ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಗಿಲ್ಲಿ ಮಾತುಗಳಿಂದ ಬೇರೆಯವರಿಗೆ ನೋವು ಆಗುತ್ತೆ ಎಂದ ಕಾವ್ಯ; ಬೆಸ್ಟ್‌ ಫ್ರೆಂಡ್‌ ವಿರುದ್ಧ ತಿರುಗಿ ಬಿದ್ದಿದ್ದೇಕೆ ಕಾವು?

Gilli Nata: ಒಬ್ಬರ ಮನಸ್ಸನ್ನು ನೋಯಿಸುವ ಅಪರಾಧ ಯಾರು ಮಾಡುತ್ತಿದ್ದಾರೆ? ಎಂದು ಸುದೀಪ್‌ ಪ್ರಶ್ನೆ ಇಟ್ಟರು. ಈಗ ಸುದೀಪ್‌ ಅವರ ಮುಂದೆ ಗಿಲ್ಲಿ ವಿರುದ್ಧವೇ ಕಾವ್ಯ ಆರೋಪ ಮಾಡಿದ್ದಾರೆ. ಗಿಲ್ಲಿ ಯಾರದೇ ಹೆಸರು ತೆಗೆದುಕೊಂಡು ರೇಗಿಸಿದಾಗ, ಅದು ಅವರಿಗೆ ವೈಯಕ್ತಿಕವಾಗಿ ನೋವು ಆಗಿರೋದನ್ನು ಗಮನಿಸಿದ್ದೇನೆ ಎಂದು ಕಾವ್ಯ ಹೇಳಿದ್ದಾರೆ. ಈ ಪ್ರೋಮೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ ಮನೆಯಲ್ಲಿ (Bigg Boss Kanada 12) ಸದಾ ಹೈಲೈಟ್‌ ಆಗುವ ಜೋಡಿ ಅಂದರೆ ಅದುವೇ ಗಿಲ್ಲಿ (Gilli Nata) ಹಾಗೂ ಕಾವ್ಯ (Kavya Shaiva). ಇವರಿಬ್ಬರ ಜೋಡಿಗೆ ವೀಕ್ಷಕರ ಮೆಚ್ಚುಗೆ ಇದೆ. ಆದರೆ ಕಾವ್ಯ ಈ ನಡುವೆ ಗಿಲ್ಲಿ ವಿರುದ್ಧ ಮಾತನಾಡಲು ಶುರು ಮಾಡಿದ್ದಾರೆ. ಈಗ ಸುದೀಪ್‌ ಅವರ ಮುಂದೆ ಗಿಲ್ಲಿ ವಿರುದ್ಧವೇ ಆರೋಪ ಮಾಡಿದ್ದಾರೆ. ಗಿಲ್ಲಿ ಯಾರದೇ ಹೆಸರು ತೆಗೆದುಕೊಂಡು ರೇಗಿಸಿದಾಗ, ಅದು ಅವರಿಗೆ ವೈಯಕ್ತಿಕವಾಗಿ ನೋವು ಆಗಿರೋದನ್ನು ಗಮನಿಸಿದ್ದೇನೆ ಎಂದು ಕಾವ್ಯ ಹೇಳಿದ್ದಾರೆ. ಈ ಪ್ರೋಮೋ (Promo Viral) ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಒಬ್ಬರ ಮನಸ್ಸನ್ನು ನೋಯಿಸುವ ಅಪರಾಧ

ಒಬ್ಬರ ಮನಸ್ಸನ್ನು ನೋಯಿಸುವ ಅಪರಾಧ ಯಾರು ಮಾಡುತ್ತಿದ್ದಾರೆ? ಎಂದು ಸುದೀಪ್‌ ಪ್ರಶ್ನೆ ಇಟ್ಟರು. ಅದಕ್ಕೆ ಧನುಷ್‌, `ಗಿಲ್ಲಿ ಅವರು ಒಬ್ಬರನ್ನ ಕೆಳಗೆ ಹಾಕಿಯೇ ಮಾತನಾಡುತ್ತಾರೆ' ಎಂದು ಹೇಳಿದ್ದಾರೆ. `ನನ್ನನ್ನು ಕುಗ್ಗಿಸಬಹುದು ಎಂಬ ಸ್ಟ್ರಾಟಜಿ ತಿಳಿದುಕೊಂಡು ಅದನ್ನ ಪ್ಲೇ ಮಾಡ್ತಿದ್ದಾರೆ' ಎಂದು ಗಿಲ್ಲಿ ಬಗ್ಗೆ ಅಶ್ವಿನಿ ಹೇಳಿದ್ದಾರೆ.

