ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಅಚ್ಚರಿಯ ಸ್ಪರ್ಧಿ ಎಂದರೆ, ಅದು ರಕ್ಷಿತಾ ಶೆಟ್ಟಿ. ಯಾಕೆಂದರೆ, ರಕ್ಷಿತಾ ಆರಂಭದಲ್ಲೇ ಬಿಗ್ ಬಾಸ್‌ನಿಂದ ಹೊರಗೆ ಹೋಗಿ ಒಳಗೆ ಬಂದರು. ನಂತರ ಸೀಕ್ರೆಟ್ ರೂಮ್‌ನಲ್ಲೂ ಇದ್ದರು. ಅವರ ಆಟದ ಶೈಲಿಯೇ ವಿಭಿನ್ನ ಇದೀಗ ವೀಕೆಂಡ್‌ನಲ್ಲಿ ಅವರ ಬಗ್ಗೆ ಸುದೀಪ್ ಮಾತನಾಡಿದ್ದಾರೆ. ಮುಖ್ಯವಾಗಿ ಅವರು ಮಾಡುತ್ತಿರುವ ಕೆಲ ತಂತ್ರಗಳನ್ನು ಸುದೀಪ್ ಬಯಲು ಮಾಡಿದ್ದಾರೆ.
ಗಿಲ್ಲಿ - ರಘು ಜೊತೆ ಕ್ಲೋಸ್
ರಕ್ಷಿತಾ ಶೆಟ್ಟಿ ಅವರು ಗಿಲ್ಲಿ ನಟ ಮತ್ತು ರಘು ಅವರ ಜೊತೆ ತುಂಬ ಕ್ಲೋಸ್ ಇದ್ದಾರೆ. ಆದರೆ ಅವರಿಬ್ಬರ ಜೊತೆಗೆ ಯಾರೂ ಕ್ಲೋಸ್ ಆಗಬಾರದು. ಅದು ರಕ್ಷಿತಾಗೆ ಇಷ್ಟ ಆಗೋದಿಲ್ಲ. ಈಚೆಗೆ ಗಿಲ್ಲಿ ಎದುರು ಇದ್ದ ಬೀನ್ ಬ್ಯಾಗ್‌ಗಳನ್ನು ಬೇರೆ ಕಡೆ ಎತ್ತಿಟ್ಟಿದ್ದು, ಅಲ್ಲಿ ಯಾರು ಕುಳಿತು ಕೊಳ್ಳಬಾರದು, ಗಿಲ್ಲಿ ಜೊತೆ ತಾನು ಮಾತ್ರ ಇರಬೇಕು ಎಂದು ನಡೆದುಕೊಂಡಿದ್ದನ್ನು ಎಲ್ಲರು ಗಮನಿಸಿದ್ದಾರೆ. ಕಳಪೆ ಆಯ್ಕೆ ಮಾಡುವಾಗ ರಾಶಿಕಾ ಇದೇ ಪಾಯಿಂಟ್ ಅನ್ನು ಹೇಳಿ, ರಕ್ಷಿತಾಗೆ ಕಳಪೆ ನೀಡಿದ್ದರು.
BBK 12: ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ-ರಾಶಿಕಾ ನಡುವೆ ಹೊತ್ತಿ ಉರಿದ ಬೆಂಕಿ
ಇದೀಗ ಇದೇ ವಿಚಾರ, ಸುದೀಪ್ ಅವರ ವಾರದ ಪಂಚಾಯಿತಿಯಲ್ಲೂ ಕೇಳಿಬಂದಿದೆ. "ಗಿಲ್ಲಿ - ರಘು ಜೊತೆ ಯಾರು ಕ್ಲೋಸ್ ಆಗಬಾರದು, ಇದು ರಕ್ಷಿತಾಗೆ ಇಷ್ಟ ಆಗಲ್ಲ. ಇಲ್ಲಿ ಸಂಬಂಧಗಳನ್ನು ಇಟ್ಟುಕೊಂಡು, ಮನೆಯನ್ನು ನರಕ ಮಾಡುತ್ತೀರಿ ಎಂದರೆ, ಎರಡು ಅಂಶಗಳು. ಸಂಬಂಧಗಳು ಶಾಶ್ವತ ಅಲ್ಲ, ಇದು ಯಾರಪ್ಪನ ಮನೆಯೂ ಅಲ್ಲ" ಎಂದು ಸುದೀಪ್ ಅವರು ಹೇಳಿದ್ದಾರೆ.
ನಾನು ಗೆಲ್ಲಬೇಕು!
ನಂತರ ಸುದೀಪ್ ಅವರು ರಕ್ಷಿತಾಗೆ, ನಿಮ್ಮ ಮೂರು (ರಕ್ಷಿತಾ, ಗಿಲ್ಲಿ, ರಘು) ಜನರಲ್ಲಿ ಯಾರು ಗೆಲ್ಲಬೇಕು ಎಂದು ಕೇಳಿದ್ದಾರೆ. ಅದಕ್ಕೇ ರಕ್ಷಿತಾ, "ಮೊದಲು ನಾನು ಗೆಲ್ಲಬೇಕು" ಎಂದು ಹೇಳಿದ್ದಾರೆ. ಆಗ ಸುದೀಪ್ ಚಪ್ಪಾಳೆ ಹೊಡೆದಿದ್ದಾರೆ. ಬಳಿಕ, "ಎಲ್ಲರೂ ಇಲ್ಲಿ ಸಂಬಂಧ ಕಟ್ಟುಕೊಂಡ್ರಿ, ನನ್ನ ಅಣ್ಣ, ನನ್ನ ತಂಗಿ ಅಂತ.. ಬಾಗಿಲು ಓಪನ್ ಆಗುತ್ತೆ ಈಗ. ಹಿಂಗ್ ಅಂತ ಎಲ್ರೂ ಹೊರಗೆ ಹೋಗ್ತಿರಿ" ಎಂದು ಸುದೀಪ್ ಎಚ್ಚರಿಕೆ ನೀಡಿದ್ದಾರೆ. ಇದು ಈ ವಾರದ ವೀಕೆಂಡ್ ಸಂಚಿಕೆಯ ಪ್ರೋಮೋ ಆಗಿದ್ದು, ವೀಕ್ಷಕರು ಸಖತ್ ಕುತೂಹಲದಿಂದ ಕಾಯುತ್ತಿದ್ದಾರೆ.