Bigg Boss Kannada 12: ಅಶ್ವಿನಿ ಬಳಸಿದ ಕೆಟ್ಟ ಪದಗಳ ಆಡಿಯೋ ಪ್ಲೇ ಮಾಡಿಸಿದ ಕಿಚ್ಚ!
Ashwini Gowda: ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ 'ವುಮೆನ್ ಕಾರ್ಡ್' ಬಳಸುತ್ತಿರುವ ಬಗ್ಗೆ ಚರ್ಚೆ ಜೋರಾಗಿಯೇ ನಡೆದಿತ್ತು. ಹೆಣ್ಣು ಮಕ್ಕಳಿಗೆ ಗೌರವವಿಲ್ಲ ಎಂದು ಸದಾ ಆರೋಪಿಸುತ್ತಲೇ ಬಂದಿದ್ದರು. ಅಶ್ವಿನಿ ಅವರು ಜಗಳ ಮಾಡೋ ಭರದಲ್ಲಿ ಇಡೀ ಮನೆಯ ಹೆಣ್ಣು ಮಕ್ಕಳಿಗೆ ಗೌರವ ಇಲ್ಲ ಎಂದು ಸಾಕಷ್ಟು ಬಾರಿ ಹೇಳಿದ್ದರು. ಉಪವಾಸ ಕೂಡ ಮಾಡಿದರು. ತಮಗೆ ಅವಮಾನ ಆಗಿದೆ ಎಂದರು. ಈ ಬಗ್ಗೆ ಕಿಚ್ಚ ಖಡಕ್ ಆಗಿ ಮಾತನಾಡಿದ್ದಾರೆ. ಅಶ್ವಿನಿ ಆಡಿಯೋ ಒಟ್ಟು ಮಾಡಿ ಹಾಕಿ ಮಾತಿನಲ್ಲೇ ಲಾಕ್ ಮಾಡಿದ್ದಾರೆ ಕಿಚ್ಚ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಸೀಸನ್ 12 (Bigg Boss Kannada 12) ವೀಕೆಂಡ್ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ (Sudeep) ಅವರು ಅಶ್ವಿನಿ (Ashwini) ಅವರಿಗೆ ಗರಂ ಆಗಿಯೇ ಕ್ಲಾಸ್ ತೆಗೆದುಕೊಂಡರು. ರಘು ಅವರು ಕ್ಲೀನಿಂಗ್ ವಿಚಾರವಾಗಿ ಹೇಳಿದ ಮಾತಿಗೆ ಅಶ್ವಿನಿ ಹಾಗೂ ರಘು (Ashwini And Raghu) ಮಧ್ಯೆ ಜಗಳ ತಾರಕಕ್ಕೇರಿತ್ತು. ಆದರೆ ಅಶ್ವಿನಿ ಅವರು ಜಗಳ ಮಾಡೋ ಭರದಲ್ಲಿ ಇಡೀ ಮನೆಯ ಹೆಣ್ಣು ಮಕ್ಕಳಿಗೆ ಗೌರವ ಇಲ್ಲ ಎಂದು ಸಾಕಷ್ಟು ಬಾರಿ ಹೇಳಿದ್ದರು. ಉಪವಾಸ ಕೂಡ ಮಾಡಿದರು.
