Bigg Boss Kannada 12: ಗಿಲ್ಲಿಯೇ ಗೆಲ್ಲೋದು! ಭವಿಷ್ಯ ನುಡಿದ ಶಿವಣ್ಣ
Gilli Nata: ಬಿಗ್ ಬಾಸ್ ಫಿನಾಲೆಗೆ ಇನ್ನು ಕೇವಲ ಎರಡು ದಿನಗಳು ಬಾಕಿ ಇವೆ. ಅದರಲ್ಲೂ ಗಿಲ್ಲಿ ಕ್ರೇಜ್ ಮಾತ್ರ ಸಖತ್ ಆಗಿ ಆಗ್ತಿದೆ. ವರ್ಷಗಳ ಹಿಂದೆ ನಟ ಜಗ್ಗೇಶ್ ಅವರ ಬೇರೊಂದು ರಿಯಾಲಿಟಿ ಶೋನಲ್ಲಿ ಗಿಲ್ಲಿ ನಟನನ್ನು ಹೊಗಳಿದ್ದರು. "ಮುಂದಿನ ವರ್ಷ ಗಿಲ್ಲಿ ಛತ್ರಿ ಹಿಡಿಯೋಕೆ ಒಬ್ಬರನ್ನ ಇಟ್ಕೊಂಡು, ಜೊತೆಗೆ ನಾಲ್ಕು ಜನ ಬಾಡಿಗಾರ್ಡ್ ಹಾಕೊಂಡು ಓಡಾಡೋ ಸ್ಟೇಜ್‌ಗೆ ಬರ್ತಾನೆ" ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಇದೀಗ ಗಿಲ್ಲಿಯೇ ಬಿಗ್ ಬಾಸ್ ಗೆಲ್ಲೋದು ಎಂದು ಶಿವರಾಜ್ಕುಮಾರ್ ಭವಿಷ್ಯ ನುಡಿದಿದ್ದಾರೆ.
ಗಿಲ್ಲಿ ನಟ -
ಬಿಗ್ ಬಾಸ್ ಫಿನಾಲೆಗೆ (Bigg Boss Kannada Finale) ಇನ್ನು ಕೇವಲ ಎರಡು ದಿನಗಳು ಬಾಕಿ ಇವೆ. ಅದರಲ್ಲೂ ಗಿಲ್ಲಿ (Gilli Nata) ಕ್ರೇಜ್ ಮಾತ್ರ ಸಖತ್ ಆಗಿ ಆಗ್ತಿದೆ. ವರ್ಷಗಳ ಹಿಂದೆ ನಟ ಜಗ್ಗೇಶ್ ಅವರ ಬೇರೊಂದು ರಿಯಾಲಿಟಿ ಶೋನಲ್ಲಿ ಗಿಲ್ಲಿ ನಟನನ್ನು ಹೊಗಳಿದ್ದರು. "ಮುಂದಿನ ವರ್ಷ ಗಿಲ್ಲಿ ಛತ್ರಿ ಹಿಡಿಯೋಕೆ ಒಬ್ಬರನ್ನ ಇಟ್ಕೊಂಡು, ಜೊತೆಗೆ ನಾಲ್ಕು ಜನ ಬಾಡಿಗಾರ್ಡ್ ಹಾಕೊಂಡು ಓಡಾಡೋ ಸ್ಟೇಜ್‌ಗೆ ಬರ್ತಾನೆ" ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಇದೀಗ ಗಿಲ್ಲಿಯೇ ಬಿಗ್ ಬಾಸ್ ಗೆಲ್ಲೋದು ಎಂದು ಶಿವರಾಜ್ಕುಮಾರ್ (Shiva Rajkumar) ಭವಿಷ್ಯ ನುಡಿದಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ.
ಗಿಲ್ಲಿಯೇ ಗೆಲ್ಲೋದು
‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋನಲ್ಲಿ ಗಿಲ್ಲಿಯ ಪರಿಚಯ ಶಿವರಾಜ್ಕುಮಾರ್ ಅವರಿಗೆ ಆಗಿತ್ತು. ಕಾರ್ಯಕ್ರಮದಲ್ಲಿ ಗಿಲ್ಲಿ ಸಾಕಷ್ಟು ಮನರಂಜನೆ ನೀಡಿದ್ದರು. ಅಷ್ಟೇ ಅಲ್ಲ ಗಿಲ್ಲಿಯ ಒಂದು ಸಿಗ್‌ನೇಚರ್ ಸ್ಟೆಪ್ಸ್ ಶಿವಣ್ಣ ಮಾಡ್ತಾ ಇದ್ದರು.
ಇದನ್ನೂ ಓದಿ: Bigg Boss Kannada 12: ಟಾಸ್ಕ್ ಮಾಸ್ಟರ್, ಈ ಸೀಸನ್ ಮೊದಲ ಫೈನಲಿಸ್ಟ್ ಧನುಷ್ ಜರ್ನಿ ಹೇಗಿತ್ತು?
ಕಾರ್ಯಕ್ರಮ ಒಂದರಲ್ಲಿ ಮಾತನಾಡುವಾಗ, ಗಿಲ್ಲಿಯೇ ಗೆಲ್ಲೋದು ಎಂದು ಟೇಬಲ್ ತಟ್ಟಿ ಹೇಳಿದ್ದಾರೆ ಶಿವಣ್ಣ. ಇಷ್ಟೇ ಅಲ್ಲ, ಶಿವರಾಜ್ಕುಮಾರ್ ಅವರು ಗಿಲ್ಲಿಗೆ ಆಲ್ ದಿ ಬೆಸ್ಟ್ ಕೂಡ ಹೇಳಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದೆ. ಈ ಬಾರಿ ಬಿಗ್ ಬಾಸ್ ಮನೆಗೆ ಬಂದಿದ್ದ ಜೋಗಿ ಪ್ರೇಮ್ ಅವರು ಗಿಲ್ಲಿಗೆ ವಿಶೇಷ ಪ್ರೀತಿ ತೋರಿಸಿದ್ದರು. ಹೊರಗೆ ಬಂದ್ಮೇಲೆ ಸಿಗು’ ಎಂದಿದ್ದರು.
