ಬಿಗ್ ಬಾಸ್ ಫಿನಾಲೆಗೆ (Bigg Boss Kannada 12) ಇನ್ನು ಕೇವಲ ಎರಡು ದಿನಗಳು ಬಾಕಿ ಇವೆ. ಅಶ್ವಿನಿ ಗೌಡ, ಗಿಲ್ಲಿ ನಟ, ಕಾವ್ಯಾ, ರಘು, ಧನುಷ್, ರಕ್ಷಿತಾ ಶೆಟ್ಟಿ ಅವರು ಈಗ ಫಿನಾಲೆ ತಲುಪಿದ್ದಾರೆ. ಛಲಗಾರ್ತಿ ಅಶ್ವಿನಿ ಅವರು ಕೂಡ ಶೋ ಶುರುವಾದಾಗಿನಿಂದ ಸಖತ್ ಹೈಲೈಟ್ ಆದವರು. ಅಶ್ವಿನಿ ಗೌಡ ಟಾಸ್ಕ್ (Task) ಅಂತ ಬಂದರೆ ಸಖತ್ ಡೇರಿಂಗ್ ಅಲ್ಲಿ ಆಟ ಆಡದೇ ಬಿಟ್ಟು ಕೊಡುತ್ತ ಇರಲಿಲ್ಲ. ಅಶ್ವಿನಿ ಅವರ ಬಿಗ್ ಬಾಸ್ ಜರ್ನಿ ಹೀಗಿತ್ತು.
ರಾಜಮಾತೆ ಪಟ್ಟ
ಅಶ್ವಿನಿ ಗೌಡ ಬಂದ ಮೊದಲ ವಾರಕ್ಕೆ ಕೂಗಾಟ, ಚೀರಾಟ ಜೋರಾಗಿಯೇ ಇತ್ತು. ರಾಜಮಾತೆ ಪಟ್ಟ ಸಿಕ್ಕ ಮೇಲೆ ಇನ್ನಷ್ಟು ಹೈಲೈಟ್ ಆಗಿದ್ದರು ಅಶ್ವಿನಿ. ಅದರಲ್ಲೂ ಜಾಹ್ನವಿ ಹಾಗೂ ಅಶ್ವಿನಿ ಗೌಡ ಜೋಡಿಯೇ ಪ್ರಮುಖವಾಗಿತ್ತು. ಅಶ್ವಿನಿ ಅವರಿಗೆ ಕಾಡಿಸ್ತಾ ಇದ್ದಿದ್ದು ಗಿಲ್ಲಿ ನಟ. ಅತ್ತೆ ಮಗಳು ಅಂತಾನೇ ಅಶ್ವಿನ ಅವರನ್ನ ಸಖತ್ ಟ್ರಿಗರ್ ಮಾಡ್ತಾ ಇದ್ದರು ಗಿಲ್ಲಿ.
ಗಿಲ್ಲಿಯನ್ನು ಕಂಡರೆ ಅಶ್ವಿನಿ ಗೌಡ ಅವರಿಗೆ ಅಸಮಾಧಾನ ಇದೆ. ಈ ಬಗ್ಗೆ ಅವರು ಅನೇಕ ಬಾರಿ ಹೇಳಿಕೊಂಡಿದ್ದಾರೆ. ಏಕವಚನದಲ್ಲಿ ಸಾಕಷ್ಟು ಬಾರಿ ಮಾತಾಡಿಕೊಂಡಿದ್ದಾರೆ.
ಕಿಚ್ಚನಿಂದ ಕ್ಲಾಸ್!
ಅಶ್ವಿನಿ ಅವರು ಮೊದಲಿಗೆ ರಕ್ಷಿತಾ ಅವರ ಜೊತೆ ಜಗಳ ಮಾಡುತ್ತಾರೆ. ಈ ವಿಚಾರ ವೀಕೆಂಡ್‌ನಲ್ಲಿ ಚರ್ಚೆಯೂ ಆಗುತ್ತೆ. ಕಿಚ್ಚ ಅವರು ಅಶ್ವಿನಿ ಬಳಕೆ ಮಾಡಿದ ಆಡಿಯೋ ಕೂಡ ಪ್ಲೇಮಾಡಿಸುತ್ತಾರೆ. ಅಶ್ವಿನಿ ಅವರೇ, ಒಂದು ಆಡಿಯೋ ಪ್ಲೇ ಮಾಡಬೇಕು ಮೇಡಂ ಎಲ್ಲೆಲ್ಲಿ ಏನೇನಾಯ್ತು ಅಂತ ಕೇಳಿಸಿಕೊಳ್ಳಿ ಎಂದು ಹೇಳಿದ ಸುದೀಪ್, ಅಶ್ವಿನಿ ಗೌಡ ಅವರ ಆಡಿಯೋವನ್ನು ಆಡಿಯೋ ಪ್ಲೇ ಮಾಡಿದರು.
