ಬಿಗ್ ಬಾಸ್ ಕನ್ನಡ ಸೀಸನ್ 12ರ ಆಟಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಜನವರಿ 18ರಂದು ಬಿಬಿಕೆ 12ರ ಫಿನಾಲೆ ನಡೆಯುವ ಸಾಧ್ಯತೆಗಳಿವೆ. ಈ ಮಧ್ಯೆ ಈ ಸೀಸನ್‌ನ ಕೊನೇ ಕ್ಯಾಪ್ಟನ್ ಯಾರು ಎಂಬ ಬಗ್ಗೆ ಟಾಸ್ಕ್ ಶುರುವಾಗಿದೆ. ಕ್ಯಾಪ್ಟನ್ಸಿ ರೇಸ್‌ನಲ್ಲಿ ಅಶ್ವಿನಿ ಗೌಡ ಮತ್ತು ಧನುಷ್ ಇದ್ದಾರೆ. ಆದರೆ ಕಲರ್ಸ್ ಕನ್ನಡ ರಿಲೀಸ್ ಮಾಡಿರುವ ಹೊಸ ಪ್ರೋಮೋದಲ್ಲಿ ಒಂದು ಟ್ವಿಸ್ಟ್ ನೀಡಲಾಗಿದೆ. ಕ್ಯಾಪ್ಟನ್ ಪಟ್ಟ ಸಿಕ್ಕೇ ಬಿಡ್ತು ಎಂದು ಖುಷಿಯಾಗಿದ್ದ ಧನುಷ್‌ಗೆ ಶಾಕ್ ಎದುರಾಗಿದೆ.
ಅಶ್ವಿನಿ ಮತ್ತು ಧನುಷ್ ಮಧ್ಯೆ ಫೈಟ್
ಈ ವಾರದ ಮತ್ತು ಕೊನೇ ಕ್ಯಾಪ್ಟನ್ ಪಟ್ಟಕ್ಕೆ ಹಣಾಹಣಿ ನಡೆದಿದೆ. ಅಂತಿಮವಾಗಿ ಅಶ್ವಿನಿ ಗೌಡ ಮತ್ತು ಧನುಷ್ ಅವರು ಕ್ಯಾಪ್ಟನ್ಸಿ ರೇಸ್‌ಗೆ ಆಯ್ಕೆಯಾಗಿದ್ದು, ಇಬ್ಬರ ಮಧ್ಯೆ ಒಂದು ಟಾಸ್ಕ್ ನಡೆಸಲಾಗಿದೆ. ಅಂತಿಮವಾಗಿ ಆ ಟಾಸ್ಕ್‌ನಲ್ಲಿ ಧನುಷ್ ಅವರು ಗೆದ್ದಿದ್ದಾರೆ. ಆಗ ಮನೆಯ ಸದಸ್ಯರು ಧನುಷ್‌ಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಧನುಷ್ ಕೂಡ ಈ ಸೀಸನ್‌ನ ಕೊನೇ ಕ್ಯಾಪ್ಟನ್ ಆಗಿದ್ದಕ್ಕೆ ಖುಷಿಯಾಗಿದ್ದಾರೆ. ಆದರೆ ಇದೆಲ್ಲಾ ಮುಗಿದ ಮೇಲೆ ಒಂದು ಟ್ವಿಸ್ಟ್ ಕೊಟ್ಟಿದ್ದಾರೆ ಬಿಗ್ ಬಾಸ್!
BBK 12: ಗ್ಲಾಸ್ ಪುಡಿ-ಪುಡಿ: ಧನುಷ್-ಸತೀಶ್-ಚಂದ್ರಪ್ರಭಾ ಗಲಾಟೆಗೆ ಇಡೀ ಬಿಗ್ ಬಾಸ್ ಮನೆಯೇ ಶೇಕ್
ಆಟದಲ್ಲಿ ತಪ್ಪು ಮಾಡಿದ್ರಾ ಧನುಷ್?
