಗಳೊಂದಿಗೆ ಆಟವಾಡಿ, ಮನರಂಜಿಸಿದ್ದಾರೆ. ಇದೀಗ ಅವರ ಕೊನೆಯ ದಿನ. ಹೀಗಾಗಿ ಬಿಗ್ ಬಾಸ್ (Bigg Boss) ಕುರಿತು ಮಾತನಾಡಿ ತುಂಬಾ ಭಾವುಕರಾಗಿದ್ದಾರೆ ಮಾಜಿ ಸ್ಪರ್ಧಿಗಳು.
ಕಣ್ಣೀರಿಟ್ಟ ಚೈತ್ರಾ
ರಜತ್ ಮಾತನಾಡಿ, ನಾವು ಸತ್ತ ಮೇಲೆಯೂ ನಮ್ಮ ವಂಶ ಪರಂಪರೆ ನಮ್ಮನ್ನ ನೋಡತ್ತೆ. ಆ ಅವಕಾಶ ಬಿಗ್ ಬಾಸ್ ಕೊಟ್ಟಿದೆ. ಉಗ್ರಂ ಮಂಜು ಮಾತನಾಡಿ, ಕಾರ್ ಅಲ್ಲಿ ಹೋಗುವಾಗ, ಅಲ್ಲೇ ಬಸ್ ನಿಲ್ಲಿಸಿ ಮಾತಾಡ್ತಾರೆ.
ಇದನ್ನೂ ಓದಿ: Bigg Boss Kannada 12: ಗಂಡ ಇದ್ದರೆ ಇರ್ತಾರೆ, ಇಲ್ಲ ಅಂದ್ರೆ ಹೋಗ್ತಾರೆ! ವಿಡಿಯೋ ಮಾಡೋದು ನಿಲ್ಲಿಸಲ್ಲ ಎಂದ ರಕ್ಷಿತಾ
ಪ್ರೀತಿ ಕೊಡುತ್ತಾರೆ. ಮೋಕ್ಷಿತಾ ಅವರು ಮಾತನಾಡಿ, ನನಗೆ ತಲೆ ಎತ್ತಿ ನಿಲ್ಲುವ ಹಾಗೇ ಮಾಡಿದ್ದು ಬಿಗ್ ಬಾಸ್. ಕರ್ಮಗಳನ್ನು ಕಳೆದಂತ ಜಾಗ ಎಂದರು ತ್ರಿವಿಕ್ರಮ್. ಚೈತ್ರಾ ಕಣ್ಣೀರಿಡುತ್ತಾ, ಬಿಗ್ ಬಾಸ್ ಯಾರಿಗೆ ಏನು ಕೊಟ್ಟಿದೆ ಗೊತ್ತಿಲ್ಲ. ನನಗೆ ಅಂತೂ ಪುನರ್ ಜನ್ಮ ಕೊಟ್ಟಿದೆ ಎಂದು ಭಾವುಕರಾದರು.
ಮಾಜಿ ಸ್ಪರ್ಧಿಗಳ ವಿರುದ್ಧ ಅಸಮಾಧಾನ
ಬಿಗ್ ಬಾಸ್ ಮನೆಯನ್ನು ಬಿಗ್ ಬಾಸ್ ಪ್ಯಾಲೇಸ್ ಎಂಬುದಾಗಿ ಮಾಡಿ ಎಲ್ಲ ಸ್ಪರ್ಧಿಗಳನ್ನು ಹೋಟೆಲ್ ಮ್ಯಾನೇಜ್‌ಮೆಂಟ್ ಮಾಡುವ ಸೇವಕರನ್ನಾಗಿ ಮಾಡಲಾಗಿದೆ. ಇದರಲ್ಲಿ ಕ್ಯಾಪ್ಟನ್ ಅಭಿ ಮ್ಯಾನೇಜರ್ ಆಗಿದ್ದರೆ, ಗಿಲ್ಲಿ ನಟ ಸರ್ವರ್ (ಹೋಟೆಲ್ ಸಪ್ಲೈಯರ್) ಆಗಿದ್ದಾರೆ. ಗಿಲ್ಲಿಯನ್ನು ಮಾಜಿ ಸ್ಪರ್ಧಿಗಳು ಟಾರ್ಗೆಟ್ ಮಾಡುತ್ತಾರೆ ಎಂಬುದು ವೀಕ್ಷಕರ ಅಭಿಪ್ರಾಯ.