ತಮಗೆ ಅವಮಾನ ಆಗಿದೆ ಎಂದರು. ಈ ಬಗ್ಗೆ ಕಿಚ್ಚ ಖಡಕ್ ಆಗಿ ಮಾತನಾಡಿದ್ದಾರೆ. ‘ಮಹಿಳೆಯರಿಗೆ ಅವಮಾನ ಆಗುತ್ತಿಲ್ಲ. ಆ ರೀತಿ ಆದರೆ, ಬಿಗ್ ಬಾಸ್ ಮಧ್ಯ ಬರುತ್ತಾರೆ. ಆ ಬಗ್ಗೆ ಪ್ರಶ್ನೆ ಮಾಡಬೇಡಿ. ಪದೇ ಪದೇ ಇದನ್ನು ಹೇಳಬೇಡಿ. ನಿಮಗೆ ಜವಬ್ದಾರಿ ವಹಿಸಿಲ್ಲ’ ಎಂದು ಸುದೀಪ್ ಅವರು ಅಶ್ವಿನಿಗೆ ಹೇಳಿದರು. ಅಶ್ವಿನಿ ಆಡಿಯೋ ಒಟ್ಟು ಮಾಡಿ ಹಾಕಿ ಮಾತಿನಲ್ಲೇ ಲಾಕ್ ಮಾಡಿದ್ದಾರೆ ಕಿಚ್ಚ.
ಇದನ್ನೂ ಓದಿ: Bigg Boss Kannada 12: ವುಮೆನ್ ಕಾರ್ಡ್ ಪ್ಲೇ ಮಾಡಿದ ಅಶ್ವಿನಿ ಗೌಡಗೆ ಕಿಚ್ಚನ ಖಡಕ್ ಕ್ಲಾಸ್!
ರಘು ಜೊತೆ ಕ್ಲ್ಯಾಶ್!
ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ 'ವುಮೆನ್ ಕಾರ್ಡ್' ಬಳಸುತ್ತಿರುವ ಬಗ್ಗೆ ಚರ್ಚೆ ಜೋರಾಗಿಯೇ ನಡೆದಿತ್ತು. ಹೆಣ್ಣು ಮಕ್ಕಳಿಗೆ ಗೌರವವಿಲ್ಲ ಎಂದು ಸದಾ ಆರೋಪಿಸುತ್ತಲೇ ಬಂದಿದ್ದರು.
ತಾವು ಯಾರಗೆ ಬೇಕಾದರೂ ಏಕವಚನ ಬಳಕೆ ಮಾಡಬಹುದು. ಇತರರನ್ನು ಅವಮಾನಿಸುವ ವರ್ತನೆ ತೋರಿದ್ದರು. ಈ ಬಗ್ಗೆ ಕಿಚ್ಚ ಖಡಕ್ ಆಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಮನೆಯಲ್ಲಿ ವುಮನ್ ಕಾರ್ಡ್ ಬೇಡ ಎಂದು ಅಶ್ವಿನಿಗೆ ಖಡಕ್ ಆಗಿ ಹೇಳಿದ್ದಾರೆ ಕಿಚ್ಚ ಸುದೀಪ್. ಸುದೀಪ್ ಅವರು ಅಶ್ವಿನಿ ಗೌಡ ಬಳಿ ಪ್ರಶ್ನೆ ಒಂದನ್ನು ಮಾಡಿದ್ದರು.
‘ರಘು ಅವರು ಕ್ಯಾಪ್ಟನ್ ಆಗಿದ್ದಾರೆ. ಅದಕ್ಕೆ ಗೌರವ ಕೊಡಬಹುದಿತ್ತಲ್ಲ’ ಎಂದು ಸುದೀಪ್ ಕೇಳಿದರು. ಉಪವಾಸ ವಿಚಾರಕ್ಕೆ ‘ಮಹಿಳೆಯರಿಗೆ ಅವಮಾನ ಆಗುತ್ತಿಲ್ಲ. ಆ ರೀತಿ ಆದರೆ, ಬಿಗ್ ಬಾಸ್ ಮಧ್ಯ ಬರುತ್ತಾರೆ. ಆ ಬಗ್ಗೆ ಪ್ರಶ್ನೆ ಮಾಡಬೇಡಿ. ಪದೇ ಪದೇ ಇದನ್ನು ಹೇಳಬೇಡಿ’ ಎಂದು ಸುದೀಪ್ ಅವರು ಅಶ್ವಿನಿಗೆ ಹೇಳಿದರು.