ಗಿಲ್ಲಿ ಕ್ರೇಜ್ ಹೇಗಿದೆ?
ಬಿಗ್ ಬಾಸ್ 12ರ ಮನೆಯೊಳಗೆ ಈಚೆಗೆ ಅಭಿಮಾನಿಗಳೆಲ್ಲಾ ಹೋಗಿದ್ದರು. ತಮ್ಮ ನೆಚ್ಚಿನ ಸ್ಪರ್ಧಿಗಳು ಬಂದಾಗ, ಅವರ ಎದುರು ಫ್ಯಾನ್ಸ್ ಜೋರಾಗಿ ಕೂಗಿದ್ದು, ನಂತರ ಸ್ಪರ್ಧಿಗಳು ಮನೆಗೆ ಬಂದ ಅಭಿಮಾನಿಗಳ ಎದುರು ಪಂಚಿಂಗ್ ಡೈಲಾಗ್ ಹೇಳಿದ್ದು ಎಲ್ಲವನ್ನು ವೀಕ್ಷಕರು ನೋಡಿದ್ದಾರೆ.
ವೈರಲ್ ವಿಡಿಯೊ
#BBK12
— Cinema Premi✍🏻 (@karansharmain) January 16, 2026
Shivanna's Dhachak moment to all haters. 😂
ಗಿಲ್ಲಿನೇ ಗೆಲ್ಲೋದು. 🥳#Gilli | #GilliNata pic.twitter.com/cszVxQbZ5B
ಬಿಗ್ ಬಾಸ್ ಮನೆಯೊಳಗೆ ಹೋಗಿದ್ದ ಅಭಿಮಾನಿಯೊಬ್ಬರು ಈ ವಿಚಾರವನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. "ಮೊದಲು ಮೂರ್ನಾಲ್ಕು ಸ್ಪರ್ಧಿಗಳು ಬಂದಾಗ, ಇಬ್ಬರು ಬಾಡಿಗಾರ್ಡ್ಸ್‌ನ ನಿಲ್ಲಿಸಿದ್ದರು. ಗಿಲ್ಲಿ ನಟ ಬಂದಾಗ ಆರು ಜನ ಬಾಡಿಗಾರ್ಡ್ಸ್‌ನ ನಿಲ್ಲಿಸಿದ್ದರು. ಅಲ್ಲದೇ, ಗಿಲ್ಲಿ ಬರುವುದಕ್ಕೂ ಮುನ್ನ 45 ನಿಮಿಷ ನಮಗೆ ಹೇಗಿರಬೇಕು, ಹೇಗೆ ನಡೆದುಕೊಳ್ಳಬೇಕು ಎಂಬುದನ್ನೆಲ್ಲಾ ಹೇಳಿಕೊಟ್ಟಿದ್ದರು. ಗಿಲ್ಲಿ ಕ್ರೇಜ್ ಹೇಗಿದೆ ಎಂಬುದು ಬಿಗ್ ಬಾಸ್‌ಗೂ ಗೊತ್ತಿದೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: Bigg Boss Kannada 12: ಮಾತಿನಲ್ಲೇ ಕೌಂಟರ್, ಡೈಲಾಗ್‌ನಲ್ಲಿ ಪಂಚಿಂಗ್ ಪಂಟರ್! ಮಾತಿನ ಮಲ್ಲ ಗಿಲ್ಲಿ ರೋಚಕ ಜರ್ನಿ
ಭವಿಷ್ಯ ನುಡಿದಿದ್ದ ಜಗ್ಗೇಶ್
ವರ್ಷಗಳ ಹಿಂದೆ ನಟ ಜಗ್ಗೇಶ್ ಅವರ ಬೇರೊಂದು ರಿಯಾಲಿಟಿ ಶೋನಲ್ಲಿ ಗಿಲ್ಲಿ ನಟನನ್ನು ಹೊಗಳಿದ್ದರು. "ಮುಂದಿನ ವರ್ಷ ಗಿಲ್ಲಿ ಛತ್ರಿ ಹಿಡಿಯೋಕೆ ಒಬ್ಬರನ್ನ ಇಟ್ಕೊಂಡು, ಜೊತೆಗೆ ನಾಲ್ಕು ಜನ ಬಾಡಿಗಾರ್ಡ್ ಹಾಕೊಂಡು ಓಡಾಡೋ ಸ್ಟೇಜ್‌ಗೆ ಬರ್ತಾನೆ" ಎಂದು ಹೇಳಿದ್ದರು. ಇದೀಗ ಆ ಮಾತು ನಿಜವಾಗುವ ಸಮಯ ಬಂದಿದೆ. ಈ ಬಾರಿ ಬಿಗ್ ಬಾಸ್ ವಿನ್ನರ್ ಆಗು ಸಾಧ್ಯತೆಗಳು ಗಿಲ್ಲಿ ಕಡೆಗೆ ಜಾಸ್ತಿ ಇವೆ ಎಂಬ ಮಾತುಗಳು ಕೇಳಿಬಂದಿವೆ.