ಕಲರ್ಸ್ ಕನ್ನಡ ಪ್ರೋಮೋ
ಮಾಜಿ ಸ್ಪರ್ಧಿಗಳಾದ ರಜತ್ ಹಾಗೂ ಉಗ್ರಂ ಮಂಜು ಬಿಗ್ ಬಾಸ್ ಮನೆಗೆ ಬಂದ ಕೂಡಲೇ ಗಿಲ್ಲಿ ನಟ ಅವರಿಗೆ ಮಾತಿನ ಟಾಂಗ್ ಕೊಟ್ಟಿದ್ದರು. ಉಗ್ರಂ ಮಂಜು ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದು, ನಾವೆಲ್ಲರೂ ಬ್ಯಾಚುಲರ್ ಪಾರ್ಟಿ ಮಾಡಲು ಬಂದಿದ್ದೇವೆ ಎಂದು ಮೋಕ್ಷಿತಾ ಪೈ ಹೇಳಿದ್ದರು. ಬಿಗ್‌ಬಾಸ್ ಮದುವೆ ವಿಷಯ ಹೇಳುತ್ತಿದ್ದಂತೆ ಗಿಲ್ಲಿ ನಟ, ಎರಡನೇಯದ್ದಾ ಅಥವಾ ಮೂರನೇದ್ದಾ ಅಂತ ಕೇಳುತ್ತಾರೆ. ಅಲ್ಲಿಂದ ಉಗ್ರಂ ಮಂಜು ಅವರಿಗೆ ಗಿಲ್ಲಿ ಮೇಲೆ ಕೋಪ ಶುರುವಾಗಿತ್ತು.
ಈ ವೇಳೆ ಉಗ್ರಂ ಮಂಜು, ರಜತ್, ತ್ರಿವಿಕ್ರಮ್, ಮೋಕ್ಷಿತಾ ಪೈ ಹಾಗೂ ಚೈತ್ರಾ ಕುಂದಾಪುರ ಎಲ್ಲರೂ ಬೆಡ್‌ರೂಮಲ್ಲಿ ಕುಳಿತುಕೊಂಡು ಅಲ್ಲಿಗೆ ಗಿಲ್ಲಿಯನ್ನು ಮುಂದೆ ಕೂರಿಸಿಕೊಂಡು ಕ್ಲಾಸ್ ತೆಗೆದುಕೊಂಡಿದ್ದರು.
ಮಾಜಿ ಸ್ಪರ್ಧಿಗಳು ಬಿಬಿ ಪ್ಯಾಲೇಸ್‌ಗೆ ಅತಿಥಿಗಳಾಗಿ ಬಂದಿದ್ದೇವೆ ಎಂಬುದನ್ನು ಮರೆತು, ಗಿಲ್ಲಿ ನಟನನ್ನು ಟಾರ್ಗೆಟ್ ಮಾಡಿದ್ದಾರೆ. ಗಿಲ್ಲಿ ಬೈದಿದ್ದನ್ನು ಟಾಸ್ಕ್ ಎಂಬುದನ್ನೂ ಅರ್ಥ ಮಾಡಿಕೊಳ್ಳದೆ ಜಗಳಕ್ಕೆ ಮುಂದಾಗಿರುವುದು ಗಿಲ್ಲಿ ಅಭಿಮಾನಿಗಳಿಗೆ ಬೇಸರ ಉಂಟುಮಾಡಿತ್ತು.