ಬಿಗ್ ಬಾಸ್ ಸೀಸನ್ 12ರ (Bigg Boss Kannada 12) ಮೊದಲಿಗೆ ಅತ್ಯಂತ ಸ್ನೇಹಿತರಾಗಿ ಇದ್ದವರು ಅಶ್ವಿನಿ ಹಾಗೂ ಜಾಹ್ನವಿ. ‘ಬಿಗ್ ಬಾಸ್’ ನೀಡಿದ ಒಂದೇ ಒಂದು ಟಾಸ್ಕ್‌ನಿಂದಾಗಿ (Task) ಇಬ್ಬರ ಮಧ್ಯೆ ಸ್ನೇಹ ಸಂಬಂಧ ಮುರಿದುಬಿದ್ದಿದೆ. ಇದೀಗ ಕಣಿ (Kani) ಹೇಳುವ ಮೂಲಕ ಮನದ ನೋವು ಹಂಚಿಕೊಂಡಿದ್ದಾರೆ ಜಾಹ್ನವಿ.
ನನ್ನ ಸ್ಟ್ರಾಟೆಜಿ ಬಳಸಿಕೊಂಡು ನಾನು ಇಲ್ಲಿಯವರೆಗೂ ನ್ಯಾಯಯುತವಾಗಿ ಆಟ ಆಡಿಕೊಂಡು ಬಂದಿದ್ದೇನೆ. ಜಾಹ್ನವಿ ಅವರು ಸ್ನೇಹ ಎಂಬ ತೆಕ್ಕೆಯಲ್ಲಿ ಸಿಕ್ಕಿಹಾಕಿಕೊಂಡು ಎಲ್ಲೋ ಒಂದು ಚೂರು, ಅವರ ವ್ಯಕ್ತಿತ್ವವಲ್ಲದ ವ್ಯಕ್ತಿತ್ವವನ್ನ ಪ್ರೊಜೆಕ್ಟ್ ಮಾಡ್ತಿದ್ದಾರೆ ಅನಿಸುತ್ತದೆ ಎಂದು ಹಿಂದೆ ಅಶ್ವಿನಿ ಅವರು ಗರಂ ಆಗಿದ್ದರು.
ಅರ್ಹತೆ ಇಲ್ಲದ ವ್ಯಕ್ತಿತ್ವ
ಜಾಹ್ನವಿಗೆ ಅರ್ಹತೆ ಇಲ್ಲ ಅಂತ ನಾನು ಹೇಳೋದಿಲ್ಲ. ಜಾಹ್ನವಿ ಅವರು ಅರ್ಹತೆ ಇಲ್ಲದ ವ್ಯಕ್ತಿತ್ವವನ್ನ ಇಲ್ಲಿ ಪ್ರೊಜೆಕ್ಟ್ ಮಾಡುತ್ತಿದ್ದಾರೆ. ಅರ್ಹತೆ ಇಲ್ಲದ ಜಾಹ್ನವಿ ಈ ಮನೆಗೆ ಬೇಡ’’ ಎಂದು ಅಶ್ವಿನಿ ಗೌಡ ಹೇಳಿದ್ದರು. ಇದೀಗ ಕಣಿ ಮೂಲಕ ಮನದ ಮಾತು ಹೇಳಿದ್ದಾರೆ.
ಇದನ್ನೂ ಓದಿ: BBK 12: ರಿಷಾ ಎಲಿಮಿನೇಟ್ ಆಗೋದು ಪಕ್ಕಾ? ಬಿಗ್ ಬಾಸ್ ಕೊಟ್ಟ ಸುಳಿವು ಏನು?
ಜಾಹ್ನವಿ ಕಣಿ
ಜಾಹ್ನವಿ ಮಾತನಾಡಿ, ಇವರಾ! ರಾಜಮಾತೆ ಅಂತ ಕರೀತಾ ಇದ್ರು. ಜಾಹ್ನವಿ ಮತ್ತು ಅಶ್ವಿನಿ ಯಾವಾಗಲೂ ಕಚ್ಚಕೊಂಡೇ ಇರ್ತಾ ಇದ್ರು. ರಾತ್ರಿಯಲ್ಲ ಗುಸು ಗುಸು ಅನ್ನೋರು. ಬೆಳಗ್ಗಿನ ಜಾವಾನೂ ಮಾತಾಡೋರು. ಈಗ ಜಾಹ್ನವಿ , ಅಶ್ವಿನಿ ದೂರ ಆಗಬಿಟ್ಟಿದ್ದಾರೆ ಎಂದಿದ್ದಾರೆ. ಅದಕ್ಕೆ ಕಾವ್ಯ ಮಾತನಾಡಿ, ಇನ್ನೂ ಅವರಿಬ್ಬರೂ ಒಂದಾಗಲ್ಲ. ಜಾಹ್ಮವಿ ವಿರುದ್ಧ ಅಶ್ವಿನಿ, ಅಶ್ವಿನಿ ವಿರುದ್ಧ ಜಾಹ್ನವಿ ಅದೇ ಭವಿಷ್ಯ ನೋಡ್ತಾ ಇರು ಎಂದಿದ್ದಾರೆ.
ಈ ಹಿಂದೆ ಚರ್ಚಾ ಸ್ಪರ್ಧೆ ಬಳಿಕ ಅಶ್ವಿನಿ ಗೌಡ ಹಾಗೂ ಜಾಹ್ನವಿ ಮಧ್ಯೆ ಬಿರುಕು ಸೃಷ್ಟಿಯಾಗಿತ್ತು. ಜಡೆ ಜಗಳ ಆರಂಭವಾಗಿತ್ತು.
ಇದನ್ನೂ ಓದಿ: BBK 12: ತಂಗಿ ಅಂಥ ಕರೆದು ಹೀಗಾ ಹೇಳೋದು? ಕಾವ್ಯ ಸ್ನೇಹವನ್ನೇ ಟಾರ್ಗೆಟ್ ಮಾಡಿದ ಚಂದ್ರಪ್ರಭ
ಇನ್ನೊಂದು ಕಡೆ . ಗಿಲ್ಲಿ ನಟ ಹಾಗೂ ಸೂರಜ್ ಸಿಂಗ್ ಅವರನ್ನು ಕಂಡರೆ ರಿಷಾ ಉರಿದು ಬೀಳುತ್ತಿದ್ದಾರೆ. ಗಿಲ್ಲಿ ಕಳ್ಳ, ಸೂರಜ್ ಮಳ್ಳ ಎಂದು ರಿಷಾ ಅವರು ಹೇಳಿದ್ದಾರೆ. ‘ಕಳ್ಳನನ್ನು ನಂಬಿದರೂ ಮಳ್ಳನನ್ನು ನಂಬಲ್ಲ’ ಎಂದು ಅವರ ಎದುರಲ್ಲೇ ರಿಷಾ ಕೂಗಾಡಿದ್ದಾರೆ. ಇದರಿಂದಾಗಿ ರಿಷಾ, ಸೂರಜ್ ಹಾಗೂ ರಿಷಾ ನಡುವೆ ಬಿರುಕು ಹೆಚ್ಚಾಗಿದೆ.