Bigg Boss Kannada 12: ಗಂಡ ಇದ್ದರೆ ಇರ್ತಾರೆ, ಇಲ್ಲ ಅಂದ್ರೆ ಹೋಗ್ತಾರೆ! ವಿಡಿಯೋ ಮಾಡೋದು ನಿಲ್ಲಿಸಲ್ಲ ಎಂದ ರಕ್ಷಿತಾ
Rakshitha Shetty: ಬಿಗ್ ಬಾಸ್‌ನಲ್ಲಿಯೂ ಕೆಲವು ವಿಚಾರಗಳನ್ನು ರಕ್ಷಿತಾ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಅದನ್ನು ಅವರ ಫ್ಯಾನ್ಸ್ ರೀಲ್ಸ್ ಮಾಡಿ ಹಾಕುತ್ತಿರುತ್ತಾರೆ. ಆದರೀಗ ರಕ್ಷಿತಾ ಮದುವೆ ವಿಚಾರ ಪ್ರಸ್ತಾಪವಾಗಿದೆ. ಗೆಸ್ಟ್ ಆಗಿ ಬಂದವರು ರಕ್ಷಿತಾ ಮದುವೆ ಆಗೋ ಹುಡುಗ ಹೇಗೆ ಇರಬೇಕು ಎಂದು ಕೇಳಿದ್ದಾರೆ. ಅದಕ್ಕೆ ರಕ್ಷಿತಾ ಹೇಳಿದ್ದು ಹೀಗೆ.
ಬಿಗ್ ಬಾಸ್ ಕನ್ನಡ -
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡುವ ಮೂಲಕ ರಕ್ಷಿತಾ ಶೆಟ್ಟಿ (Rakshitha Shetty) ಅವರು ಫೇಮಸ್ ಆದರು. ಈ ಮೂಲಕವೇ ಬಿಗ್ ಬಾಸ್‌ಗೆ (Bigg Boss Kannada 12) ಎಂಟ್ರಿ ಕೊಟ್ಟರು. ಬಿಗ್ ಬಾಸ್‌ನಲ್ಲಿಯೂ ಕೆಲವು ವಿಚಾರಗಳನ್ನು ರಕ್ಷಿತಾ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಅದನ್ನು ಅವರ ಫ್ಯಾನ್ಸ್ ರೀಲ್ಸ್ ಮಾಡಿ ಹಾಕುತ್ತಿರುತ್ತಾರೆ. ಆದರೀಗ ರಕ್ಷಿತಾ ಮದುವೆ (Marriage) ವಿಚಾರ ಪ್ರಸ್ತಾಪವಾಗಿದೆ. ಗೆಸ್ಟ್ ಆಗಿ ಬಂದವರು ರಕ್ಷಿತಾ ಮದುವೆ ಆಗೋ ಹುಡುಗ ಹೇಗೆ ಇರಬೇಕು ಎಂದು ಕೇಳಿದ್ದಾರೆ. ಅದಕ್ಕೆ ರಕ್ಷಿತಾ ಹೇಳಿದ್ದು ಹೀಗೆ.
ಇದ್ದರೆ ಇರ್ತಾರೆ, ಇಲ್ಲ ಅಂದ್ರೆ ಹೋಗ್ತಾರೆ!
ರಕ್ಷಿತಾ ಮದುವೆ ಆಗೋ ಹುಡುಗ, ಹಳ್ಳಿ ಹುಡುಗ ಆಗಿರಬೇಕು. ತೋಟ ಇರಬೇಕು. ಅವರು ಕೃಷಿ ಮಾಡಬೇಕು. ಅವರು ಮಾಡುವಾಗ ನಾನು ನನ್ನ ಬ್ಲಾಗ್‌ನಲ್ಲಿ ಅದರ ಬಗ್ಗೆ ಡಿಟೇಲ್ಸ್ ಹಾಕಬೇಕು ಎಂದಿದ್ದಾರೆ.
ಇದನ್ನೂ ಓದಿ: Bigg Boss Kannada 12: ಮಾಜಿ ಸ್ಪರ್ಧಿಗಳು ಇದೊಂದು ಕಾರಣಕ್ಕೆ ಬಿಗ್ ಬಾಸ್ ಮನೆಗೆ ಬಂದ್ರಾ? ಬಾಯ್ತಪ್ಪಿ ಚೈತ್ರಾ ಹೇಳಿದ್ದೇನು?
ʻಹಾಗೇ ನಾನು ಪೂರ್ತಿ ದಿನ ಅಲ್ಲೇ ಸಮಯ ಮೀಸಲಿಡಬಹುದು. ನನ್ನ ಅಪ್ಪ ಅಮ್ಮ ಹೇಗೆ ಅಂದರೆ, ಸೋಷಿಯಲ್ ಮೀಡಿಯಾದಲ್ಲಿ ಇಲ್ಲ. ನಾನೇ ನನ್ನ ಕುಟುಂಬದಲ್ಲಿ ಮೊದಲು ಸೋಷಿಯಲ್ ಮೀಡಿಯಾ ಬಳಕೆ ಮಾಡಿದ್ದು. ಮದುವೆ ನಂತರವೂ ನನಗೆ ಇದೆ ಲೈಫ್ ಬೇಕು. ಬ್ಲಾಗಿಂಗ್ ಅದಿಕ್ಕೆಲ್ಲ ಸಪೋರ್ಟ್ ಮಾಡೋ ಹುಡುಗ ಬೇಕುʼ ಎಂದಿದ್ದಾರೆ.