ಪ್ರೋಮೋ ಪ್ರಕಾರ, ಧನುಷ್ ಅವರು ಟಾಸ್ಕ್ ಅನ್ನು ಸರಿಯಾಗಿ ನಿಭಾಯಿಸಿಲ್ಲ. ಅಲ್ಲದೇ, ರೂಲ್ಸ್ ಬ್ರೇಕ್ ಮಾಡಿ, ಆಟವನ್ನು ಗೆದ್ದಿದ್ದಾರೆ ಎಂಬುದನ್ನು ತೋರಿಸಲಾಗಿದೆ. ಅದನ್ನು ಬಿಗ್ ಬಾಸ್ ಎಲ್ಲರ ಮುಂದೆ ಪ್ರಶ್ನೆ ಮಾಡಿದ್ದಾರೆ. ಸರಿಯಾದ ಮಾನದಂಡದ ಪ್ರಕಾರ, ಧನುಷ್ ಆಟ ಆಡಿದ್ದಾರಾ ಎಂದು ಮನೆಯ ಸದಸ್ಯರಿಗೆ ಬಿಗ್ ಬಾಸ್ ಪ್ರಶ್ನೆಗಳನ್ನು ಕೇಳಿದ್ದಾರೆ. ಅಲ್ಲದೇ, ಧನುಷ್ ಮಾಡಿದ ರೂಲ್ಸ್ ಬ್ರೇಕ್ ಕೂಡ ಸ್ಪಷ್ಟವಾಗಿ ಎಲ್ಲರಿಗೂ ತೋರಿಸಲಾಗಿದೆ. ಅಂತಿಮವಾಗಿ ಇದು ಏನಾಗಲಿದೆ ಎಂಬುದಕ್ಕೆ ಇಂದಿನ (ಜ.2) ಸಂಚಿಕೆಯಲ್ಲಿ ಉತ್ತರ ಸಿಗಲಿದೆ.
ಬಿಗ್ ಬಾಸ್ ಪ್ರೋಮೋ
ನಾಲ್ವರ ಮಧ್ಯೆ ಪೈಪೋಟಿ
ಅಸಲಿಗೆ, ಕ್ಯಾಪ್ಟನ್ಸಿ ರೇಸ್‌ನಲ್ಲಿ ಅಶ್ವಿನಿ ಗೌಡ, ಗಿಲ್ಲಿ ನಟ, ರಾಶಿಕಾ ಶೆಟ್ಟಿ ಮತ್ತು ಧನುಷ್ ಭಾಗಿಯಾಗಿದ್ದರು. ಅಂತಿಮವಾಗಿ ಉಳಿದುಕೊಂಡಿದ್ದು ಅಶ್ವಿನಿ ಮತ್ತು ಧನುಷ್ ಮಾತ್ರ. ಅವರ ಮಧ್ಯೆ ಮುಂದಿನ ವಾರದ ಕ್ಯಾಪ್ಟನ್ ಪಟ್ಟಕ್ಕಾಗಿ ಹಣಾಹಣಿ ನಡೆದಿತ್ತು. ಇನ್ನು, ಅಶ್ವಿನಿಗೆ ಕ್ಯಾಪ್ಟನ್ ಆಗಿ ತೋರಿಸು ಎಂದು ಗಿಲ್ಲಿ ಚಾಲೆಂಜ್ ಹಾಕಿದ್ದರು. ಹಾಗಾಗಿ, ಈ ವಾರದ ಕ್ಯಾಪ್ಟನ್ಸಿ ಆಯ್ಕೆ ಬಹಳ ರೋಚಕತೆಯಿಂದ ಕೂಡಿದೆ. ಇದೀಗ ಕೊನೇ ಕ್ಷಣದಲ್ಲಿ ಬಿಗ್ ಬಾಸ್ ಕೂಡ ಟ್ವಿಸ್ಟ್ ನೀಡಿರುವುದರಿಂದ ಕೊನೆಯ ಕ್ಯಾಪ್ಟನ್ ಯಾರಾಗಲಿದ್ದಾರೆ ಎಂಬ ಬಗ್ಗೆ ಚರ್ಚೆ ಜೋರಾಗಿದೆ.