ಇದನ್ನೂ ಓದಿ: Bigg Boss Kannada 12: ಗಿಲ್ಲಿಯೇ ಗೆಲ್ಲೋದು! ಭವಿಷ್ಯ ನುಡಿದ ಶಿವಣ್ಣ
ಆಡಿಯೋದಲ್ಲಿ ಅಮಾವಾಸ್ಯೆನ ಜೊತೆಯಲ್ಲೇ ಇಟ್ಟುಕೊಂಡಿದ್ಯಾ ಹೋಗು.. ಈ ಕಾರ್ಟೂನ್ ಯಾವುದು..? ಫ್ರೀ ಪ್ರಾಡಕ್ಟ್.. ಯಾವನೋ ನೀನು.. ಹೋಗೋಲೇ.. ಹೋಗೋ.. ಮುಚ್ಕೊಂಡ್ ಮಲ್ಕೋ.. ನಿನಗೆ ಯೋಗ್ಯತೆ ಇಲ್ಲ.. ಟಾಪ್ ಟು ಬಾಟಂ ಗಾಂಚಲಿ.. ಯಾರೋ ನೀನು ಬ್ಲಡಿ ಫೆಲೋ.. ನಿನ್ ಯೋಗ್ಯತೆಗೆ ಇಷ್ಟು.. ಬ್ಲಡಿ ಲೂಸರ್.. ಎಂದೆಲ್ಲಾ ಅಶ್ವಿನಿ ಗೌಡ ಪದಗಳನ್ನು ಬಳಸಿದ್ದರು. ಇದಾದ ಬಳಿಕ ಅಶ್ವಿನಿ ಅವರು 2.0 ಆಗಿ ಆಟ ಶುರು ಮಾಡ್ತಾರೆ.
ಅಶ್ವಿನಿ ಮೇಡಂ ೨.೦
ಅಶ್ವಿನಿ ಅವರು ಸಖತ್ ಸೈಲೆಂಟ್ ಆಗ್ತಾರೆ. ಈ ವಿಚಾರವನ್ನೇ ಇಟ್ಟುಕೊಂಡು ಗಿಲ್ಲಿ ಮತ್ತೆ ನಾಮಿನೇಟ್ ಮಾಡಲು ಶುರು ಮಾಡ್ತಾರೆ. ಅಶ್ವಿನಿ ಮೇಡಂ ೨.೦ ಶುರುವಾಗಬೇಕು ಅಂತ ಹೇಳಿದ್ದಾರೆ. ಅದನ್ನು ಅವರು ಹೇಗೆ ತೆಗೆದುಕೊಂಡಿದ್ದಾರೆ ಅಂದರೆ, ಸೈಲೆಂಟ್ ಆಗಿ ಮನೆಯಲ್ಲಿ ಕೆಲಸ ಮಾಡಿಕೊಂಡು, ಓಡಾಡಿಕೊಂಡು, ಅಡುಗೆ ಮಾಡಿಕೊಂಡು, ಸೊಪ್ಪು ಬಿಡಿಸಿಕೊಂಡು ಇದ್ದು ಬಿಡಬೇಕು. ಎಲ್ಲಾ ಮಾಡಬೇಕು ಅಂತ ಹೇಳಿರೋದು. ಸುಮ್ಮನೆ ಸೈಲೆಂಟ್ ಆಗಿ ಇದ್ದು ಬಿಡಿ ಅಂತ ಹೇಳಿದ್ದಲ್ಲ ಎಂದು ಕಾರಣ ಕೂಡ ಕೊಡ್ತಾರೆ.