ಇನ್ನು ರಜತ್, ಈ ಬಗ್ಗೆ ರಕ್ಷಿತಾಗೆ, ಒಂದು ವೇಳೆ ಸಪೋರ್ಟ್ ಮಾಡಿಲ್ಲ ಅಂದ್ರೆ ಏನು ಮಾಡ್ತೀರಾ? ಎಂದು ಕೇಳಿದ್ದಾರೆ. ಅದಕ್ಕೆ ರಕ್ಷಿತಾ, ʻಇದ್ದರೆ ಇರ್ತಾರೆ, ಇಲ್ಲ ಅಂದ್ರೆ ಹೋಗ್ತಾರೆʼ ಎಂದು ಹೇಳಿದ್ದಾರೆ.
ಕಲರ್ಸ್ ಕನ್ನಡ ವಿಡಿಯೋ
ಡಲ್ ಆದ ಗಿಲ್ಲಿ
ಬಿಗ್‌ಬಾಸ್ ಆರಂಭದ ದಿನಗಳಲ್ಲಿ ಮನೆಯಿಂದ ಯಾರನ್ನು ಹೊರಗೆ ಹಾಕಲು ಇಷ್ಟಪಡುತ್ತೀರಿ ಎಂದು ರಕ್ಷಿತಾ ಶೆಟ್ಟಿ ಅವರಿಗೆ ಸುದೀಪ್ ಕೇಳಿದ್ದರು. ಆಗ ರಕ್ಷಿತಾ ಶೆಟ್ಟಿ ಎಲ್ಲರನ್ನೂ ಹೊರಗೆ ಹಾಕುವೆ ಎಂದಿದ್ದರು. ಈ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ಮನೆಯ ಸದಸ್ಯರು ಒಂದು ದಿನ ಬಿಗ್‌ಬಾಸ್ ಮನೆಯಿಂದ ಹೊರ ಬಂದಿದ್ದರು.
ನಿನ್ನೆ ರಕ್ಷಿತಾ ಅವರು ಧ್ರುವಂತ್ ಜೊತೆ ಜಗಳ ಮಾಡಿಕೊಂಡಿದ್ದರು. ಕ್ಲೀನಿಂಗ್ ವಿಚಾರದಲ್ಲಿ ಒಬ್ಬರಿಗೊಬ್ಬರ ಮಧ್ಯೆ ಮಾತಿನ ಚಕಮಕಿ ಆಗಿದೆ. ರಕ್ಷಿತಾ ಅವರು ಕ್ಲೀನಿಂಗ್ ಮಾಡೋ ವೇಳೆ, ಧನುಷ್ ಬೇಕು ಅಂತ ಟಿಷ್ಯೂ ಪೇಪರ್ ಸಿಂಕ್‌ಗೆ ಹಾಕಿದ್ದಾರೆ ಎನ್ನೋದು ರಕ್ಷಿತಾ ವಾದ. ರಕ್ಷಿತಾ ಪರ ಮಾಳು ಕೂಡ ನಿಂತಿದ್ದರು. ಮೊದಲಿಗೆ ರಕ್ಷಿತಾ ವಿರುದ್ಧ ಮಾತನಾಡಿದ ಧ್ರುವಂತ್ ಅವರನ್ನು ಮೊದಲಿಗೆ ಕ್ಲಾಸ್ ತೆಗೆದುಕೊಂಡಿದ್ದರು ಮಾಳು. ಆ ಬಳಿಕ ಮನೆಯ ಸದಸ್ಯರೆಲ್ಲ ಈ ಜಗಳವನ್ನು ತಡೆದಿದ್ದಾರೆ.
ಇದನ್ನೂ ಓದಿ: Bigg Boss Kannada 12: ರಜತ್ ಎಂಟ್ರಿ ಕೊಟ್ಟ ಮೇಲೆ ರೆಸಾರ್ಟ್ ಲೋಕಲ್ ಬಾರ್ ಥರ ಆಗಿದೆ; ಕಿಚ್ಚನ ಹಳೆಯ ವಿಡಿಯೋ ವೈರಲ್
ಬಿಗ್ ಬಾಸ್ ಮನೆಯೊಳಗೆ ಅತಿಥಿಯಾಗಿ ಕಾಲಿಟ್ಟಿರುವ ಹಳೆ ಸೀಸನ್‌ನ ಮಾಜಿ ಸ್ಪರ್ಧಿಗಳಾದ ಉಗ್ರಂ ಮಂಜು, ರಜತ್, ಮೋಕ್ಷಿತಾ ಪೈ, ತ್ರಿವಿಕ್ರಮ್ ಮತ್ತು ಚೈತ್ರಾ ಕುಂದಾಪುರ ಅವರು ಬಿಬಿ ಪ್ಯಾಲೇಸ್‌ನಲ್ಲಿ ತಮ್ಮ ದಬ್ಬಾಳಿಕೆಯನ್ನ ಮುಂದುವರಿಸಿದ್ದಾರೆ. ಅದರಲ್ಲೂ ಮಂಜು ಮತ್ತು ರಜತ್ ಅವರ ಕಣ್ಣು ಗಿಲ್ಲಿ ನಟನ ಮೇಲೆಯೇ ಇದೆ. ಸದ್ಯ ಗಿಲ್ಲಿ ವಿಚಾರವಾಗಿಯೇ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.