ಇದನ್ನೂ ಓದಿ: Bigg Boss Kannada 12: ಅಶ್ವಿನಿ ಬಳಸಿದ ಕೆಟ್ಟ ಪದಗಳ ಆಡಿಯೋ ಪ್ಲೇ ಮಾಡಿಸಿದ ಕಿಚ್ಚ!

`ಗಿಲ್ಲಿ ಯಾರದೇ ಹೆಸರು ತೆಗೆದುಕೊಂಡು ರೇಗಿಸಿದಾಗ, ಅದು ಅವರಿಗೆ ವೈಯಕ್ತಿಕವಾಗಿ ನೋವು ಆಗಿರೋದನ್ನು ಗಮನಿಸಿದ್ದೇನೆ' ಎಂದು ಕಾವ್ಯ ಹೇಳಿದ್ದಾರೆ.

ತಮ್ಮ ವಿರುದ್ಧ ಕೇಳಿ ಬಂದ ಆರೋಪಗಳಿಗೆ ಪ್ರತಿಕ್ರಿಯಿಸಿದ ಗಿಲ್ಲಿ ನಟ, ʻನಿಮ್ಮ ಬಗ್ಗೆ ಇರೋ ಸತ್ಯವನ್ನು ಕಾಮಿಡಿ ಮೂಲಕ ಹೇಳುತ್ತಿರುತ್ತೇನೆ. ಅದು ಯಾರನ್ನು ಕೆಳಗಿಟ್ಟು ಮಾತನಾಡೋದು ಆಗಲ್ಲ. ಯಾರೋ ಯಾವುದೋ ಮೂಲೆಯಲ್ಲಿ ಕುಳಿತು ಮಾತಾಡರ್ತೀರಾ? ಹೊರಗೆ ಹೋಗಿ ನೋಡಿದ್ಮೇಲೆ ಸತ್ಯ ಗೊತ್ತಾಗುತ್ತದೆ. ಇದ್ದಿದ್ದನ್ನು ಇದ್ದಂತೆ ಹೇಳಿದಾಗ ಅದಕ್ಕೆ ನಿಮಗೆ ಹಾಗೆ ಅನ್ನಿಸಿರಬಹುದುʼ ಎಂದು ಗಿಲ್ಲಿ ನಟ ಹೇಳಿದ್ದಾರೆ.

ವೈರಲ್‌ ಪ್ರೋಮೋ ವಿಡಿಯೋ



ಅಶ್ವಿನಿ ಗೌಡ, ರಿಷಾ, ಜಾಹ್ನವಿ ಹೆಸರು ಬರೆದು ಬೋರ್ಡ್ ಹಿಡಿದು ಕುಳಿತ್ತಿದ್ದಾರೆ. ಕಾವ್ಯಾ ಶೈವ ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ನಟ ಅವರ ಜೊತೆ ಹೆಚ್ಚು ಸಮಯ ಕಳೆಯುತ್ತಿರುತ್ತಾರೆ. ಕಾವ್ಯಾ ಸಹ ಗಿಲ್ಲಿಯ ಮಾತುಗಳಿಂದ ಬೇರೆಯವರಿಗೆ ನೋವು ಆಗುತ್ತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Bigg Boss Kannada 12: ದೊಡ್ಮನೆಯಿಂದ ಹೊರಗೆ ಹೋಗ್ತೀನಿ ಅಂತ ಅಶ್ವಿನಿ ಕೂಗಾಡಲು ಇದೇ ಕಾರಣ ಅಂತೆ! ಗಿಲ್ಲಿ ಹೇಳಿದ್ದೇನು?

ನಿನ್ನೆಯಷ್ಟೇ ಕಾವ್ಯ ಅವರು ಲೀಡರ್‌ ಅಲ್ಲ ಫಾಲೋವರ್‌ ಅಂತ ಹೇಳಿದ್ದರು ಗಿಲ್ಲಿ. ಆಗ ಕೂಡ ಕಾವ್ಯ ಅವರ ಮುಖ ಸಣ್ಣದಾಗಿತ್ತು. ರಕ್ಷಿತಾ ಕೂಡ ಗಿಲ್ಲಿ ಅವರ ಹೆಸರನ್ನೇ ಬೋರ್ಡ್‌ ಮೇಲೆ ಬರೆದಿದ್ದಾರೆ. ರಘು ಅವರು ಅಶ್ವಿನಿ ಹೆಸರು ಬರೆದಿದ್ದಾರೆ.

Yashaswi Devadiga

View all posts by this author