ಟಾಪ್ 6 ಟಾಸ್ಕ್‌ನಲ್ಲಿ ಅಶ್ವಿನಿ ಉತ್ತಮ
ಧ್ರುವಂತ್ ಹಾಗೂ ಅಶ್ವಿನಿ ಗೌಡ ಮತ್ತು ರಘು ಹಾಗೂ ರಾಶಿಕಾ ಶೆಟ್ಟಿ ತಂಡಗಳಾಗಿ ಟಾಸ್ಕ್ ಆಡಿದ್ದರು. ಮೊದಲು ರಾಶಿಕಾ ಶೆಟ್ಟಿ ಹಾಗೂ ರಘು ಕಂಬ ಹಿಡಿದು ನಿಂತುಕೊಳ್ಳಬೇಕಿತ್ತು. ಅಶ್ವಿನಿ ಗೌಡ ಹಾಗೂ ಧ್ರುವಂತ್ ತಮ್ಮ ತಂತ್ರಗಳನ್ನ ಬಳಸಿ, ಅವರ ಏಕಾಗ್ರತೆಯನ್ನ ಕೆಡಿಸಬೇಕಿತ್ತು. ಆದರೆ, ಧ್ರುವಂತ್ ಹಾಗೂ ಅಶ್ವಿನಿ ಗೌಡ ಸಖತ್ ಕೂಲ್ ಆಗಿಯೇ ಆಟ ಆಡಿದ್ದರು. ಆದರೂ, ರಾಶಿಕಾ ಶೆಟ್ಟಿ ಬೇಗನೇ ಟಾಸ್ಕ್‌ನಿಂದ ಔಟ್ ಆದರು. ಟಿಕೆಟ್ ಪಡೆದುಕೊಳ್ಳದೇ ಇದ್ದರು ಈ ಟಾಸ್ಕ್ ಮೂಲಕ ತಮ್ಮನ್ನು ತಾವು ಪ್ರೂವ್ ಮಾಡಿಕೊಂಡರು.
ಗಿಲ್ಲಿ-ಅಶ್ವಿನಿ ಒಬ್ಬರಿಗೊಬ್ಬರು ಕ್ಷಮೆ
ಬಿಗ್ ಬಾಸ್ ಮನೆಯಿಂದ ಹೊರಗೆ ಬರುವ ಸಮಯ ಎದುರಾಗಿದೆ. ಕೊನೇ ವಾರದಲ್ಲಿ ಒಬ್ಬರಿಗೊಬ್ಬರು ಕ್ಷಮೆ ಕೇಳಿದ್ದಾರೆ. ಗಿಲ್ಲಿ ನಟ ಅವರು ತಾವು ಮಾಡಿದ ತಪ್ಪನ್ನು ತಿದ್ದಿಕೊಂಡಿದ್ದಾರೆ. ಅಶ್ವಿನಿ ಗೌಡಗೆ ಮಾತ್ರವಲ್ಲದೇ ಕಾವ್ಯಾ ಶೈವ, ರಘು ಅವರಿಗೂ ಗಿಲ್ಲಿ ನಟ ಕ್ಷಮೆ ಕೇಳಿದ್ದಾರೆ. ನಿಮ್ಮ ಜಾಗದಲ್ಲಿ ನಮ್ಮ ಅಕ್ಕನೋ ಅಥವಾ ಅಮ್ಮನೋ ಇದ್ದಿದ್ದು ಬೇರೆ ಯಾರಾದರೂ ಆ ರೀತಿ ಮಾತನಾಡಿದ್ದರೆ ನಾನು ಯಾವ ರೀತಿ ಪ್ರತಿಕ್ರಿಯಿಸುತ್ತಿದ್ದೆ ಅಂತ ನನಗೆ ಅನಿಸಿತು ಎಂದು ಹೇಳಿದರು.
ಇದನ್ನೂ ಓದಿ: Bigg Boss Kannada 12: ಮಾತಿನಲ್ಲೇ ಕೌಂಟರ್, ಡೈಲಾಗ್‌ನಲ್ಲಿ ಪಂಚಿಂಗ್ ಪಂಟರ್! ಮಾತಿನ ಮಲ್ಲ ಗಿಲ್ಲಿ ರೋಚಕ ಜರ್ನಿ
ಅಶ್ವಿನಿ ಗೌಡ ಅವರು ಕೂಡ ಗಿಲ್ಲಿಯ ಬಳಿ ಕ್ಷಮೆ ಕೇಳಿದ್ದಾರೆ. ಎಲ್ಲ ಸ್ಪರ್ಧಿಗಳು ಪರಸ್ಪರ ದ್ವೇಷ ಮರೆತು ಒಂದಾಗಿದ್ದಾರೆ. 17 ಮತ್ತು 18ರಂದು ಬಿಗ್ ಬಾಸ್ ಫಿನಾಲೆ ನಡೆಯಲಿದೆ. ಈ 6 ಜನರ ಪೈಕಿ ಯಾರು ಟ್ರೋಫಿ ಗೆಲ್ಲುತ್ತಾರೆ ಎಂಬುದನ್ನು ನೋಡಲು ವೀಕ್ಷಕರು ಕಾದಿದ್ದಾರೆ.