ಆಡಿಯೋ ಪ್ಲೇ
ಈ ವಿಚಾರ ಸೋಷಿಯಲ್ ಮೀಡಿಯಾಗಳನ್ನು ಚರ್ಚೆಯಾಗಿದೆ. ಅಶ್ಬಿನಿ ಅವರು ಸಾಕಷ್ಟು ಬಾರಿ ಕೆಟ್ಟ ಪದ ಬಳಕೆ ಮಾಡದ್ದರು. ಹೆಣ್ಣು ಮಕ್ಕಳಿಗೆ ಯಾರೂ ಗೌರವ ನೀಡುತ್ತಿಲ್ಲ ಎಂದು ರಂಪಾಟ ಮಾಡಿ, ಉಪವಾಸ ಸತ್ಯಾಗ್ರಹ ಕೂಡ ಆರಂಭಿಸಿದ್ದರು ಅಶ್ವಿನಿ ಗೌಡ. ಎಲ್ಲರಿಂದಲೂ ಗೌರವ ನಿರೀಕ್ಷೆ ಮಾಡುವ ಅವರು ಬಹುತೇಕ ಸಂದರ್ಭಗಳಲ್ಲಿ ಏಕವಚನ ಬಳಕೆ ಮಾಡುತ್ತಾರೆ.
I loved @KicchaSudeep's self restraint tonight ❤️,
— Deep Kumar (@DeepKumar_Hulk) November 22, 2025
He's a class act,
Being a staunch critic of his over the weeks he finally gave the much needed clarity to Ashwini Gowda this weekend 👏🏻,
It's another issue that it all went way over the head of Ashwini Gowda... 😅#BBK12 https://t.co/TTRCCnre66
ಇನ್ನು, ಅಶ್ವಿನಿ ಬಳಸಿದ ಕೆಟ್ಟ ಪದಗಳ ಆಡಿಯೋಗಳನ್ನು ಹಾಕಿದರು. ಅಮಾವಾಸ್ಯೆ, ಜೋಕರ್, ಕಾರ್ಟೂನ್, ಫ್ರೀ ಪ್ರಾಡಕ್ಟ್, ಯಾವನೋ ನೀನು, ಹೋಗಲೋ, ಮುಚ್ಕೊಂಡು ಮಲ್ಕೊ, ಬೇಜಾನ್ ಐತಿ ಗಾಂಚಲಿ, ಯೋಗ್ಯತೆ, ದುರಂಹಂಕಾರ ಈ ರೀತಿಯ ಪದಗಳನ್ನು ಅಶ್ವಿನಿ ಅವರು ಬಳಸಿದ್ದರು.
ಇದನ್ನೂ ಓದಿ: Bigg Boss Kannada 12: ಆಡಿದ ಮಾತಿಗೆ ಅಶ್ವಿನಿ ಬಳಿ ಕೈ ಮುಗಿದು ಕ್ಷಮೆ ಕೇಳಿದ ಗಿಲ್ಲಿ
ಆಡಿಯೋ ಪ್ಲೇ ಮಾಡಿಸಿ, ಸುದೀಪ್, ಮೊದಲು ನಮ್ಮಮಾತುಗಳನ್ನು ಗಮನಿಸಬೇಕಾಗುತ್ತೆ. ಇಲ್ಲಿ ಎಲ್ಲರೂ ಎಲ್ಲ ಸಮಯದಲ್ಲೂ ಬೇರೆ ಬೇರೆ ಪದ ಬಳಕೆ ಆಗಿದೆ. ಖುಷಿ ಹಂಚಿದರೆ ಖುಷಿ ವಾಪಸ್ ಬರತ್ತೆ, ಅದೇ ರೀತಿ ಕೋಪ, ನಗು. ಟಾಂಟ್ ಅದೆಲ್ಲ ಎಂದರು ಕಿಚ್ಚ. ಆ ಬಳಿಕ ಅಶ್ವಿನಿ ಅವರು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ.