ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bigg Boss Kannada 12: ಗಿಲ್ಲಿ ಜೊತೆ ಮಾತಾಡೋಕೆ ಪ್ರೈವೆಸಿ ಬೇಕಾ? ಇದೇನು ನಿನ್ನ ಮನೇನಾ? ರಕ್ಷಿತಾ ಮೆಲೆ ಉರಿದು ಬಿದ್ದ ರಾಶಿಕಾ

Rashika Shetty: ಬಿಗ್‌ ಬಾಸ್‌ ಫಿನಾಲೆ ಹತ್ತಿರ ಬರುತ್ತಿದ್ದಂತೆ ಸ್ಪರ್ಧಿಗಳ ಮಧ್ಯೆ ಕಾಂಪಿಟೇಶನ್‌ ಹೆಚ್ಚಾಗುತ್ತಿದೆ. ಕಳಪೆ ಉತ್ತಮ ನೀಡುವ ಸಮಯದಲ್ಲಿ ರಾಶಿಕಾ ಹಾಗೂ ರಕ್ಷಿತಾ ನಡುವೆ ವಾದ ವಿವಾದಗಳು ಆಗಿವೆ. ಸಂಪ್ರದಾಯದಂತೆ ಒಬ್ಬೊಬ್ಬರು ಒಬ್ಬೊಬ್ಬರಿಗೆ ಕಳಪೆ ಕೊಟ್ಟಿದ್ದಾರೆ. ರಾಶಿಕಾ, ರಕ್ಷಿತಾ ಶೆಟ್ಟಿಗೆ ಕಳಪೆ ಕೊಟ್ಟಿದ್ದಾರೆ ಆದರೆ ಇದು ರಕ್ಷಿತಾ ಶೆಟ್ಟಿಗೆ ಸಖತ್‌ ಕೋಪ ಬರಿಸುವಂತೆ ಮಾಡಿದೆ. ರಕ್ಷಿತಾರ ಜಗಳ, ವಾದ ನೋಡಿ ಧ್ರುವಂತ್ ನಕ್ಕಿದ್ದಾರೆ.

ಗಿಲ್ಲಿ ಜೊತೆ ಮಾತಾಡೋಕೆ ಪ್ರೈವೆಸಿ ಬೇಕಾ? ರಕ್ಷಿತಾ ಮೆಲೆ ರಾಶಿಕಾ ಗರಂ

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Jan 9, 2026 6:31 PM

ಬಿಗ್‌ ಬಾಸ್‌ ಫಿನಾಲೆ (Bigg Boss Kannada Finale) ಹತ್ತಿರ ಬರುತ್ತಿದ್ದಂತೆ ಸ್ಪರ್ಧಿಗಳ ಮಧ್ಯೆ ಕಾಂಪಿಟೇಶನ್‌ (Competition) ಹೆಚ್ಚಾಗುತ್ತಿದೆ. ಕಳಪೆ ಉತ್ತಮ ನೀಡುವ ಸಮಯದಲ್ಲಿ ರಾಶಿಕಾ (Rashika Shetty) ಹಾಗೂ ರಕ್ಷಿತಾ (Rakshitha) ನಡುವೆ ವಾದ ವಿವಾದಗಳು ಆಗಿವೆ. ಸಂಪ್ರದಾಯದಂತೆ ಒಬ್ಬೊಬ್ಬರು ಒಬ್ಬೊಬ್ಬರಿಗೆ ಕಳಪೆ ಕೊಟ್ಟಿದ್ದಾರೆ. ರಾಶಿಕಾ, ರಕ್ಷಿತಾ ಶೆಟ್ಟಿಗೆ ಕಳಪೆ ಕೊಟ್ಟಿದ್ದಾರೆ ಆದರೆ ಇದು ರಕ್ಷಿತಾ ಶೆಟ್ಟಿಗೆ ಸಖತ್‌ ಕೋಪ ಬರಿಸುವಂತೆ ಮಾಡಿದೆ. ರಕ್ಷಿತಾರ ಜಗಳ, ವಾದ ನೋಡಿ ಧ್ರುವಂತ್ (Dhuvanth) ನಕ್ಕಿದ್ದಾರೆ.

ರಾಶಿಕಾ ಮಾತು ಕೇಳಿ ರಕ್ಷಿತಾಗೆ ನಗು

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಗಿಲ್ಲಿ ನಟ ಅವರು ಸೋಫಾ ಮೇಲೆ ಕೂತಿದ್ದರು. ಆ ವೇಳೆ ಅಲ್ಲಿಯೇ ಇದ್ದ ಬೀನ್‌ ಬ್ಯಾಗ್‌ನ್ನು ರಕ್ಷಿತಾ ಶೆಟ್ಟಿ ಅವರು ತಗೊಂಡು, ದೂರ ಇಟ್ಟಿದ್ದಾರೆ. ಆಗ ಗಿಲ್ಲಿ ಕೂಡ ಪ್ರಶ್ನೆ ಮಾಡಿದ್ದರು. ಆ ಬಳಿಕ ಧನುಷ್‌ ಬಂದು ಮತ್ತೆ ಬಿನ್‌ ಬ್ಯಾಗ್‌ ತೆಗೆದುಕೊಂಡು ಮುಂದೆ ಬಂದು ಕುಳಿತ್ತಿದ್ದರು.

ಇದೀಗ ಈ ಕಾರಣ ನೀಡಿ, ಬಿಗ್‌ ಬಾಸ್‌ ಮನೆಯಲ್ಲಿ ರಕ್ಷಿತಾ ಶೆಟ್ಟಿ ಅವರು ಕಳಪೆ ಎಂದು ರಾಶಿಕಾ ಶೆಟ್ಟಿ ಹೇಳಿದ್ದಾರೆ. ಗಿಲ್ಲಿ ನಟನ ಜೊತೆ ಮಾತನಾಡಬೇಕು, ಇಬ್ಬರೇ ಕೂರಬೇಕು, ಪ್ರೈವೆಸಿ ಬೇಕು ಎಂದು ರಾಶಿಕಾ ಶೆಟ್ಟಿ ಹೇಳಿದ್ದಾರೆ. ಕಾವ್ಯ, ಗಿಲ್ಲಿ ಜೊತೆಗಿರಲಿ, ರಘು-ರಾಶಿಕಾ ಪಕ್ಕದಲ್ಲಿ ಕೂತರೂ ರಕ್ಷಿತಾಗೆ ಇಷ್ಟ ಆಗೋದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: Bigg Boss Kannada 12: ಧ್ರುವಂತ್ ತುಂಬಾ ಪಾಪ, ಕೆಟ್ಟ ಮನುಷ್ಯ ಅಲ್ಲ; ರಕ್ಷಿತಾ ಶೆಟ್ಟಿಗೆ ಮೂಡಿದೆ ಅನುಕಂಪ

ರಕ್ಷಿತಾ ಪೊಸೆಸ್ಸಿವ್‌

ರಾಶಿಕಾ ಮಾತು ಕೇಳಿ ರಕ್ಷಿತಾ ಅವರು ನಕ್ಕಿದ್ದಾರೆ. ಇನ್ನು ಗಿಲ್ಲಿ ನಟ, ರಘು, ಧ್ರುವಂತ್‌ಗೂ ನಗು ಬಂದಿದೆ. ರಕ್ಷಿತಾ ಎಷ್ಟು ಪೊಸೆಸ್ಸಿವ್‌ ಎನ್ನೋದು ಎಲ್ಲರಿಗೂ ಗೊತ್ತಿದೆ. ಇದೇನು ನಿಮ್ಮ ಮನೆಯಾ? ನಿನಗೆ ಸತ್ಯ ಹೇಳಿದ್ರೆ ತಡೆದುಕೊಳ್ಳೋಕೆ ಆಗಲ್ಲ, ನಿನಗೆ ಗಿಲ್ಲಿ ಬೇಕು, ನಿಜ ಹೇಳಿದ ತಕ್ಷಣ ನಗು ಬರುತ್ತದೆ, ನಿನ್ನ ತಲೆಯಲ್ಲಿ ಅದೇ ನಡೆಯುತ್ತಿರುತ್ತದೆ ಎಂದು ರಾಶಿಕಾ ಅವರು ಹೇಳಿದ್ದಾರೆ.ನಮ್ಮಿಬ್ಬರ ವಿಚಾರ, ನೀವು ಯಾಕೆ ಮಾತಾಡ್ತೀರಿ ಎಂದು ರಕ್ಷಿತಾ ಗರಂ ಆಗಿದ್ದಾರೆ.

ನಿಮ್ಮನ್ನು ಇಷ್ಟ ಪಡೋರಿಗೆ ವ್ಯಾಲ್ಯೂ ಕೊಡಿ

ನಿನ್ನೆಯಷ್ಟೇ ರಕ್ಷಿತಾ ಗಿಲ್ಲಿಗೆ ಕೆಲವು ಬುದ್ದಿ ಮಾತುಗಳನ್ನು ಒಳ್ಳೆಯ ಸ್ನೇಹಿತೆಯಾಗಿ ಹೇಳಿದ್ದಾರೆ. ನನ್ನ ಜೊತೆಗೆ ಮಾತಾಡಿ ಅಂತ ಯಾರಿಗೂ ಒತ್ತಾಯ ಮಾಡಬೇಡಿ. ನಂಗೆ ಲವ್‌ ಮಾಡು, ಗೆಳತನ ಮಾಡು, ಸಮಯ ಕೊಡು ಅಂತ ಯಾರಿಗೂ ಒತ್ತಾಯ ಮಾಡಬೇಡಿ. ಇದು ಅರಿತುಕೊಳ್ಳಿ. ನಿಮ್ಮ ಭವಿಷ್ಯಕ್ಕೆ ತುಂಬಾ ಒಳ್ಳೆಯದು.

ಇದನ್ನೂ ಓದಿ: Bigg Boss Kannada12: ನಿಮ್ಮನ್ನು ಇಷ್ಟ ಪಡೋರಿಗೆ ವ್ಯಾಲ್ಯೂ ಕೊಡಿ ; ಗಿಲ್ಲಿಗೆ ಸ್ನೇಹಿತೆ ರಕ್ಷಿತಾ ಬುದ್ಧಿಮಾತು

ಇವತ್ತು ನಾನು ಇದೆಲ್ಲ ಹೇಳಿ ಕೊಡಲಿಕ್ಕೆ ನಿಮಗೆ ಇದ್ದೀನಿ. ನೀವು ಒಬ್ಬರಿಗೆ ನೂರು ಪರ್ಸೆಂಟ್‌ ಕೊಡ್ತೀರಾ, ಆದರೆ ಅವರು ನಿಮಗೆ ಕೇವಲ ಹತ್ತೇ ಪರ್ಸೆಂಟ್‌ ಸಮಯ ಕೊಡ್ತಾರೆ. ಆದರೆ ಯಾರು ನಿಮ್ಮನ್ನು ಇಷ್ಟ ಪಡ್ತಾರೆ ಅಲ್ವಾ? ಅವರಿಗೆ ನೀವು 10 ಪರ್ಸೆಂಟ್‌ ಕೊಟ್ಟರೆ, ಅವರು ನಿಮಗೆ ರಿಟರ್ನ್‌ 200 ಪರ್ಸೆಂಟ್‌ ವ್ಯಾಲ್ಯೂ ಕೊಡ್ತಾರೆ ಎಂದಿದ್ದಾರೆ.