ಬಿಗ್ ಬಾಸ್ (Bigg Boss Kannada 12) ಮನೆಯಲ್ಲೀಗ ಸ್ಪರ್ಧಿಗಳು ಮತ್ತೆ ಜಂಟಿಯಾಗಿದ್ದಾರೆ. ಗಿಲ್ಲಿ ಹಾಗೂ ಕಾವ್ಯ ಮತ್ತೆ ಒಟ್ಟಿಗೆ ಆಡುತ್ತಿದ್ದಾರೆ. ನಿನ್ನೆ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದರು. ಸ್ಪರ್ಧಿಗಳೇ ತಮ್ಮ ಜೊತೆಗಾರರನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. ಹೀಗಾಗಿ ಮನೆಯಲ್ಲಿ ಕಾವ್ಯ-ಗಿಲ್ಲಿ ಜೋಡಿಯಾದರೆ, ರಾಶಿಕಾ-ಸೂರಜ್ (Rashika Sooraj), ಸ್ಪಂದನಾ -ಅಭಿಷೇಕ್, ಅಶ್ವಿನಿ-ರಘು, ಮಾಳು-ರಕ್ಷಿತಾ, ಚೈತ್ರಾ ಕುಂದಾಪುರ ಮತ್ತು ರಜತ್ ಕಿಶನ್ ಜೋಡಿ ಆದರು. ಧ್ರುವಂತ್ ಅವರನ್ನು ಮಾತ್ರ ಯಾರೂ ಜೋಡಿಯಾಗಿ ಸೆಲೆಕ್ಟ್ ಮಾಡಿರಲಿಲ್ಲ. ಆದರೆ ಗಿಲ್ಲಿ ನಟ ಹಾಗೂ ರಾಶಿಕಾ ಜೋಡಿ ವಿರುದ್ಧ ಸಖತ್ ಪೈಪೋಟಿ ಇದೆ. ರಾಶಿಕಾ ಅವರಂತೂ ಕಾವ್ಯಾ ಮತ್ತು ಗಿಲ್ಲಿಯನ್ನು (Gilli Nata) ಸೋಲಿಸಿ ಟಾಸ್ಕ್ನಿಂದ ಹೊರಗೆ ಹಾಕುವ ನಿರ್ಧಾರ ಮಾಡಿದ್ದು, ಸೂರಜ್ ಜೊತೆಗೆ ಈ ಬಗ್ಗೆ ಚರ್ಚೆ ಮಾಡಿದ್ದಾರೆ.
ಮನೆಯ ಮುಂದಿನ ಕ್ಯಾಪ್ಟನ್
ಗಿಲ್ಲಿಗೆ ಈ ಟಾಸ್ಕ್‌ನ್ನು ತುಂಬಾ ಸೀರೆಯೆಸ್ ಆಗಿ ತೆಗೆದುಕೊಂಡಂತಿದೆ. ಅಷ್ಟೇ ಅಲ್ಲ ಈ ವಾರದ ಟಾಸ್ಕ್ ವಿನ್ ಆದ್ರೆ ಆ ಜೋಡಿ ಮನೆಯ ಮುಂದಿನ ಕ್ಯಾಪ್ಟನ್ ಆಗುತ್ತಾರೆ. ಇದೀಗ ಪ್ರೋಮೋ ಔಟ್ ಆಗಿದೆ. ಜೋಡಿಗಳ ಮಧ್ಯೆ ಸಖತ್ ಕಾಂಪಿಟೇಶನ್ ಶುರು ಆಗಿದೆ.
ಇದನ್ನೂ ಓದಿ: Bigg Boss Kannada 12: ರಘು Vs ಗಿಲ್ಲಿ; ‘ಬಾಹುಬಲಿ’ ಕಟ್ಟಪ್ಪ ಸೀನ್ ಹೋಲಿಕೆ, ವೈರಲ್ ಆಯ್ತು ಪೋಸ್ಟ್
ಚೆಂಡುಗಳನ್ನು ಪಡೆದು ಎದುರಾಳಿಗಳಿಂದ ಕಾಪಾಡಿಕೊಳ್ಳಬೇಕಿತ್ತು. ಅತಿ ಹೆಚ್ಚು ಚೆಂಡಗಳನ್ನು ಹೊಂದಿರುವ ಜೋಡಿ ಈ ಟಾಸ್ಕ್ ವಿನ್ ಆಗುತ್ತೆ. I Want To Play This Pattern ಅಂತ ಗಿಲ್ಲಿ ಕೂಡ ಡೈಲಾಗ್ ಹೇಳಿದ್ದಾರೆ. ಇದೀಗ ಈ ಜೋಡಿಯಲ್ಲಿ ಯಾರು ವಿನ್ ಆಗ್ತಾರೆ ಅನ್ನೋ ಕುತೂಹಲ ವೀಕ್ಷಕರಿದೆ.
