ಈ ವಾರ ಬಿಗ್ ಬಾಸ್ ಮನೆಯಲ್ಲಿ (Bigg Boss Kannada 12) ಕ್ಯಾಪ್ಟನ್ಸಿ ಟಾಸ್ಕ್ (Captaincy Task) ಸಖತ್ ಟ್ವಸ್ಟ್‌ನಿಂದ ಕೂಡಿದೆ. ಈ ವಾರ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಜೋಡಿಗಳಾಗಿ ಆಡುತ್ತಿದ್ದಾರೆ ಸ್ಪರ್ಧಿಗಳು. ಗಿಲ್ಲಿ- ಕಾವ್ಯ, ಮಾಳು- ರಕ್ಷಿತಾ, ರಘು- ಅಶ್ವಿನಿ, ಸೂರಜ್- ರಾಶಿಕಾ, ಅಭಿ-ಸ್ಪಂದನಾ ಹಾಗೂ ರಜತ್-ಚೈತ್ರಾ ಹೀಗೆ ಜೋಡಿಗಳಾಗಿ ಟಾಸ್ಕ್ ಆಡುತ್ತಿದ್ದಾರೆ. ರಾಶಿಕಾ ಹಾಗೂ ಸೂರಜ್ (Rashika Sooraj) ಹೊರ ಬಿದ್ದಿದ್ದಾರೆ. ಈಗಿನ ಪ್ರೋಮೋ ನೋಡಿದರೆ, ಕಾವ್ಯ ಗಿಲ್ಲಿ ಜೋಡಿ ಕೂಡ ಹೊರ ಬಿದ್ದಿದೆ. ಸದ್ಯ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದಾರೆ. ಸ್ಪರ್ಧೆಯಲ್ಲಿ ಇರುವ ಜೋಡಿಗಳ ಪೈಕಿ ಎಲ್ಲ ಪುರುಷ ಸ್ಪರ್ಧಿಗಳು ಶವ ಪೆಟ್ಟಿಗೆ ಮಾದರಿಯ ಪೆಟ್ಟಿಗೆ ಸೇರಿದ್ದಾರೆ. ಮಹಿಳಾ ಸ್ಪರ್ಧಿಗಳು ಪುರುಷ ಸ್ಪರ್ಧಿಗಳನ್ನು ಉಳಿಸಲು ಕೀಲಿ ಕೈಗಳನ್ನು ಹುಡುಕುತ್ತಿದ್ದಾರೆ. ಸ್ಪರ್ಧಿಗಳು ಬಂಧ ಮುಕ್ತರಾಗ್ತಾರಾ? ಎಂಬುದೇ ವೀಕ್ಷಕರಲ್ಲಿ ಇರೋ ಕುತೂಹಲ.
ಮಹಿಳಾ ಸ್ಪರ್ಧಿಗಳ ಪರದಾಟ
ತಮ್ಮ ಜಂಟಿಯಾಗಿರುವ ಮಹಿಳಾ ಸ್ಪರ್ಧಿಗಳಿಗೆ ಪುರುಷ ಸ್ಪರ್ಧಿಗಳು ಪೆಟ್ಟಿಗೆಯ ಒಳಗಿನಿಂದಲೇ ಸಲಹೆ, ಸೂಚನೆಗಳನ್ನು ನೀಡಬೇಕಿದೆ. ಅಷ್ಟೇ ಅಲ್ಲ ಕೆಲವು ಸುಳಿವನ್ನು ನೀಡಿದ್ದಾರೆ. ಅದರ ಆಧಾರದ ಮೇಲೆ ಕೀ ಹುಡಕಿ ಬಾಕ್ಸ್ ತೆರೆಯಬೇಕು. ಕೀಗಳು ಸಿಗದೆ ಮಹಿಳಾ ಸ್ಪರ್ಧಿಗಳು ಪರದಾಟ ಪಟ್ಟಿದ್ದಾರೆ. ಇನ್ನು ಈ ಟಾಸ್ಕ್‌ವನ್ನು ಯಾರೂ ಫಾಲೋ ಮಾಡಬೇಡಿ ಎಂದು ವಿಶೇಷ ಸೂಚನೆ ಕೊಟ್ಟಿದ್ದಾರೆ ಬಿಗ್ ಬಾಸ್.
ಇದನ್ನೂ ಓದಿ: Bigg Boss Kannada 12: ಮನೆಮಂದಿ ಎಷ್ಟೇ ಕೀಳಾಗಿ ಕಂಡರೂ ಕುಗ್ಗದ ಧ್ರುವಂತ್! ನ್ಯಾಯದ ಆಟಕ್ಕೆ ಶಭಾಷ್ ಅಂದ್ರು ವೀಕ್ಷಕರು
ಈವರೆಗಿನ ಟಾಸ್ಕ್‌ಗಳಲ್ಲಿ ಇದು ಕಡೆಯ ಟಾಸ್ಕ್. ಅತಿ ಹೆಚ್ಚು ಅಂಕ ಗಳಿಸುವ ಮೊದಲ ಮೂರು ಜೋಡಿಗಳು ಈ ವಾರದ ಕ್ಯಾಪ್ಟನ್ಸಿ ಅಭ್ಯರ್ಥಿಗಳು ಆಗುತ್ತಾರೆ ಎಂದಿದ್ದಾರೆ ಬಿಗ್ ಬಾಸ್. ಹೀಗಾಗಿ ಇಂದು ಯಾವ ಜೋಡಿ ವಿನ್ ಆಗಲಿದೆ ಎಂಬುದೇ ವೀಕ್ಷಕರಲ್ಲಿ ಇರೋ ಕುತೂಹಲ.
ಕಲರ್ಸ್ ಕನ್ನಡ ಪ್ರೋಮೋ
ಇನ್ನೊಂದು ಪ್ರೋಮೋ ಕೂಡ ಔಟ್ ಆಗಿದೆ. ಗಿಲ್ಲಿ ಅವರು ಧ್ರುವಂತ್‌ಗೆ ಸಖತ್ ತಮಾಷೆ ಮಾಡಿದ್ದಾರೆ. ಮನೆಯ ಲಿವಿಂಗ್ ಏರಿಯಾದಲ್ಲಿ ಕುಳಿತಿರುವ ಧ್ರುವಂತ್ ಜೊತೆ ಮಾತನಾಡಿರುವ ಗಿಲ್ಲಿ ನಟ, "ನಿನ್ನ ಬಗ್ಗೆ ಪುಸ್ತಕ ಬರೆಯಬೇಕು ಎಂದುಕೊಂಡಿರುವೆ, ಅದಕ್ಕೆ 'ನಾ ಕಂಡ ಧ್ರುವಂತ, ಆಚೆಗೆ ಹೋದ ಜೀವಂತ' ಎಂದು ಹೆಸರಿಡುತ್ತೇನೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: Bigg Boss Kannada 12: ಧ್ರುವಂತ್ ವಿರುದ್ಧ ಕಿರುಚಾಡಿ ಆಕ್ರೋಶ ಹೊರ ಹಾಕಿದ ರಕ್ಷಿತಾ! ಟಾಸ್ಕ್ ವೇಳೆ ಆಗಿದ್ದೇನು?
ತುಂಬಾ ಚೆನ್ನಾಗಿದೆ ಎಂದು ಧ್ರುವಂತ್ ಹೊಗಳಿದ್ದಾರೆ. ನಂತರ ಧ್ರುವಂತ್‌ಗೆ ಒಂದೊಂದೇ ಪ್ರಶ್ನೆಗಳನ್ನು ಕೇಳಿದ್ದಾರೆ. ಅದಕ್ಕೆ ಧ್ರುವಂತ್ ಕೂಡ ಫನ್ನಿ ಉತ್ತರಗಳು ಸಿಕ್ಕಿವೆ. ಧ್ರುವಂತ್ ಈಚೆಗೆ ಬಿಗ್ ಬಾಸ್ ಮನೆಯಿಂದ ಆಚೆ ಹೋಗುವ ಬಗ್ಗೆ ಮಾತನಾಡಿದ್ದಾರೆ. ಕಳೆದ ವಾರ ಸುದೀಪ್ ಎದುರಿನಲ್ಲೂ ಈ ಮಾತನ್ನು ಧ್ರುವಂತ್ ಹೇಳಿದ್ದರು. "