ಕಲರ್ಸ್ ಕನ್ನಡ ಪ್ರೋಮೋ
ಗಿಲ್ಲಿ ಪರ ಕಾವ್ಯ ಸ್ಟ್ಯಾಂಡ್
ಟಾಸ್ಕ್ ಮುಂಚೆಯೇ ರಾಶಿಕಾ ಹಾಗೂ ಗಿಲ್ಲಿ ಮಧ್ಯೆ ವಾದ ವಿವಾದಗಳು ನಡೆದಿದೆ. ಕಾವ್ಯ ಹಾಗೂ ಗಿಲ್ಲಿ ಫ್ರೆಂಡ್‌ಶಿಪ್ ಬಗ್ಗೆ ಪರೋಕ್ಷವಾಗಿಯೇ ಟಾಂಗ್ ಕೊಟ್ಟಿದ್ದಾರೆ. ಗಿಲ್ಲಿ-ರಾಶಿಕಾ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಕಾವ್ಯ ಅವರು ಒಂದೇ ಪರ್ಸನ್‌ಗೆ (ಗಿಲ್ಲಿ) ಸ್ಟ್ಯಾಂಡ್ ತೆಗೆದುಕೊಳ್ಳುತ್ತಾರಂತೆ ಎಂದು ಕಾವ್ಯ ಬಗ್ಗೆ ಕ್ಯಾಮೆರಾ ಮುಂದೆ ರಾಶಿಕಾ ಹೇಳಿದ್ದರು. ಕಾವ್ಯ ಅವರು ಈ ಬಗ್ಗೆ ಕೂಗಾಡಿ, ತಾಕತ್ತು ಇದ್ದರು ಬೇರೆಯವರು ಫ್ರೆಂಡ್‌ಶಿಪ್ ಬೆಳೆಸಿಕೊಂಡು ತೋರಿಸಲಿ ಎಂದು ಅಬ್ಬರಿಸಿದ್ದರು.
ಹೀಗಾಗಿ ಮುಂದಿನ ಟಾಸ್ಕ್‌ನಲ್ಲಿ ಜೋಡಿ ಆಯ್ಕೆ ಮಾಡುವಾಗ, ಎಲ್ಲ ವಾದಗಳು ಪರಿಣಾಮ ಬಿದ್ದಂತಿದೆ. ಈ ಟಾಸ್ಕ್‌ನ್ನು ಅತ್ಯಂತ ಸೀರೆಯೆಸ್ ಆಗಿ ಪರಿಗಣಿಸಿದೆ ರಾಶಿಕಾ-ಗಿಲ್ಲಿ ಜೋಡಿ.
ನಾಮಿನೇಟ್ ಆದವರು ಯಾರು?
ಈ ವಾರ ನಾಮಿನೇಶನ್ ವೇಳೆ ಬಹುತೇಕ ಸ್ಪರ್ಧಿಗಳ ಮಧ್ಯೆ ವಾದ ವಿವಾದ ನಡೆದಿದೆ. ಧ್ರುವಂತ್, ಸೂರಜ್ ಸಿಂಗ್, ರಾಶಿಕಾ ಶೆಟ್ಟಿ, ಮಾಳು ನಿಪನಾಳ, ಕಾವ್ಯಾ ಶೈವ, ಅಭಿಷೇಕ್, ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ ಅವರು ನಾಮಿನೇಟ್ ಆಗಿದ್ದಾರೆ.
ಇದನ್ನೂ ಓದಿ: Bigg Boss Kannada 12: ಗಿಲ್ಲಿ, ಕಾವ್ಯ ಸೇರಿ ಈ ವಾರ 9 ಮಂದಿ ನಾಮಿನೇಟ್! ಸೇಫ್ ಆದ ಅಶ್ವಿನಿ ಗೌಡ
ಅಶ್ವಿನಿ ಗೌಡ ಅವರು ಈಗ ಸೈಲೆಂಟ್ ಆಗಿದ್ದಾರೆ. ಆ ಕಾರಣದಿಂದಲೇ ನಾಮಿನೇಷನ್ನಿಂದ ಪಾರಾಗಿದ್ದಾರೆ. ರಘು ಕೂಡ ನಾಮಿನೇಶನ್‌ನಿಂದ ಪಾರಾಗಿದ್ದಾರೆ. ಇನ್ನು ನಾಮಿನೇಶನ್ ಪ್ರಕ್ರಿಯೆ ಆ ಬಳಿಕ ಧ್ರುವಂತ್ ಅವರು ಅಶ್ವಿನಿ ಬಳಿ ಚರ್ಚಿಸಿದ್ದಾರೆ.